ಬಂಪರ್ ಅವಕಾಶ! ಈ ಬಿಸಿನೆಸ್ ಮಾಡೋಕೆ ಸರ್ಕಾರವೇ ಕೊಡಲಿದೆ ದುಡ್ಡು
- ಟ್ರ್ಯಾಕ್ ಸೂಟ್, ಮಾರಾಟ ಮಾಡಿ ಹಣ ಗಳಿಸಿ
- ಮುದ್ರಾ ಯೋಜನೆಯ ಸಾಲ ತೆಗೆದುಕೊಂಡು ಈ ಬಿಸಿನೆಸ್ ಆರಂಭಿಸಬಹುದು
- ತಿಂಗಳಿಗೆ ರೂಪಾಯಿ 40,000 ಆದಾಯ ಫಿಕ್ಸ್
ನೀವು 9 ಟು 5 ವರ್ಕ್ ಮಾಡ್ತಾ ಇದ್ದು ಸೈಡಿಗೆ ಇನ್ನೊಂದು ಬಿಸಿನೆಸ್ (Own Business) ಮಾಡಿದ್ರೆ ಚೆನ್ನಾಗಿರುತ್ತೆ ಅಂತ ಅಂದ್ಕೊಂಡ್ರೆ ಅಥವಾ ಈ ಆಫೀಸ್ ಸಹವಾಸವೇ ಬೇಡ ನನ್ನದೇ ಆಗಿರುವ ಒಂದು ಸ್ವಂತ ಉದ್ಯಮ ಆರಂಭಿಸುತ್ತೇನೆ ಅಂದುಕೊಂಡರೆ ಇಲ್ಲಿದೆ ಬಂದು ಸುವರ್ಣ ಅವಕಾಶ.
ಇದಕ್ಕೆ ಸರ್ಕಾರವೇ ಸಹಕಾರ (Loan) ನೀಡುವುದರಿಂದ ನೀವು ಸುಲಭವಾಗಿ ಇಂಥದೊಂದು ಬಿಸಿನೆಸ್ ಆರಂಭಿಸಬಹುದು.

ಸಿಬಿಲ್ ಸ್ಕೋರ್ ಜಾಸ್ತಿ ಇದಿಯಾ? ಹಾಗಾದ್ರೆ ನಿಮಗೆ ಈ ಎಲ್ಲಾ ಪ್ರಯೋಜನ ಸಿಗುತ್ತೆ
ಏನಿದು ಹೊಸ ಬ್ಯುಸಿನೆಸ್?
ಅಂತೂ ಚಳಿಗಾಲ ಆರಂಭವಾಗಿಬಿಟ್ಟಿದೆ. ಪ್ರತಿಯೊಬ್ಬರೂ ಟ್ರ್ಯಾಕ್ ಸೂಟ್ಗಳನ್ನು ಹಾಕಿಕೊಳ್ಳುತ್ತಾರೆ. ಮನೆಯಲ್ಲಿಯೇ ಇರುವವರಾಗಿರಬಹುದು ಅಥವಾ ಜಾಗಿಂಗ್, ಜಿಮ್ ಹೋಗುವವರಾಗಿರಬಹುದು ವಿವಿಧ ಬಗೆಯ ಟ್ರ್ಯಾಕ್ ಸೂಟ್ಗಳನ್ನು ಧರಿಸುತ್ತಾರೆ.
ಟ್ರ್ಯಾಕ್ ಸೂಟ್ಗಳಲ್ಲಿ ಸಾಕಷ್ಟು ವರೈಟಿಗಳು ಲಭ್ಯ ಇರುತ್ತವೆ. ಅದೇ ರೀತಿ ಬೇರೆ ಬೇರೆ ಬಣ್ಣಗಳಲ್ಲಿ ಖರೀದಿ ಮಾಡಬಹುದು. ಉತ್ತಮ ಕ್ವಾಲಿಟಿಯ ಟ್ರ್ಯಾಕ್ ಸೂಟ್ ಸಿದ್ಧಪಡಿಸುವ ಉದ್ಯೋಗವನ್ನು ನೀವು ಆರಂಭಿಸಿ ಕೈತುಂಬಾ ಹಣ ಸಂಪಾದನೆ ಮಾಡಬಹುದು.
ಟ್ರ್ಯಾಕ್ ಸೂಟ್ ಉದ್ಯಮಕ್ಕೆ ಸರ್ಕಾರದ ಸಪೋರ್ಟ್!
ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ (KVIC) ಈ ಉದ್ಯಮಕ್ಕೆ ಸಪೋರ್ಟ್ ಮಾಡಲಿದ್ದು ಆಯೋಗ ನೀಡಿರುವ ಮಾಹಿತಿಯ ಪ್ರಕಾರ ಟ್ರ್ಯಾಕ್ ಸೂಟ್ ಉದ್ಯೋಗ ಆರಂಭಿಸಲು 8.71 ಲಕ್ಷ ರೂಪಾಯಿಗಳು ಬೇಕು. ಇದರಲ್ಲಿ ಸುಮಾರು 4.46 ಲಕ್ಷ ರೂಪಾಯಿ ಸಲಕರಣೆಗಳಿಗೆ ಹಾಗೂ 4.25 ಲಕ್ಷ ಇತರ ಖರ್ಚಿಗೆ ಮೀಸಲಿಡಬೇಕಾಗುತ್ತದೆ.
ದುಬೈನಲ್ಲಿ 1Bhk ಮನೆ ಬಾಡಿಗೆ ಎಷ್ಟಿದೆ ಗೊತ್ತಾ? ಕೇಳಿದ್ರೆ ನೀವು ಆಶ್ಚರ್ಯ ಪಡ್ತೀರಾ!
ಇಷ್ಟು ಬಂಡವಾಳ ಹೂಡಿಕೆ ಮಾಡಿದರೆ ನೀವು ಟ್ರ್ಯಾಕ್ ಸೂಟ್ ಮ್ಯಾನುಫ್ಯಾಕ್ಚರಿಂಗ್ ಯೂನಿಟ್ ಆರಂಭಿಸಬಹುದು. ನಿಮ್ಮದೇ ಆಗಿರುವ ಕಟ್ಟಿಂಗ್ ಮಷೀನ್ ಹಾಗೂ ಮತ್ತಿತರ ಉಪಕರಣಗಳನ್ನು ಖರೀದಿ ಮಾಡಿ ಒಂದು ಸಣ್ಣ ಯೂನಿಟ್ ಆರಂಭಿಸಬಹುದು. ಒಂದುವೇಳೆ ಇದಕ್ಕೆ ಬಂಡವಾಳ ಹೂಡಿಕೆ ಮಾಡಲು ಕಷ್ಟವಾಗುತ್ತಿದ್ದರೆ ಕೇಂದ್ರ ಸರ್ಕಾರ ನೀಡುವ ಮುದ್ರಾ ಯೋಜನೆಯ ಮೂಲಕ ಸಾಲ ಸೌಲಭ್ಯ (Mudra Loan) ಪಡೆದು ಸ್ವಂತ ಉದ್ಯಮ ಆರಂಭಿಸಬಹುದಾಗಿದೆ.
ಟ್ರ್ಯಾಕ್ ಸೂಟ್ ಗೆ ನಿಮ್ಮದೇ ಆಗಿರುವ ಬ್ರಾಂಡಿಂಗ್ ಮಾಡಬಹುದು. ನಿಮ್ಮದೇ ಆಗಿರುವ ಕಂಪನಿಯ ಹೆಸರನ್ನು ಟ್ರ್ಯಾಕ್ ಸೂಟ್ ನಲ್ಲಿ ಪ್ರಿಂಟ್ ಮಾಡಿಸಬಹುದು. ಇನ್ನು ಕ್ವಾಲಿಟಿ ಉತ್ತಮವಾಗಿದ್ದರೆ ಬೇಡಿಕೆ ಖಂಡಿತ ಇದ್ದೆ ಇರುತ್ತದೆ. ಸುಮಾರು ವರ್ಷಕ್ಕೆ ನಾಲ್ಕು ಲಕ್ಷ ರೂಪಾಯಿಗಳನ್ನು ಅಂದರೆ ತಿಂಗಳಿಗೆ 40,000ಗಳನ್ನು ಸುಲಭವಾಗಿ ಗಳಿಸಬಹುದು.
ಮಹಿಳೆಯರೆ, ಮನೆಯಲ್ಲಿಯೇ ಕುಳಿತು ಲಕ್ಷ ಲಕ್ಷ ಸಂಪಾದನೆ ಮಾಡಿ! ಇಲ್ಲಿದೆ ಐಡಿಯಾ
ಮಾರ್ಕೆಟಿಂಗ್ ಮಾಡೋದು ಮುಖ್ಯ!
ಈಗಂತೂ ಸೋಶಿಯಲ್ ಮೀಡಿಯಾ ತುಂಬಾನೇ ಮುಂದುವರೆದಿದೆ. ಇನ್ಸ್ಟಾಗ್ರಾಮ್ ಫೇಸ್ಬುಕ್ ಯೂಟ್ಯೂಬ್ ಮೊದಲಾದವುಗಳ ಮೂಲಕ ನೀವು ನಿಮ್ಮ ಬ್ರಾಂಡಿಂಗ್ ಮಾಡಬಹುದು. ಸೋಶಿಯಲ್ ಮೀಡಿಯಾದಲ್ಲಿ ಟ್ರ್ಯಾಕ್ ಸೂಟ್ ಗಳ ಬಗ್ಗೆ ಮಾಹಿತಿ ವಿಡಿಯೋಗಳನ್ನು ಹಾಕಿದ್ರೆ ಜನ ಹೆಚ್ಚು ಆಕರ್ಷಿತರಾಗುತ್ತಾರೆ.
ಇದರ ಜೊತೆಗೆ ಫ್ಲಿಪ್ಕಾರ್ಟ್, ಅಮೆಜಾನ್, ಮೀಶೋ ಮೊದಲದ ಆನ್ಲೈನ್ ಪ್ಲಾಟ್ಫಾರ್ಮ್ ಗಳಲ್ಲಿ ನೀವು ನಿಮ್ಮ ಟ್ರ್ಯಾಕ್ ಸೂಟ್ಗಳನ್ನು ಮಾರಾಟ ಮಾಡಬಹುದು ಆದಾಯ ಗಳಿಕೆ (Money Making) ಮಾಡಬಹುದು. ಅಥವಾ ನೀವು ನಿಮ್ಮದೇ ಆಗಿರುವ ಒಂದು ಚಿಕ್ಕ ಔಟ್ಲೆಟ್ ಆರಂಭಿಸಿ ಸೇಲ್ ಮಾಡಬಹುದು.
Bumper Opportunity, Government Will Fund for this Business