ಸಿಬಿಲ್ ಸ್ಕೋರ್ ಜಾಸ್ತಿ ಇದಿಯಾ? ಹಾಗಾದ್ರೆ ನಿಮಗೆ ಈ ಎಲ್ಲಾ ಪ್ರಯೋಜನ ಸಿಗುತ್ತೆ
CIBIL Score : ಬ್ಯಾಂಕುಗಳಲ್ಲಿ ಸುಲಭವಾಗಿ ಸಾಲ (Loan) ಸಿಗಬೇಕು ಅಂದ್ರೆ ನಿಮ್ಮ ಕ್ರೆಡಿಟ್ ಸ್ಕೋರ್ ಅಥವಾ ಸಿಬಿಲ್ ಸ್ಕೋರ್ ಉತ್ತಮವಾಗಿರಬೇಕು, ಸುಮಾರು 750 ರಿಂದ 900 ಪಾಯಿಂಟ್ ಗಳನ್ನು ಹೊಂದಿದ್ದರೆ ಸುಲಭವಾಗಿ ಸಾಲ ಸೌಲಭ್ಯ ಸಿಗುತ್ತದೆ.
ಭಾರತದಲ್ಲಿ ನಾಲ್ಕು ಕ್ರೆಡಿಟ್ ಬ್ಯುರೋಗಳು ಕ್ರೆಡಿಟ್ ಸ್ಕೋರನ್ನು (Credit Score) ನೀಡುತ್ತವೆ. ಇದರ ಆಧಾರದ ಮೇಲೆ ನಿಮಗೆ ಯಾವ ಬ್ಯಾಂಕ್ ನಲ್ಲಿ ಎಷ್ಟು ಸಾಲ ಸಿಗುತ್ತದೆ ಎಂಬುದು ನಿರ್ಧಾರವಾಗುತ್ತದೆ.

ಸಿಬಿಲ್ ಸ್ಕೋರ್ ಉತ್ತಮವಾಗಿದ್ದರೆ ಬಡ್ಡಿ ದರ ಕೂಡ ಕಡಿಮೆ ಇರುತ್ತದೆ. ಅದೇ ನಿಮ್ಮ ಕ್ರೆಡಿಟ್ ಸ್ಕೋರ್ ಕಡಿಮೆ ಆಗಿದ್ದಲ್ಲಿ, ಸಾಲಕ್ಕೆ (Loan) ಅತಿ ಹೆಚ್ಚಿನ ಬಡ್ಡಿ ಪಾವತಿಸಬೇಕು.
ನಿಮ್ಮ ಬಳಿ ಈ ಹಳೆಯ ನೋಟಿದ್ರೆ ಕುಳಿತಲ್ಲೆ ಲಕ್ಷ ಲಕ್ಷ ಸಂಪಾದನೆ ಮಾಡಬಹುದು!
ಭಾರತದಲ್ಲಿ ಮುಖ್ಯವಾಗಿರುವ ಕ್ರೆಡಿಟ್ ಬ್ಯೂರೋಗಳು!
Equifax
Experian
CRIF ಹೈ ಮಾರ್ಕ್
TransUnion CIBIL ಇವು ಪ್ರಮುಖ ಕ್ರೆಡಿಟ್ ರೇಟಿಂಗ್ ಏಜೆನ್ಸಿಗಳಲ್ಲಿ ಕೆಲವು.
ಸಿಬಿಲ್ ಸ್ಕೋರನ್ನು ನೀವು ಕ್ರೆಡಿಟ್ ರೇಟಿಂಗ್ ಏಜೆನ್ಸಿಗಳ ವೆಬ್ಸೈಟ್ಗಳ ಮೂಲಕ ನೇರವಾಗಿ ಚೆಕ್ ಮಾಡಬಹುದು. ನೀವು ತೆಗೆದುಕೊಂಡ ಸಾಲವನ್ನು ಸಕಾಲಕ್ಕೆ ಮರುಪಾವತಿ ಮಾಡುತ್ತಿದ್ದರೆ ಆಟೋಮ್ಯಾಟಿಕ್ ಆಗಿ ಸಿಬಿಲ್ ಸ್ಕೋರ್ ಹೆಚ್ಚಾಗುತ್ತದೆ.
ಸ್ಟೇಟ್ ಬ್ಯಾಂಕಿನಲ್ಲಿ 2,500 ರೂಪಾಯಿಯಿಂದ 1 ಲಕ್ಷ ರೂಪಾಯಿ ದುಡಿಯೋ ಸ್ಕೀಮ್
ಕ್ರೆಡಿಟ್ ಸ್ಕೋರ್ ಹೆಚ್ಚಾಗಿದ್ದರೆ ಏನಿದೆ ಬೆನಿಫಿಟ್?
ಉತ್ತಮ ಕ್ರೆಡಿಟ್ ಸ್ಕೋರ್ ಪಾಯಿಂಟ್ ಇದ್ದರೆ ಸಾಲಕ್ಕೆ ಸುಲಭವಾಗಿ ಅನುಮೋದನೆ ಸಿಗುತ್ತದೆ ನೀವು ಅರ್ಜಿ ಹಾಕಿದ ತಕ್ಷಣ ಬ್ಯಾಂಕಿನವರು ಬಹಳ ಬೇಗ ಪ್ರತಿಕ್ರಿಯೆ ನೀಡುತ್ತಾರೆ ಜೊತೆಗೆ ನೀವು ಸಾಲವನ್ನು ಬಹಳ ಬೇಗ ಮರುಪಾವತಿ ಮಾಡುತ್ತೀರಿ ಎನ್ನುವ ವಿಶ್ವಾಸ ಬ್ಯಾಂಕಿಗೆ ಮೂಡುತ್ತದೆ ಹೀಗಾಗಿ ನೀವು ಕ್ರೆಡಿಟ್ ಸ್ಕೋರ್ ಹೆಚ್ಚಾಗಿ ಇರುವಂತೆ ನೋಡಿಕೊಳ್ಳುವುದು ಬಹಳ ಮುಖ್ಯ.
ನಿಮ್ಮ ಚಿನ್ನ ಕಳ್ಳತನ ಆದ್ರೆ ತಲೆಕೆಡಿಸಿಕೊಳ್ಳಬೇಡಿ! ಚಿನ್ನದ ಶಾಪ್ ನಿಂದಲೇ ನಿಮ್ಮ ದುಡ್ಡು ಸಿಗುತ್ತೆ
ಸಿಬಿಲ್ ಸ್ಕೋರ್ ಎಷ್ಟಿರಬೇಕು?
750 ರಿಂದ 900 ಪಾಯಿಂಟ್ಗಳ ವರೆಗೆ ಉತ್ತಮ ಕ್ರೆಡಿಟ್ ಸ್ಕೋರ್ ಎಂದು ಪರಿಗಣಿಸಲಾಗುತ್ತದೆ. ಹೀಗಾಗಿ ಈ ರೀತಿ ಉತ್ತಮ ಪಾಯಿಂಟ್ ಹೊಂದಿದ್ದರೆ ಬ್ಯಾಂಕುಗಳು ಸಾಲವನ್ನು ಬಹಳ ಬೇಗ ಮಂಜೂರು ಮಾಡುತ್ತವೆ.
ಅದು ಅಲ್ಲದೆ ಹೆಚ್ಚಿನ ಡಾಕ್ಯುಮೆಂಟ್ ಗಳನ್ನು ಕೊಡಬೇಕಾಗಿಲ್ಲ. ಸಾಲ ಮಾತ್ರವಲ್ಲದೆ ಕ್ರೆಡಿಟ್ ಸ್ಕೋರ್ ಉತ್ತಮವಾಗಿದ್ದರೆ ಪ್ರೀಮಿಯಂ ಕ್ರೆಡಿಟ್ ಕಾರ್ಡ್ (Credit Card) ಅನ್ನು ಕೂಡ ನೀವು ಬ್ಯಾಂಕ್ನಿಂದ ಪಡೆದುಕೊಳ್ಳಬಹುದು. ಇಂತಹ ಕ್ರೆಡಿಟ್ ಕಾರ್ಡ್ ಗಳಿಂದ ಹೆಚ್ಚಿನ ಬೆನಿಫಿಟ್ಸ್ ಸಿಗುತ್ತವೆ.
ನಿಮ್ಮ ಸಾಲ ಮರುಪಾವತಿ ಕ್ರೆಡಿಟ್ ಕಾರ್ಡ್ ಪೇಮೆಂಟ್ ಮೊದಲಾದವುಗಳು ಕ್ರೆಡಿಟ್ ಸ್ಕೋರ್ ಮೇಲೆ ಧನಾತ್ಮಕ ಪರಿಣಾಮವನ್ನು ಬೀರುತ್ತವೆ ಅದೇ ನೀವು ಸರಿಯಾಗಿ ಸಾಲವನ್ನು ಮರುಪಾವತಿ ಮಾಡದೇ ಇದ್ದಲ್ಲಿ ಕ್ರೆಡಿಟ್ ಸ್ಕೋರ್ ಆಟೋಮ್ಯಾಟಿಕ್ ಆಗಿ ಕಡಿಮೆ ಆಗುತ್ತದೆ
ನಿಮ್ಮ ಸಿಬಿಲ್ ಸ್ಕೋರ್ ಜೀರೋ ಇದ್ರೂ ಲೋನ್ ಸಿಗುತ್ತಾ? ಹಾಗಾದ್ರೆ ಪಡೆಯೋದು ಹೇಗೆ
ಆದ್ದರಿಂದ ಸಾಲವನ್ನು ಸರಿಯಾದ ಸಮಯಕ್ಕೆ ಮರುಪಾವತಿ ಮಾಡುವುದು ಪ್ರತಿ ತಿಂಗಳ ಇಎಂಐ ಕರೆಕ್ಟಾಗಿ ಪಾವತಿ ಮಾಡುವುದು ಬಹಳ ಮುಖ್ಯ. ಒಂದು ವೇಳೆ ಈಎಂಐ ಅನ್ನು 15 ದಿನ ಅಥವಾ ತಿಂಗಳವರೆಗೆ ಮರುಪಾವತಿ ಮಾಡುವಲ್ಲಿ ವಿಳಂಬವಾದರೆ ನೀವು ಬ್ಯಾಂಕ್ ಸಿಬ್ಬಂದಿಗಳೊಂದಿಗೆ ಮಾತನಾಡಿ ಹೊಂದಾಣಿಕೆ ಮಾಡಿಕೊಳ್ಳಬಹುದು. ಈ ರೀತಿ ಮಾಡಿಕೊಳ್ಳುವುದರಿಂದ ಕ್ರೆಡಿಟ್ ಸ್ಕೋರ್ ಕಡಿಮೆಯಾಗುವುದನ್ನು ತಪ್ಪಿಸಬಹುದು.
Is Your CIBIL Score High? Here’s What Benefits You Get!