ಎಟಿಎಂ ನಲ್ಲಿ ಲಿಮಿಟ್ ಮೀರಿ ಕ್ಯಾಶ್ ವಿಥ್ ಡ್ರಾ ಮಾಡುವಂತಿಲ್ಲ, ಹೊಸ ನಿಯಮ

ಕೆಲವು ಪ್ರಮುಖ ಬ್ಯಾಂಕುಗಳು ತಮ್ಮದೇ ಆದ ಲಿಮಿಟ್ ಅನ್ನು ವಿಧಿಸಿದ್ದು ಎಟಿಎಂ ಮೂಲಕ ಅದಕ್ಕಿಂತ ಹೆಚ್ಚಿನ ಹಣ ವಿತ್ ಡ್ರಾ ಮಾಡಿದರೆ ನೀವು ಸರ್ವಿಸ್ ಚಾರ್ಜ್ ಭರಿಸಬೇಕಾಗುತ್ತದೆ.

  • ಐಸಿಐಸಿಐ ಬ್ಯಾಂಕ್ ಎಟಿಎಂ ನಲ್ಲಿ 2,50,000 ವಿತ್ ಡ್ರಾ ಮಾಡಲು ಅವಕಾಶ
  • ಬ್ಯಾಂಕ್ ಗಳ ಲಿಮಿಟ್ ಗೊತ್ತಿಲದೆ ಹೆಚ್ಚಿನ ಕ್ಯಾಶ್ ವಿಥ್ ಡ್ರಾ ಮಾಡಿದ್ರೆ ಕಟ್ಟಬೇಕು ಹೆಚ್ಚುವರಿ ಶುಲ್ಕ
  • ಎಟಿಎಂ ಕ್ಯಾಶ್ ವಿಥ್ ಡ್ರಾ ಮಾಡಿದರೆ ದಿನಕ್ಕೆ ಎಷ್ಟು ಶುಲ್ಕ ಪಾವತಿಸಬೇಕು ಗೊತ್ತಾ

ATM Cash With Draw: ಇಂದು ಹೆಚ್ಚಾಗಿ ಯಾವುದೇ ಹಣಕಾಸಿನ ವ್ಯವಹಾರವಿದ್ದರೂ ಅದಕ್ಕೆ ಆನ್ಲೈನ್ ಅವಲಂಬಿಸುವುದು ಸಾಮಾನ್ಯವಾಗಿದೆ. ಯಾರಿಗಾದರೂ ಹಣ ಕೊಡುವುದಿದ್ದರೆ ಅಥವಾ ಯಾವುದೇ ಪೇಮೆಂಟ್ ಮಾಡುವುದಿದ್ದರೆ ಆನ್ಲೈನ್ ಪೇಮೆಂಟ್ ವಿಧಾನವನ್ನೇ ಬಳಸುತ್ತೇವೆ, ಆದರೆ ಎಷ್ಟೋ ಸಲ ನಮಗೆ ಕ್ಯಾಶ್ ಅಗತ್ಯ ಇದ್ದಾಗ ಡೆಬಿಟ್ ಕಾರ್ಡ್ (Debit Card) ಮೂಲಕ ಎಟಿಎಂಗೆ ಹೋಗಿ ಹಣ ಹಿಂಪಡೆಯುವುದು ಸಾಮಾನ್ಯವಾಗಿದೆ.

ಮೊದಲಿನಂತೆ ಬ್ಯಾಂಕಿಗೆ ಹೋಗಿ ಸರತಿ ಸಾಲಿನಲ್ಲಿ ನಿಂತು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ನಮ್ಮ ಖಾತೆಯಲ್ಲಿ (Bank Account) ಇರುವ ಹಣವನ್ನು ಹಿಂಪಡೆಯುವ ತೊಂದರೆ ಈಗ ಇಲ್ಲ, ಎಟಿಎಂನಿಂದ ಹಣ ಪಡೆಯುವುದು ಬಹಳ ಸುಲಭವಾಗಿದೆ, ಆದರೆ ಒಂದು ದಿನಕ್ಕೆ ನೀವು ಯಾವ ಬ್ಯಾಂಕ್ನಿಂದ ಎಷ್ಟು ಹಣವನ್ನು ವಿತ್ ಡ್ರಾ ಮಾಡಬೇಕು ಎನ್ನುವುದಕ್ಕೆ ನಿಯಮವು ಇದೆ.

ಕೆಲವು ಪ್ರಮುಖ ಬ್ಯಾಂಕುಗಳು ತಮ್ಮದೇ ಆದ ಲಿಮಿಟ್ ಅನ್ನು ವಿಧಿಸಿದ್ದು ಅದಕ್ಕಿಂತ ಹೆಚ್ಚಿನ ಹಣ ವಿತ್ ಡ್ರಾ ಮಾಡಿದರೆ ನೀವು ಸರ್ವಿಸ್ ಚಾರ್ಜ್ ಭರಿಸಬೇಕಾಗುತ್ತದೆ.

ATM Withdrawal Limits

ಒಂದು ದಿನ ಕ್ರೆಡಿಟ್ ಕಾರ್ಡ್ ಬಿಲ್ ಕಟ್ಟುವುದು ಲೇಟ್ ಆದ್ರೆ, ಕ್ರೆಡಿಟ್ ಸ್ಕೋರ್ ಎಷ್ಟು ಕಡಿಮೆ ಆಗುತ್ತೆ?

ನಾವು ಎಷ್ಟೇ ಯುಪಿಐ ಅಪ್ಲಿಕೇಶನ್ ಗಳ ಮೂಲಕ ಹಣ ವ್ಯವಹಾರವನ್ನು ಮಾಡಿದರು ಕೂಡ ಸಾಕಷ್ಟು ಸಮಯದಲ್ಲಿ ಕ್ಯಾಶ್ ಅಥವಾ ನಗದು ಹಣದ ಅಗತ್ಯ ಇದ್ದೇ ಇರುತ್ತದೆ. ಮನೆಗಳಲ್ಲಿ ತುರ್ತು ಅಗತ್ಯಕ್ಕಾಗಿ ನಗದು ಹಣವನ್ನು ಇಟ್ಟುಕೊಳ್ಳುವುದು ವಾಡಿಕೆ.

ಇದಕ್ಕಾಗಿ ಡೆಬಿಟ್ ಕಾರ್ಡ್ ಬಳಸಿ ಬ್ಯಾಂಕ್ ಗಳ ಎಟಿಎಂ ನಲ್ಲಿ (Bank ATM) ಹಣ ಮಾಡಿಕೊಳ್ಳಬಹುದು. ಯಾವ ಬ್ಯಾಂಕ್ ನಲ್ಲಿ ವಿಥ್ ಡ್ರಾ ಲಿಮಿಟ್ ಎಷ್ಟಿದೆ ಎಂಬುದನ್ನು ನೋಡೋಣ.

ಪಂಜಾಬ್ ನ್ಯಾಷನಲ್ ಬ್ಯಾಂಕ್:

ಈ ಬ್ಯಾಂಕಿನ ಮಾಸ್ಟರ್ ಕಾರ್ಡ್ ಕ್ಲಾಸಿಕ್ ಡೆಬಿಟ್ ಕಾರ್ಡ್ ಹಾಗೂ ರೂಪೇ ಕ್ಲಾಸಿಕ್ ಕಾರ್ಡ್ ಗಳನ್ನು ಬಳಸಿದರೆ ದಿನಕ್ಕೆ 25,000ಗಳನ್ನು ವಿಥ್ ಡ್ರಾ ಮಾಡಬಹುದು. ಅದೇ ರೀತಿ ರೂಪೆ ಪ್ಲಾಟಿನಮ್ ಬಿಸಿನೆಸ್ ಪ್ಲಾಟಿನಂ NCMC ಕಾರ್ಡುಗಳನ್ನು ನೀವು ಹೊಂದಿದ್ದರೆ ದಿನಕ್ಕೆ ಒಂದು ಲಕ್ಷ ರೂಪಾಯಿಗಳವರೆಗೆ ಹಣವನ್ನು ವಿಥ್ ಡ್ರಾಪ್ ಮಾಡಿಕೊಳ್ಳಬಹುದು. ಇನ್ನು PNB ಬ್ಯಾಂಕಿನ ಮಾಸ್ಟರ್ ಕಾರ್ಡ್ ಬಿಸಿನೆಸ್ ಡೆಬಿಟ್ ಕಾರ್ಡ್ ಹಾಗೂ ವೀಸಾ ಸಿಗ್ನೇಚರ್ ಕಾರ್ಡ್ ಹೊಂದಿದ್ದರೆ 1,50,000 ವರೆಗೂ ವಿತ್ ಡ್ರಾ ಮಾಡಬಹುದು.

ಆಕ್ಸಿಸ್ ಬ್ಯಾಂಕ್:

ಈ ಬ್ಯಾಂಕ್ ನಲ್ಲಿ ಪವರ್ ಸೆಲ್ಯೂಟ್ ಡೆಬಿಟ್ ಕಾರ್ಡ್ ಅಥವಾ ರೂಪೇ ಪ್ಲಾಟಿನಮ್ ಕಾರ್ಡ್ ಬಳಸಿ 40,000 ಮಾಡಿಕೊಳ್ಳಬಹುದು. ಹಾಗೆ ರಿವಾರ್ಡ್ ಪ್ಲಸ್, ಆನ್ ಲೈನ್ ರಿವಾರ್ಡ್ಸ್, ಲಿಬರ್ಟಿ ಕಾರ್ಡುಗಳಿಗೆ 50,000 ಲಿಮಿಟ್ ವಿಧಿಸಲಾಗಿದೆ. ಪ್ರೆಸ್ಟೀಜ್ ಡೀಲೈಟ್ ವ್ಯಾಲ್ಯೂ ಪ್ಲಸ್ ಡೆಬಿಟ್ ಕಾರ್ಡ್ ಗಳನ್ನು ಬಳಸಿ ಒಂದು ಲಕ್ಷ ರೂಪಾಯಿಗಳವರೆಗೆ ಹಾಗೂ ಬರ್ಗಂಡಿ ಡೆಬಿಟ್ ಕಾರ್ಡ್ ಬಳಸಿ ದಿನಕ್ಕೆ 3 ಲಕ್ಷ ರೂಪಾಯಿಗಳ ವರೆಗೂ ವಿಥ್ ಡ್ರಾ ಮಾಡಿಕೊಳ್ಳಲು ಅವಕಾಶವಿದೆ.

ಇಂಡಿಯನ್ ಬ್ಯಾಂಕ್:

ಈ ಬ್ಯಾಂಕ್ ನಲ್ಲಿ ಹಿರಿಯ ನಾಗರಿಕರು, ಪಿ ಎಂ ಜೆ ಡಿ ವೈ ಅಕೌಂಟ್ ಹೊಂದಿದ್ದರೆ ದಿನಕ್ಕೆ ಕೇವಲ 25 ಸಾವಿರ ರೂಪಾಯಿಗಳನ್ನು ಮಾತ್ರ ವಿಥ್ ಡ್ರಾ ಮಾಡಿಕೊಳ್ಳಬಹುದು. ಅದೇ ರೀತಿ ಮಾಸ್ಟರ್ ಕಾರ್ಡ್ ವರ್ಲ್ಡ್ ಡೆಬಿಟ್ ಕಾರ್ಡ್ ಹಾಗೂ ರೂಪೇ ಪ್ಲಾಟಿನಂ ಕಾರ್ಡ್ ಇರುವವರು 50,000ಗಳನ್ನು ಹಿಂಪಡೆಯಬಹುದು. ಇನ್ನು ಮುದ್ರಾ ಡೆಬಿಟ್ ಕಾರ್ಡ್ ಅಥವಾ ರೂಪೆ ಕಿಸಾನ್ ಕಾರ್ಡ್ ಹೊಂದಿದ್ದರೆ ದಿನಕ್ಕೆ 10,000ಗಳನ್ನ ಹಿಂಪಡೆಯಬಹುದು. ಹಾಗೂ ರೂಪೇ ಇಂಟರ್ನ್ಯಾಷನಲ್ ಪ್ಲಾಟಿನಮ್ ಡೆಬಿಟ್ ಕಾರ್ಡ್ ಹೊಂದಿರುವ ಗ್ರಾಹಕರಿಗೆ ಒಂದು ಲಕ್ಷ ರೂಪಾಯಿಗಳನ್ನು ವಿಥ್ ಡ್ರಾ ಮಾಡಲು ಅವಕಾಶ ಕಲ್ಪಿಸಿ ಕೊಡಲಾಗಿದೆ.

Bank ATM
Bank ATM (Photo Credit : Pexels)

ಕೋಟಕ್ ಮಹೀಂದ್ರಾ ಬ್ಯಾಂಕ್:

ನೀವು ಕೋಟಕ್ ಮಹೀಂದ್ರಾ ಬ್ಯಾಂಕ್ ನ ಗ್ರಾಹಕರಾಗಿದ್ದು ಕೋಟಕ್ ಜೂನಿಯರ್ ಡೆಬಿಟ್ ಕಾರ್ಡ್ ಹೊಂದಿದ್ದರೆ ದಿನಕ್ಕೆ ಕೇವಲ 5,000ಗಳನ್ನು ಮಾತ್ರ ಹಿಂಪಡೆಯಬಹುದು ಅದೇ ರೀತಿ ರೂಪ ಡೆಬಿಟ್ ಕಾರ್ಡ್ ಅಥವಾ ಕ್ಲಾಸಿಕ್ ಒನ್ ಡೆಬಿಟ್ ಕಾರ್ಡ್ ಹೊಂದಿದ್ದರೆ 10,000 ವರೆಗೆ ದಿನಕ್ಕೆ ವಿತ್ ಡ್ರಾ ಮಾಡಿಕೊಳ್ಳಬಹುದು. ಲೀಗ್ ಬ್ಲಾಕ್ ಡೆಬಿಟ್ ಕಾರ್ಡ್ ಹೊಂದಿರುವ ಗ್ರಾಹಕರಿಗೆ ಪ್ರತಿದಿನ ಎರಡು ಲಕ್ಷದ 50 ಸಾವಿರ ರೂಪಾಯಿಗಳನ್ನು ವಿಥ್ ಡ್ರಾ ಮಾಡಲು ಅವಕಾಶವಿದೆ.

ಐಸಿಐಸಿಐ ಬ್ಯಾಂಕ್:

ದೇಶದ ಪ್ರಮುಖ ಬ್ಯಾಂಕುಗಳಲ್ಲಿ ಒಂದಾಗಿರುವ ಐಸಿಐಸಿಐ ಬ್ಯಾಂಕ್ ಗ್ರಾಹಕರಿಗೆ ವಿತ್ ಡ್ರಾ ಮಾಡುವ ಲಿಮಿಟ್ ಅನ್ನು ಹೆಚ್ಚಿಸಿದೆ. ಕೊರಲ್ ಪ್ಲಸ್ ಡೆಬಿಟ್ ಕಾರ್ಡ್ ಹೊಂದಿದ್ದರೆ ರೂ. 1,50,000ಗಳನ್ನು ಹಾಗೂ ಸ್ಮಾರ್ಟ್ ಶಾಪರ್ ಸಿಲ್ವರ್ ಡೆಬಿಟ್ ಕಾರ್ಡ್ ಹೊಂದಿದ್ದರೆ 50,000ಗಳನ್ನು ವಿಥ್ ಡ್ರಾ ಮಾಡಬಹುದು. ಇನ್ನು ಪ್ಲಾಟಿನಮ್ ಟೈಟಾನಿಯಂ ಡೆಬಿಟ್ ಕಾರ್ಡ್ ಹೊಂದಿರುವ ಗ್ರಾಹಕರಿಗೆ 1 ಲಕ್ಷಗಳವರೆಗೆ ಹಾಗೂ ಸಫಿರೋ ಡೆಬಿಟ್ ಕಾರ್ಡ್ ಹೊಂದಿರುವ ಗ್ರಾಹಕರಿಗೆ 2,50,000ಗಳವರೆಗೆ ವಿತ್ ಡ್ರಾ ಮಾಡುವ ಅವಕಾಶವಿದೆ.

ಈ ಒಂದು ಸ್ಕಿಮ್ ನಲ್ಲಿ ಉಳಿತಾಯ ಮಾಡಿದ್ರೆ ಪ್ರತಿ ತಿಂಗಳು 5500 ಪಿಂಚಣಿ ಸಿಗುತ್ತೆ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ:

ಎಸ್ ಬಿ ಐ ನ ಗ್ರಾಹಕರು ಮೆಸ್ಟ್ರೋ ಅಥವಾ ಕ್ಲಾಸಿಕ್ ಡೆಬಿಟ್ ಕಾರ್ಡ್, ಎಸ್ ಬಿ ಐ ಗೋಲ್ಡ್ ಡೆಬಿಟ್ ಕಾರ್ಡ್ ಹೊಂದಿದ್ದರೆ 40,000ಗಳವರೆಗೆ ವಿಥ್ ಡ್ರಾ ಮಾಡಬಹುದು. ಅದೇ ರೀತಿ ಪ್ಲಾಟಿನಂ ಇಂಟರ್ನ್ಯಾಷನಲ್ ಡೆಬಿಟ್ ಕಾರ್ಡ್ ಹೊಂದಿರುವವರು ಒಂದು ಲಕ್ಷ ರೂಪಾಯಿಗಳ ವರೆಗೂ ಎಟಿಎಂನಿಂದ ಹಣವನ್ನು ಹಿಂಪಡೆಯಬಹುದು.

ಕೆನರಾ ಬ್ಯಾಂಕ್:

ಕೆನರಾ ಬ್ಯಾಂಕ್ ನ ಕ್ಲಾಸಿಕ್ ರೂಪೇ ಸ್ಟ್ಯಾಂಡರ್ಡ್ ಮಾಸ್ಟರ್ ಕಾರ್ಡ್ ಹೊಂದಿದ್ದರೆ ದಿನಕ್ಕೆ 75,000ಗಳನ್ನು ಎಟಿಎಂನಿಂದ ಹಿಂಪಡೆಯಬಹುದು. ಏನು ಮಾಸ್ಟರ್ ಕಾರ್ಡ್ ಬಿಸಿನೆಸ್ ಡೆಬಿಟ್ ಕಾರ್ಡ್ ಪ್ಲ್ಯಾಟಿನಮ್ ಕಾರ್ಡ್ ಹೊಂದಿರುವ ಗ್ರಾಹಕರಿಗೆ ಒಂದು ಲಕ್ಷ ರೂಪಾಯಿಗಳವರೆಗೆ ವಿಥ್ ಡ್ರಾ ಮಾಡಿಕೊಳ್ಳಬಹುದು.

ಬ್ಯಾಂಕ್ ಆಫ್ ಇಂಡಿಯಾ:

ಬ್ಯಾಂಕ್ ಆಫ್ ಇಂಡಿಯಾದಿಂದ ಪಡೆದುಕೊಂಡಿರುವ ರೂಪೇ ಕಿಸಾನ್ ಕಾರ್ಡ್ ಮಾಸ್ಟರ್ ಕಾರ್ಡ್ ಟೈಟಾನಿಯಂ ಡೆಬಿಟ್ ಕಾರ್ಡ್ ಗಳನ್ನು ಹೊಂದಿದ್ದರೆ ದಿನಕ್ಕೆ ಕೇವಲ 15000ಗಳ ಲಿಮಿಟ್ ನಿಗದಿಪಡಿಸಲಾಗಿದೆ. ವೀಸಾ ಬಿಸಿನೆಸ್ ಮತ್ತು ಸಿಗ್ನೇಚರ್ ಡೆಬಿಟ್ ಕಾರ್ಡ್ ಹೊಂದಿದ್ದರೆ ಒಂದು ಲಕ್ಷ ರೂಪಾಯಿಗಳವರೆಗೆ ವಿಥ್ ಡ್ರಾ ಮಾಡಲು ಅವಕಾಶವಿದೆ.

ATM Withdrawal Limits in Major Indian Banks: Know Daily Limits and Charges

English Summary
Related Stories