ಒಂದು ದಿನ ಕ್ರೆಡಿಟ್ ಕಾರ್ಡ್ ಬಿಲ್ ಕಟ್ಟುವುದು ಲೇಟ್ ಆದ್ರೆ, ಕ್ರೆಡಿಟ್ ಸ್ಕೋರ್ ಎಷ್ಟು ಕಡಿಮೆ ಆಗುತ್ತೆ?

Credit Score : ತಿಂಗಳ ಕ್ರೆಡಿಟ್ ಕಾರ್ಡ್ ಬಿಲ್ಸ್ ಲೇಟಾಗಿ ಪೇ ಮಾಡ್ತೀರಾ? ಸಿಬಿಲ್ ಸ್ಕೋರ್ ಮೇಲೆ ಪರಿಣಾಮ ಬೀರುತ್ತಾ? ಒಂದು ದಿನ ಕ್ರೆಡಿಟ್ ಕಾರ್ಡ್ ಬಿಲ್ ಕಟ್ಟುವುದು ಲೇಟ್ ಆದ್ರೂ ಸಿಬಿಲ್ ಸ್ಕೋರ್ ಎಷ್ಟು ಕಡಿಮೆ ಆಗಬಹುದು!

  • ಒಂದು ದಿನ ಕ್ರೆಡಿಟ್ ಕಾರ್ಡ್ ಬಿಲ್ ಲೇಟ್ ಆದ್ರೆ ಏನಾಗುತ್ತೆ ಗೊತ್ತಾ?
  • ಕ್ರೆಡಿಟ್ ಪೇಮೆಂಟ್ ಮಾಡದೆ ಇದ್ದಲ್ಲಿ ಕ್ರೆಡಿಟ್ ಸ್ಕೋರ್ 90 ರಿಂದ 110 ಅಂಕಗಳಷ್ಟು ಕಡಿಮೆ ಆಗಬಹುದು.
  • ಕ್ರೆಡಿಟ್ ಪಾವತಿ ತಡವಾದರೆ ಕ್ರೆಡಿಟ್ ಸ್ಕೋರ್ ಮೇಲೆ ಶಾಶ್ವತ ಪರಿಣಾಮ ಬೀರಬಹುದು.

Credit Score : ಸಾಮಾನ್ಯವಾಗಿ ನಮ್ಮ ಬಳಿ ಕ್ರೆಡಿಟ್ ಕಾರ್ಡ್ (Credit Card) ಇದ್ರೆ ಸಾಕು, ಯಾವುದೇ ವಸ್ತುಗಳನ್ನ ಸುಲಭವಾಗಿ ಆನ್ಲೈನ್ ಮೂಲಕವೇ ಪರ್ಚೆಸ್ ಮಾಡಬಹುದು. ನಾವು ಕ್ಯಾಶ್ ಲೆಸ್ ಆಗಿದ್ರು ನಮಗೆ ಬೇಕಾಗಿರುವ ವಸ್ತುವನ್ನು ಕೊಂಡುಕೊಳ್ಳಬಹುದು. ಅಷ್ಟೇ ಅಲ್ಲ ಕ್ರೆಡಿಟ್ ಕಾರ್ಡ್ ಮೂಲಕ ಪೇಮೆಂಟ್ ಗಳನ್ನು ಮಾಡಬಹುದು.

ಬ್ಯಾಂಕ್ ನಲ್ಲಿ ಕ್ರೆಡಿಟ್ ಕಾರ್ಡ್ ಬಳಸಿ ಹಣಕಾಸಿನ ವ್ಯವಹಾರ ಮಾಡಿದಾಗ ಅದು ನೇರವಾಗಿ ಕ್ರೆಡಿಟ್ ಸ್ಕೋರ್ (Cibil Score) ಮೇಲೆ ಪರಿಣಾಮ ಬೀರುತ್ತದೆ. ನಿಮ್ಮ ಕ್ರೆಡಿಟ್ ಸ್ಕೋರ್ ಎಷ್ಟು ಉತ್ತಮವಾಗಿರುತ್ತದೆಯೋ ಅಷ್ಟೇ ಹೆಚ್ಚು ಬೆನಿಫಿಟ್ ಕೂಡ ಸಿಗುತ್ತದೆ

ಈ ಒಂದು ಸ್ಕಿಮ್ ನಲ್ಲಿ ಉಳಿತಾಯ ಮಾಡಿದ್ರೆ ಪ್ರತಿ ತಿಂಗಳು 5500 ಪಿಂಚಣಿ ಸಿಗುತ್ತೆ

Man Holding Credit Card

ಕ್ರೆಡಿಟ್ ಸ್ಕೋರ್ ಅವಲಂಬಿಸಿದೆ ಸಾಲದ ಬಡ್ಡಿದರ

ಗ್ರಾಹಕರ ಕ್ರೆಡಿಟ್ ಸ್ಕೋರ್ ಉತ್ತಮವಾಗಿದ್ದರೆ ಕಡಿಮೆ ಬಡ್ಡಿ ದರದಲ್ಲಿ ಸುಲಭವಾಗಿ ಸಾಲ ಸೌಲಭ್ಯವನ್ನು ಪಡೆದುಕೊಳ್ಳಬಹುದು ಜೊತೆಗೆ ಯಾವುದೇ ಹೆಚ್ಚಿನ ಅಡಮಾನಗಳನ್ನು ಇಡದೇ ಸಾಲ ಪಡೆದುಕೊಳ್ಳಬಹುದು. ಅದೇ ರೀತಿ ನಿಮ್ಮ ಕ್ರೆಡಿಟ್ ಸ್ಕೋರ್ (Credit Score) ಕಡಿಮೆ ಆದರೆ ಅದು ನಿಮ್ಮ ಹಣಕಾಸಿನ ವ್ಯವಹಾರದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ.

ಪ್ರತಿ ತಿಂಗಳು ಕ್ರೆಡಿಟ್ ಕಾರ್ಡ್ ನಿಂದ (Credit Card) ಮಾಡಬೇಕಾದ ಪೇಮೆಂಟ್ ಅನ್ನು ಒಂದು ದಿನ ತಡವಾಗಿ ಮಾಡಿದರು ಅದು ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ನೇರವಾಗಿ ಪರಿಣಾಮ ಬೀರಬಹುದು.

ಸಾಮಾನ್ಯವಾಗಿ ಕ್ರೆಡಿಟ್ ಸ್ಕೋರ್ ಗಳು 300 ರಿಂದ 900ರ ನಡುವೆ ಇರುತ್ತದೆ. ನಿಮ್ಮ ಕ್ರೆಡಿಟ್ ಸ್ಕೋರ್ 750 ರಿಂದ 900ಗಳ ನಡುವೆ ಇದ್ದರೆ ಅದನ್ನು ಉತ್ತಮ ಕ್ರೆಡಿಟ್ ಸ್ಕೋರ್ ಎಂದು ಪರಿಗಣಿಸಬಹುದು. ಕ್ರೆಡಿಟ್ ಸ್ಕೋರ್ ಉತ್ತಮವಾಗಿದ್ದಾಗ ಬ್ಯಾಂಕ್ ನಲ್ಲಿ ಸಾಲ ಸೌಲಭ್ಯಗಳು ಸುಲಭವಾಗಿ ಸಿಗುತ್ತವೆ ಇನ್ನೂ ನೀವು ಕ್ರೆಡಿಟ್ ಪಾವತಿಯನ್ನು ವಿಳಂಬ ಮಾಡಿದರೆ, ಕ್ರೆಡಿಟ್ ಸ್ಕೋರ್ ಎಷ್ಟು ಕಡಿಮೆ ಆಗಬಹುದು ಎಂಬುದನ್ನು ತಿಳಿದುಕೊಳ್ಳುವುದು ಒಳ್ಳೆಯದು.

* ಒಂದು ವಾರ ತಡವಾಗಿ ಕ್ರೆಡಿಟ್ ಬಿಲ್ ಪಾವತಿ ಮಾಡಿದರೆ ಕ್ರೆಡಿಟ್ ಸ್ಕೋರ್ ಹೆಚ್ಚು ವ್ಯತ್ಯಾಸವಾಗುವುದಿಲ್ಲ. ಆದರೆ ಈ ರೀತಿ ತಡವಾಗಿ ಬಿಲ್ಲು ಪಾವತಿ ಮಾಡುವುದು ಮುಂದುವರೆದರೆ ಅದು ಕ್ರೆಡಿಟ್ ಹಿಸ್ಟರಿಯಲ್ಲಿ ಸೇರಿಕೊಳ್ಳಬಹುದು.

ಸ್ಟೇಟ್ ಬ್ಯಾಂಕ್ ನಲ್ಲಿ 5 ಲಕ್ಷ ಇಟ್ರೆ 180 ದಿನಕ್ಕೆ ಬಡ್ಡಿ ಎಷ್ಟು ಸಿಗುತ್ತೆ! ಇಲ್ಲಿದೆ ಡೀಟೇಲ್ಸ್

* ಒಂದು ತಿಂಗಳಿಗಿಂತ ಹೆಚ್ಚು ಅವಧಿ ತೆಗೆದುಕೊಂಡು ಪೇಮೆಂಟ್ ಮಾಡಿದರೆ ಖಂಡಿತವಾಗಿಯೂ ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ಪರಿಣಾಮ ಬೀರುತ್ತದೆ. 15 ರಿಂದ 30 ದಿನಗಳ ವರೆಗೆ ಕ್ರೆಡಿಟ್ ಬಿಲ್ ಪಾವತಿ ಮಾಡದೆ ಇದ್ದಲ್ಲಿ 50 ರಿಂದ 100 ಕ್ರೆಡಿಟ್ ಸ್ಕೋರ್ ಕಡಿಮೆ ಆಗಬಹುದು. ಅದೇ ರೀತಿ ಒಂದು ತಿಂಗಳಿಗಿಂತ ಹೆಚ್ಚು ಸಮಯ ಪಾವತಿ ಮಾಡದೆ ಇದ್ದಾಗ 110 ಅಂಕಗಳನ್ನು ಕಳೆದುಕೊಳ್ಳಬೇಕಾಗಬಹುದು.

* ಎರಡು ತಿಂಗಳು ತಡವಾಗಿ ಕ್ರೆಡಿಟ್ ಬಿಲ್ ಪೇ ಮಾಡಿದರೆ ಕ್ರೆಡಿಟ್ ಸ್ಕೋರ್ 130 ರಿಂದ 150 ಅಂಕಗಳು ಎಷ್ಟು ಕಡಿಮೆ ಆಗುತ್ತದೆ.

* ಮೂರು ತಿಂಗಳವರೆಗೆ ಅಂದರೆ 90 ದಿನಗಳ ಕಾಲ ವಿಳಂಬವಾಗಿ ಕ್ರೆಡಿಟ್ ಬಿಲ್ ಪೇ ಮಾಡಿದರೆ ಇದು ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ನೇರವಾಗಿ ನಕಾರಾತ್ಮಕ ಪರಿಣಾಮ ಬೀರುತ್ತದೆ.

* ಇನ್ನು 120 ದಿನಗಳವರೆಗೂ ನೀವು ಕ್ರೆಡಿಟ್ ಮಾಡದೆ ಇದ್ದಾಗ ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ದೀರ್ಘಾವಧಿಯ ಪರಿಣಾಮ ಬೀರಬಹುದು ಇದರಿಂದಾಗಿ ಮುಂದಿನ ದಿನಗಳಲ್ಲಿ ಬ್ಯಾಂಕಿನಲ್ಲಿ ಸಾಲ ತೆಗೆದುಕೊಳ್ಳುವುದು ಅಥವಾ ಇತರ ಹಣಕಾಸಿನ ವ್ಯವಹಾರಕ್ಕೆ ಹೆಚ್ಚು ತೊಂದರೆಯಾಗುತ್ತದೆ.

ಕ್ರೆಡಿಟ್ ಸ್ಕೋರ್ ಕಡಿಮೆ ಆಗದೆ ಇರಲು ಈ ರೀತಿ ಮಾಡಿ

Girl Checking Credit Score Holding Credit Card
Girl Checking Credit Score Holding Credit Card (Photo Credit : Pexels)

ಮೊದಲನೇದಾಗಿ ಪ್ರತಿ ತಿಂಗಳು ಮಾಡಲೇಬೇಕಾದ ಪೇಮೆಂಟ್ ಇದ್ದರೆ ಅದನ್ನು ಆಟೊಮ್ಯಾಟಿಕ್ ಆಗಿ ಪೇ ಆಗುವಂತೆ ಮಾಡಬಹುದು. ಇದರಿಂದ ನಿಮಗೆ ಪೇಮೆಂಟ್ ಮಾಡುವ ದಿನಾಂಕ ಮರೆತರು ಸ್ವಯಂ ಚಾಲಿತವಾಗಿ ಪೇಮೆಂಟ್ ಆಗಿರುತ್ತದೆ.

ಎರಡನೆಯದಾಗಿ ನೀವು ಪೇಮೆಂಟ್ ದಿನಾಂಕವನ್ನು ರಿಮೈಂಡರ್ ಹಾಕಿಕೊಳ್ಳುವುದರ ಮೂಲಕ ನೆನಪಿಸಿಕೊಳ್ಳಬಹುದು ಅದಕ್ಕಾಗಿ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಉತ್ತಮ ಅಪ್ಲಿಕೇಶನ್ಗಳು ಲಭ್ಯವಿದೆ.

70 ಲಕ್ಷ ಹೋಮ್ ಲೋನ್ ಪಡೆದರೆ 25 ವರ್ಷಗಳಿಗೆ ಆಗುವ ಬಡ್ಡಿ ಎಷ್ಟು? ಇಲ್ಲಿದೆ ಲೆಕ್ಕಾಚಾರ

ಮೂರನೆಯದಾಗಿ ನಿಮ್ಮ ಬಳಿ ಒಂದಷ್ಟು ಎಮರ್ಜೆನ್ಸಿ ಕ್ಯಾಶ್, ಇಟ್ಟುಕೊಳ್ಳುವುದು ಒಳ್ಳೆಯದು ಅನಿರೀಕ್ಷಿತ ವೆಚ್ಚಗಳು ಬಂದಾಗ ಈ ಹಣ ನಿಮ್ಮ ಪೇಮೆಂಟ್ ಗೆ ಸಹಾಯವಾಗಬಹುದು. ಇನ್ನು ನೀವು ಯಾವುದೇ ಪೇಮೆಂಟ್ ಅನ್ನು ಸಕಾಲಕ್ಕೆ ಮಾಡಲು ಸಾಧ್ಯವಾಗದೇ ಇದ್ದಲ್ಲಿ ಬ್ಯಾಂಕ್ ನೊಂದಿಗೆ ಮಾತನಾಡಿ ಹೊಂದಾಣಿಕೆ ಮಾಡಿಕೊಳ್ಳಬಹುದು. ಇದರಿಂದ ಕ್ರೆಡಿಟ್ ಸ್ಕೋರ್ ಮೇಲೆ ನಕಾರಾತ್ಮಕ ಪರಿಣಾಮ ಬೀರುವುದನ್ನು ತಪ್ಪಿಸಬಹುದು.

What Happens If You Pay Your Credit Card Bill Late? Credit Score Risks Explained

English Summary
Related Stories