70 ಲಕ್ಷ ಹೋಮ್ ಲೋನ್ ಪಡೆದರೆ 25 ವರ್ಷಗಳಿಗೆ ಆಗುವ ಬಡ್ಡಿ ಎಷ್ಟು? ಇಲ್ಲಿದೆ ಲೆಕ್ಕಾಚಾರ

Home Loan : ನೀವು 25 ವರ್ಷಗಳ ಅವಧಿಗೆ 70 ಲಕ್ಷ ರೂಪಾಯಿಗಳನ್ನು ಸಾಲವಾಗಿ ಪಡೆದುಕೊಂಡಲ್ಲಿ ಪ್ರತಿ ತಿಂಗಳು EMI ಮೂಲಕ ಹಣವನ್ನು ಬ್ಯಾಂಕಿಗೆ ಪಾವತಿ ಮಾಡಬೇಕಾಗುತ್ತದೆ.

  • 25 ವರ್ಷಗಳಿಗೆ ಪಡೆದ ಹೋಮ್ ಲೋನ್ 21 ವರ್ಷಕ್ಕೆ ಹಿಂತಿರುಗಿಸಿ.
  • 70 ಲಕ್ಷ ಹೋಮ್ ಲೋನ್ ಗೆ 9.5% ಬಡ್ಡಿದರ.
  • 22 ಲಕ್ಷ ರೂಪಾಯಿ ಉಳಿತಾಯ ಮಾಡಿ ಬೇರೆ ಕಡೆ ಹೂಡಿಕೆ ಮಾಡಿ ಇನ್ನಷ್ಟು ಗಳಿಸಿ.

Home Loan : ಮನೆ ಕಟ್ಟುವ ಆಸೆ ಅನೇಕರಿಗೆ ಇರಬಹುದು, ಆದರೆ ಅದನ್ನು ಈಡೇರಿಸಿಕೊಳ್ಳಲು ಎಲ್ಲರಿಗೂ ಸಾಧ್ಯವಾಗುವುದಿಲ್ಲ. ಹಾಗಂದ ಮಾತ್ರಕ್ಕೆ ನಿರಾಶೆಗೊಳ್ಳುವುದು ಬೇಡ. ನೀವು ಮನೆ ಕಟ್ಟಲು ತೀರ್ಮಾನಿಸಿದರೆ ಬ್ಯಾಂಕ್ನಿಂದ ದೀರ್ಘಾವಧಿಯ ಸಾಲವನ್ನು (Bank Loan) ಪಡೆದುಕೊಳ್ಳಬಹುದು.

ಈ ರೀತಿ ಮಾಡಿದರೆ ನೀವು ನಿಮಗೆ ಅಗತ್ಯ ಇರುವಷ್ಟು ಮೊತ್ತದ ಸಾಲವನ್ನು ಬ್ಯಾಂಕ್ ನಿಂದ ಪಡೆದು ಮನೆ ನಿರ್ಮಾಣ ಮಾಡಿಕೊಳ್ಳಬಹುದು. 25 ರಿಂದ 30 ವರ್ಷಗಳ ಅವಧಿಗೆ ಬ್ಯಾಂಕ್ ನಲ್ಲಿ ಗೃಹ ಸಾಲ (Home Loan) ಸಿಗುತ್ತದೆ.

ಗೃಹ ಸಾಲ ಮತ್ತು ಬಡ್ಡಿ!

ಗೃಹ ಸಾಲವನ್ನು ನಾವು ಎಷ್ಟು ವರ್ಷಕ್ಕೆ ಎಷ್ಟು ಹಣವನ್ನು ಸಾಲವಾಗಿ ಪಡೆದುಕೊಳ್ಳುತ್ತೇವೆ ಎಂಬುದರ ಆಧಾರದ ಮೇಲೆ ಬಡ್ಡಿ ನಿರ್ಧಾರವಾಗುತ್ತದೆ. ಮೊದಲನೆಯದಾಗಿ 70 ಲಕ್ಷ ನೀವು ಸಾಲವಾಗಿ ಪಡೆದುಕೊಂಡರೆ 25 ವರ್ಷಗಳ ಅವಧಿಗೆ ಎಷ್ಟು ಬಡ್ಡಿ ಮತ್ತು ಅಸಲು ಮರುಪಾವತಿ ಮಾಡಬೇಕು ಎಂಬುದನ್ನು ತಿಳಿದುಕೊಳ್ಳೋಣ.

70 ಲಕ್ಷ ಹೋಮ್ ಲೋನ್ ಪಡೆದರೆ 25 ವರ್ಷಗಳಿಗೆ ಆಗುವ ಬಡ್ಡಿ ಎಷ್ಟು? ಇಲ್ಲಿದೆ ಲೆಕ್ಕಾಚಾರ

5 ಲಕ್ಷ ಹೂಡಿಕೆ ಮಾಡಿದ್ರೆ ಸಿಗುತ್ತೆ 15 ಲಕ್ಷ ರೂಪಾಯಿ; ಈ ಯೋಜನೆ ಮಿಸ್ ಮಾಡ್ಕೋಬೇಡಿ

70 ಲಕ್ಷ ಸಾಲಕ್ಕೆ 25 ವರ್ಷಗಳಿಗೆ ಆಗುವ ಬಡ್ಡಿ

ನೀವು 25 ವರ್ಷಗಳ ಅವಧಿಗೆ 70 ಲಕ್ಷ ರೂಪಾಯಿಗಳನ್ನು ಸಾಲವಾಗಿ ಪಡೆದುಕೊಂಡಲ್ಲಿ ಪ್ರತಿ ತಿಂಗಳು EMI ಮೂಲಕ ಹಣವನ್ನು ಬ್ಯಾಂಕಿಗೆ ಪಾವತಿ ಮಾಡಬೇಕಾಗುತ್ತದೆ. 70 ಲಕ್ಷ ಸಾಲ ಮಾಡಿದರೆ, ಒಂದು ತಿಂಗಳಿಗೆ ಪಾವತಿಸಬೇಕಾದ EMI ಮೊತ್ತ, 9.5% ಬಡ್ಡಿ ದರದಂತೆ 61,159 ರೂಪಾಯಿ ಆಗುತ್ತದೆ.

ಅಂದರೆ ನಿಮ್ಮ ಸಾಲ ಸಂಪೂರ್ಣ ಮರುಪಾವತಿಯ ಹೊತ್ತಿಗೆ ನೀವು ಪಾವತಿಸುವ ಬಡ್ಡಿ 1,13,47,630 ರೂಪಾಯಿಗಳಷ್ಟು. ಅಂದ್ರೆ ಒಟ್ಟಾರೆಯಾಗಿ 1,83,47,630 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ.

ಆದರೆ ನೀವು ಸ್ವಲ್ಪ ಬುದ್ಧಿವಂತಿಕೆಯಿಂದ ಹಣ ಮರುಪಾವತಿ ಮಾಡುವ ಬಗ್ಗೆ ಯೋಚನೆ ಮಾಡಿದರೆ ನಾಲ್ಕು ವರ್ಷಕ್ಕೂ ಮೊದಲೇ ನಿಮ್ಮ ಸಾಲವನ್ನು ಮರುಪಾವತಿ ಮಾಡಬಹುದು ಜೊತೆಗೆ ರೂ. 20 ಲಕ್ಷಕ್ಕೂ ಹೆಚ್ಚಿನ ಹಣವನ್ನು ಉಳಿತಾಯ ಮಾಡಬಹುದು.

Property Rules: ಹೆಂಡತಿಯ ಹೆಸರಿನಲ್ಲಿರುವ ಆಸ್ತಿಯ ಮೇಲೆ ಗಂಡನಿಗೆ ಪಾಲಿದ್ಯಾ? ಕಾನೂನು ತಿಳಿಯಿರಿ

ದೀರ್ಘಾವಧಿಯ ಸಾಲವನ್ನು ಅಲ್ಪಾವಧಿಗೆ ಮಾಡುವುದು ಹೇಗೆ?

ಮೊದಲನೇದಾಗಿ ನೀವು ದೀರ್ಘಾವಧಿಯ ಸಾಲವನ್ನು ತೆಗೆದುಕೊಂಡರೆ ಪ್ರತಿ ತಿಂಗಳು ಪಾವತಿಸಬೇಕಾದ ಇಎಮ್ಐ ಮೊತ್ತ ಕಡಿಮೆ ಬರಬಹುದು. ಆದರೆ ಅದಕ್ಕೆ ಅಷ್ಟೇ ಹೆಚ್ಚಿನ ಬಡ್ಡಿಯನ್ನು ಪಾವತಿಸುತ್ತಿರುತ್ತೀರಿ.

ಅದರ ಬದಲು ಪ್ರತಿ ತಿಂಗಳು ಇಎಂಐ ಮೊತ್ತವನ್ನು ಜಾಸ್ತಿ ಮಾಡಿಕೊಂಡರೆ ಕಡಿಮೆ ಅವಧಿಯಲ್ಲಿ ಸಾಲ ಮರುಪಾವತಿ ಮಾಡಬಹುದು ಜೊತೆಗೆ ಹೆಚ್ಚಿನ ಹಣ ಉಳಿತಾಯ ಮಾಡಬಹುದು.

EMI ಮೊತ್ತವನ್ನು ಉಳಿತಾಯ ಮಾಡುವುದು ಹೇಗೆ?

ನೀವು 70 ಲಕ್ಷ ಸಾಲಕ್ಕೆ ಪ್ರತಿ ತಿಂಗಳು 64,446 ರೂಪಾಯಿಗಳನ್ನು EMI ಆಗಿ ಪಾವತಿಸಬೇಕು ಅಂದರೆ ಪ್ರತಿ ತಿಂಗಳು 3,304 ರೂಪಾಯಿಗಳನ್ನು ಹೆಚ್ಚುವರಿಯಾಗಿ ಪಾವತಿಸಬೇಕು. ಈ ರೀತಿ ಮಾಡುವುದರಿಂದ 25 ವರ್ಷದ ಬದಲು 21 ವರ್ಷಕ್ಕೆ ಗೃಹ ಸಾಲವನ್ನು ಮರುಪಾವತಿ ಮಾಡಬಹುದು.

21 ವರ್ಷಕ್ಕೆ ಒಟ್ಟು ಬಡ್ಡಿ 90,51,926 ರೂಪಾಯಿಗಳು ಹಾಗೂ ಒಟ್ಟಾರೆಯಾಗಿ ಪಾವತಿಸಬೇಕಾದ ಮೊತ್ತ 1,60,51,926 ರೂಪಾಯಿಗಳು. ಈ ರೀತಿ ಹೆಚ್ಚುವರಿಯಾಗಿ 3304 ರೂ.ತಿಂಗಳ ಇಎಂಐ ಪಾವತಿ ಮಾಡುವುದರಿಂದ 22,95,704 ರೂಪಾಯಿಗಳನ್ನು ಉಳಿತಾಯ ಮಾಡಬಹುದು.

How Much Interest on a 70 Lakh Home Loan for 25 Years? Here’s the Calculation

Related Stories