Property Rules: ಹೆಂಡತಿಯ ಹೆಸರಿನಲ್ಲಿರುವ ಆಸ್ತಿಯ ಮೇಲೆ ಗಂಡನಿಗೆ ಪಾಲಿದ್ಯಾ? ಕಾನೂನು ತಿಳಿಯಿರಿ
Property Rules: ಹೆಂಡತಿಯ ಆಸ್ತಿಯ ಬಗ್ಗೆ ಇರುವಂತಹ ನಿಯಮಗಳ ಬಗ್ಗೆ ಸಾಕಷ್ಟು ಜನರಿಗೆ ತಿಳಿದಿರುವುದಿಲ್ಲ, ಅವರಿಗೆ ಖಂಡಿತವಾಗಿ ಈ ಲೇಖನ ಸಹಾಯಕವಾಗಿರುತ್ತದೆ.
- ವಿವಾಹ ವಿಚ್ಛೇದನದಲ್ಲಿ ಹೆಂಡತಿಯ ಆಸ್ತಿಯ ನಿಯಮಗಳು.
- ಹೆಂಡತಿಯ ಆಸ್ತಿಯಲ್ಲಿ ಗಂಡನಿಗೆ ಪಾಲಿದ್ಯಾ
- ಹೆಂಡತಿಯ ಪಿತ್ರಾರ್ಜಿತ ಆಸ್ತಿಯನ್ನು ಗಂಡ ಯಾವ ರೀತಿಯಲ್ಲಿ ಬಳಸಬಹುದು?
Property Rules: ಇತ್ತೀಚಿನ ದಿನಗಳಲ್ಲಿ ನಿಮಗೆಲ್ಲರಿಗೂ ಗೊತ್ತಿರೋ ಹಾಗೆ ಸಾಕಷ್ಟು ಹೆಚ್ಚಿನ ಪ್ರಮಾಣದಲ್ಲಿ ಡಿವೋರ್ಸ್ ಪ್ರಕರಣಗಳು ಕಂಡುಬರುತ್ತಿವೆ. ಇನ್ನು ಈ ಸಂದರ್ಭದಲ್ಲಿ ಗಂಡನ ಆಸ್ತಿಯ ಬಗ್ಗೆ ಸಂಪೂರ್ಣ ಚರ್ಚೆ ಆಗುತ್ತಿರುತ್ತದೆ.
ಆದರೆ ಈ ಸಂದರ್ಭದಲ್ಲಿ ಹೆಂಡತಿಯ ಆಸ್ತಿಯ ಬಗ್ಗೆ ಇರುವಂತಹ ನಿಯಮಗಳ ಬಗ್ಗೆ ಸಾಕಷ್ಟು ಜನರಿಗೆ ತಿಳಿದಿರುವುದಿಲ್ಲ, ಅವರಿಗೆ ಖಂಡಿತವಾಗಿ ಈ ಲೇಖನ ಸಹಾಯಕವಾಗಿರುತ್ತದೆ.
ಗಂಡ ಹಾಗೂ ಹೆಂಡತಿ ಸಮಾನರಾಗಿ ತಮ್ಮ ಆಸ್ತಿಯ ಮೇಲೆ ಅಧಿಕಾರವನ್ನು ಹೊಂದಿರುವುದು ನಿಮಗೆಲ್ಲರಿಗೂ ತಿಳಿದಿರುವ ವಿಚಾರ. ಇನ್ನು ಸಾಕಷ್ಟು ಬಾರಿ ಗಂಡ ಹೆಂಡತಿಯ ಹೆಸರಿನಲ್ಲಿ ಆಸ್ತಿಯನ್ನು ಖರೀದಿ ಮಾಡುತ್ತಾನೆ. ಇಂತಹ ಆಸ್ತಿಯ ಮೇಲೆ ಹೆಂಡತಿಗೆ ಸಂಪೂರ್ಣವಾದ ಅಧಿಕಾರವಿರುತ್ತದೆ.
ಅಂತಹ ಆಸ್ತಿಯನ್ನು ಮಾರಾಟ ಮಾಡುವುದಕ್ಕಿಂತ ಮುಂಚೆ ಹೆಂಡತಿಯ ಸಂಪೂರ್ಣ ಒಪ್ಪಿಗೆ ಇರಬೇಕಾಗಿರುವುದು ಕೂಡ ಅತ್ಯಂತ ಪ್ರಮುಖವಾಗಿರುತ್ತದೆ. ಇಂತಹ ಸಂದರ್ಭದಲ್ಲಿ ವಿವಾಹ ವಿಚ್ಛೇದನವಾದಾಗ ಹೆಂಡತಿ ಗಂಡನ ಈ ಆಸ್ತಿಯಲ್ಲಿ ಪಾಲನ್ನು ಪಡೆದುಕೊಳ್ಳಬಹುದಾಗಿದೆ. ಸಂದರ್ಭದಲ್ಲಿ ಹೆಂಡತಿಗೆ ಯಾವುದೇ ರೀತಿಯ ವ್ಯಾಪಾರ ವ್ಯವಹಾರ ಇದ್ರೆ ಆ ಸಂದರ್ಭದಲ್ಲಿ ಪರಿಸ್ಥಿತಿ ಸ್ವಲ್ಪ ಮಟ್ಟಿಗೆ ಬೇರೆಯಾಗಬಹುದು.
ನಿಮ್ಮ ಹೆಂಡತಿ ಹೆಸರಲ್ಲಿ ಇಲ್ಲಿ ಹೂಡಿಕೆ ಮಾಡಿ ಸಾಕು, ಒನ್ ಟು ಡಬಲ್ ಆದಾಯ
ಇನ್ನು ಇಬ್ಬರ ಹೆಸರಿನಲ್ಲಿರುವಂತಹ ಆಸ್ತಿಗೆ ಹೆಂಡತಿಯಷ್ಟೇ ಗಂಡ ಕೂಡ ಸಮಾನ ಪಾಲುದಾರನಾಗಿರುತ್ತಾನೆ. ಕಾನೂನು ಪ್ರಕಾರ ಗಂಡ ಸಮಾನ ಹಕ್ಕನ್ನ ಹೊಂದಿರುವಂತಹ ಆಸ್ತಿಯನ್ನು ಹೆಂಡತಿಯ ಅನುಮತಿ ಇಲ್ಲದೆ ಮಾರಾಟ ಮಾಡಲು ಸಾಧ್ಯವಿಲ್ಲ.
ಅವಳ ಅನುಮತಿಯ ನಂತರ ಅದನ್ನು ಮಾರಾಟ ಮಾಡಬಹುದಾಗಿದ್ದು ಇನ್ನೂ ಜಂಟಿ ಆಸ್ತಿಯನ್ನು ಕೂಡ ಆತ ಕಾನೂನು ಪ್ರಕ್ರಿಯೆಗಳನ್ನು ಸರಿಯಾದ ರೀತಿಯಲ್ಲಿ ಅನುಸರಿಸುವ ಮೂಲಕ ಮಾರಾಟ ಮಾಡುವಂತಹ ಅವಕಾಶವನ್ನು ಹೊಂದಿರುತ್ತಾನೆ.
ಒಂದು ವೇಳೆ ಹೆಂಡತಿ ಪಿತ್ರಾರ್ಜಿತ ಆಸ್ತಿಯನ್ನು ಹೊಂದಿದ್ದರೆ, ಅವಳ ಒಪ್ಪಿಗೆಯ ಮೇರೆಗೆ ಮಾತ್ರ ಆಸ್ತಿಯನ್ನು ಅನುಭವಿಸುವಂತಹ ಹಕ್ಕನ್ನು ಗಂಡ ಹೊಂದಿರುತ್ತಾನೆ ಎಂಬುದಾಗಿ ಕಾನೂನಾತ್ಮಕವಾಗಿ ತಿಳಿಸಲಾಗಿದೆ. ಅಂದರೆ ಆ ಆಸ್ತಿಯ ಪ್ರಾಥಮಿಕ ಮಾಲೀಕತ್ವ ಹೆಂಡತಿಯ ಹೆಸರಿನಲ್ಲಿರುತ್ತದೆ.
PM Kisan Scheme: 19ನೇ ಕಂತಿನ ಪಿಎಂ ಕಿಸಾನ್ ಯೋಜನೆ ಅಪ್ಡೇಟ್! ಅವಿವಾಹಿತ ರೈತರ ಕಥೆ ಏನು?
ಅದಾದ ನಂತರ ಅವಳ ಅನುಮತಿಯ ಮೇರೆಗೆ ಮಾತ್ರ ಅದನ್ನು ಅನುಭವಿಸುವ ಹಕ್ಕು ಅಥವಾ ಬಳಸುವ ಹಕ್ಕನ್ನು ಗಂಡ ಹೊಂದಿರುತ್ತಾನೆ. ಮಾರಾಟ ಮಾಡುವುದಕ್ಕೆ ಕೂಡ ಆಕೆಯ ಅನುಮತಿ ಅಥವಾ ಆಕೆಯ ಅಧೀನದಲ್ಲಿ ಮಾಡಬಹುದಾಗಿದೆ. ಅವಳ ಅನುಮತಿಯ ಹೊರತಾಗಿ ಅದರ ಮೇಲೆ ಗಂಡನಿಗೆ ಆ ಆಸ್ತಿಯಲ್ಲಿ ಯಾವುದೇ ರೀತಿಯ ಹಕ್ಕು ಇರುವುದಿಲ್ಲ.
Does a Husband Have a Share in Property Owned by His Wife