ಇತ್ತೀಚೆಗೆ ಸಿ ಎನ್ ಜಿ ಕಾರುಗಳು (CNG cars) ಹೆಚ್ಚು ಫೇಮಸ್ ಆಗುತ್ತಿದೆ, ಕಡಿಮೆ ಖರ್ಚಿನಲ್ಲಿ ದಿನವಿಡೀ ಪ್ರಯಾಣ ಮಾಡುವಂತಹ ಕಾರುಗಳನ್ನು ಮೋಟಾರ್ ಕಂಪನಿಗಳು ತಯಾರು ಮಾಡಿದೆ.
ಆದರೆ ಈಗ ಬಜಾಜ್ (Bajaj company) ಒಂದು ಹೆಜ್ಜೆ ಮುಂದೆ ಹೋಗಿ ಸಿಎನ್ ಜಿ ಬೈಕ್ (CNG Bike) ಕೂಡ ನಿರ್ಮಾಣ ಮಾಡಿದೆ, ಹಾಗಾಗಿ ಗ್ರಾಹಕರು ಅತಿ ಕಡಿಮೆ ವೆಚ್ಚದಲ್ಲಿ ತಿಂಗಳು ಪೂರ್ತಿ ಬೈಕ್ ಓಡಿಸಬಹುದಾಗಿದೆ.
ಮಾರುಕಟ್ಟೆಯಲ್ಲಿ ಪೆಟ್ರೋಲ್ (Petrol) ಹಾಗೂ ಡೀಸೆಲ್ (Diesel) ಬೆಲೆ ದಿನದಿಂದ ದಿನಕ್ಕೆ ಏರುತ್ತಿದೆ ಹಾಗು ಸರಿಯಾದ ಪ್ರಮಾಣದಲ್ಲಿ ಬೇಕಾಗುವಷ್ಟು ಪೆಟ್ರೋಲ್ ಹಾಗೂ ಡೀಸೆಲ್ ಇಂಧನಗಳು ಲಭ್ಯವಾಗುತ್ತಿಲ್ಲ
ಎರಡಕ್ಕಿಂತ ಹೆಚ್ಚು ಮನೆ ಬಾಡಿಗೆಗೆ ನೀಡಿರುವ ಮಾಲೀಕರಿಗೆ ಮಹತ್ವದ ಮಾಹಿತಿ! ಹೊಸ ಆದೇಶ
ಇದೇ ಕಾರಣಕ್ಕೆ ಇತ್ತೀಚಿನ ದಿನಗಳಲ್ಲಿ ಎಲೆಕ್ಟ್ರಿಕ್ ವಾಹನ (electric vehicle) ಹಾಗೂ ಸಿಎಂಜಿ ಮಾದರಿಯ ವಾಹನಗಳು ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡಿದೆ. ಇದೇ ಕಾರಣಕ್ಕೆ ಬಜಾಜ್ ಸಿ ಎನ್ ಜಿ (Bajaj CNG Bike) ಇಂದ ಓಡಿಸಲ್ಪಡುವ ಬೈಕ್ ಅನ್ನು ಆರಂಭಸಲಿದ್ದು ಇದರಿಂದ ಗ್ರಾಹಕರು ಅತಿ ಕಡಿಮೆ ಖರ್ಚಿನಲ್ಲಿ ದಿನವಿಡೀ ಪ್ರಯಾಣ ಮಾಡಬಹುದಾಗಿದೆ.
ಬಜಾಜ್ ನ ಸಿಎನ್ ಜಿ ಬೈಕ್ – Bajaj CNG Bike
ಇತ್ತೀಚಿಗೆ ಬಜಾಜ್ ನಿರ್ದೇಶಕ ರಾಜೀವ್ (director of Bajaj company) ಅವರು ಬಜಾಜ್ ನಿಂದ ಹೊಸದಾಗಿ ಬಿಡುಗಡೆ ಆಗಲಿರುವ ಸಿ ಎನ್ ಜಿ ಬೈಕ್ ಬಗ್ಗೆ ಮಾಹಿತಿ ನೀಡಿದ್ದಾರೆ. ಸಿಎನ್ ಜಿ ಕಾರಿನ ಬಗ್ಗೆ ಎಲ್ಲರಿಗೂ ಗೊತ್ತು ಆದರೆ ಇದೀಗ ಬೈಕಲ್ಲಿಯೂ ಕೂಡ ಇದೇ ಎಕ್ಸ್ಪರಿಮೆಂಟ್ (experiment) ಮಾಡಲಾಗುತ್ತಿದೆ.
ಸದ್ಯದಲ್ಲಿಯೇ ಬಿಡುಗಡೆ ಆಗಲಿರುವ ಬಜಾಜ್ ನ ಸಿ ಎನ್ ಜಿ ಬೈಕ್ ಯಶಸ್ವಿಯಾದರೆ ದೇಶದಲ್ಲಿ ಮೊದಲ ಬಾರಿಗೆ ಸಿಎನ್ ಜಿ ಮಾದರಿಯ ಬೈಕ್ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಲಿದೆ ಎಂದು ತಿಳಿಸಿದ್ದಾರೆ.
₹100 ರೂಪಾಯಿ ಖರ್ಚು ಮಾಡಿದ್ರೆ 700 ಕಿ.ಮೀ ಮೈಲೇಜ್ ಕೊಡುತ್ತೆ ಈ ಎಲೆಕ್ಟ್ರಿಕ್ ಸ್ಕೂಟರ್! ಡಿಸ್ಕೌಂಟ್ ಬೆಲೆಗೆ ಖರೀದಿಸಿ
ಅದರಲ್ಲೂ ಪೆಟ್ರೋಲ್ ಹಾಗೂ ಎಲೆಕ್ಟ್ರಿಕ್ ವಾಹನಗಳಿಗಿಂತ ಅಗ್ಗದ ಬೆಲೆಗೆ ಸಿಎನ್ ಜಿ ಬೈಕ್ ಬಿಡುಗಡೆಯಾಗಲಿದೆ. ಈ ಬೈಕ್ ನ್ನೇ ಖರೀದಿಸಿದರೆ ಪ್ರತಿ ತಿಂಗಳ ವೆಚ್ಚ ಕೂಡ ಕಡಿಮೆಯಾಗುತ್ತದೆ ಎನ್ನುವುದು ಕಂಪನಿಯ ಭರವಸೆ.
ಪರಿಸರ ಸ್ನೇಹಿ ವಾಹನಗಳ ಬಿಡುಗಡೆಗೆ ಉತ್ತೇಜನ
ಇತ್ತೀಚಿಗೆ ಕೇಂದ್ರ ಸರ್ಕಾರವು ಕೂಡ ಪರಿಸರಸ್ನೇಹಿ ವಾಹನ (environment friendly vehicle) ಬಿಡುಗಡೆಗೆ ಉತ್ತೇಜನ ನೀಡುತ್ತಿದೆ, ವಾಹನ ತಯಾರಿಸುವ ಪ್ರಕ್ರಿಯೆಗೆ ಕೇಂದ್ರ ಸರ್ಕಾರ ಸವಲತ್ತು ಒದಗಿಸುತ್ತಿದೆ.
ಭಾರತೀಯ ಆಟೋ ಕ್ಷೇತ್ರದಲ್ಲಿ ಸದ್ಯದಲ್ಲಿಯೇ ಪ್ರವೇಶಿಸುತ್ತಿರುವ ಸಿಎನ್ಜಿ ಬೈಕ್ ಅತಿ ಹೆಚ್ಚು ಬೇಡಿಕೆಯನ್ನು ಹುಟ್ಟು ಹಾಕಲಿದೆ. ಸಿ ಎನ್ ಜಿ ಬೈಕ್ ಖರೀದಿ ಒನ್ ಟೈಮ್ ಇನ್ವೆಸ್ಟ್ಮೆಂಟ್ (one time investment) ಅಷ್ಟೇ.
ಜಸ್ಟ್ 10 ರೂಪಾಯಿಯಲ್ಲಿ 150 ಕಿ.ಮೀ ಹೋಗಬಹುದು, ಅಂತಹ ಅಗ್ಗದ ಎಲೆಕ್ಟ್ರಿಕ್ ಬೈಕ್ ಇಲ್ಲಿದೆ!
ನಂತರ ನೀವು ಪ್ರತಿ ತಿಂಗಳು ಪೆಟ್ರೋಲ್ ಎಂಜಿನ್ ಗೆ ಖರ್ಚು ಮಾಡುವುದಕ್ಕಿಂತ ಅತಿ ಕಡಿಮೆ ಖರ್ಚಿನಲ್ಲಿ ಈ ಬೈಕ್ ನಿಭಾಯಿಸಬಹುದು. ಸದ್ಯಕ್ಕಂತೂ ಭಾರತೀಯರಲ್ಲಿ Bajaj ಸಿ ಎನ್ ಜಿ ಬೈಕ್ ಬಗ್ಗೆ ಕುತೂಹಲ ಹೆಚ್ಚಾಗಿದೆ.
Bajaj company to Introduce Bajaj CNG Bike
Ramya M from Bengaluru, She is a writer with more than five years of professional experience. Graduate from Karnataka University and has contributed her expertise to various Kannada news networks. She Loves to Write engaging articles covering a wide range of topics, including technology, business news, and lifestyle.
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.