Business News

ಯಾವುದೇ ಬ್ಯಾಂಕ್ ಡೆಬಿಟ್ ಕಾರ್ಡ್ ಬಳಕೆದಾರರಿಗೆ ಹೊಸ ನಿಯಮ! ಹೆಚ್ಚಾಗಿದೆ ಬಳಕೆಯ ಶುಲ್ಕ

ಇತ್ತೀಚಿನ ದಿನಗಳಲ್ಲಿ ನಾವು ನಮ್ಮ ಎಲ್ಲಾ ಹಣಕಾಸಿನ ವ್ಯವಹಾರಗಳನ್ನು ಯುಪಿಐ ಅಥವಾ ನೆಟ್ ಬ್ಯಾಂಕಿಂಗ್ (net banking) ಮೂಲಕ ಮಾಡುತ್ತೇವೆ, ಎಲ್ಲವೂ ಆನ್ಲೈನ್ ನಲ್ಲಿಯೇ ಹಣಕಾಸಿನ ವ್ಯವಹಾರಗಳು ನಡೆಯುತ್ತವೆ

ಅದೇ ರೀತಿ ಬ್ಯಾಂಕ್ಗಳಲ್ಲಿ ಡೆಬಿಟ್ ಕಾರ್ಡ್ (debit card) ಹಾಗೂ ಕ್ರೆಡಿಟ್ ಕಾರ್ಡ್ (credit card) ಗಳನ್ನು ಕೂಡ ಗ್ರಾಹಕರಿಗೆ ನೀಡಲಾಗುತ್ತದೆ, ಸಾಮಾನ್ಯ ಉಳಿತಾಯ ಖಾತೆ ಹೊಂದಿರುವವರಿಗೆ ಬ್ಯಾಂಕ್ ಡೆಬಿಟ್ ಕಾರ್ಡ್ ನೀಡುತ್ತದೆ.

Debit Card

ಈಗ ಡೆಬಿಟ್ ಕಾರ್ಡ್ ಬಳಕೆದಾರರಿಗೆ ಬ್ಯಾಂಕ್ ಗಳು ಹೊಸದೊಂದು ನಿಯಮ ಜಾರಿಗೆ ತಂದಿದೆ, ಈ ಮೂಲಕ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ನೀವು ಡೆಬಿಟ್ ಕಾರ್ಡ್ ಪಡೆದುಕೊಂಡಿದ್ದರೆ ಅದರ ಶುಲ್ಕ ಹೆಚ್ಚಿಸಲಾಗಿದೆ.

ಆಧಾರ್ ಕಾರ್ಡ್ ಇದ್ದು ಈ ಕೆಲಸ ಮಾಡಿಕೊಳ್ಳದೆ ಇದ್ರೆ ಗ್ಯಾಸ್ ಸಬ್ಸಿಡಿ ಹಣ ರದ್ದಾಗುತ್ತೆ!

ಡೆಬಿಟ್ ಕಾರ್ಡ್ ಬಳಸಿದರೆ ಶುಲ್ಕ! (Fee for debit card usage)

ಬ್ಯಾಂಕ್ ಗಳಿಂದ ಡೆಬಿಟ್ ಕಾರ್ಡ್ ಪಡೆದು ಎಟಿಎಂ (ATM) ನಲ್ಲಿ ನಮ್ಮ ಖಾತೆಯಲ್ಲಿ ಇರುವ ಹಣವನ್ನು ಹಿಂಬಡೆಯಬಹುದು. ಆನ್ಲೈನ್ ಶಾಪಿಂಗ್ ಮಾಡುವುದು ಕೂಡ ಸುಲಭವಾಗಿದೆ. ಇನ್ನು ಎ ಟಿ ಎಂ ಮೂಲಕ ಡೆಬಿಟ್ ಕಾರ್ಡ್ ಬಳಸಿ ಹಣ ಹಿಂಪಡೆದರೆ ಬ್ಯಾಂಕ್ ಗಳು ತಮ್ಮದೇ ಆದ ಶುಲ್ಕವನ್ನು ಕೂಡ ವಿಧಿಸುತ್ತವೆ.

ಎಟಿಎಂ ಕಾರ್ಡ್ ಬಳಸುವುದು ಮಾತ್ರವಲ್ಲದೆ, ಡೆಬಿಟ್ ಕಾರ್ಡ್ ಕಳೆದು ಹೋದಾಗಲೂ ಕೂಡ ಹೊಸ ಡೆಬಿಟ್ ಕಾರ್ಡ್ ಪಡೆದುಕೊಳ್ಳಲು ಹೆಚ್ಚುವರಿ ಶುಲ್ಕ ಪಾವತಿಸಬೇಕಾಗುತ್ತದೆ. ಹಾಗಾದ್ರೆ ದೇಶದ ಪ್ರತಿಷ್ಠಿತ ಬ್ಯಾಂಕುಗಳು ತಮ್ಮ ಗ್ರಾಹಕರಿಗೆ ಕೊಡುವ ಕಾರ್ಡ್ ಮೇಲೆ ಎಷ್ಟು ಶುಲ್ಕ ವಿಧಿಸುತ್ತಾರೆ ಎಂಬುದನ್ನ ತಿಳಿದುಕೊಳ್ಳೋಣ.

ಕಷ್ಟ ಅಂತ ಯಾವುದೋ ಲೋನ್ ಪಡೆಯೋದಕ್ಕಿಂತ ಚಿನ್ನದ ಸಾಲವೇ ಉತ್ತಮ! ಏಕೆ ಗೊತ್ತಾ?

Bank Debit Cardಎಚ್ ಡಿ ಎಫ್ ಸಿ ಬ್ಯಾಂಕ್! (HDFC Bank)

ಅಧಿಕ ಬ್ಯಾಂಕ್ ಆಗಿರುವ ಎಚ್ ಡಿ ಎಫ್ ಸಿ ಬ್ಯಾಂಕ್ ನಲ್ಲಿ ಡೆಬಿಟ್ ಕಾರ್ಡ್ ಮರು ವಿತರಣೆಗೆ 200 ರೂಪಾಯಿ ಶುಲ್ಕ ಹಾಗೂ ಜಿ ಎಸ್ ಟಿ ಯನ್ನು ವಿಧಿಸಲಾಗುತ್ತದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ! (SBI Bank)

ಎಸ್ ಬಿ ಐ ಕೂಡ ಡೆಬಿಟ್ ಕಾರ್ಡ್ ಮರು ವಿತರಣೆಗೆ ಶುಲ್ಕ ವಿಧಿಸುತ್ತಿದ್ದು 300 ಶುಲ್ಕದ ಜೊತೆಗೆ 18% ಜಿ ಎಸ್ ಟಿ ಕೂಡ ಪಾವತಿಸಬೇಕು.

ಐಸಿಐಸಿಐ ಬ್ಯಾಂಕ್ (ICICI Bank)

ದೇಶದ ಪ್ರತಿಷ್ಠಿತ ಬ್ಯಾಂಕ್ ಆಗಿರುವ ಐಸಿಐಸಿಐ ಬ್ಯಾಂಕ್ ನಲ್ಲಿ ಕೂಡ ರಿಪ್ಲೇಸ್ಮೆಂಟ್ ಮೇಲೆ ಶುಲ್ಕ ವಿಧಿಸಲಾಗುತ್ತದೆ. 200ರೂ.ಜೊತೆಗೆ 18% ಜಿ ಎಸ್ ಟಿ ಯನ್ನು ಕೂಡ ಪಾವತಿಸಬೇಕು.

ಸ್ಟೇಟ್ ಬ್ಯಾಂಕ್ ಅಕೌಂಟ್ ಇರುವ ಗ್ರಾಹಕರಿಗೆ ಗುಡ್ ನ್ಯೂಸ್, ಎಫ್‌ಡಿ ಮೇಲಿನ ಬಡ್ಡಿದರ ಏರಿಕೆ

ಎಸ್ ಬ್ಯಾಂಕ್ (Yes Bank)

ಎಸ್ ಬ್ಯಾಂಕ್ ಕೂಡ ಕಾರ್ಡ್ ಮರು ವಿತರಣೆಗೆ ಶುಲ್ಕ ನಿಧಿಸುತ್ತದೆ ಆದರೆ ಇದರ ಬ್ಯಾಂಕುಗಳಿಗಿಂತ ಸ್ವಲ್ಪ ಕಡಿಮೆ ಎನ್ನಬಹುದು, 199 ರೂಪಾಯಿಗಳ ಶುಲ್ಕದ ಜೊತೆಗೆ ಜಿ ಎಸ್ ಟಿ ಪಾವತಿ ಮಾಡಬೇಕಾಗುತ್ತದೆ.

ಕೆನರಾ ಬ್ಯಾಂಕ್ (Canara Bank)

ಮತ್ತೊಂದು ಅತಿ ದೊಡ್ಡ ಸಾಲದಾತ ಬ್ಯಾಂಕ್ ಆಗಿರುವ ಕೆನರಾ ಬ್ಯಾಂಕ್ ಇತರೆ ಬ್ಯಾಂಕ್ ಗಳಿಗಿಂತಲೂ ಸ್ವಲ್ಪ ಕಡಿಮೆ ಸ್ವಲ್ಪ ವಿಧಿಸುತ್ತದೆ ಎನ್ನಬಹುದು ಇಲ್ಲಿ ಕೇವಲ 150 ರೂಪಾಯಿ ಶುಲ್ಕದ ಜೊತೆಗೆ ಜಿ ಎಸ್ ಟಿ ಪಾವತಿಸಬೇಕು. ಜಿಎಸ್‌ಟಿ 18% ಇರುತ್ತದೆ.

ಪಂಜಾಬ್ ನ್ಯಾಷನಲ್ ಬ್ಯಾಂಕ್: (PNB Bank)

ಈ ಬ್ಯಾಂಕ್ ನಲ್ಲಿ ನೀವು ಕಾರ್ಡ್ ರಿಪ್ಲೇಸ್ಮೆಂಟ್ ಅಥವಾ ಡೆಬಿಟ್ ಕಾರ್ಡ್ ಮರು ವಿತರಣೆಗೆ 150 ರಿಂದ 500 ರೂಪಾಯಿಗಳವರೆಗೂ ಶುಲ್ಕ ಪಾವತಿಸಬೇಕಾಗಬಹುದು.

ಇನ್ನು ಬ್ಯಾಂಕ್ಗಳಲ್ಲಿ ಉಳಿತಾಯ ಖಾತೆಯನ್ನು ಹೊಂದಿದ್ದರೆ ಕನಿಷ್ಠ ಬ್ಯಾಲೆನ್ಸ್ (minimum balance) ಅನ್ನು ಕಾಯ್ದುಕೊಳ್ಳಬೇಕು. ಎಲ್ಲಾ ಬ್ಯಾಂಕುಗಳಲ್ಲಿಯೂ ಕನಿಷ್ಠ ಬ್ಯಾಲೆನ್ಸ್ ಕಾಯ್ದುಕೊಳ್ಳುವ ಅಗತ್ಯ ಇಲ್ಲ ಆದರೆ ಎಚ್ ಡಿ ಎಫ್ ಸಿ ಅಂತ ಬ್ಯಾಂಕುಗಳಲ್ಲಿ ಕನಿಷ್ಠ ಬ್ಯಾಲೆನ್ಸ್ ಇರುವುದು ಕಡ್ಡಾಯವಾಗಿದೆ, ಕನಿಷ್ಠ ಬ್ಯಾಲೆನ್ಸ್ ಇಲ್ಲದೆ ಇದ್ದಲ್ಲಿ ಅಂತವರಿಗೆ ದಂಡವನ್ನು ಕೂಡ ವಿಧಿಸಲಾಗುವುದು.

bank debit card usage charges and Card Replacement Charges

Our Whatsapp Channel is Live Now 👇

Whatsapp Channel

Related Stories