ಆಗಸ್ಟ್ ತಿಂಗಳಿನಲ್ಲಿ 14 ದಿನಗಳ ಕಾಲ ಬ್ಯಾಂಕ್ ರಜೆ, ಎಲ್ಲಾ ಕೆಲಸಗಳನ್ನು ಆದಷ್ಟು ಬೇಗ ಮುಗಿಸಿಕೊಳ್ಳಿ!
Bank Holidays : ಸಾಮಾನ್ಯವಾಗಿ ಎಲ್ಲರಿಗೂ ಒಂದಲ್ಲ ಒಂದು ಕಾರಣಕ್ಕೆ ಬ್ಯಾಂಕ್ ಕೆಲಸಗಳು ಇದ್ದೇ ಇರುತ್ತದೆ. ಹಣಕಾಸಿನ ವ್ಯವಹಾರ, ಅಥವಾ ಇನ್ಯಾವುದೇ ಓಕ್ದು ಕೆಲಸಗಳನ್ನು ಮಾಡಿಕೊಳ್ಳಲು ಬ್ಯಾಂಕ್ ಗೆ ಹೋಗಬೇಕಾಗಿ ಬರುತ್ತದೆ. ಆದರೆ ನಾವು ಬ್ಯಾಂಕ್ ಗೆ (Bank) ಹೋಗುವ ಮುನ್ನ ಆ ದಿನ ಬ್ಯಾಂಕ್ ಕಾರ್ಯನಿರ್ವಹಿಸುತ್ತಿದೆಯಾ ಅಥವಾ ರಜಾ ಇದೆಯಾ ಎಂದು ತಿಳಿದುಕೊಂಡು ಬ್ಯಾಂಕ್ ಗೆ ಹೋಗುವುದು ಒಳ್ಳೆಯದು…
ಇನ್ನೇನು ಜುಲೈ ತಿಂಗಳು ಮುಗಿಯುತ್ತಲಿದ್ದು, ಕೆಲವೇ ದಿನಗಳಲ್ಲಿ ಆಗಸ್ಟ್ ತಿಂಗಳು ಶುರುವಾಗಲಿದೆ. ಯಾವುದೇ ಹೊಸ ತಿಂಗಳು ಶುರುವಾಗುವ ಮೊದಲು, ಆಯಾ ತಿಂಗಳಿನಲ್ಲಿ ಎಷ್ಟು ದಿವಸಗಳ ಕಾಲ ಬ್ಯಾಂಕ್ ರಜೆ (Bank Holiday) ಇರುತ್ತದೆ ಎಂದು RBI ಪ್ರಕಟಣೆ ಮಾಡುತ್ತದೆ.
ಅದೇ ರೀತಿ ಈಗ ಆಗಸ್ಟ್ ತಿಂಗಳಿನಲ್ಲಿ ಎಷ್ಟು ದಿನಗಳ ಕಾಲ ಬ್ಯಾಂಕ್ ರಜೆ ಇರುತ್ತದೆ ಎಂದು ತಿಳಿಸಲಾಗಿದ್ದು, ಒಟ್ಟು 14 ದಿನಗಳ ಕಾಲ ಬ್ಯಾಂಕ್ ರಜೆ ಇರುತ್ತದೆ. ಹೌದು, ಈ ಕಾರಣಕ್ಕೆ ಜನರು ಮುಂಜಾಗ್ರತೆಯ ಕ್ರಮ ವಹಿಸುವುದು ಒಳ್ಳೆಯದು.
ಸಾಮಾನ್ಯವಾಗಿ ಬ್ಯಾಂಕ್ ಗೆ ಪ್ರತಿ ಭಾನುವಾರ ರಜೆ ಇರುತ್ತದೆ ಜೊತೆಗೆ ಪ್ರತಿ ತಿಂಗಳ ಎರಡನೇ ಶನಿವಾರ ಮತ್ತು ನಾಲ್ಕನೇ ಶನಿವಾರ ಕೂಡ ರಜೆ ಇರುತ್ತದೆ. ಇದರ ಜೊತೆಗೆ ಹಬ್ಬ ಹರಿದಿನ ಹಾಗೂ ಇನ್ನಿತರ ರಜೆಗಳು, ಪ್ರಾದೇಶಿಕ ರಜೆಗಳು ಕೂಡ ಬರುತ್ತದೆ. ಹಾಗಿದ್ದಲ್ಲಿ ಆಗಸ್ಟ್ ನಲ್ಲಿ 14 ದಿವಸ ರಜೆಗಳು ಯಾವ್ಯಾವ ದಿವಸ ಇರಲಿದೆ ಎಂದು ಪೂರ್ತಿಯಾಗಿ ಮಾಹಿತಿ ತಿಳಿದುಕೊಳ್ಳೋಣ..
ಟ್ರಾಕ್ಟರ್ ಚಿತ್ರ ಇರೋ ಈ 5 ರೂಪಾಯಿ ಹಳೆಯ ನೋಟು ನಿಮ್ಮತ್ರ ಇದ್ರೆ ಸಾಕು, 2 ಲಕ್ಷ ನಿಮ್ಮದಾಗಿಸಿಕೊಳ್ಳಿ!
ಆಗಸ್ಟ್ ತಿಂಗಳ 14 ದಿವಸಗಳ ರಜೆಯ ಪಟ್ಟಿ ಹೀಗಿದೆ:
*ಆಗಸ್ಟ್ 3ರಂದು ಕೇರ್ ಪೂಜಾ ಇರಲಿದ್ದು, ಅಗರ್ತಲಾ ಊರಿನಲ್ಲಿ ರಜೆ ಇರಲಿದೆ.
*ಆಗಸ್ಟ್ 4 ಭಾನುವಾರದಂದು ರಜೆ ಇರುತ್ತದೆ.
*ಆಗಸ್ಟ್ 7ರಂದು ಹರಿಯಾಲಿ ತೀಜ್ ಇರುವ ಕಾರಣ ಹರಿಯಾಣದಲ್ಲಿ ರಜೆ ಇರುತ್ತದೆ.
*ಆಗಸ್ಟ್ 8 ರಂದು ಟೆಂಡಾಂಗ್ ಲೋ ರಮ್ ಘಾತ್ ಇರಲಿದ್ದು ಗಾಂಗ್ಟಾಕ್ ನಲ್ಲಿ ರಜೆ ಇರುತ್ತದೆ.
*ಆಗಸ್ಟ್ 10ರಂದು ಎರಡನೇ ಶನಿವಾರ ರಜೆ ಇರುತ್ತದೆ.
*ಆಗಸ್ಟ್ 11ರಂದು ಭಾನುವಾರ ರಜೆ ಇರುತ್ತದೆ.
*ಆಗಸ್ಟ್ 15 ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ರಜೆ ಇರುತ್ತದೆ.
*ಆಗಸ್ಟ್ 18ರಂದು ಭಾನುವಾರ ರಜೆ ಇರುತ್ತದೆ.
*ಆಗಸ್ಟ್ 19ರಂದು ರಕ್ಷಾಬಂಧನದ ದಿವಸ ರಜೆ ಇರುತ್ತದೆ.
*ಆಗಸ್ಟ್ 20ರಂದು ಶ್ರೀ ನಾರಾಯಣ ಗುರು ಜಯಂತಿ ರಜೆ ಇರುತ್ತದೆ.
*ಆಗಸ್ಟ್ 24 ನಾಲ್ಕನೇ ಶನಿವಾರದ ಕಾರಣ ರಜೆ ಇರುತ್ತದೆ.
*ಆಗಸ್ಟ್ 25ರಂದು ಭಾನುವಾರ ರಜೆ ಇರುತ್ತದೆ.
*ಆಗಸ್ಟ್ 26ರಂದು ಗೋಕುಲಾಷ್ಟಮಿ ಇರುವುದರಿಂದ ರಜೆ ಇರುತ್ತದೆ.
Bank holiday for 14 days in August, finish all work asap
Our Whatsapp Channel is Live Now 👇