ಫೆಬ್ರವರಿ ತಿಂಗಳಲ್ಲಿ ಬ್ಯಾಂಕಿಗೆ ವಾರಕ್ಕೂ ಹೆಚ್ಚು ದಿನ ರಜೆ, ಇಲ್ಲಿದೆ ಸಂಪೂರ್ಣ ಮಾಹಿತಿ
ಈ ರಜೆಗಳ ಜೊತೆಗೆ ಎರಡನೇ ಮತ್ತು ನಾಲ್ಕನೇ ಶನಿವಾರ ಬ್ಯಾಂಕುಗಳಿಗೆ ರಜೆ (Bank Holiday) ಹಾಗೂ ಭಾನುವಾರ ಎಂದಿನಂತೆ ರಜೆ ಇರುತ್ತದೆ.
- ಫೆಬ್ರವರಿ ತಿಂಗಳಲ್ಲಿ ಇರುವ ಬ್ಯಾಂಕ್ ರಜಾ ದಿನಗಳು
- ಒಂದು ವಾರಕ್ಕೂ ಹೆಚ್ಚು ಫೆಬ್ರವರಿ ತಿಂಗಳಿನಲ್ಲಿ ಬ್ಯಾಂಕ್ ರಜಾ
- ಪ್ರಾದೇಶಿಕ ರಜಾ ದಿನಗಳು ರಾಜ್ಯದಿಂದ ರಾಜ್ಯಕ್ಕೆ ಬೇರೆಯಾಗಿರುತ್ತದೆ.
Bank Holidays: ಪ್ರತಿ ತಿಂಗಳು ಬ್ಯಾಂಕಿಗೆ ಎಷ್ಟು ದಿನ ರಜೆ ಇದೆ ಎಂಬುದನ್ನ ತಿಳಿದುಕೊಂಡರೆ, ನಿಮ್ಮ ಬ್ಯಾಂಕಿಂಗ್ ವ್ಯವಹಾರಕ್ಕೆ ಸಹಾಯವಾಗುತ್ತದೆ. ಪ್ರತಿ ಭಾನುವಾರ ಮತ್ತು ಪ್ರತಿ ಎರಡನೇ ಶನಿವಾರ ಬ್ಯಾಂಕಿಗೆ ರಜೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ, ಇದರ ಜೊತೆಗೆ ಸಾಕಷ್ಟು ಹಬ್ಬ ಹರಿದಿನಗಳು ರಾಷ್ಟ್ರೀಯ ದಿನಾಚರಣೆಗಳ ಅಂಗವಾಗಿ ಬ್ಯಾಂಕಿಗೆ ರಜಾ ನೀಡಲಾಗುತ್ತದೆ. ಎಲ್ಲ ರಜಾ ದಿನಗಳ ಬಗ್ಗೆ ಇಲ್ಲಿದೆ ಮಾಹಿತಿ.
ಭಾರತದ ಒಂದು ಸಾವಿರ ರೂಪಾಯಿ ಈ ದೇಶದಲ್ಲಿ 1.87 ಲಕ್ಷ ರೂಪಾಯಿ ಗೊತ್ತಾ?
ಫೆಬ್ರವರಿ ತಿಂಗಳಲ್ಲಿ ಬ್ಯಾಂಕ್ ರಜಾ ದಿನಗಳು!
ಹೊಸ ವರ್ಷದ ಮೊದಲ ತಿಂಗಳು ಮುಗಿದು ಎರಡನೇ ತಿಂಗಳು ಅಂದ್ರೆ ಫೆಬ್ರುವರಿ 2025 ಇನ್ನೇನು ಆರಂಭವಾಗಲಿದೆ. ಭಾರತೀಯ ರಿಸರ್ವ್ ಬ್ಯಾಂಕ್ ನ ಪ್ರಕಾರ ರಾಜ್ಯದಲ್ಲಿ ಬೇರೆ ಬೇರೆ ದಿನಾಂಕಗಳ ಬ್ಯಾಂಕ್ ರಜಾ ದಿನಗಳನ್ನು ಘೋಷಿಸಲಾಗಿದೆ.
ಸಾರ್ವಜನಿಕ ರಜಾ ದಿನಗಳು ಜೊತೆಗೆ ಪ್ರಾದೇಶಿಕ ರಜಾ ದಿನಗಳನ್ನು ನೀಡಲಾಗುತ್ತದೆ. ಆದರೆ ಪ್ರಾದೇಶಿಕ ರಜಾ ದಿನಗಳು ರಾಜ್ಯದಿಂದ ರಾಜ್ಯಕ್ಕೆ ಬೇರೆ ಆಗಿರಬಹುದು.
ಹೊಸ ಕಾರು ಖರೀದಿಗೂ ಮೊದಲು ಈ ಕೆಲಸ ಮಾಡಿ, ಈ ವಿಷಯಗಳು ನೆನಪಿನಲ್ಲಿಡಿ
* ಫೆಬ್ರವರಿ 3- ಪಶ್ಚಿಮ ಬಂಗಾಳ ತ್ರಿಪುರ ಪಂಜಾಬ್ ಹರಿಯಾಣ ಮತ್ತು ಒಡಿಸ್ಸಾ ದಲ್ಲಿ ಸರಸ್ವತಿ ಪೂಜೆ ನಿಮಿತ್ತ ರಜೆ
* ಫೆಬ್ರವರಿ 11 – ತಾಯ್ ಪೂಸಂ ಅಡಿಯಲ್ಲಿ ತಮಿಳುನಾಡಿನ ಬ್ಯಾಂಕ್ಗಳಿಗೆ ರಜೆ
* ಫೆಬ್ರವರಿ 15 – ಮಣಿಪುರದಲ್ಲಿ ಬ್ಯಾಂಕ್ ಗೆ ಪ್ರಾದೇಶಿಕ ರಜೆ
* ಫೆಬ್ರವರಿ 19- ಮಹಾರಾಷ್ಟ್ರದಲ್ಲಿ ಛತ್ರಪತಿ ಶಿವಾಜಿ ಜಯಂತಿ ಪ್ರಯುಕ್ತ ರಜೆ
* ಫೆಬ್ರವರಿ 20 – ಅರುಣಾಚಲ ಪ್ರದೇಶ ಮತ್ತು ಮಿಜೋರಾಂ ರಾಜ್ಯೋತ್ಸವ ನಿಮಿತ್ತ ರಜೆ
* ಫೆಬ್ರವರಿ 26 – ಕರ್ನಾಟಕ ಸೇರಿದಂತೆ ಬೇರೆ ಬೇರೆ ರಾಜ್ಯಗಳಲ್ಲಿ ಮಹಾಶಿವರಾತ್ರಿ ನಿಮಿತ್ತ ರಜೆ
* ಫೆಬ್ರವರಿ 28 – ಸಿಕ್ಕಿಂ ನಲ್ಲಿ ಬ್ಯಾಂಕ್ ಗಳು ಕಾರ್ಯ ನಿರ್ವಹಿಸುವುದಿಲ್ಲ
ಈ ರಜೆಗಳ ಜೊತೆಗೆ ಎರಡನೇ ಮತ್ತು ನಾಲ್ಕನೇ ಶನಿವಾರ ಬ್ಯಾಂಕುಗಳಿಗೆ ರಜೆ (Bank Holiday) ಹಾಗೂ ಭಾನುವಾರ ಎಂದಿನಂತೆ ರಜೆ ಇರುತ್ತದೆ. ಗ್ರಾಹಕರು ಈ ರಜೆಗಳಿಗೆ ಅನುಗುಣವಾಗಿ ತಮ್ಮ ಬ್ಯಾಂಕಿನ ಕಾರ್ಯಗಳನ್ನು ಹೊಂದಿಸಿಕೊಳ್ಳಬೇಕು.
ಬ್ಯಾಂಕುಗಳಿಗೆ ರಜೆ ಇದ್ದರೂ ಕೂಡ ಡಿಜಿಟಲ್ ಬ್ಯಾಂಕಿಂಗ್ (Online Banking) ಮೂಲಕ ಹಣಕಾಸಿನ ವ್ಯವಹಾರವನ್ನು ಮಾಡಬಹುದು ಆದರೆ ನೀವು ಬ್ಯಾಂಕಿಗೆ ಹೋಗಿ ಖಾತೆಯ ಪರಿಶೀಲನೆ ಅಥವಾ ಚೆಕ್ ಮೂಲಕ ವ್ಯವಹಾರ ಮಾಡುವುದಿದ್ದರೆ ರಜಾ ದಿನಗಳ ಬಗ್ಗೆ ಗಮನವಹಿಸಿ.
Bank holidays in February for more than a week