ಹೊಸ ಕಾರು ಖರೀದಿಗೂ ಮೊದಲು ಈ ಕೆಲಸ ಮಾಡಿ, ಈ ವಿಷಯಗಳು ನೆನಪಿನಲ್ಲಿಡಿ
ದೇಶದಲ್ಲಿ ಥರ್ಡ್ ಪಾರ್ಟಿ ವಿಮೆ (Third-Party Insurance) ಮಾಡಿಸುವುದು ಮುಖ್ಯವಾಗಿರುವ ನಿಯಮವಾಗಿದೆ. ಇದರ ಜೊತೆಗೆ ಇನ್ನೂ ಕೆಲವು ಆಡ್ ಆನ್ ಸೌಲಭ್ಯಗಳನ್ನು ಪಡೆದುಕೊಳ್ಳುವುದು ಒಳ್ಳೆಯದು
- ಕಾರು ಖರೀದಿ ಮಾಡುವಾಗ ಈ ವಿಮೆ ತೆಗೆದುಕೊಳ್ಳಿ
- ಆಡ್ ಆನ್ ವಿಮೆ ಸೌಲಭ್ಯ ಹೆಚ್ಚು ಲಾಭದಾಯಕವಾಗಿರುತ್ತದೆ.
- ಈ ವಿಮೆ ತೆಗೆದುಕೊಂಡರೆ ಸಂಪೂರ್ಣ ಎಂಜಿನ್ ಹಾನಿ ಕ್ಲೇಮ್ ಮಾಡಬಹುದು
Insurance Add-ons: ಹೊಸ ಕಾರು ಖರೀದಿ ಮಾಡಬೇಕು ಎನ್ನುವ ಆಸೆ ಬಂದ ಕೂಡಲೇ ಗೂಗಲ್ ನಲ್ಲಿ ಸರ್ಚ್ ಮಾಡಿಯೋ ಅಥವಾ ಯಾರಿಂದಲಾದರೂ ಕೇಳಿ ತಿಳಿದು ಹೊಸದೊಂದು ಕಾರು ಬುಕ್ ಮಾಡಿ ಬಿಡುತ್ತೇವೆ.
ಆದರೆ ಕಾರ್ ಬುಕ್ಕಿಂಗ್ (Car Booking) ಮಾಡುವುದಕ್ಕೂ ಮೊದಲು ನೀವು ತಿಳಿದುಕೊಳ್ಳಬೇಕಾದ ವಿಷಯಗಳು ಸಾಕಷ್ಟಿವೆ. ಸ್ವಲ್ಪ ಬುದ್ಧಿವಂತಿಕೆಯಿಂದ, ಮುತುವರ್ಜಿಯಿಂದ ಕಾರ್ ಖರೀದಿ ಮಾಡಿದರೆ ಹೆಚ್ಚು ಲಾಭವನ್ನು ಪಡೆದುಕೊಳ್ಳಬಹುದು.
ಕಾರ್ ಖರೀದಿಗೂ ಮುಂಚೆ ಈ ವಿಷಯಗಳು ನೆನಪಿನಲ್ಲಿಡಿ!
ಯಾವುದಾದರೂ ಕಾರ್ ಖರೀದಿ (Buy Car) ಮಾಡಬೇಕು ಅಂದುಕೊಂಡರೆ ಯಾವ ಕಂಪನಿ, ಯಾವ ಮಾಡೆಲ್, ಎಷ್ಟು ಮೈಲೇಜ್ ಕೊಡುತ್ತೆ ಎಲ್ಲವನ್ನ ವಿಚಾರಿಸುತ್ತೇವೆ. ಆದರೆ ಎಷ್ಟೋ ಜನ ವಿಮೆ ಮಾಡಿಸುವ ಬಗ್ಗೆ ಯೋಚಿಸುವುದೇ ಇಲ್ಲ.
ದೇಶದಲ್ಲಿ ಥರ್ಡ್ ಪಾರ್ಟಿ ವಿಮೆ (Third-Party Insurance) ಮಾಡಿಸುವುದು ಮುಖ್ಯವಾಗಿರುವ ನಿಯಮವಾಗಿದೆ. ಇದರ ಜೊತೆಗೆ ಇನ್ನೂ ಕೆಲವು ಆಡ್ ಆನ್ ಸೌಲಭ್ಯಗಳನ್ನು ಪಡೆದುಕೊಳ್ಳುವುದು ಒಳ್ಳೆಯದು ಎಂದು ತಜ್ಞರು ತಿಳಿಸುತ್ತಾರೆ. ಇದರಿಂದ ವಾಹನ ಮಾಲೀಕರಿಗೆ ಆರ್ಥಿಕ ಲಾಭವು ಸಿಗುತ್ತದೆ.
ಇನ್ಮುಂದೆ ನಿಮ್ಮ ವಾಹನಕ್ಕೆ ಈ ದಾಖಲೆ ಇಲ್ಲದಿದ್ದರೆ ಪೆಟ್ರೋಲ್ ಕೂಡ ಹಾಕಲ್ಲ!
ಇಂಜಿನ್ ಪ್ರೊಟೆಕ್ಷನ್ ಆಡ್ ಆನ್!
ಸಾಮಾನ್ಯವಾಗಿ ಪ್ರವಾಹದ ಸಮಯದಲ್ಲಿ ನೀರು ಸೇರಿಕೊಳ್ಳಬಹುದು ಇದರಿಂದ ಇಂಜಿನ್ ಮತ್ತು ವಿದ್ಯುತ್ ವ್ಯವಸ್ಥೆ ಹಾಗೂ ಇಂಜಿನ ಆಂತರಿಕ ಭಾಗಗಳು ಹಾಳಾಗಬಹುದು. ಈ ರೀತಿ ಪ್ರವಾಹದ ಸಮಯದಲ್ಲಿ ಆಗಿರುವ ಹಾನಿಗೆ ಯಾವುದೇ ವಿಮಾ ಕಂಪನಿ ಕ್ಲೈಮ್ ಮಾಡಲು ಅವಕಾಶ ನೀಡುವುದಿಲ್ಲ.
ಅದಕ್ಕೆ ತಗುಲುವ ವೆಚ್ಚವನ್ನು ನಾವೇ ನೋಡಿಕೊಳ್ಳಬೇಕಾಗುತ್ತದೆ. ಆದರೆ ನೀವು ಇಂಜಿನ್ಗಾಗಿ ಆಡ್ ಆನ್ ತೆಗೆದುಕೊಂಡರೆ ಇಂಜಿನ್ ಕವರೇಜ್ ಕೂಡ ಸಿಗುತ್ತದೆ.
ಸ್ಟೇಟ್ ಬ್ಯಾಂಕಿನಲ್ಲಿ 2 ಲಕ್ಷ ಸಾಲ ಮಾಡಿದ್ರೆ ಪ್ರತಿ ತಿಂಗಳು EMI ಎಷ್ಟು ಕಟ್ಟಬೇಕಾಗುತ್ತೆ?
ಜೀರೋ ಡೆಪ್ರಿಸಿಯೇಶನ್ ಆಡ್ ಆನ್! ಇದು ಕಾರಿಗೆ ಸಂಬಂಧಿಸಿದ ಬಿಡಿ ಭಾಗಗಳಿಗೆ ತೆಗೆದುಕೊಳ್ಳುವ ವಿಮೆ ಆಗಿರುತ್ತದೆ. ಯಾವುದೇ ಅಪಘಾತದಲ್ಲಿ ಅಥವಾ ಪ್ರವಾಹದ ಸಂದರ್ಭದಲ್ಲಿ ಕಾರಿನ ಬಿಡಿ ಭಾಗಗಳಿಗೆ ತೊಂದರೆಯಾದರೆ ಯಾವುದೇ ಕಂಪನಿ ಸಂಪೂರ್ಣ ವೆಚ್ಚವನ್ನು ಭರಿಸುವುದಿಲ್ಲ. ಹೀಗಾಗಿ ಆಡ್ ಆನ್ ಸೌಲಭ್ಯವನ್ನು ತೆಗೆದುಕೊಂಡರೆ ಸಂಪೂರ್ಣ ವೆಚ್ಚವನ್ನು ಕಂಪನಿ ಭರಿಸುತ್ತದೆ.
ಇನ್ವೈಸ್ ಆಡ್ ಆನ್; ಕಾರಿಗೆ ಹಾನಿ ಆದ್ರೆ ಅಥವಾ ಕಳ್ಳತನವಾಗಿದ್ದರೆ ಕಾರಿನ ಒಟ್ಟು ಮೌಲ್ಯವನ್ನು ಪುನಃ ಪಡೆದುಕೊಳ್ಳಲು ಮಾಡಿಕೊಳ್ಳಬಹುದು. ಹೊಸ ಕಾರನ್ನು ಖರೀದಿ ಮಾಡುವವರು ಈ ಎಲ್ಲಾ ಆಡ್ ಆನ್ ವಿಮಾ ಸೌಲಭ್ಯವನ್ನು ತೆಗೆದುಕೊಂಡರೆ ಹೆಚ್ಚು ಲಾಭದಾಯಕವಾಗಿರುತ್ತದೆ ಎಂದು ತಜ್ಞರು ಸೂಚಿಸುತ್ತಾರೆ.
Essential Insurance Add-ons to Consider When Buying a New Car