ಭಾರತದ ಒಂದು ಸಾವಿರ ರೂಪಾಯಿ ಈ ದೇಶದಲ್ಲಿ 1.87 ಲಕ್ಷ ರೂಪಾಯಿ ಗೊತ್ತಾ?
ಅಮೆರಿಕಾದಂತಹ ಕಂಟ್ರಿಗೆ ಹೋಲಿಸಿದರೆ ನಮ್ಮ ದೇಶದ ಕರೆನ್ಸಿ ಮೌಲ್ಯ ಕಡಿಮೆ ಎನಿಸಬಹುದು. ಆದರೆ ಇಂಡೋನೇಷಿಯಾದ ಕರೆನ್ಸಿ ಮೌಲ್ಯವನ್ನು ಹೋಲಿಕೆ ಮಾಡಿದರೆ ನಿಜಕ್ಕೂ ನಿಮಗೆ ಆಶ್ಚರ್ಯವಾಗಬಹುದು.
- ಇಂಡೋನೇಷ್ಯಾ ಕರೆನ್ಸಿ ಇಂಡಿಯಾದ ಕರೆನ್ಸಿಗೆ ಹೋಲಿಸಿದರೆ ದುರ್ಬಲ
- ನಮ್ಮ ದೇಶದ ಒಂದು ರೂಪಾಯಿ ಇಂಡೋನೇಷಿಯಾದ 198 ರೂಪಾಯಿಗಳಿಗೆ ಸಮ
- ಇಂಡೋನೇಷಿಯಾದಲ್ಲಿದೆ 25 ಕೋಟಿ ಮುಸ್ಲಿಂ ಜನಸಂಖ್ಯೆ
ಬೇರೆ ಬೇರೆ ದೇಶಗಳು ಬೇರೆ ಬೇರೆ ರೀತಿಯ ಕರೆನ್ಸಿಗಳನ್ನು ಬಳಸುತ್ತವೆ. ಒಂದೊಂದು ದೇಶದ ಕರೆನ್ಸಿಯ ಮೌಲ್ಯ ಒಂದೊಂದು ರೀತಿಯದ್ದಾಗಿರುತ್ತದೆ. ಒಂದೊಂದು ದೇಶದ ಕರೆನ್ಸಿಯನ್ನು ನಮ್ಮ ದೇಶದ ಕರೆನ್ಸಿಯ ಜೊತೆಗೆ ಹೋಲಿಸಿದಾಗ ಮೌಲ್ಯವು ವಿಭಿನ್ನವಾಗಿರುತ್ತದೆ. ಅದರಲ್ಲೂ ಇಂಡೋನೇಷ್ಯಾದ ರೂಪಿಯಾ ಜೊತೆಗೆ ಹೋಲಿಸಿದಾಗ ಭಾರತೀಯ ಕರೆನ್ಸಿ ಮೌಲ್ಯ ಹೆಚ್ಚು.
ನಮ್ಮ ದೇಶದಲ್ಲಿ ಹೆಚ್ಚಾಗಿ ಅಮೆರಿಕನ್ ಕರೆನ್ಸಿ ಅಥವಾ ಅಮೆರಿಕನ್ ಡಾಲರ್ ಮೂಲಕ ಸಾಕಷ್ಟು ವ್ಯಾಪಾರಗಳು ನಡೆಯುತ್ತವೆ. ಬೇರೆ ದೇಶಗಳಿಗೆ ಪ್ರಯಾಣಿಸುವಾಗ ನಾವು ಕರೆನ್ಸಿ ಎಕ್ಸ್ಚೇಂಜ್ ಮಾಡಿಕೊಳ್ಳಬಹುದು.
ಇನ್ನು ಅಮೆರಿಕಾದಂತಹ ಕಂಟ್ರಿಗೆ ಹೋಲಿಸಿದರೆ ನಮ್ಮ ದೇಶದ ಕರೆನ್ಸಿ ಮೌಲ್ಯ ಕಡಿಮೆ ಎನಿಸಬಹುದು. ಆದರೆ ಇಂಡೋನೇಷಿಯಾದ ಕರೆನ್ಸಿ ಮೌಲ್ಯವನ್ನು ಹೋಲಿಕೆ ಮಾಡಿದರೆ ನಿಜಕ್ಕೂ ನಿಮಗೆ ಆಶ್ಚರ್ಯವಾಗಬಹುದು.
ಹೊಸ ಕಾರು ಖರೀದಿಗೂ ಮೊದಲು ಈ ಕೆಲಸ ಮಾಡಿ, ಈ ವಿಷಯಗಳು ನೆನಪಿನಲ್ಲಿಡಿ
ಇಂಡೋನೇಷ್ಯಾ ಕರೆನ್ಸಿಯಲ್ಲಿ, ಇಂಡಿಯನ್ ರೂಪಾಯಿ ಮೌಲ್ಯ ಎಷ್ಟು?
ಒಂದು ದೊಡ್ಡ ಮುಸ್ಲಿಂ ಜನಸಂಖ್ಯೆಯನ್ನು ಹೊಂದಿರುವ ದೇಶವಾಗಿದೆ. ಇಲ್ಲಿ ಸುಮಾರು 25 ಕೋಟಿ ಜನ ವಾಸಿಸುತ್ತಿದ್ದು, ರೂಪಿಯ ಅನ್ನುವ ಕರೆನ್ಸಿಯನ್ನು ಬಳಸಲಾಗುತ್ತದೆ. ನಮ್ಮ ದೇಶದ ಒಂದು ರೂಪಾಯಿ ಇಂಡೋನೇಷಿಯಾದ ಕರೆನ್ಸಿಯಲ್ಲಿ 187.98 ರೂಪಾಯಿಗಳಿಗೆ ಸಮ.
ನೀವು ಕೇವಲ ನೂರು ರೂಪಾಯಿಯನ್ನು ಇಂಡೋನೇಷ್ಯಾದಲ್ಲಿ ಎಕ್ಸ್ಚೇಂಜ್ ಮಾಡಿಸಿಕೊಂಡರೂ ಬರೋಬ್ಬರಿ 18,798 ಇಂಡೋನೇಷ್ಯಾ ಕರೆನ್ಸಿಯನ್ನು ಪಡೆಯಬಹುದು. ಇಂಡೋನೇಷ್ಯಾದ 1 ರೂಪಿಯ ನಮ್ಮ ದೇಶದ 0.0053 ಪೈಸೆಗೆ ಸಮನಾಗಿದೆ.
ಇನ್ಮುಂದೆ ನಿಮ್ಮ ವಾಹನಕ್ಕೆ ಈ ದಾಖಲೆ ಇಲ್ಲದಿದ್ದರೆ ಪೆಟ್ರೋಲ್ ಕೂಡ ಹಾಕಲ್ಲ!
ಇಂಡೋನೇಷ್ಯಾದ ಅಧ್ಯಕ್ಷ, ಪ್ರಬಾವೋ ಸುಬಿಟ್ಯಾಂಟೊ ಇತ್ತೀಚೆಗೆ ನಮ್ಮ ದೇಶಕ್ಕೆ ಭೇಟಿ ನೀಡಿದ್ದು ಭಾರತಕ್ಕೂ ಇಂಡೋನೇಷಿಯಾಕ್ಕೂ ನಡುವಿನ ಉತ್ತಮ ಸಂಬಂಧವನ್ನು ಸೂಚಿಸುತ್ತದೆ.
Did you know that 1,000 in India is equivalent to 1.87 lakh in this country