ಇನ್ಮುಂದೆ ಯಾವುದೇ ಜಮೀನು, ಫ್ಲ್ಯಾಟ್ ಖರೀದಿಗೂ ಮುನ್ನ ಇರಲಿ ಎಚ್ಚರ! ಸರಕಾರದಿಂದ ಹೊಸ ಕ್ರಮ

Story Highlights

ಇಂದು ಮನೆ ನಿರ್ಮಾಣ ಮಾಡಬೇಕು, ಕೃಷಿ ಮಾಡಬೇಕು, ಹೂಡಿಕೆ ಮಾಡಬೇಕು ಎಂದು ಅನೇಕ ಕಾರಣಕ್ಕೆ ಹೊಸ ಹೊಸ ಜಾಗ ಖರೀದಿ (Property Purchase) ಮಾಡಲು ಆಸಕ್ತಿ ವಹಿಸುತ್ತಾರೆ‌.

ಇಂದು ಭೂ ಆಸ್ತಿ ಹೂಡಿಕೆಯ ವಿಚಾರವಾಗಿ ಎಲ್ಲ ವರ್ಗದ ಜನತೆಗೂ ಆಸಕ್ತಿ ಇದೆ ಎನ್ನಬಹುದು. ಹೌದು ಇಂದು ಸ್ವಲ್ಪ‌ ಪ್ರಮಾಣದ ಭೂಮಿ (Land) ಇದ್ದರೂ ಜನರು ತಮ್ಮ ಹೆಸರಿಗೆ ಮಾಡಿಕೊಳ್ಳಲು ಪ್ರಯತ್ನಪಡುತ್ತಾರೆ. ಕಾರಣ ಇಷ್ಟೇ, ಇಂದು ಹೆಚ್ಚಿದ ಬೇಡಿಕೆ ಎನ್ನಬಹುದು.‌

ಅದರಲ್ಲೂ ನಗರ ಪ್ರದೇಶದಲ್ಲಿ ಕೇಳುವುದೇ ಬೇಡ, ಅಲ್ಲಿನ ಜಾಗ ಖರೀದಿಗೆ ಹೆಚ್ಚಿನ ಬೇಡಿಕೆ ಇದೆ. ಇಂದು ಮನೆ ನಿರ್ಮಾಣ ಮಾಡಬೇಕು, ಕೃಷಿ ಮಾಡಬೇಕು, ಹೂಡಿಕೆ ಮಾಡಬೇಕು ಎಂದು ಅನೇಕ ಕಾರಣಕ್ಕೆ ಹೊಸ ಹೊಸ ಜಾಗ ಖರೀದಿ (Property Purchase) ಮಾಡಲು ಆಸಕ್ತಿ ವಹಿಸುತ್ತಾರೆ‌. ಆದರೆ ಇಂದು ಆಸ್ತಿ ಖರೀದಿ ವಿಚಾರವಾಗಿ ಮೋಸ ವಂಚನೆಗಳು ಕೂಡ ಬಹಳಷ್ಟು ಹೆಚ್ಚಾಗಿದ್ದು ಇದಕ್ಕಾಗಿ ಸರಕಾರ ಹೊಸ ಕ್ರಮ ಜಾರಿ ಮಾಡಿದೆ‌

ರತನ್ ಟಾಟಾ ಕನಸಿನ ಕಾರು ಟಾಟಾ ನ್ಯಾನೋ ಎಲೆಕ್ಟ್ರಿಕ್ ಮಾದರಿ ಎಂಟ್ರಿ, ಎಷ್ಟಿರಲಿದೆ ಬೆಲೆ ಗೊತ್ತಾ?

ಖರೀದಿ ಮಾಡುವ ಮುನ್ನ ಎಚ್ಚರಿಕೆ ಅಗತ್ಯ

ಇಂದು ಜಮೀನು ಖರೀದಿ ಮಾಡುವ ಮುನ್ನ ಕೆಲವು ವಿಚಾರ ತಿಳಿಯಲೇ ಬೇಕು, ನೀವು ನೀಡುವ ಹಣಕ್ಕೆ ಆ ಆಸ್ತಿ ಓಕೆ ಅನಿಸಿದರೆ ಖರೀದಿ ಮಾಡಬೇಕು. ಅದಕ್ಕಿಂತ ಹೆಚ್ಚಾಗಿ ಮೊದಲು ಆ ಜಾಗದ ದಾಖಲೆ ಪರಿಶೀಲನೆ ಅತೀ ಮುನ್ನೆಚ್ಚರಿಕೆಯಿಂದ ಮಾಡಬೇಕು. ದಾಖಲಾತಿ ಸರಿ ಇದೆ ಅನ್ನೋದನ್ನು ಮತ್ತೆ ಪರಿಶೀಲನೆ ಮಾಡಿಕೊಳ್ಳ ಬೇಕು.

ಭೂ ಆಸ್ತಿ ಅಕ್ರಮಣಕ್ಕೆ ಈ ಆ್ಯಪ್ ಬಿಡುಗಡೆ

ಹೌದು ಭೂ ಆಸ್ತಿ ಅಕ್ರಮಣ ಹೆಚ್ಚು ಆಗಿರುವುದರಿಂದ ಈ ಆ್ಯಪ್ ಅನ್ನು ಸರಕಾರ ಬಿಡುಗಡೆ ಮಾಡಿದೆ. ಅದುವೇ ದಿಶಾಂಕ್ (DISHAANK App)  ಆ್ಯಪ್. ಇದು ಸರಕಾರಿ ಭೂಮಿ ಅಥವಾ ಅತಿಕ್ರಮಿತ ಭೂಮಿಯನ್ನು ಖರೀದಿಸಿ ಮೋಸ ಹೋಗದಂತೆ ಜನರನ್ನು ಎಚ್ಚರಿಸಲು ಈ ಆ್ಯಪ್ ಸಹಾಯಕವಾಗಲಿದೆ.

ದಿಶಾಂಕ್ (Dishank) ಆ್ಯಪ್ GPS ಮೂಲಕ ನೀವು ಇದ್ದ ಜಾಗವನ್ನು ನಿಮಗೆ ತೋರಿಸಲಿದೆ. ಇದರಲ್ಲಿ ಜಾಗದ ದಾಖಲೆ ಮಾಹಿತಿ ಬಗ್ಗೆ ನೋಟಿ ಫಿಕೇಶನ್ ದೊರೆಯಲಿದೆ. ಇದು ಭೂಗಳ್ಳರು, ಅತಿಕ್ರಮಣಕಾರರ ಹಾವಳಿ ತಡೆಗೂ ಇದು ನೆರವಾಗಲಿದೆ.

2025ಕ್ಕೆ ವರ್ಷಾರಂಭದಲ್ಲಿ ಅಬ್ಬರಿಸಲು ಬರಲಿವೆ 9 ಲಕ್ಷ ಬೆಲೆಬಾಳುವ ಈ 3 ಹೊಸ ಕಾರುಗಳು

Property Documentsಡೌನ್ ಲೋಡ್ ಮಾಡಬಹುದು‌

ಈ ಆ್ಯಪ್ ಅನ್ನು ಗೂಗಲ್ ಪ್ಲೇ ಸ್ಟೋರ್‌ನಿಂದ (Google Play Store) ಡೌನ್‌ಲೋಡ್ ಮಾಡಿ‌ ಪ್ರಯೋಜನ ಪಡೆಯಬಹುದು.‌ ಈ ಆ್ಯಪ್ ನೀವು ನಿಂತ ಜಾಗದ ಸರ್ವೇ ನಂಬರ್ ಯಾವುದು ಎಂಬುದನ್ನು ಅದು ಸ್ಪಷ್ಟನೆ ಪಡಿಸುತ್ತದೆ. ಹಾಗಾಗಿ ಆಸ್ತಿ ಖರೀದಿ (Buy Property) ಮಾಡುವ ಮಾಲಿಕ ಇವರೇ ಹೌದೇ ಎಂದು ಗೊತ್ತಾಗಲಿದೆ

ಸ್ಟೇಟ್ ಬ್ಯಾಂಕ್ ಅಕೌಂಟ್ ಇರೋರಿಗೆ ಬಿಗ್ ಅಪ್ಡೇಟ್! ಈಗ ಮನೆಯಿಂದಲೇ ಪಡೆಯಿರಿ ಇನ್ನಷ್ಟು ಬೆನಿಫಿಟ್

ಇದರ ಲಾಭ ಏನು?

*ಈ ಒಂದು ಆ್ಯಪ್ ಅನ್ನು ಬಳಸಿಕೊಂಡರೆ ಹಣದ ವಿಚಾರ ವಾಗಿ ಮೋಸ ನಡೆಯುದಿಲ್ಲ.‌ ಜಾಗ ಖರೀದಿ, ನೀಡಿದ ಹಣಕ್ಕೆ ಯಾವುದೇ ತೊಂದರೆ ಯಾಗುವುದಿಲ್ಲ.

*ಲಾಯರ್ ಅಥವಾ ಮಧ್ಯಮವರ್ತಿಗಳಿಗೆ ಹಣ ನೀಡಬೇಕಾಗಿಲ್ಲ

*ಇದು ಸರಕಾರದ ಆ್ಯಪ್ ಆಗಿರುವುದರಿಂದ ಯಾವುದೇ ಫೇಕ್ ಮಾಹಿತಿ ಇರುವುದಿಲ್ಲ.

*ಆಸ್ತಿ ಬಗ್ಗೆ ಮೋಸ ಮಾಡಿದ್ದರೆ ತಕ್ಷಣದಲ್ಲೆ ತಿಳಿಯಲಿದೆ

*RTC ಕೂಡ ಸುಲಭವಾಗಿ ಪಡೆಯಬಹುದು

*ಖರೀದಿ ಮಾಡುವ ಜಾಗ ಯಾವ ಸರ್ವೇ ನಂಬರಿಗೆ ಸೇರಿದೆ, ಸರಕಾರಿ ಜಮೀನೋ, ಕೆರೆ ಪ್ರದೇಶವೋ, ಕಾಲುವೆ ಪ್ರದೇಶವೋ ಎಂದು ತಿಳಿಸುತ್ತದೆ

Be careful before buying any land or flat

Related Stories