ಈಗ ಹಣಕಾಸಿನ ವ್ಯವಹಾರಗಳಿಗಾಗಿ ಬ್ಯಾಂಕ್ ಅಕೌಂಟ್ (Bank Account) ಹೊಂದಿರುವುದು ಬಹಳ ಮುಖ್ಯ ಆಗಿದೆ. ಪಿಎಮ್ ಮೋದಿ ಅವರು ಅಧಿಕಾರಕ್ಕೆ ಬಂದ ನಂತರ ಕೆಲವು ಯೋಜನೆಗಳನ್ನು ಜಾರಿಗೆ ತಂದು, ಅವುಗಳ ಮೂಲಕ ಹಳ್ಳಿ ಹಳ್ಳಿಗಳಿಗೂ ಬ್ಯಾಂಕ್ ಸೇವೆಗಳು ತಲುಪುವ ಹಾಗೆ ಮಾಡಿದ್ದಾರೆ. ಹಾಗಾಗಿ ದೇಶದ ಬಹುತೇಕ ಎಲ್ಲಾ ಜನರ ಬಳಿ ಬ್ಯಾಂಕ್ ಅಕೌಂಟ್ ಇದೆ ಎಂದು ಹೇಳಿದರೆ ತಪ್ಪಲ್ಲ. ಜೊತೆಗೆ ಈಗ ಭಾರತ ಕೂಡ ಡಿಜಿಟಲ್ ಇಂಡಿಯಾ (Digital India) ಆಗುತ್ತಿದೆ.

ಹಣಕಾಸಿನ ವ್ಯವಹಾರಗಳನ್ನು ಮಾಡಲು ಮೊದಲಿನ ಹಾಗೆ ಪದೇ ಪದೇ ಬ್ಯಾಂಕ್ ಗೆ ಹೋಗುವ ಅವಶ್ಯಕತೆ ಇರುವುದಿಲ್ಲ. ಮನೆಯಲ್ಲೇ, ನಿಮ್ಮ ಮೊಬೈಲ್ ಇಂದಲೇ ಡಿಜಿಟಲ್ ಆಗಿಯೇ ಹಣಕಾಸಿನ ವ್ಯವಹಾರಗಳನ್ನು ಮಾಡಬಹುದು. ಇನ್ನು ನಮ್ಮ ದೇಶದ ಪ್ರಮುಖ ಬ್ಯಾಂಕ್ ಗಳಲ್ಲಿ SBI ಕೂಡ ಒಂದು, ಈ ಬ್ಯಾಂಕ್ ನಲ್ಲಿ ಗ್ರಾಹಕರಿಗೆ ಅನುಕೂಲ ಅಗುವಂಥ ಹಲವು ಸೌಲಭ್ಯಗಳನ್ನು ನೀಡಲಾಗುತ್ತದೆ. ಇದೀಗ SBI ಇನ್ನಷ್ಟು ಹೊಸ ಸೇವೆಗಳು ಜನರಿಗೆ ಸಿಗುತ್ತಿದೆ.

Get the highest interest on your fixed Deposit in State Bank Of India

ಎಲೆಕ್ಟ್ರಿಕ್ ಸ್ಕೂಟರ್ ಗಳ ಮೇಲೆ ಭರ್ಜರಿ ಡಿಸ್ಕೌಂಟ್! ವಾಹನ ಪ್ರಿಯರಿಗೆ ಗುಡ್ ನ್ಯೂಸ್ ಕೊಟ್ಟ ಓಲಾ ಕಂಪನಿ

SBI ಇಂದ ಹೊಸ ಸೌಲಭ್ಯ:

ಬ್ಯಾಂಕ್ ಅಕೌಂಟ್ ನಲ್ಲಿ ಬ್ಯಾಲೆನ್ಸ್ (Bank Balance) ಎಷ್ಟಿದೆ ಎನ್ನುವುದನ್ನು ತಿಳಿದುಕೊಳ್ಳುವುದು ಮುಖ್ಯ ಆಗುತ್ತದೆ. ಸಾಮಾನ್ಯವಾಗಿ ಈಗ ಎಲ್ಲರೂ UPI ಅಪ್ಲಿಕೇಶನ್ ಗಳನ್ನು ಬಳಸಿ ಹಣದ ವ್ಯವಹಾರ ಮಾಡುವ ಕಾರಣ, ಅದೇ ಆಪ್ ಗಳಲ್ಲಿ ಬ್ಯಾಂಕ್ ಅಕೌಂಟ್ ನಲ್ಲಿ ಎಷ್ಟು ಬ್ಯಾಲೆನ್ಸ್ ಉಳಿದಿದೆ ಎನ್ನುವುದನ್ನು ಕೂಡ ತಿಳಿದುಕೊಳ್ಳಬಹುದು. ಆದರೆ ಕೆಲವು ಸಾರಿ ಟೆಕ್ನಿಕಲ್ ಆಗಿ ಏನಾದರು ಸಮಸ್ಯೆ ಆದಾಗ UPI ಅಪ್ಲಿಕೇಶನ್ ಗಳಲ್ಲಿ ಬ್ಯಾಂಕ್ ಬ್ಯಾಲೆನ್ಸ್ ತೋರಿಸುವುದಿಲ್ಲ. ಈ ಸಮಸ್ಯೆಗೆ ಈಗ SBI ಒಂದು ಪರಿಹಾರ ತಂದಿದೆ.

ಸೆಕೆಂಡ್ ಹ್ಯಾಂಡ್ ಕಾರು ಖರೀದಿ ಮಾಡುವಾಗ ಯಾವುದೇ ಕಾರಣಕ್ಕೂ ಈ 4 ತಪ್ಪು ಮಾಡಬೇಡಿ

State Bank Of Indiaಈ ಒಂದು ಅಪ್ಲಿಕೇಶನ್ ಬಳಕೆ ಮಾಡಿ:

UPI ಇಂದ ಕೆಲವು ಸಾರಿ ಸಮಸ್ಯೆಗಳು ಎದುರಾಗುತ್ತದೆ. ಅಂಥ ಸಮಯದಲ್ಲಿ ನೀವು SBI Yono ಇಂದ ಬ್ಯಾಂಕ್ ಬ್ಯಾಲೆನ್ಸ್ ಚೆಕ್ ಮಾಡಬಹುದು. ಹೌದು, SBI Yono App ನಲ್ಲಿ ಬ್ಯಾಂಕ್ ಅಕೌಂಟ್ ಗೆ ಲಿಂಕ್ ಆಗಿರುವ ನಿಮ್ಮ ಫೋನ್ ನಂಬರ್ ಮತ್ತು MPIN ಬಳಸಿ ಲಾಗಿನ್ ಮಾಡಿದರೆ, ಅಲ್ಲಿ ಅಕೌಂಟ್ಸ್ ಸೆಕ್ಷನ್ ನಲ್ಲಿ ನಿಮ್ಮ ಫೋನ್ ನಂಬರ್ ಅನ್ನು ಕೂಡ ಲಿಂಕ್ ಮಾಡಬಹುದು.

Yono app ನ ಸರಳ ಆವೃತ್ತಿ ಕೂಡ ಇದ್ದು ಇದನ್ನು SBI Yono Lite ಎಂದು ಕರೆಯಲಾಗುತ್ತದೆ, ಇದರಲ್ಲಿ ನೆಟ್ ಬ್ಯಾಂಕಿಂಗ್ ಡೀಟೇಲ್ಸ್ ಬಳಸಿ ಲಾಗಿನ್ ಮಾಡಿ, ಬ್ಯಾಲೆನ್ಸ್ ಚೆಕ್ ಮಾಡಬಹುದು.

ನಿಮ್ಮ ಫಿಕ್ಸೆಡ್ ಹಣಕ್ಕೆ ಬ್ಯಾಂಕಿಗಿಂತ ಹೆಚ್ಚಿನ ಬಡ್ಡಿ ನೀಡುತ್ತಿದೆ ಈ ಪೋಸ್ಟ್ ಆಫೀಸ್ ಯೋಜನೆ

ಇದರ ಜೊತೆಗೆ ಬ್ಯಾಲೆನ್ಸ್ ಚೆಕ್ ಮಾಡಲು ಇನ್ನು 2 ರೀತಿಗಳಿವೆ. BHIM SBI Pay ಅಪ್ಲಿಕೇಶನ್ ಅನ್ನು ಬಳಸಿದರೆ, ಅದರಲ್ಲಿ ಸಹ ನಿಮ್ಮ ಬ್ಯಾಂಕ್ ಖಾತೆಗೆ ಲಿಂಕ್ ಆಗಿರುವ ಫೋನ್ ನಂಬರ್ ಇಂದ ಲಾಗಿನ್ ಮಾಡಿ, View Balance ಎನ್ನುವ ಆಯ್ಕೆಯನ್ನು ಸೆಲೆಕ್ಟ್ ಮಾಡಿದರೆ, ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಎಷ್ಟಿದೆ ಎಂದು ತೋರಿಸುತ್ತದೆ.

ಹಾಗೆಯೇ SMS ಮೂಲಕ ಕೂಡ ಬ್ಯಾಂಕ್ ಬ್ಯಾಲೆನ್ಸ್ ಎಷ್ಟಿದೆ ಎಂದು ತಿಳಿಯಬಹುದು. ಬ್ಯಾಂಕ್ ಅಕೌಂಟ್ ಗೆ ಲಿಂಕ್ ಆಗಿರುವ ಫೋನ್ ನಂಬರ್ ಇಂದ ‘BAL’ ಎಂದು ಟೈಪ್ ಮಾಡಿ 092237666666 ನಂಬರ್ ಗೆ SMS ಮಾಡಿದರೆ ನಿಮ್ಮ ಬ್ಯಾಂಕ್ ಅಕೌಂಟ್ SMS ಮೂಲಕ ಬರುತ್ತದೆ.

Big Update for State Bank Account Holders, Get more benefits