ಸೆಕೆಂಡ್ ಹ್ಯಾಂಡ್ ಕಾರು ಖರೀದಿ ಮಾಡುವಾಗ ಯಾವುದೇ ಕಾರಣಕ್ಕೂ ಈ 4 ತಪ್ಪು ಮಾಡಬೇಡಿ

second hand car : ಸೆಕೆಂಡ್ ಹ್ಯಾಂಡ್ ಕಾರು ಖರೀದಿ (Used car) ಮಾಡಲು ಯಾವೆಲ್ಲ ಟಿಪ್ಸ್ ಅನುಸರಿಸಬೇಕಾಗುತ್ತದೆ ತಿಳಿಯೋಣ ಬನ್ನಿ.

Bengaluru, Karnataka, India
Edited By: Satish Raj Goravigere

second hand car : ಭಾರತದ ಅಟೋಮೊಬೈಲ್ ಮಾರುಕಟ್ಟೆಯಲ್ಲಿ ಹೊಸ ಕಾರಿಗೆ ಎಷ್ಟು ಬೇಡಿಕೆ ಇದೆಯೋ ಅದೇ ರೀತಿಯಳ್ಳಿ ಸೆಕೆಂಡ್ ಹ್ಯಾಂಡ್ ಕಾರಿನ ಮಾರುಕಟ್ಟೆ ಕೂಡ ಅತ್ಯಂತ ಬಲವಾಗಿದೆ.

ಹೊಸ ಕಾರು ಖರೀದಿಸಲು ಅತ್ಯಂತ ದೊಡ್ಡ ಮೊತ್ತ ಹೊಂದಿಸಲಾಗದ ಅನೇಕ ಬಡ ಕುಟುಂಬಗಳು ಹಾಗು ಮಧ್ಯಮವರ್ಗದ ಕುಟುಂಬಗಳು ತಮ್ಮ ಜೀವನದ ಮಹದಾಸೆ ನೆರವೇರಿಸಲು ಮುಂದಾಗುವುದು ಸೆಕೆಂಡ್ ಹ್ಯಾಂಡ್ ಹ್ಯಾಂಡ್ ಕಾರು ಖರೀದಿ ಮಾಡಲು.

Never make these 4 mistakes when buying a second hand car

ಹಾಗಿದ್ರೆ ಸೆಕೆಂಡ್ ಹ್ಯಾಂಡ್ ಕಾರು ಕಡಿಮೆಗೆ ಸಿಕ್ಕರೂ ಕೂಡ ಖರೀದಿ ಮಾಡುವಾಗ ನಾವು ಬಹಳ ಎಚ್ಚರ ವಹಿಸಬೇಕಾಗುತ್ತದೆ. ಹಾಗಿದ್ರೆ ಸೆಕೆಂಡ್ ಹ್ಯಾಂಡ್ ಕಾರು ಖರೀದಿ (second hand car) ಮಾಡಲು ಯಾವೆಲ್ಲ ಟಿಪ್ಸ್ ಅನುಸರಿಸಬೇಕಾಗುತ್ತದೆ ತಿಳಿಯೋಣ ಬನ್ನಿ.

ನಿಮ್ಮ ಫಿಕ್ಸೆಡ್ ಹಣಕ್ಕೆ ಬ್ಯಾಂಕಿಗಿಂತ ಹೆಚ್ಚಿನ ಬಡ್ಡಿ ನೀಡುತ್ತಿದೆ ಈ ಪೋಸ್ಟ್ ಆಫೀಸ್ ಯೋಜನೆ

ಬಂದ್ ಆದ ಮಾಡೆಲ್ ನ ಕಾರು ಖರೀದಿ ಮಾಡಬೇಡಿ

ಸಾಮಾನ್ಯವಾಗಿ ಕಳಪೆ ಮಾರಾಟದಿಂದಾಗಿ ಮಾರುಕಟ್ಟೆಯಲ್ಲಿ ಅನೇಕ ಕಾರುಗಳು ತಮ್ಮ ಸೇಲ್ ಕಳೆದುಕೊಂಡು ನೀರಸ ಪ್ರತಿಕ್ರಿಯೆಯಿಂದ ಅಥವಾ ಇನ್ಯಾವುದೋ ಸಮಸ್ಯೆ ಕಾರಣ ಮಾರುಕಟ್ಟೆಯಿಂದ ಹೊರಬರುವುದರಿಂದ ಅಂತಹ ವಾಹನಗಳ ಮೌಲ್ಯವೂ ಕಡಿಮೆಯಾಗುತ್ತದೆ.

ನೀವು ಅಂತಹ ಕಾರುಗಳನ್ನು ಅತ್ಯಂತ ಕಡಿಮೆಗೆ ಸೆಕೆಂಡ್ ಹ್ಯಾಂಡ್ ಮಾರುಕಟ್ಟೆಯಲ್ಲಿ ಪಡೆಯುತ್ತೀರಿ, ಆದರೆ ಅದರ ಸರ್ವಿಸ್ ನಲ್ಲಿ ನೀವು ದೊಡ್ಡ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹೀಗಾಗಿ ಇಂತಹ ಕಾರುಗಳನ್ನು ಖರೀದಿ ಮಾಡಬೇಡಿ.

ಯಾವುದೇ ಕಾರಣಕ್ಕೂ ತುಂಬಾ ತುಂಬಾ ಹಳೆಯ ಕಾರು ಖರೀದಿಸಬೇಡಿ

ಸದ್ಯ ದೆಹಲಿಯಲ್ಲಿ 15 ವರ್ಷಕ್ಕಿಂತ ಹಳೆಯದಾದ ಪೆಟ್ರೋಲ್ ಕಾರುಗಳು ಮತ್ತು 10 ವರ್ಷಕ್ಕಿಂತ ಹಳೆಯ ಡೀಸೆಲ್ ಕಾರುಗಳನ್ನು ಓಡಿಸುವುದನ್ನು ಎಲ್ಲರಿಗು ಕೂಡ ನಿಷೇಧಿಸಲಾಗಿದೆ.

ಹೀಗೆ ಈ ನಿಯಮ ಕೆಲವೇ ಸಮಯದಲ್ಲಿ ಅನೇಕ ರಾಜ್ಯಗಳಲ್ಲಿ ಕಡ್ಡಾಯವಾಗಲಿದೆ. ಸೆಕೆಂಡ್ ಹ್ಯಾಂಡ್ ಕಾರನ್ನು ಖರೀದಿಸುವ ಮೊದಲು, ಆ ರಾಜ್ಯದಲ್ಲಿ ಕಾರಿನ ನೋಂದಣಿ ಮಾನ್ಯತೆ ಎಷ್ಟು ಸಮಯದವರೆಗೆ ಮಾನ್ಯವಾಗಿದೆ ಎಂಬುದನ್ನು ಪರಿಶೀಲಿಸಿ.

ಪೇಟಿಎಂ ವಾಲೆಟ್ ನಲ್ಲಿ ಹಣ ಇಲ್ಲದೆ ಹೋದ್ರೆ ಸೇವೆ ಸ್ಥಗಿತ! ಪೇಟಿಎಂ ಬಳಕೆದಾರರಿಗೆ ಬಿಗ್ ಅಪ್ಡೇಟ್

Second Hand Carಹೊಸ ಬ್ರಾಂಡ್ ಗಳ ಕಡಿಮೆ ಬೆಲೆ ಕಾರ್ ಖರೀದಿ ಮಾಡಬೇಡಿ

ಇನ್ನು ಮಾರುಕಟ್ಟೆಯಲ್ಲಿ ಹೊಸದಾಗಿ ಬಂದಿರುವ ಅನೇಕ ಕಂಪನಿಗಳ ಸೆಕೆಂಡ್ ಹ್ಯಾಂಡ್ ಕಾರುಗಳ ಮೇಲೆ ಸಾಕಷ್ಟು ಡಿಸ್ಕೌಂಟ್ ಇರುತ್ತದೆ, ಆದರೆ ಈ ಕಂಪನಿಗಳ ಮೇಲೆ ಯಾವುದೇ ಭರವಸೆ ಇರಲ್ಲ. ಯಾವುದೇ ಸಮಯದಲ್ಲಿ ಕಂಪನಿ ಮುಚ್ಚಿಹೋಗಬಹುದು ಹಾಗಾಗಿ ಸುಜುಕಿ ಟಾಟಾ ಟೊಯೊಟದಂತಹ ನಂಬಿಕಾರ್ಹ ಕಂಪನಿಗಳ ಕಾರುಗಳನ್ನು ಖರೀದಿಸುವುದು ಉತ್ತಮ

ಕೇವಲ ₹4000 ಉಳಿತಾಯ ಮಾಡಿ ಬರೋಬ್ಬರಿ 2 ಲಕ್ಷ ಪಡೆಯಿರಿ! ಪೋಸ್ಟ್ ಆಫೀಸ್ ಬಂಪರ್ ಸ್ಕೀಮ್

ಮೆಕಾನಿಕ್ ಸಲಹೆ

ಹಳೆಯ ಕಾರು ಖರೀದಿ ಮಾಡುವ ಮುನ್ನ ಉತ್ತಮ ಮೆಕ್ಯಾನಿಕ್ ನ ಸಲಹೆ ಪಡೆದು ಒಮ್ಮೆ 50km ತನಕ ಓಡಿಸಿ ನಂತರ ಖರೀದಿ ಮಾಡುವುದು ಅತೀ ಉತ್ತಮ ಎನ್ನುತ್ತಾರೆ ತಜ್ಞರು. ಹೀಗಾಗಿ ನಿಮ್ಮ ಮೊದಲ ಸೆಕೆಂಡ್ ಹ್ಯಾಂಡ್ ಕಾರು ಖರೀದಿ ಮಾಡುವ ಮುನ್ನ ಈ ಎಲ್ಲಾ ಕ್ರಮ ಅನುಸರಿಸಿ

Never make these 4 mistakes when buying a second hand car