ಬರಿ ₹60,000ಕ್ಕೆ ಬಜೆಟ್ ಬೈಕ್! ಫುಲ್ ಟ್ಯಾಂಕ್ ಮಾಡಿದ್ರೆ 700 ಕಿಮೀ ಮೈಲೇಜ್ - Best Mileage Bike
ಇಂಧನ ಬೆಲೆ ಏರಿಕೆಯ ನಡುವೆ ಹೆಚ್ಚು ಮೈಲೇಜ್ ಬರುವ ಬಜೆಟ್ ಬೈಕ್ ಹುಡುಕುತ್ತಿರುವವರಿಗೆ ಸಿಹಿ ಸುದ್ದಿ. 700 ಕಿಮೀ ಪೂರ್ತಿಯಾಗಿ ಓಡುವ ಈ ಬೈಕ್‌ಗೆ ಮಾರು ಹೋಗ್ತಿದ್ದಾರೆ ಜನ.

- ₹60,000 ಬಜೆಟ್‌ನಲ್ಲಿ Hero HF Deluxe ಬೈಕ್ ಲಭ್ಯ
- ಫುಲ್ ಟ್ಯಾಂಕ್ ಮಾಡಿದರೆ 700 ಕಿಮೀ ಓಡುವುದು ಪಕ್ಕ
- HF Deluxe ಪ್ರೋ ರೂಪದಲ್ಲಿ ಹೊಸ ಫೀಚರ್‌ಗಳೊಂದಿಗೆ ಲಾಂಚ್
Hero HF Deluxe Bike : ಇಂಧನ ಬೆಲೆ (fuel price) ದಿನದಿಂದ ದಿನಕ್ಕೆ ಏರುತ್ತಿರುವ ಈ ಕಾಲದಲ್ಲಿ ಕಡಿಮೆ ಖರ್ಚಿನಲ್ಲಿ ಹೆಚ್ಚು ಮೈಲೇಜ್ ಬರುವ ಬೈಕ್ ಎಲ್ಲರ ಕನಸು. ಈ ಕನಸು ಸಾಕಾರವಾಗಿಸುತ್ತಿರುವುದು Hero ಕಂಪನಿಯ HF Deluxe Bike. ಈಗಾಗಲೇ ಜೂನ್ 2025ರಲ್ಲಿ 1 ಲಕ್ಷಕ್ಕಿಂತ ಹೆಚ್ಚು ಜನರು ಈ ಬೈಕ್ ಖರೀದಿಸಿದ್ದು, ಜನಪ್ರಿಯತೆಗೆ ಸಾಕ್ಷಿಯಾಗಿದೆ.
ಡಿಜೈನ್ ಹಾಗೂ ನವೀನ ಫೀಚರ್‌ಗಳಲ್ಲಿ Hero HF Deluxe ಸರಳ ಹಾಗೂ ಆಕರ್ಷಕ ಲುಕ್ ಹೊಂದಿದ್ದು, ಪ್ರತಿದಿನದ ಪ್ರಯಾಣಕ್ಕೆ ಸೂಕ್ತವಾಗಿದೆ. ಟ್ಯೂಬ್ಲೆಸ್ ಟೈರ್, ಡಿಜಿಟಲ್ ಮೀಟರ್ (digital meter), ಉತ್ತಮ suspension ಮತ್ತು braking system ಇರುವ ಈ ಬೈಕ್, ಕಿಕ್ಸ್ಟಾರ್ಟ್ ಮತ್ತು ಸೆಲ್ಫ್ ಸ್ಟಾರ್ಟ್ ಎರಡೂ ಆಪ್ಷನ್‌ಗಳಲ್ಲಿ ಲಭ್ಯವಿದೆ.
ಇದನ್ನೂ ಓದಿ: ವ್ಯಾಪಾರಿಗಳಿಗೆ ₹50 ಲಕ್ಷ ಹೂಡಿಕೆ ನೆರವು! ಈ ಯೋಜನೆ ವಿಶೇಷ ಏನು ಗೊತ್ತಾ
ಈ ಬೈಕ್‌ನಲ್ಲಿ 97.2cc ಎಯರ್-ಕೂಲ್ಡ್, 4-ಸ್ಟ್ರೋಕ್ ಇಂಜಿನ್ (engine) ಇರುವುದರಿಂದ, ದಿನನಿತ್ಯದ ಪ್ರಯಾಣ ಸುಲಭವಾಗುತ್ತದೆ. 4-ಸ್ಪೀಡ್ ಗಿಯರ್‌ಬಾಕ್ಸ್ (gearbox) ಹಾಗೂ OHC ತಂತ್ರಜ್ಞಾನ ಇದರಲ್ಲಿ ಉಪಯೋಗಿಸಲಾಗಿದೆ.
ಕಂಪನಿಯು ಇದನ್ನು 9.6 ಲೀಟರ್ ಇಂಧನ ಟ್ಯಾಂಕ್ (fuel tank) ಸಾಮರ್ಥ್ಯದಲ್ಲಿ ಬಿಡುಗಡೆ ಮಾಡಿದ್ದು, ಫುಲ್ ಟ್ಯಾಂಕ್ ಮಾಡಿದರೆ 700 ಕಿಮೀ ದೂರ ಓಡುವ ಸಾಮರ್ಥ್ಯವಿದೆ.
ಹೆಚ್ಚು ಮೈಲೇಜ್ ನೀಡುವ ಕಾರಣಕ್ಕೆ Hero HF Deluxe ಬಜೆಟ್ ಬೈಕ್ ಗಳಲ್ಲಿ ಬೆಸ್ಟ್ ಓಪ್ಷನ್ ಆಗಿದೆ. ಇದರ ಪ್ರೊ (Pro) ಮಾದರಿಯೂ ಇದೀಗ ಲಾಂಚ್ ಮಾಡಲಾಗಿದೆ. ಇದರಲ್ಲಿರುವ i3S ತಂತ್ರಜ್ಞಾನ (technology) ಇಂಧನ ಉಳಿಸಿ, ವಾಹನ ನಿಲ್ಲಿಸಿದಾಗ ಇಂಜಿನ್ ಸ್ವಯಂಚಾಲಿತವಾಗಿ ಆಫ್ ಆಗುವಂತೆ ಮಾಡುತ್ತದೆ.
ಇದನ್ನೂ ಓದಿ: ಹೀಗಾದ್ರೆ ತಂದೆ-ತಾಯಿ ಆಸ್ತಿಯಲ್ಲಿ ಮಕ್ಕಳಿಗೆ ಯಾವ ಹಕ್ಕೂ ಇರಲ್ಲ! ಇದು 99% ಜನಕ್ಕೆ ಗೊತ್ತಿಲ್ಲ
ದಿಲ್ಲಿಯಲ್ಲಿ Hero HF Deluxe ಬೈಕ್ ದರ ₹59,998 ರಿಂದ ₹70,618 (ex-showroom) ನಡುವೆ ಇದ್ದು, on-road ದರ ₹70,508ಷ್ಟಿದೆ. ಕಡಿಮೆ maintenance, ಹೆಚ್ಚು ಮೈಲೇಜ್ ಮತ್ತು ಕಡಿಮೆ ಬೆಲೆ ಇರುವುದರಿಂದ ಹೆಚ್ಚಿನ ಮಂದಿ ಈ ಬೈಕ್‌ನ್ನು ಖರೀದಿಸುತ್ತಿದ್ದಾರೆ.
ಇದೆ ರೀತಿಯ ವಿಶ್ವಾಸಾರ್ಹ ಸುದ್ದಿಗಳಿಗಾಗಿ ತಪ್ಪದೆ Kannada News Today ಭೇಟಿ ನೀಡಿ.
Best Budget Mileage Bike That Runs 700km Per Tank




