ಸರ್ಕಾರಿ ಭೂಮಿಯಲ್ಲಿ ಕೃಷಿ ಮಾಡ್ತಾ ಇರೋ ರೈತರಿಗೆ ಬಿಗ್ ನ್ಯೂಸ್! ಈ ರೀತಿ ಅರ್ಜಿ ಸಲ್ಲಿಸಿ ಇನ್ಮುಂದೆ ಆ ಜಾಗ ನಿಮ್ಮದೇ
ರೈತರಿಗೆ ಕೃಷಿ ಕೆಲಸಕ್ಕೆ ಸಹಾಯ ಆಗುವುದಕ್ಕೆ ಕಡಿಮೆ ಬಡ್ಡಿಯಲ್ಲಿ ಸಾಲದ ಸೌಲಭ್ಯ (Loan for Farmers) ಒದಗಿಸಿಕೊಡುತ್ತಿದೆ.. ಬೇರೆ ಬೇರೆ ರೀತಿಯಲ್ಲಿ ರೈತರಿಗೆ ಅನುಕೂಲ ಆಗುವಂಥ ಸೌಲಭ್ಯವನ್ನು ನೀಡುತ್ತಿದೆ. ಈಗ ಸರ್ಕಾರವು ರಾಜ್ಯದ ಕಾರ್ಮಿಕ ರೈತರಿಗಾಗಿ ಒಂದು ಗುಡ್ ನ್ಯೂಸ್ ನೀಡಿದೆ.
ನಮ್ಮ ದೇಶದ ಬೆನ್ನಲುಬು ರೈತ (Farmers), ನಮ್ಮ ದೇಶದ ಪ್ರಮುಖ ವೃತ್ತಿ ಕೃಷಿ (Agriculture) ಆಗಿದೆ. ಭಾರತದಲ್ಲಿ ಕೋಟ್ಯಾಂತರ ರೈತರಿದ್ದಾರೆ. ಆದರೆ ಅನ್ನ ನೀಡುವ ರೈತನೇ ಇಂದು ನೆಮ್ಮದಿಯಾಗಿಲ್ಲ, ರೈತರ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತಿಲ್ಲ ಎನ್ನುವುದು ಅಸಲಿ ವಾಸ್ತವ.
ನಿಜ ಹೇಳಬೇಕು ಎಂದರೆ ರೈತರು ಎಷ್ಟೇ ಕಷ್ಟಪಟ್ಟು, ವ್ಯವಸಾಯ ಮಾಡಿದರು ಸಹ, ಅವರ ಬೆಳೆಗೆ ತಕ್ಕ ಬೆಲೆ ಸಿಗುತ್ತಿಲ್ಲ. ಹಣದ ಕೊರತೆ ಇಂದ ಸಾಕಷ್ಟು ರೈತರು ಪ್ರಾಣ ಕಳೆದುಕೊಳ್ಳುವ ಹಂತಕ್ಕೂ ಹೋಗಿದ್ದಾರೆ.
ನಮ್ಮ ದೇಶ ಚೆನ್ನಾಗಿರಬೇಕು ಎಂದರೆ, ಮೊದಲಿಗೆ ರೈತರು ನೆಮ್ಮದಿಯಿಂದ ಸಂತೋಷದಿಂದ ಇರಬೇಕು. ಸ್ವಂತ ನೆಲ ಇರುವ ರೈತರು ಪರವಾಗಿಲ್ಲ, ಹೇಗಾದರೂ ಮಾಡಿ ಕಷ್ಟಪಟ್ಟು ಬದುಕು ಸಾಗಿಸುತ್ತಿದ್ದಾರೆ. ಆದರೆ ಮತ್ತೊಬ್ಬರ ನೆಲದಲ್ಲಿ, ಸರ್ಕಾರದ ನೆಲದಲ್ಲಿ (Government Land) ಕೆಲಸ ಮಾಡುತ್ತಿರುವವರ ಪರಿಸ್ಥಿತಿ ಇನ್ನು ಕಷ್ಟಕರವಾಗಿದೆ. ಹಾಗಾಗಿ ಕೇಂದ್ರ ಸರ್ಕಾರವು ರೈತರಿಗೆ ಸಹಾಯ ಆಗಬೇಕು, ರೈತರು ಕಷ್ಟಪಡಬಾರದು ಎಂದು ಸಾಕಷ್ಟು ಯೋಜನೆಗಳನ್ನು (Farmers Scheme) ಹೊರತತಂದಿದೆ.
ರೈತರಿಗೆ ಕೃಷಿ ಕೆಲಸಕ್ಕೆ ಸಹಾಯ ಆಗುವುದಕ್ಕೆ ಕಡಿಮೆ ಬಡ್ಡಿಯಲ್ಲಿ ಸಾಲದ ಸೌಲಭ್ಯ (Loan for Farmers) ಒದಗಿಸಿಕೊಡುತ್ತಿದೆ.. ಬೇರೆ ಬೇರೆ ರೀತಿಯಲ್ಲಿ ರೈತರಿಗೆ ಅನುಕೂಲ ಆಗುವಂಥ ಸೌಲಭ್ಯವನ್ನು ನೀಡುತ್ತಿದೆ. ಈಗ ಸರ್ಕಾರವು ರಾಜ್ಯದ ಕಾರ್ಮಿಕ ರೈತರಿಗಾಗಿ ಒಂದು ಗುಡ್ ನ್ಯೂಸ್ ನೀಡಿದೆ. ಸರ್ಕಾರಕ್ಕೆ ಸಂಬಂಧಿಸಿದ ಜಮೀನಿನಲ್ಲಿ ಕೃಷಿ ಮಾಡುತ್ತಿರುವ ರೈತರಿಗಾಗಿ ಸರ್ಕಾರ ಒಂದು ಹೊಸದೊಂದು ಸೂಚನೆಯನ್ನು ಹೊರಡಿಸಿದೆ.
ಸ್ವಂತ ಜಮೀನು ಇಲ್ಲದ ರೈತರು, ಸರ್ಕಾರಕ್ಕೆ ಸೇರಿದ ಜಮೀನನ್ನು ರೈತರು ಗುತ್ತಿಗೆಗೆ ಪಡೆದು, ಅದರಲ್ಲಿ ಕೃಷಿ ಮಾಡುತ್ತಾರೆ, ಈ ಮೂಲಕ ಸಂಪಾದನೆ ಮಾಡುತ್ತಾರೆ. ಸರ್ಕಾರಕ್ಕೆ ಸೇರಿದ ಜಮೀನಿನಲ್ಲಿ ವ್ಯವಸಾಯ ಮಾಡಲು, ಸ್ಥಳವನ್ನು ಫಾರ್ಮಿಂಗ್ ಸೊಸೈಟಿ (Farming Society) ರೈತರಿಗೆ ಸ್ಥಳವನ್ನು ಕೊಡುತ್ತದೆ.
ಧಾರವಾಡ (Dharwad) ಜಿಲ್ಲೆಯ ಅಲ್ನವರ ಮತ್ತು ಕಲಘಟಗಿ ತಾಲ್ಲೂಕಿನಲ್ಲಿರುವ ಫಾರ್ಮಿಂಗ್ ಸೊಸೈಟಿಯು ಸರ್ಕಾರದ ಜಮೀನನ್ನು, ರೈತರಿಗೆ ನೀಡುವ ಬಗ್ಗೆ ಈಗ ಧಾರವಾಡ ಜಿಲ್ಲೆಯ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್ ಲಾಡ್ ಅವರು ಹೊಸ ಮಾಹಿತಿ ನೀಡಿದ್ದಾರೆ..
ಈ ರೀತಿಯಾಗಿ ಸರ್ಕಾರದ ಸ್ಥಳದಲ್ಲಿ ಕೃಷಿ ಮಾಡುತ್ತಿರುವ ಎಲ್ಲಾ ರೈತರು ಜಾಗದ ಮಾಲೀಕರಾಗಬೇಕು ಎಂದು ಸರ್ಕಾರ ನಿರ್ಧರಿಸಿದ್ದು (Government Rules), ಆದಷ್ಟು ಬೇಗ ರೈತರ ಹೆಸರಿಗೆ ಖಾತೆ ವರ್ಗಾವಣೆ ಮಾಡುವ ಕೆಲಸಗಳು ಶುರುವಾಗುತ್ತದೆ ಎಂದು ರಾಜ್ಯ ಕಾರ್ಮಿಕ ಇಲಾಖೆ ಮತ್ತು ಧಾರವಾಡ ಜಿಲ್ಲೆಯ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಸಂತೋಷ್ ಲಾಡ್ ಅವರು ತಿಳಿಸಿದ್ದಾರೆ. ಸರ್ಕಾರದ ಈ ನಿರ್ಧಾರದ ಪ್ರಯೋಜನ ಪಡೆಯಲು ರೈತರು ಅರ್ಜಿ ಸಲ್ಲಿಸಬೇಕಾಗುತ್ತದೆ..
ರೈತರು ಸರ್ಕಾರದ ನೆಲದಲ್ಲಿ ಕೃಷಿ ಮಾಡುತ್ತಿರುವುದು, ತಾಲ್ಲೂಕಿನ ತಹಸೀಲ್ದಾರ್ ಮತ್ತು ಅಧಿಕಾರಿಗಳ ಮೂಲಕ ಫಾರ್ಮಿಂಗ್ ಸೊಸೈಟಿ ಇಂದ ಜಮೀನನ್ನು ಗುತ್ತಿಗೆಗೆ ಪಡೆದು ಕೃಷಿ ಮಾಡುತ್ತಿರುವ ಎಲ್ಲಾ ರೈತರು ನಮೂನೆ 57ರ (Form 57) ಅಡಿಯಲ್ಲಿ ಅರ್ಜಿ ಸಲ್ಲಿಸಬೇಕು ಎಂದು ಸೂಚನೆ ನೀಡಲಾಗಿದೆ.. ರೈತರು ಇದಕ್ಕಾಗಿ ಅರ್ಜಿ ಸಲ್ಲಿಸಿದ ನಂತರ ಸರ್ಕಾರವು ಅದನ್ನು ಪರಿಶೀಲಿಸಿ, ರೈತರ ಹೆಸರಿಗೆ ಖಾತೆ ಮಾಡುವ ಸರ್ಕಾರ ನಿರ್ಧಾರ ತೆಗೆದುಕೊಳ್ಳುತ್ತದೆ ಎನ್ನಲಾಗಿದೆ..
Big news for farmers who are farming on government land
Follow us On
Google News |