Business News

ತಂದೆ ಆಸ್ತಿಯಲ್ಲಿ ಪಾಲು ಕೇಳೋ ಹೆಣ್ಣುಮಕ್ಕಳಿಗೆ ಬಿಗ್ ಅಪ್ಡೇಟ್! ಇನ್ಮುಂದೆ ಎಲ್ಲಾ ಕಡೆ ಆಸ್ತಿ ಕೇಳೋಕಾಗಲ್ಲ

Property Rules : ನಮ್ಮ ದೇಶದಲ್ಲಿ ಆಸ್ತಿ ವಿತರಣೆ ವಿಚಾರಕ್ಕೆ ಬಹಳಷ್ಟು ನಿಯಮಗಳಿವೆ. ಅವುಗಳ ಅನುಸಾರ ಆಸ್ತಿ ವಿತರಣೆ ಮಾಡಲಾಗುತ್ತದೆ. ಮೊದಲೆಲ್ಲಾ ಹೆಣ್ಣುಮಕ್ಕಳಿಗೆ ತಂದೆ ಮನೆಯ ಆಸ್ತಿಯಲ್ಲಿ ಪಾಲು (Property Rights) ಕೊಡುವ ಹಾಗಿರಲಿಲ್ಲ. ಆದರೆ ಕಾನೂನು ಬದಲಾವಣೆ ಆದ ನಂತರ ಹೆಣ್ಣುಮಕ್ಕಳಿಗೆ ತಂದೆ ಮನೆಯ ಆಸ್ತಿಯಲ್ಲಿ ಪಾಲು ಕೊಡಬೇಕು ಎಂದು ಕಾನೂನನ್ನು ಜಾರಿಗೆ ತರಲಾಯಿತು. ಇದರಿಂದ ಹೆಣ್ಣುಮಕ್ಕಳಿಗೆ ಅನುಕೂಲ ಅಂತೂ ಆಗಿದೆ..

ಆದರೆ ಎಲ್ಲಾ ಸಂದರ್ಭಗಳಲ್ಲಿ ಕೂಡ ಹೆಣ್ಣುಮಕ್ಕಳು ಆಸ್ತಿಯಲ್ಲಿ ಹಕ್ಕು ಕೇಳೋದಕ್ಕೆ ಸಾಧ್ಯ ಆಗುವುದಿಲ್ಲ. ಹೆಣ್ಣುಮಕ್ಕಳಿಗೆ ಆಸ್ತಿಯಲ್ಲಿ ಸಮಪಾಲು ಕೊಡಬೇಕು ಎಂದು ಕಾನೂನು ಹೇಳುತ್ತದೆ. ತಮಗೆ ಆಸ್ತಿ ಬಾರದೇ ಇದ್ದಾಗ ಹೆಣ್ಣುಮಕ್ಕಳು ಕಾನೂನಿನ ಮೊರೆ ಹೋಗುವುದು ಕೂಡ ಉಂಟು.

Property Rights

ಆದರೆ ಎಲ್ಲಾ ಸಂದರ್ಭಗಳಲ್ಲಿ ಕೂಡ ಹೆಣ್ಣುಮಕ್ಕಳು ತವರು ಮನೆ ಆಸ್ತಿಯಲ್ಲಿ ಪಾಲು (Share in Property) ಕೇಳುವ ಹಾಗಿಲ್ಲ. ಅಂಥ ಸಂದರ್ಭಗಳು ಯಾವುವು? ಯಾವಾಗ ಹೆಣ್ಣುಮಕ್ಕಳಿಗೆ ಹಕ್ಕು ಇರುವುದಿಲ್ಲ? ತಿಳಿಸುತ್ತೇವೆ ನೋಡಿ..

ಗೂಗಲ್ ಪೇ, ಫೋನ್ ಪೇ ಸೇರಿದಂತೆ UPI ಬಳಕೆದಾರರಿಗೆ ಬಿಗ್ ಅಪ್ಡೇಟ್! ಇನ್ಮುಂದೆ ಇನ್ನಷ್ಟು ಬೆನಿಫಿಟ್

Property Rulesಇಂಥ ಸಂದರ್ಭಗಲ್ಲಿ ಹೆಣ್ಣುಮಕ್ಕಳು ತಂದೆ ಮನೆ ಆಸ್ತಿಯಲ್ಲಿ ಹಕ್ಕು ಕೇಳುವ ಹಾಗಿಲ್ಲ

*ತಂದೆಯ ಸ್ವಯಾರ್ಜಿತ ಆಗಿದ್ದು, ಅವರು ಇನ್ನು ಮರಣ ಹೊಂದಿಲ್ಲ ಎಂದರೆ ಆಗ ಹೆಣ್ಣುಮಕ್ಕಳು ಮಾತ್ರವಲ್ಲ ಗಂಡು ಮಕ್ಕಳು ಕೂಡ ಆಸ್ತಿಯಲ್ಲಿ ಹಕ್ಕು ಕೇಳುವ ಹಾಗಿಲ್ಲ.

*ಸ್ವಯಾರ್ಜಿತ ಆಸ್ತಿ ಆಗಿದ್ದಾಗ, ಅದನ್ನು ಭಾಗ ಮಾಡಿ ಯಾರಿಗೆ ಎಷ್ಟು ಕೊಡಬೇಕು ಎನ್ನುವುದು ತಂದೆಯ ನಿರ್ಧಾರ ಆಗಿರುತ್ತದೆ. ಅದನ್ನು ಮಕ್ಕಳು ಪ್ರಶ್ನೆ ಮಾಡುವ ಹಾಗಿಲ್ಲ.

*ತಂದೆ ನಿಧನ ಹೊಂದಿದ ಬಳಿಕ ಅವರ ಆಸ್ತಿಯನ್ನು ವಿಲ್ ಮಾಡಿದ್ದರೆ, ಇನ್ಯಾರಿಗೋ ಬರೆದಿದ್ದರೆ, ದಾನ ಕೊಟ್ಟಿದ್ದರೆ, ಅಂಥ ಸಂದರ್ಭದಲ್ಲಿ ಹೆಣ್ಣುಮಕ್ಕಳು ಪಾಲು ಕೇಳುವ ಹಾಗಿಲ್ಲ..

ಈ ಪೋಸ್ಟ್ ಆಫೀಸ್ ಯೋಜನೆಯಲ್ಲಿ ನೀವು ಹೂಡಿಕೆ ಮಾಡೋ ಹಣಕ್ಕೆ ಸಿಗಲಿದೆ 10 ಲಕ್ಷ ರೂಪಾಯಿ!

*ತಂದೆಯ ಆಸ್ತಿಯನ್ನು ಟ್ರಾನ್ಸ್ಫರ್ ಮಾಡಿಬಿಟ್ಟದ್ದರೆ, ಆಗಲು ಕೂಡ ಹೆಣ್ಣುಮಕ್ಕಳು ಆಸ್ತಿ ಕೇಳುವ ಹಾಗಿಲ್ಲ.

*ಒಂದು ವೇಳೆ ಅದು ರಿಲೀಸ್ ಡೀಡ್ ಆಗಿದ್ದು, ಹಕ್ಕು ಬಿಡುಗಡೆ ಪತ್ರಕ್ಕೆ ಅದಾಗಲೇ ಸೈನ್ ಮಾಡಿಬಿಟ್ಟಿದ್ದರೆ ಆಸ್ತಿಯಲ್ಲಿ ಪಾಲು ಕೇಳುವ ಹಾಗಿಲ್ಲ.

*ಮಾತಿಗೆ ಆಸ್ತಿ ಬೇಡ ಎಂದು, ಮುಂದೆ ಒಳ್ಳೆ ಬೆಲೆ ಬಂದಾಗ ಮತ್ತೆ ಆಸ್ತಿ ಕೊಡಿ ಎಂದು ಕೇಳುವ ಹಾಗಿಲ್ಲ. ಪಾಲು ಬೇಕೇ ಬೇಕು ಎಂದರೆ ಕಾನೂನಿನ ಮೊರೆ ಹೋಗಬೇಕಾಗುತ್ತದೆ.

*2005ರಲ್ಲಿ ಜಾರಿಗೆ ಬಂದ ಹಿಂದೂ ವಾರಸುದಾರರ ಕಾಯ್ದೆಗಿಂತ ಮೊದಲೇ ಆಸ್ತಿ ಹಂಚಿಕೆ ಆಗಿದ್ದರೆ, ಮತ್ತೆ ಹಕ್ಕು ಕೇಳುವ ಹಾಗಿಲ್ಲ.

*ಗಂಡ ಇದ್ದಾಗ ಹೆಂಡತಿ ಆತನ ಆಸ್ತಿಯಲ್ಲಿ ಪಾಲು ಕೇಳುವ ಹಾಗಿಲ್ಲ. ಗಂಡ ತೀರಿಕೊಂಡ ಬಳಿಕ ಹೆಂಡತಿ ಮತ್ತು ಮಕ್ಕಳಿಗೆ ಸಮವಾಗಿ ಹಂಚಿಕೆ ಮಾಡಲಾಗುತ್ತದೆ.

ಚಿನ್ನದ ಬೆಲೆ ಕ್ರಮೇಣ ಇಳಿಕೆ, ಶನಿವಾರ ಚಿನ್ನ ಮತ್ತು ಬೆಳ್ಳಿ ಬೆಲೆ ಕುಸಿತ; ಇಲ್ಲಿದೆ ಫುಲ್ ಡೀಟೇಲ್ಸ್

ಹಾಗೆಯೇ ಹೆಣ್ಣುಮಕ್ಕಳ ಮದುವೆಗಾಗಿ ತಂದೆ ತಾಯಿ ಅಥವಾ ಅಣ್ಣತಮ್ಮಂದಿರು ಖರ್ಚು ಮಾಡಿದ್ದರೆ ಆಗ ಆಸ್ತಿಯಲ್ಲಿ ಪಾಲು ಕೇಳದೇ ಇರುವುದೇ ಒಳ್ಳೆಯದು. ಮನೆಯಲ್ಲಿ ನೆಮ್ಮದಿಯಾದರು ಇರುತ್ತದೆ. ತಂದೆಯ ಮನೆಯವರು ಪ್ರೀತಿ ವಿಶ್ವಾಸದಿಂದ ಕೊಡುವುದನ್ನು ಪಡೆದುಕೊಂಡರೆ ಅದೇ ಒಳ್ಳೆಯದು.

Big update for daughters Who asks Father for share in property

Our Whatsapp Channel is Live Now 👇

Whatsapp Channel

Related Stories