ಬ್ಯಾಂಕ್‌ನಲ್ಲಿ ಚಿನ್ನ ಅಡವಿಟ್ಟು ಸಾಲ ಮಾಡಿರುವವರಿಗೆ ಬಿಗ್ ಅಪ್ಡೇಟ್! ಇಎಂಐ ನಿಯಮ ಬದಲಾವಣೆ

Gold Loan : ಬ್ಯಾಂಕ್ ನಲ್ಲಿ (Bank Gold Loan) ಇಡುವ ಚಿನ್ನದ ಮೇಲಿನ ಸಾಲದಲ್ಲಿ ದೊಡ್ಡ ಬದಲಾವಣೆ ಆಗಲಿದೆ. ಆರ್ ಬಿ ಐ (RBI) ಹೊಸ ಮಾರ್ಗದರ್ಶನ ಒಂದನ್ನು ನೀಡಿದೆ.

Gold Loan : ಚಿನ್ನವನ್ನು (Gold) ಕೇವಲ ಆಭರಣವನ್ನಾಗಿ ಮಾತ್ರವಲ್ಲ, ಕಷ್ಟಕಾಲದ ಬಹುದೊಡ್ಡ ಆರ್ಥಿಕ ನಿಧಿ ಎಂಬಂತೆ ಬಳಸಲಾಗುತ್ತದೆ. ನಮ್ಮ ಬಳಿ ಒಂದಿಷ್ಟು ಚಿನ್ನ ಇದ್ರೆ, ಕಷ್ಟ ಕಾಲಕ್ಕೆ ಆಗುತ್ತೆ ಅನ್ನೋದು ಹಲವರ ನಂಬಿಕೆ.

ಅದಕ್ಕೆ ತಕ್ಕಂತೆ ಬ್ಯಾಂಕ್ ಗಳು (Banks) ಸಣ್ಣ ಹಣಕಾಸು ಸಂಸ್ಥೆಗಳು (small finance bank) ಕೂಡ ಸಾಲ ನೀಡುತ್ತವೆ. ಹಾಗಾಗಿ ಯಾವುದಾದರೂ ಕಷ್ಟದ ಸಂದರ್ಭದಲ್ಲಿ ಚಿನ್ನವನ್ನು ಬ್ಯಾಂಕ್ ನಲ್ಲಿ ಇಟ್ಟು ಸಾಲ (gold loan) ಪಡೆದುಕೊಳ್ಳುವುದು ಸಾಮಾನ್ಯ.

ಬ್ಯಾಂಕ್ ನಲ್ಲಿ (Bank Gold Loan) ಇಡುವ ಚಿನ್ನದ ಮೇಲಿನ ಸಾಲದಲ್ಲಿ ದೊಡ್ಡ ಬದಲಾವಣೆ ಆಗಲಿದೆ. ಆರ್ ಬಿ ಐ (RBI) ಹೊಸ ಮಾರ್ಗದರ್ಶನ ಒಂದನ್ನು ನೀಡಿದೆ.

ಬ್ಯಾಂಕ್‌ನಲ್ಲಿ ಚಿನ್ನ ಅಡವಿಟ್ಟು ಸಾಲ ಮಾಡಿರುವವರಿಗೆ ಬಿಗ್ ಅಪ್ಡೇಟ್! ಇಎಂಐ ನಿಯಮ ಬದಲಾವಣೆ - Kannada News

ನಿನ್ನೆಯೇ ಖರೀದಿಸಬೇಕಿತ್ತು! ಚಿನ್ನದ ಬೆಲೆ ಕಡಿಮೆಯಾಯ್ತು ಅಂತ ಸಂತಸ ಪಡುವ ಮುನ್ನವೇ ದಿಢೀರ್ ಏರಿಕೆ

ಚಿನ್ನದ ಮೇಲೆ ತೆಗೆದುಕೊಳ್ಳಬಹುದು ಸಾಲ

ನಿಮಗೆ  ಕೈಯಲ್ಲಿ ಒಂದಿಷ್ಟು ಚಿನ್ನ ಇದ್ರೆ ಬ್ಯಾಂಕ್ ಅಥವಾ ಇತರ ಹಣಕಾಸು ಸಂಸ್ಥೆಗಳಲ್ಲಿ ಚಿನ್ನವನ್ನು ಅಡವಿಟ್ಟು (Gold deposit) ಹಣವನ್ನ ಪಡೆದುಕೊಳ್ಳಬಹುದು, ಇತ್ತೀಚಿನ ದಿನಗಳಲ್ಲಿ ಕಡಿಮೆ ಬಡ್ಡಿ (Low interest Rate) ದರದಲ್ಲಿಯೂ ಕೂಡ ಸಾಲ ಲಭ್ಯವಾಗುತ್ತದೆ. ಸಾಮಾನ್ಯವಾಗಿ 6 ರಿಂದ 24 ತಿಂಗಳಿಗೆ ಸಾಲ ಪಡೆದುಕೊಳ್ಳಬಹುದು.

ಇಎಂಐ ಪಾವತಿಯ ಮೇಲೆ ಹೊಸ ನಿಯಮ

Gold Laonಚಿನ್ನದ ಮೇಲೆ ಸಾಲವನ್ನು ತೆಗೆದುಕೊಂಡರೆ ಅದನ್ನು ಇ ಎಂ ಐ (EMI) ಮೂಲಕ ಮರುಪಾವತಿ ಮಾಡಬಹುದು, ಅಂದರೆ ಪ್ರತಿ ತಿಂಗಳಿಗೆ ಇಂತಿಷ್ಟು ಮೊತ್ತವನ್ನು ನೀವು ಬರಿಸಬೇಕಾಗುತ್ತದೆ. ಒಂದು ವೇಳೆ ಈ ಮೊತ್ತವನ್ನು ಮರುಪಾವತಿ ಮಾಡದೇ ಇದ್ದಲ್ಲಿ ಬ್ಯಾಂಕ್ ಅಥವಾ ಎನ್ ಬಿ ಪಿ ಸಿ (NBPC) ಕಠಿಣ ಕ್ರಮ ಕೈಗೊಳ್ಳಲು ನಿರ್ಧರಿಸಿದೆ.

ಗ್ರಾಹಕರು ಸರಿಯಾದ ಸಮಯಕ್ಕೆ ಹಣ ಮರುಪಾವತಿ ಮಾಡದೇ ಇದ್ದಲ್ಲಿ ಅಡವಿಟ್ಟಿರುವ ಚಿನ್ನವನ್ನು ಹರಾಜು ಹಾಕಲು ಬ್ಯಾಂಕ್ ಗೆ ಸಂಪೂರ್ಣ ಅಧಿಕಾರವಿದೆ.

ಬೆಲೆ ದುಬಾರಿ ಅಂತ ಬೇಜಾರಾಗಬೇಡಿ! ಈಗ ರಾಯಲ್ ಎನ್‌ಫೀಲ್ಡ್ ಬುಲೆಟ್ ಬಾಡಿಗೆಗೂ ಕೂಡ ಸಿಗುತ್ತೆ

ಚಿನ್ನದ ಸಾಲವನ್ನು (Bank Gold Loan) ಕೊಡುವಾಗ ಬ್ಯಾಂಕ್, ಎನ್‌ಬಿಪಿಸಿ ಸಾಲಗಾರರೊಂದಿಗೆ ಒಪ್ಪಂದ ಮಾಡಿಕೊಳ್ಳಬೇಕು, ಸಾಲಗಾರರು ಅಡವಿಟ್ಟಿರುವ ಚಿನ್ನವನ್ನು ಹರಾಜು ಮಾಡಲು ತಮ್ಮ ಸಂಪೂರ್ಣ ಒಪ್ಪಿಗೆ ಇದೆ ಎಂದು ಬರೆದು ಕೊಡಬೇಕು. ಹಾಗಾಗಿ ಸಾಲಗಾರ ತಾವು ಅಡವಿಟ್ಟಿರುವ ಚಿನ್ನಕ್ಕೆ ಕಾಲಕಾಲಕ್ಕೆ ತಕ್ಕ ಹಾಗೆ ಸರಿಯಾಗಿ ಮರುಪಾವತಿ ಮಾಡದೇ ಇದ್ದಲ್ಲಿ ಅದನ್ನು ಹರಾಜು ಹಾಕುವ ಸಂಪೂರ್ಣ ಅಧಿಕಾರ ಸಾಲಕೊಟ್ಟ ಬ್ಯಾಂಕ್ ಗೆ ಇರುತ್ತದೆ, ಅದನ್ನು ಮತ್ತೆ ಪ್ರಶ್ನೆ ಮಾಡುವ ಹಾಗಿಲ್ಲ.

ಆದರೆ ಸಾಲಗಾರನಿಗೆ ಮೊದಲು ನೋಟಿಸ್ ನೀಡಿ ನಂತರವಷ್ಟೇ ಬ್ಯಾಂಕ್ ಹರಾಜು ಹಾಕಬಹುದು. ಸಾಲಗಾರರ ಗಮನಕ್ಕೆ ಬಾರದೆ ಇರುವ ರೀತಿಯಲ್ಲಿ ಅವರ ಅಡವಿಟ್ಟ ಚಿನ್ನವನ್ನು ಹರಾಜು ಹಾಕುವಂತಿಲ್ಲ.

Gold Loan Interest Ratesಬ್ಯಾಂಕ್ ಸಾಲ ನೀಡುವಾಗಲೇ ಹರಾಜಿಗೆ ಸಂಬಂಧಪಟ್ಟ ನಿಯಮ ಶರತ್ತುಗಳನ್ನು ಸಾಲಗಾರನಿಗೆ ತಿಳಿಸಬೇಕು. ಹರಾಜು ಹಾಕುವುದಕ್ಕಿಂತ ಎರಡು ವಾರದ ಮೊದಲು ಬ್ಯಾಂಕ್ ಸಾಲದಾರನಿಗೆ ನೋಟಿಸ್ ಕಳುಹಿಸಲೇಬೇಕು.

ಕ್ರೆಡಿಟ್ ಕಾರ್ಡ್ ಬಿಲ್ ಕಟ್ಟಲು ಇಲ್ಲಿದೆ ಸುಲಭ ಮಾರ್ಗ! ನಿಮ್ಮ ಬಳಿ ಹಣ ಇಲ್ಲದೆ ಇದ್ರೂ ಪರವಾಗಿಲ್ಲ

ಇನ್ನು ನೋಟಿಸ್ ಜಾರಿಯಾಗುತ್ತಿದ್ದ ಹಾಗೆ ಸಾಲಗಾರರು ಬ್ಯಾಂಕ್ ಗೆ ತಮ್ಮ ಚಿನ್ನವನ್ನು ಮಾರಾಟ ಮಾಡಬಹುದು ಅಥವಾ ಬೇರೆಯವರ ಸಹಾಯದಿಂದ ತಾವು ಅಡವಿಟ್ಟು ಚಿನ್ನವನ್ನು ಬಿಡಿಸಿಕೊಳ್ಳಬಹುದು.

ಕಷ್ಟಪಟ್ಟು ದುಡಿದು ಸಂಪಾದಿಸಿದ ನಿಮ್ಮ ಚಿನ್ನ ಯಾರದ್ದೋ ಪಾಲಾಗುವ ಬದಲು ನಿಮಗೆ ಅಗತ್ಯವಿರುವಾಗ ಲೋನ್ (Loan) ತೆಗೆದುಕೊಂಡರೆ ಅದನ್ನು ಮರುಪಾವತಿ ಮಾಡಲು ಕೂಡ ನಿಮಗೆ ಗೊತ್ತಿರಬೇಕು

ಯಾವುದೇ ಕಾರಣಕ್ಕೂ ಚಿನ್ನದ ಮೇಲೆ ಸಾಲ ತೆಗೆದುಕೊಂಡರೆ ಅದರ ಬಡ್ಡಿ, ಅಸಲು ಪಾವತಿ ಮಾಡುವುದನ್ನು ತಪ್ಪಿಸಬೇಡಿ. ಪ್ರತಿ ತಿಂಗಳು ಸರಿಯಾದ ಸಮಯಕ್ಕೆ ಹಣ ಪಾವತಿ ಮಾಡದೆ ಇದ್ದಲ್ಲಿ ಅದು ನಿಮ್ಮ ಕ್ರೆಡಿಟ್ ಸ್ಕೋರ್ (Credit score) ಮೇಲೆಯೂ ಪರಿಣಾಮ ಬೀರುತ್ತದೆ.

ಇದರಿಂದಾಗಿ ನಿಮಗೆ ಬ್ಯಾಂಕ್ ನಲ್ಲಿ ಮುಂದಿನ ದಿನಗಳಲ್ಲಿ ಸಾಲ ತೆಗೆದುಕೊಳ್ಳಲು ಕೂಡ ಕಷ್ಟವಾಗುತ್ತದೆ. ಈ ಎಲ್ಲಾ ಮಹತ್ವದ ವಿಷಯಗಳನ್ನು ಗಮನದಲ್ಲಿ ಇಟ್ಟುಕೊಂಡು ಬ್ಯಾಂಕುಗಳ ಸೂಚನೆಯ ಅನುಸಾರ ಗ್ರಾಹಕರು ಬ್ಯಾಂಕ್ ನಲ್ಲಿ ಚಿನ್ನದ ಮೇಲಿನ ಸಾಲ ಮರುಪಾವತಿಯ ಬಗ್ಗೆ ಹೆಚ್ಚು ಜಾಗರೂಕರ ಆಗಿರಬೇಕು.

Big update for those who have taken Gold Loans by Bank

Follow us On

FaceBook Google News

Big update for those who have taken Gold Loans by Bank