ಗೂಗಲ್ ಪಿಕ್ಸೆಲ್ 9 ಪ್ರೋ ಎಕ್ಸ್ಎಲ್ ಮೇಲೆ ಬರೋಬ್ಬರಿ 30,000 ಡಿಸ್ಕೌಂಟ್! ಬಿಗ್ ಆಫರ್ - Google Pixel 9 Pro XL
ಹೊಸ ಪಿಕ್ಸೆಲ್ 10 ಸಿರೀಸ್ ಲಾಂಚ್ ಆದ ನಂತರ ಹಳೆಯ ಮಾದರಿಗಳ ಬೆಲೆ ಕುಸಿತ ಕಂಡಿದೆ. ಈಗ ಫ್ಲಿಪ್ಕಾರ್ಟ್ನಲ್ಲಿ Google Pixel 9 Pro XL ಮೇಲೆ ನೇರ 30,000 ರೂ. ಡಿಸ್ಕೌಂಟ್ ಸಿಕ್ಕಿದೆ. ಬ್ಯಾಂಕ್ ಆಫರ್ಗಳೊಂದಿಗೆ ಇನ್ನಷ್ಟು ಕಡಿಮೆ ಬೆಲೆಗೆ ಫೋನ್ ಪಡೆಯಲು ಅವಕಾಶ.

- Google Pixel 9 Pro XL ಮೇಲೆ 30,000 ರೂ. ಡಿಸ್ಕೌಂಟ್
- ಫ್ಲಿಪ್ಕಾರ್ಟ್ನಲ್ಲಿ ಭಾರಿ ಆಫರ್, ಬ್ಯಾಂಕ್ ಡೀಲ್ ಕೂಡ ಇದೆ
- ಕ್ಯಾಮೆರಾ, ಡಿಸ್ಪ್ಲೇ, ಬ್ಯಾಟರಿ – ಎಲ್ಲಾ ಹೈ ಎಂಡ್ ಫೀಚರ್
ಗೂಗಲ್ ಹೊಸ Pixel 10 Series ಬಿಡುಗಡೆ ಮಾಡಿದ ನಂತರ, ಹಳೆಯ ಮಾದರಿಗಳ ಬೆಲೆಯಲ್ಲಿ ಭಾರಿ ಇಳಿಕೆ ಕಂಡಿದೆ. ಇದೀಗ Google Pixel 9 Pro XL (256GB variant) ಫ್ಲಿಪ್ಕಾರ್ಟ್ನಲ್ಲಿ ಕೇವಲ ₹1,04,999ಕ್ಕೆ ದೊರೆಯುತ್ತಿದೆ. ಲಾಂಚ್ ಸಮಯದಲ್ಲಿ ಇದರ ಬೆಲೆ ₹1,24,999 ಆಗಿತ್ತು.
ಇದೀಗ ಸಿಗುತ್ತಿರುವ ಬ್ಯಾಂಕ್ ಆಫರ್ಗಳನ್ನು ಬಳಸಿಕೊಂಡರೆ ಫೋನ್ ಬೆಲೆ ₹94,999ಕ್ಕೆ ಇಳಿಯುತ್ತದೆ. ಅಂದರೆ ಒಟ್ಟಾರೆ 30,000 ರೂ. ಡಿಸ್ಕೌಂಟ್ನಲ್ಲಿ ಈ ಫೋನ್ ಖರೀದಿಸಲು ಸಾಧ್ಯ. ಇಂತಹ ಭಾರಿ ಬೆಲೆ ಇಳಿಕೆ ಸಿಗುವುದೇ ಒಂದು ದೊಡ್ಡ ಅವಕಾಶ.
ಡಿಸ್ಪ್ಲೇ ಬಗ್ಗೆ ಹೇಳಬೇಕೆಂದರೆ, 6.7 ಇಂಚಿನ LTPO OLED ಸ್ಕ್ರೀನ್ 1344×2992 ಪಿಕ್ಸೆಲ್ ರೆಸಲ್ಯೂಷನ್ ಹೊಂದಿದೆ. 120Hz ರಿಫ್ರೆಶ್ ರೇಟ್, HDR ಸಪೋರ್ಟ್ ಮತ್ತು 3000 ನಿಟ್ಸ್ ಪೀಕ್ ಬ್ರೈಟ್ನೆಸ್ ಹೊಂದಿರುವ ಈ ಡಿಸ್ಪ್ಲೇಗೆ Gorilla Glass Victus 2 ರಕ್ಷಣೆ ದೊರೆಯುತ್ತದೆ.
ಕ್ಯಾಮೆರಾ ಸೆಟಪ್ ಕೂಡ ಅದ್ಭುತವಾಗಿದೆ. ಹಿಂಭಾಗದಲ್ಲಿ ಟ್ರಿಪಲ್ ಲೆನ್ಸ್ ಇದೆ – 50MP ಮೆನ್ ಕ್ಯಾಮೆರಾ (OIS ಜೊತೆ), 48MP ಅಲ್ಟ್ರಾವೈಡ್ ಲೆನ್ಸ್ ಮತ್ತು 48MP ಟೆಲಿಫೋಟೋ (5x ಆಪ್ಟಿಕಲ್ ಜೂಮ್). ಸೆಲ್ಫಿ ಹಾಗೂ ವಿಡಿಯೋ ಕಾಲ್ಗಾಗಿ 42MP ಫ್ರಂಟ್ ಕ್ಯಾಮೆರಾ ಕೊಡಲಾಗಿದೆ.
ಪ್ರೊಸೆಸರ್ ವಿಭಾಗದಲ್ಲಿ Tensor G4 ಮತ್ತು Titan M2 ಸಿಕ್ಯೂರಿಟಿ ಕೋ-ಪ್ರೊಸೆಸರ್ ಸೇರಿಸಲಾಗಿದೆ. 16GB RAM ಮತ್ತು 256GB/512GB ಸ್ಟೋರೇಜ್ ಆಯ್ಕೆಗಳಿವೆ. Android 14 ಜೊತೆಗೆ ಬಂದ ಈ ಫೋನ್ 7 ವರ್ಷಗಳ OS ಮತ್ತು Security Update ಪಡೆಯಲಿದೆ.
ಬ್ಯಾಟರಿ 5060mAh ಸಾಮರ್ಥ್ಯದಿದ್ದು, 45W ಫಾಸ್ಟ್ ಚಾರ್ಜಿಂಗ್ನ್ನು ಸಪೋರ್ಟ್ ಮಾಡುತ್ತದೆ. Extreme Battery Saver ಮೋಡ್ನಲ್ಲಿ 100 ಗಂಟೆಗಳವರೆಗೂ ಬ್ಯಾಟರಿ ಲೈಫ್ ನೀಡುತ್ತದೆ. ಜೊತೆಗೆ Type-C charging port ಕೂಡ ಇದೆ. ಅದೇ ರೀತಿ IP68 rating, Gemini AI support, Emergency SOS ಹಾಗೂ Car Crash Detection ಫೀಚರ್ಗಳು ಈ ಫೋನ್ನಲ್ಲಿ ಸೇರಿಸಲಾಗಿದೆ.



