BSNL ಎಂಟ್ರಿಗೆ ವೊಡಾಫೋನ್, ಏರ್ಟೆಲ್, ಜಿಯೋ ಶಾಕ್! ಕಡಿಮೆ ರಿಚಾರ್ಜ್ ಪ್ಲಾನ್‍ಗೆ ಗ್ರಾಹಕರು ಫುಲ್ ಖುಷ್
ನಮಗೆಲ್ಲ ಗೊತ್ತಿರುವ ಪ್ರೈವೇಟ್ ಟೆಲಿಕಾಂ ಕಂಪನಿಗಳು ತಮ್ಮ ರೀಚಾರ್ಜ್ ಪ್ಲಾನ್ ಗಳ (Recharge Plans) ದರವನ್ನು ಏರಿಸಿದ ನಂತರ ಹೆಚ್ಚಿನ ಜನರು ಆ ನೆಟ್ವರ್ಕ್ ಗಳನ್ನು ಬಿಟ್ಟು, ಸರ್ಕಾರದ ಬಿ.ಎಸ್.ಎನ್.ಎಲ್ ನೆಟ್ವರ್ಕ್ ಗೆ ಪೋರ್ಟ್ ಮಾಡಿಸಿಕೊಳ್ಳುತ್ತಿದ್ದಾರೆ.
ಕಡಿಮೆ ಬೆಲೆಯ ಪ್ಲಾನ್ ಇರುವ ಕಾರಣ BSNL ಈಗ ಎಲ್ಲರ ಫೇವರೆಟ್ ನೆಟ್ವರ್ಕ್ ಆಗಿದೆ ಎಂದು ಹೇಳಿದರೂ ತಪ್ಪಲ್ಲ. ಈಗಾಗಲೇ ಒಳ್ಳೆಯ ಸೇವೆಗಳನ್ನು ನೀಡುತ್ತಿರುವ ಬಿ.ಎಸ್.ಎನ್.ಎಲ್ ಇದೀಗ ತಮ್ಮ ಗ್ರಾಹಕರಿಗೆ ಸಿಹಿ ಸುದ್ದಿ ಕೊಡುವುದಕ್ಕೆ ಮುಂದಾಗಿದೆ.
ಬಿ.ಎಸ್.ಎನ್.ಎಲ್ ನಲ್ಲಿ ಅತೀಕಡಿಮೆ ಬೆಲೆಯ ರೀಚಾರ್ಜ್ ಪ್ಲಾನ್ ಗಳಿವೆ, ಇದೇ ಕಾರಣಕ್ಕೆ ಕೇವಲ 1 ತಿಂಗಳ ಅವಧಿಯಲ್ಲಿ BSNL ಗೆ 26 ಲಕ್ಷ ಹೆಚ್ಚು ಗ್ರಾಹಕರು ಸೇರ್ಪಡೆಗೊಂಡಿದ್ದಾರೆ. ರೀಚಾರ್ಜ್ ಪ್ಲಾನ್ ಗಳು ಇದ್ದರೂ ಕೂಡ ಸ್ಪೀಡ್ ನೆಟ್ವರ್ಕ್ ವಿಷಯದಲ್ಲಿ ಬಿ.ಎಸ್.ಎನ್.ಎಲ್ ಹಿಂದೆಯೇ ಉಳಿದಿದೆ.
ಈ ಕಾರಣಕ್ಕೆ ಇದೀಗ ಹೊಸದೊಂದು ಅಪ್ಡೇಟ್ ಹೊರಬಂದಿದ್ದು, ಶೀಘ್ರದಲ್ಲೇ BSNL 5G ಸೇವೆಗಳು ಶುರುವಾಗಲಿದೆ, 5G ಸೇವೆಯ ಪ್ರಯೋಗ ಮಾಡುವುದಕ್ಕೆ ತಯಾರಿ ನಡೆಸಲಾಗಿದ್ದು, ಇದರಿಂದ ಬೇರೆ ಟೆಲಿಕಾಂ ಕಂಪನಿಗಳಿಗೆ ನಡುಕ ಶುರುವಾಗಿದೆ ಎಂದರೆ ತಪ್ಪಲ್ಲ..
ಬಾಡಿಗೆ ಮನೆ ಅಗ್ರಿಮೆಂಟ್ 11 ತಿಂಗಳಿಗೆ ಮಾಡೋದ್ಯಾಕೆ? ಸುಮ್ನೆ ಅಂತೂ ಇಲ್ಲ, ಅದಕ್ಕೂ ಇದೆ ಕಾರಣ!
ಇನ್ನು BSNL ಜೊತೆಗೆ ಈಗ ತೇಜಸ್ ನೆಟ್‌ವರ್ಕ್, ಟಾಟಾ ಕನ್ಸಲ್ಟೆನ್ಸಿ, ಕೋರಲ್ ಟೆಲಿಕಾಂ, ಎಚ್‌ಎಫ್‌ಸಿಎಲ್, ವಿಎನ್‌ಎಲ್ ಮತ್ತು ಯುನೈಟೆಡ್ ಟೆಲಿಕಾಂ ಇಷ್ಟು ಕಂಪನಿಗಳು ಸೇರಿಕೊಂಡಿದ್ದು, ಇವರೆಲ್ಲರ ಸಹಭಾಗಿತ್ವದಲ್ಲಿ 5G ಸೇವೆಗಳ ಟೆಸ್ಟಿಂಗ್ ಶುರುವಾಗಲಿದೆ. ಇನ್ನು 3 ತಿಂಗಳುಗಳ ಒಳಗೆ BSNL ಹೈಸ್ಪೀಡ್ 5G ಸೇವೆಗಳು ಶುರುವಾಗುತ್ತದೆ ಎಂದು ಮಾಹಿತಿ ಸಿಕ್ಕಿದ್ದು, ಇನ್ನೆಲ್ಲಾ ಪ್ರೈವೇಟ್ ನೆಟ್ವರ್ಕ್ ಗಳಿಗೆ ಟೆನ್ಷನ್ ಶುರುವಾಗಿದೆ. BSNL ಮೂಲಕ ಗ್ರಾಹಕರು ಶೀಘ್ರದಲ್ಲೇ ಹೈ ಸ್ಪೀಡ್ 5G ಸೇವೆ ಪಡೆಯಲಿದ್ದಾರೆ..
ಸರ್ಕಾರದ ನೆಟ್ವರ್ಕ್ ಆಗಿರುವ BSNL ತಮ್ಮ ಕಂಪನಿಯ 5G ಸೇವೆಗಳಿಗೆ 7000 MHz Band ಬಳಕೆ ಮಾಡಲಾಗುತ್ತದೆ ಎಂದು ಮಾಹಿತಿ ಸಿಕ್ಕಿದೆ. ಇನ್ನು BSNL 5G ಸೇವೆ ಶೀಘ್ರದಲ್ಲೇ ಶುರುವಾಗುವುದರಿಂದ, ಕೆಲವು ಸ್ಥಳಗಳಲ್ಲಿ ಮೊದಲ ಹಂತದಲ್ಲಿ 5G ಸೇವೆಗಳ ಪ್ರಯೋಗ ಶುರುವಾಗುತ್ತದೆ ಎಂದು ಮಾಹಿತಿ ಸಿಕ್ಕಿದೆ. ಮೊದಲ ಹಂತದಲ್ಲಿ ಈ ಸೇವೆಗಳು ಎಲ್ಲೆಲ್ಲಿ ಲಭ್ಯವಿದೆ ಎಂದು ನೋಡುವುದಾದರೆ, ದೆಹಲಿಯ JNU ಕ್ಯಾಂಪಸ್, IIT ದೆಹಲಿ, ದೆಹಲಿ ಸಂಚಾರ ಭವನ, IIT ಹೈದರಾಬಾದ್, ಬೆಂಗಳೂರಿನ ಸರ್ಕಾರಿ ಕಚೇರಿ..
ಈ ಬ್ಯುಸಿನೆಸ್ ಮಾಡಿದ್ರೆ ನಿಮಗೆ ತಿಂಗಳಿಗೆ 30 ಸಾವಿರ ಲಾಭ ಫಿಕ್ಸ್! ಇದು ಹೊಸ ಬ್ಯುಸಿನೆಸ್ ಐಡಿಯಾ
ದೆಹಲಿಯ ಭಾರತ್ ಆವಾಸ್ ಕೇಂದ್ರ ಹಾಗೂ ಗುರುಗ್ರಾಮ್ ಗೆ ಸೇರಿದ ಇನ್ನು ಕೆಲವು ಸ್ಥಳಗಳಲ್ಲಿ 5G ಸೇವೆ ಲಭ್ಯವಿರುತ್ತದೆ ಎಂದು ಮಾಹಿತಿ ಸಿಕ್ಕಿದೆ. ಒಟ್ಟಿನಲ್ಲಿ ಇದು ಎಲ್ಲಾ BSNL ಗ್ರಾಹಕರಿಗೆ ಸಂತೋಷದ ಸುದ್ದಿ ಆಗಿದ್ದು, ಅವರುಗಳ ಹೊಸ ಆಯ್ಕೆ ಸರಿಯಾಗಿಯೇ ಇದೆ. ಇನ್ನು ಬೇರೆ ನೆಟ್ವರ್ಕ್ ಗಳಿಗೆ ಕಾಂಪಿಟೇಶನ್ ಹೆಚ್ಚಾಗುವುದು ಗ್ಯಾರೆಂಟಿ ಆಗಿದೆ. ಬೃಹತ್ ಆಗಿ ಬರುವುದಕ್ಕೆ ಸಜ್ಜಾಗಿದೆ BSNL.
BSNL entry beating Vodafone, Airtel, Jio