ದೊಡ್ಡ ದೊಡ್ಡ ನಗರಗಳಲ್ಲಿ ಹಾಗೂ ಸಣ್ಣ ಊರುಗಳಲ್ಲಿ ಹೀಗೆ ಎಲ್ಲಾ ಕಡೆ ಬಾಡಿಗೆ ಮನೆಯಲ್ಲಿ (Rent House) ವಾಸ ಮಾಡುವ ಸಾಕಷ್ಟು ಜನರು ಇರುತ್ತಾರೆ. ಓದುವುದಕ್ಕೆ, ಕೆಲಸಕ್ಕಾಗಿ ಬೇರೆ ಊರುಗಳಿಗೆ ಬರುವವರು ಬಾಡಿಗೆ ಮನೆಗಳಲ್ಲಿ ಇರುವುದು ಉಂಟು. ಹೀಗೆ ಬಾಡಿಗೆಗೆ ಮನೆ ಪಡೆದಾಗ ಓನರ್ ಮತ್ತು ಟೆನೆಂಟ್ ನಡುವೆ ಅಗ್ರಿಮೆಂಟ್ ಮಾಡಿಕೊಳ್ಳಲಾಗುತ್ತದೆ. ಸಾಮಾನ್ಯವಾಗಿ 11 ತಿಂಗಳಿಗೆ ಅಗ್ರಿಮೆಂಟ್ ಮಾಡಿಕೊಳ್ಳೋದು ಯಾಕೆ ಗೊತ್ತಾ? ಇದರ ಹಿಂದಿದೆ ಮುಖ್ಯವಾದ ವಿಷಯ..
ಹೌದು, ನೀವು ಎಲ್ಲೇ ಮನೆ ಬಾಡಿಗೆಗೆ ಪಡೆಯುವುದನ್ನು ನೋಡಿದರೂ ಮನೆಯ ಮಾಲೀಕರು ಮತ್ತು ಬಾಡಿಗೆದಾರರ ನಡುವೆ ಆಗ್ತಿಮೆಂಟ್ (Rent Agreement) ಕಡ್ಡಾಯವಾಗಿ ಮಾಡಲಾಗುತ್ತದೆ. ಇದರಲ್ಲಿ ಇಬ್ಬರ ಬಗೆಗಿನ ಮಾಹಿತಿ, ಮನೆಯ ಬಾಡಿಗೆ ಎಷ್ಟು, ಎಷ್ಟು ತಿಂಗಳ ಅವಧಿಗೆ ಮನೆಯಲ್ಲಿ ಇರುತ್ತಾರೆ..
ಇಂಥದ್ದೆಲ್ಲಾ ಮಾಹಿತಿಗಳು ಒಪ್ಪಂದದಲ್ಲಿ ಇರುತ್ತದೆ. ಅಗ್ರಿಮೆಂಟ್ ಮಾಡಿಸುವಾಗ ಸಾಮಾನ್ಯವಾಗಿ 11 ತಿಂಗಳಿಗೆ ಎಲ್ಲರೂ ಮಾಡಿಸೋದು, ಅದಕ್ಕಿಂತ ಹೆಚ್ಚಿಗೆ ಅಥವಾ ಕಡಿಮೆ ಸಮಯಕ್ಕೆ ಮಾಡಿಸುವುದಿಲ್ಲ.
ಈ ಬ್ಯುಸಿನೆಸ್ ಮಾಡಿದ್ರೆ ನಿಮಗೆ ತಿಂಗಳಿಗೆ 30 ಸಾವಿರ ಲಾಭ ಫಿಕ್ಸ್! ಇದು ಹೊಸ ಬ್ಯುಸಿನೆಸ್ ಐಡಿಯಾ
ಇದನ್ನು ನೀವು ಕೂಡ ಗಮನಿಸಿರುತ್ತೀರಿ, ಮನೆಯ ಅಗ್ರಿಮೆಂಟ್ ಗಳನ್ನು 11 ತಿಂಗಳಿಗೆ ಮಾಡಿಸುತ್ತಾರೆ. ಈ ರೀತಿ ಮಾಡುವುದಕ್ಕೆ ಒಂದು ಪ್ರಮುಖ ಕಾರಣ ಇದೆ, ಇದು 1908ರ ಸೆಕ್ಷನ್ 17ರ ಒಳಗೆ ಬರುತ್ತದೆ.
ಈ ಒಂದು ಆಕ್ಟ್ ನ ಪ್ರಕಾರ ಯಾವುದೇ ಮನೆ ಅಥವಾ ಜಮೀನನ್ನು ಬಾಡಿಗೆಗೆ ಕೊಡುವಾಗ ಒಂದು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಸಮಯಕ್ಕೆ ಕೊಟ್ಟರೆ, ಅದಕ್ಕಾಗಿ ರಿಜಿಸ್ಟರ್ ಮಾಡಿಸಬೇಕಾಗುತ್ತದೆ.
ಇದಕ್ಕಾಗಿ ರಿಜಿಸ್ಟ್ರೇಷನ್ ಫೀಸ್ ಕಟ್ಟಬೇಕು, ಇನ್ನಿತರ ಶುಲ್ಕಗಳನ್ನು ಕೂಡ ಪಾವತಿ ಮಾಡಬೇಕು. ಈ ಶುಲ್ಕಗಳು ಮನೆಯ ಓನರ್ ಮತ್ತು ಟೆನೆಂಟ್ ಇಬ್ಬರ ಮೇಲು ಬೀಳುತ್ತದೆ, ಹಾಗೆಯೇ ನೋಂದಣಿ ಕಚೇರಿಗೆ ಹೋಗಿಯೇ ಇದೆಲ್ಲವನ್ನು ಮಾಡಿಸಬೇಕಾಗುತ್ತದೆ..
ಒಂದು ವರ್ಷದ ಒಳಗಿನ ಅವಧಿಗೆ ಅಂದರೆ 11 ತಿಂಗಳ ಅವಧಿಗೆ ಅಗ್ರಿಮೆಂಟ್ ಮಾಡಿಸಿಕೊಂಡರೆ, ರಿಜಿಸ್ಟರ್ ಮಾಡಿಸುವ ಕೆಲಸ ಅಥವಾ ಅದಕ್ಕಾಗಿ ಶುಲ್ಕ ಭರಿಸುವ ಅವಶ್ಯಕತೆ ಎರಡು ಕೂಡ ಇರುವುದಿಲ್ಲ.
ಈ ಸಬ್ಸಿಡಿ ಯೋಜನೆಯಲ್ಲಿ ಸಿಗುತ್ತೆ 10 ಲಕ್ಷ ಲೋನ್! ನಮ್ಮಲ್ಲಿ ಬಹಳಷ್ಟು ಜನಕ್ಕೆ ಈ ಬಗ್ಗೆ ಗೊತ್ತಿಲ್ಲ
ಈ ಪ್ರಮುಖ ಕಾರಣಕ್ಕಾಗಿ ಸಾಮಾನ್ಯವಾಗಿ ಬಾಡಿಗೆ ಮನೆಯ ಅಗ್ರಿಮೆಂಟ್ ಗಳನ್ನು 11 ತಿಂಗಳಿಗೆ ಮಾಡಲಾಗುತ್ತದೆ. ಇದರಿಂದ ಓನರ್ ಗಾಗಲಿ ಬಾಡಿಗೆ ಇರುವವರಿಗಾಗಲಿ ಬೀಳುವ ಖರ್ಚು ಕಡಿಮೆ ಆಗುತ್ತದೆ. ಮುಂದೆ ನೀವು ಬಾಡಿಗೆ ಮನೆಗೆ ಹೋಗುವಾಗ ಈ ವಿಷಯಗಳನ್ನು ಮರೆಯಬೇಡಿ. ಅಗ್ರಿಮೆಂಟ್ ಮಾಡಿಸುವಾಗ ಕೂಡ, ಅದರಲ್ಲಿ ಬರೆಯುವ ಮಾಹಿತಿಗಳ ಬಗ್ಗೆ ಕೂಡ ಗಮನ ಹರಿಸಿ. ತಪ್ಪು ಮಾಹಿತಿ ಕೊಡಬೇಡಿ.
Why do the rental house agreement for 11 months
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.