Loan Scheme : ಸ್ವಂತ ಉದ್ಯಮ ಶುರು ಮಾಡಬೇಕು, ಕನಸುಗಳನ್ನು ನನಸು ಮಾಡಿಕೊಳ್ಳಬೇಕು, ಇನ್ನಷ್ಟು ಜನರಿಗೆ ಕೆಲಸ ಕೊಟ್ಟು ಸಹಾಯ ಮಾಡಬೇಕು ಎಂದುಕೊಂಡಿರುವವರಿಗೆ ಇದೀಗ ಸರ್ಕಾರದ ಕಡೆಯಿಂದ ಒಂದು ಗುಡ್ ನ್ಯೂಸ್ ಸಿಕಿದೆ.
ಇದೀಗ ಸರ್ಕಾರವು ಪಿಎಮ್ ಮುದ್ರಾ ಯೋಜನೆಯನ್ನು (Mudra Loan Scheme) ಜಾರಿಗೆ ತಂದಿದ್ದು, ಈ ಒಂದು ಯೋಜನೆಯ ಮೂಲಕ ಸ್ವಂತ ಉದ್ಯಮ ಶುರು ಮಾಡಲು ಬಯಸುವವರಿಗೆ ಸರ್ಕಾರದಿಂದ ಸಬ್ಸಿಡಿಯಲ್ಲಿ ಸಾಲ ಸಿಗುತ್ತದೆ. 10 ಲಕ್ಷದವರೆಗೂ ಸಾಲ ಪಡೆಯಬಹುದು. ಈ ಯೋಜನೆಯ ಬಗ್ಗೆ ಇಂದು ನಿಮಗೆ ಮಾಹಿತಿ ನೀಡಲಿದ್ದೇವೆ..
ಬ್ಯಾಂಕ್ ಲಾಕರ್ ನಲ್ಲಿ ಹಣ ಮತ್ತು ಚಿನ್ನ ಇಡೋರಿಗೆ ಹೊಸ ನಿಯಮ, RBI ನಿಂದ ಹೊಸ ರೂಲ್ಸ್
ಪಿಎಮ್ ಮುದ್ರಾ ಯೋಜನೆ:
ಸಣ್ಣ ಉದ್ಯಮ ಶುರು ಮಾಡಲು ಆಸಕ್ತಿ ಹೊಂದಿರುವವರಿಗಾಗಿ ಪಿಎಮ್ ಮುದ್ರಾ ಯೋಜನೆಯನ್ನು ಜಾರಿಗೆ ತರಲಾಗಿದೆ. ಈ ಯೋಜನೆಯ ಸಾಲವನ್ನು ಸರ್ಕಾರದ ಬ್ಯಾಂಕ್ ಗಳು ಮಾತ್ರವಲ್ಲ, ಪ್ರೈವೇಟ್ ಬ್ಯಾಂಕ್ ಗಳು, ಫೈನಾನ್ಸ್ ಕಂಪನಿಗಳಲ್ಲಿ ಕೂಡ ಪಡೆಯಬಹುದು. ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗೆ ನೇರವಾಗಿ ಹೋಗಿ ಅರ್ಜಿ ಸಲ್ಲಿಸಬಹುದು ಅಥವಾ ಉದಯಮಿತ್ರ ಪೋರ್ಟಲ್ ಮೂಲಕ ಆನ್ಲೈನ್ ಅರ್ಜಿ ಸಲ್ಲಿಸಬಹುದು. ಇಲ್ಲಿ ನಿಮಗೆ 3 ವಿವಿಧ ರೀತಿಯಲ್ಲಿ ಲೋನ್ ಸಿಗುತ್ತದೆ..
*ಶಿಶು ವಿಭಾಗದಲ್ಲಿ ₹50 ಸಾವಿರ ವರೆಗು ಲೋನ್ ಸಿಗುತ್ತದೆ.
*ಕಿಶೋರ್ ವಿಭಾಗದಲ್ಲಿ ₹50 ಸಾವಿರ ಇಂದ 5 ಲಕ್ಷದವರೆಗು Loan ಸಿಗುತ್ತದೆ.
*ತರುಣ್ ವಿಭಾಗದಲ್ಲಿ 5 ಲಕ್ಷದಿಂದ 10 ಲಕ್ಷದವರೆಗು ಲೋನ್ ಸಿಗುತ್ತದೆ.
ಪಿಎಮ್ ಮುದ್ರಾ ಯೋಜನೆಯು ರೋಜ್ಗರ್ ಯೋಜನೆ ಹಾಗೂ ಗ್ರಾಮೀಣ ಅಭಿವೃದ್ಧಿ ಯೋಜನೆಯ ಒಟ್ಟು ರೂಪ ಎನ್ನಬಹುದು. ಇದೊಂದು ಸ್ವಯಂ ಉದ್ಯೋಗ, ಸ್ವಉದ್ಯಮ ಪ್ರೋತ್ಸಾಹಿಸಲು ಜಾರಿಗೆ ಬಂದಿರುವ ಯೋಜನೆ ಆಗಿದ್ದು, ಕೈಗಾರಿಕಾ ಕೇಂದ್ರಗಳು, ರಾಜ್ಯ ಖಾದಿ ಹಾಗೂ ಗ್ರಾಮೋದಯ ಮಂಡಳಿಗಳು, ಹಾಗೂ ಎಲ್ಲಾ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ನೀವು ಪಿಎಮ್ ಮುದ್ರಾ ಯೋಜನೆಯ ಸೌಲಭ್ಯಕ್ಕಾಗಿ ಸಬ್ಸಿಡಿ ಸಾಲ (Subsidy Loan) ಪಡೆಯಬಹುದು. ಈ ಸಾಲ ಪಡೆಯುವ ವ್ಯಕ್ತಿಗೆ ಕೆಲವು ಅರ್ಹತೆಗಳು ಇರಬೇಕು, ಅವುಗಳು ಏನೇನು ಎಂದು ನೋಡುವುದಾದರೆ..
ದುಡ್ಡು ಸುಮ್ಮನೆ ಬರಲ್ಲ, ಚಿನ್ನ ಖರೀದಿ ಮಾಡೋಕು ಮುನ್ನ ವಿಚಾರಗಳು ಗೊತ್ತಿರಲಿ! ಇಲ್ಲಿದೆ ಡೀಟೇಲ್ಸ್
ಅರ್ಜಿ ಹಾಕುವ ವ್ಯಕ್ತಿ 10ನೇ ತರಗತಿ ಆದರೂ ಪಾಸ್ ಆಗಿರಬೇಕು. 8ನೇ ತರಗತಿ ಆದರೂ ಪಾಸ್ ಆಗಿರುವುದು ಕಟ್ಟುನಿಟ್ಟಿನ ನಿಯಮ ಆಗಿದೆ. ಮೊದಲೇ ಸರ್ಕಾರದ ಬೇರೆ ಯೋಜನೆಗಳ ಮೂಲಕ ಆರ್ಥಿಕ ಸಹಾಯ ಪಡೆದಿರಬಾರದು. ಅಂಥವರಿಗೆ ಸಾಲ ಸಿಗುವುದಿಲ್ಲ.
ಈ ಯೋಜನೆಯ ಮೂಲಕ ಘಟಕ ನಿರ್ಮಾಣ ಖರ್ಚಿಗೆ 25 ಲಕ್ಷದವರೆಗೂ ಸಾಲ, ಬ್ಯುಸಿನೆಸ್ ಗಾಗಿ 10 ಲಕ್ಷದವರೆಗೂ ಸಾಲ ಸೌಲಭ್ಯ ಸಿಗುತ್ತದೆ. ಈ ಒಂದು ವ್ಯವಸ್ಥೆಯನ್ನು ಮೈಕ್ರೋ ಹಾಗೂ ಸಣ್ಣ ಉದ್ಯಮಕ್ಕೆ Funds ನೀಡುವ ಸಲುವಾಗಿ SIDB ಸಂಸ್ಥೆ ಶುರು ಮಾಡಿದೆ ಎನ್ನುವುದು ನಿಜ..
ಈ ಎಲ್ಲಾ ಪ್ಲಾನ್ಸ್ ನಡೆಯಲೇಬೇಕು ಎಂದು, CGTMSE ಕೂಡ ಶುರು ಮಾಡಲಾಗಿದೆ. ಇದರಿಂದ ನೀವು ಯಾವುದೇ ಗ್ಯಾರೆಂಟಿ ನೀಡದೇ 5 ಲಕ್ಷದವರೆಗೂ ಸಾಲ ಪಡೆಯಬಹುದು. 5 ಲಕ್ಷದವರೆಗೂ ನೀವು ಪಡೆಯುವ ಸಾಲಕ್ಕೆ 50% ಇಂದ 85% ವರೆಗು ಗ್ಯಾರೆಂಟಿ ಕವರ್ ನೀಡಲಾಗುತ್ತದೆ.
ಸಣ್ಣ ವ್ಯಾಪಾರ ಕ್ರೆಡಿಟ್ ಆಗಿ, 10 ಲಕ್ಷ ಇಂದ 1 ಕೋಟಿ ವರೆಗು ಸಿಗುತ್ತದೆ. ನಿಮಗೆ ಸಿಗುವ ಸಾಲದ ಮೊತ್ತದ 50% ವರೆಗು ಗ್ಯಾರೆಂಟಿ ಕವರ್ ಕೊಡಲಾಗುತ್ತದೆ. ಕೆಲವು ಪರಿಸ್ಥಿತಿಗಳಲ್ಲಿ 2 ಕೋಟಿ ವರೆಗು ನಿಮಗೆ ಸಾಲ ಸೌಲಭ್ಯ ಸಿಗುತ್ತದೆ. ಈ ವಿಷಯವನ್ನು ನೆನಪಿನಲ್ಲಿ ಇಡಿ.
10 lakh loan is available in this subsidy scheme
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.