ದುಡ್ಡು ಸುಮ್ಮನೆ ಬರಲ್ಲ, ಚಿನ್ನ ಖರೀದಿ ಮಾಡೋಕು ಮುನ್ನ ವಿಚಾರಗಳು ಗೊತ್ತಿರಲಿ! ಇಲ್ಲಿದೆ ಡೀಟೇಲ್ಸ್
ಚಿನ್ನ ಖರೀದಿ ಮಾಡುವುದಕ್ಕಿಂತ ಮೊದಲು ನೀವು ಕೆಲವು ವಿಷಯಗಳನ್ನು ಗಮನಿಸಬೇಕು, ಇಲ್ಲದಿದ್ದರೆ ಮೋಸ ಹೋಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಇಂದು ನಾವು ತಿಳಿಸುವ ವಿಷಯಗಳನ್ನು ಪರಿಶೀಲಿಸಿ
ಬಂಗಾರದ ಆಭರಣಗಳನ್ನು ಕಂಡರೆ ಯಾರಿಗೆ ತಾನೇ ಇಷ್ಟ ಇರುವುದಿಲ್ಲ. ಎಲ್ಲರೂ ಸಹ ಚಿನ್ನ ಖರೀದಿಸಲು (Buy Gold) ಇಷ್ಟಪಡುತ್ತಾರೆ. ಹಬ್ಬ, ಮದುವೆ, ಸಮಾರಂಭ ಇಂಥ ಸಮಯದಲ್ಲಿ ಚಿನ್ನ ಖರೀದಿ ಮಾಡುವುದುಂಟು. ಚಿನ್ನವನ್ನು ಅಲಂಕಾರದ ದುಬಾರಿ ವಸ್ತುವಾಗಿ, ಬಳಕೆ ಮಾಡುವುದು ಮಾತ್ರವಲ್ಲ, ಹೂಡಿಕೆ ರೂಪದಲ್ಲಿ ಖರೀದಿ ಮಾಡುವ ಜನರ ಸಂಖ್ಯೆ ಕೂಡ ದೊಡ್ಡದಾಗಿದೆ ಎಂದು ಹೇಳಬಹುದು. ಮಧ್ಯಮವರ್ಗದ ಜನರಲ್ಲಿ ಈ ಒಂದು ಅಭ್ಯಾಸ ಜಾಸ್ತಿ ಇರುತ್ತದೆ.
ಹೌದು, ಶ್ರೀಮಂತ ಕುಟುಂಬಗಳು ಚಿನ್ನದ ಆಭರಣಗಳನ್ನು (Gold Jewellery) ವಿಶೇಷ ಸಂದರ್ಭಗಳಲ್ಲಿ ಧರಿಸಿ, ಸೌಂದರ್ಯದ ಮೆರುಗನ್ನು ಹೆಚ್ಚಿಸಿಕೊಳ್ಳುವುದಕ್ಕಾಗಿ ಬಳಸುತ್ತಾರೆ. ಆದರೆ ಬಡವರ್ಗದ ಹಾಗೂ ಮಧ್ಯಮ ವರ್ಗದ ಕುಟುಂಬದವರು ಆ ರೀತಿ ಇರುವುದಿಲ್ಲ.
ಐದೇ ನಿಮಿಷದಲ್ಲಿ ಥಟ್ ಅಂತ ಸಿಗುತ್ತೆ 5 ಲಕ್ಷ ರೂಪಾಯಿ ತನಕ ಲೋನ್; ಜಾಸ್ತಿ ಡಾಕ್ಯುಮೆಂಟ್ಸ್ ಬೇಕಿಲ್ಲ
ಅವರಿಗೆ ಚಿನ್ನದ ಆಭರಣ ಅಮೂಲ್ಯವಾದದ್ದು, ಧರಿಸುವುದಕ್ಕೆ ಖರೀದಿ ಮಾಡುವ ವಸ್ತು ಎನ್ನುವುದರ ಜೊತೆಗೆ, ಕಷ್ಟಕಾಲಕ್ಕೆ ಸಹಾಯಕ್ಕೆ ಬರುತ್ತದೆ ಎನ್ನುವ ಮನಸ್ಥಿತಿ ಕೂಡ ಇರುತ್ತದೆ. ಆ ಕಾರಣಕ್ಕೆ ಚಿನ್ನ ಖರೀದಿ ಮಾಡುತ್ತಾರೆ.
ಇಂದು ಚಿನ್ನ ಖರೀದಿ ಮಾಡಿದರೆ, ಮುಂದೆ ಅದರ ಬೆಲೆ ಕೂಡ ಜಾಸ್ತಿ ಆಗುತ್ತದೆ, ಪ್ರಸ್ತುತ ಚಿನ್ನದ ಬೆಲೆ ದಿನೇ ದಿನೇ ಏರಿಕೆ ಆಗುತ್ತಲೇ ಇದೆ. ಹಾಗಾಗಿ ಹೂಡಿಕೆಯ ರೂಪದಲ್ಲಿ ಕೂಡ ಖರೀದಿ ಮಾಡುತ್ತೇವೆ.
ಆದರೆ ಚಿನ್ನ ಖರೀದಿ (Gold Purchase) ಮಾಡುವುದಕ್ಕಿಂತ ಮೊದಲು ನೀವು ಕೆಲವು ವಿಷಯಗಳನ್ನು ಗಮನಿಸಬೇಕು, ಇಲ್ಲದಿದ್ದರೆ ಮೋಸ ಹೋಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಇಂದು ನಾವು ತಿಳಿಸುವ ವಿಷಯಗಳನ್ನು ಪರಿಶೀಲಿಸಿ, ನೀವು ಸಂಪಾದಿಸುವ ದುಡ್ಡು ಬಿಟ್ಟಿಯಾಗಿ ಬರುವುದಿಲ್ಲ..
ಬರೀ 2 ಲಕ್ಷದಲ್ಲಿ ಬ್ಯುಸಿನೆಸ್ ಆರಂಭಿಸಿದರೆ ಸಾಕು 15 ಲಕ್ಷ ಲಾಭ! ಇನ್ಯಾಕೆ ತಡ ಈಗಲೇ ಈ ಆರಂಭಿಸಿ
ಚಿನ್ನ ಖರೀದಿ ವೇಳೆ ಗಮನಿಸಬೇಕಾದ ವಿಷಯಗಳು:
*ಯಾವಾಗಲೇ ಚಿನ್ನ ಖರೀದಿ ಮಾಡಿದರೂ ಸಹ, ಬಿಲ್ ಪಡೆಯುವುದನ್ನು ಮರೆಯಬೇಡಿ. ಮುಂದೊಂದು ದಿನ ಯಾವುದೇ ವಿಷಯಕ್ಕೆ ಬಿಲ್ ಖಂಡಿತವಾಗಿ ಬೇಕಾಗುತ್ತದೆ. ಬಿಲ್ ಇಲ್ಲದಿದ್ದರೆ ಸಮಸ್ಯೆ ಉಂಟಾಗಬಹುದು. ಹಾಗಾಗಿ ಬಿಲ್ ಅನ್ನು ಕೇಳಿ ಪಡೆದುಕೊಳ್ಳಿ.
*ಹೊರಗೆ ಯಾವುದೋ ಗೊತ್ತಿಲ್ಲದ ಅಂಗಡಿ ಇಂದ ಚಿನ್ನ ಖರೀದಿ ಮಾಡುವುದು ಬೇಡ, ನಿಮಗೆ ಗೊತ್ತಿರುವ ನಂಬಿಕೆಗೆ ಅರ್ಹವಾಗಿರುವ ಅಂಗಡಿ ಇಂದ ಮಾತ್ರ ಚಿನ್ನ ಖರೀದಿ ಮಾಡಿ. ಇದರಿಂದ ಸಮಸ್ಯೆಗಳು ತಪ್ಪುತ್ತದೆ.
*ಸರ್ಕಾರ ಹಾಲ್ ಮಾರ್ಕ್ ಇರುವ ಚಿನ್ನ ಮಾತ್ರ ಅಧಿಕೃತ ಎಂದು ರೂಲ್ಸ್ ತಂದಿದೆ. ಹಾಗಾಗಿ ಚಿನ್ನ ಖರೀದಿ ಮಾಡುವುದಕ್ಕಿಂತ ಮೊದಲು ಹಾಲ್ ಮಾರ್ಕ್ ಸಿಂಬಲ್ ಇದೆಯಾ ಎಂದು ಚೆಕ್ ಮಾಡಿ. ಹಾಲ್ ಮಾರ್ಕ್ ಸಿಂಬಲ್ ಇರುವ ಚಿನ್ನವನ್ನು ಮಾತ್ರ ಖರೀದಿ ಮಾಡಿ. ಇದರಿಂದ ಮುಂದೆ ಯಾವುದೇ ಸಮಸ್ಯೆ ಆಗುವುದಿಲ್ಲ.
*ಆನ್ಲೈನ್ ಮೂಲಕ ಚಿನ್ನದ ಆಭರಣ ಆರ್ಡರ್ ಮಾಡುತ್ತಿದ್ದೀರಿ ಎಂದರೆ, ವೆಬ್ಸೈಟ್ ನಲ್ಲಿ ಆ ಪ್ರಾಡಕ್ಟ್ ರಿವ್ಯೂ ಹಾಗೂ ಲೆಜಿಟ್ ಮಾಹಿತಿಯನ್ನು ಸರಿಯಾಗಿ ಚೆಕ್ ಮಾಡಿ. ಈಗ ಆನ್ಲೈನ್ ಮೊಸಗಳು ಹೆಚ್ಚಾಗಿ ನಡೆಯುತ್ತದೆ. ಹಾಗಾಗಿ ಈ ಅಂಶಗಳನ್ನು ಸರಿಯಾಗಿ ತಿಳಿದುಕೊಳ್ಳುವುದು ಒಳ್ಳೆಯದು. ಎಲ್ಲವೂ ಸರಿ ಇದ್ದರೆ ಮಾತ್ರ, ಆನ್ಲೈನ್ ಮೂಲಕ ಚಿನ್ನ ಖರೀದಿ ಮಾಡಿ.
Things to consider while buying gold