ಐದೇ ನಿಮಿಷದಲ್ಲಿ ಥಟ್ ಅಂತ ಸಿಗುತ್ತೆ 5 ಲಕ್ಷ ರೂಪಾಯಿ ತನಕ ಲೋನ್; ಜಾಸ್ತಿ ಡಾಕ್ಯುಮೆಂಟ್ಸ್ ಬೇಕಿಲ್ಲ

ಫೋನ್ ಪೇ ಆಪ್ ಬಳಸಿ ನೀವು ಪರ್ಸನಲ್ ಲೋನ್ ಕೂಡ ಪಡೆಯಬಹುದು, ಫೋನ್ ಪೇ ಹಲವು ಬ್ಯಾಂಕ್ ಗಳಿಗೆ ಹಲವು ಫೈನಾನ್ಸ್ ಕಂಪನಿಗಳಿಗೆ ಮಧ್ಯವರ್ತಿಯಾಗಿ ಕಾರ್ಯ ನಿರ್ವಹಿಸುತ್ತದೆ.

Bengaluru, Karnataka, India
Edited By: Satish Raj Goravigere

ಹಣಕಾಸಿನ ಸಮಸ್ಯೆಗಳು, ದಿಢೀರ್ ಖರ್ಚುಗಳು ಎದುರಾದಾಗ ಇನ್ನೊಬ್ಬರ ಬಳಿ ಹಣ ಕೇಳುವಂಥ ಪರಿಸ್ಥಿತಿ ಬಂದುಬಿಡುತ್ತದೆ. ಆದರೆ ಇನ್ನುಮುಂದೆ ಈ ಥರ ಪರಿಸ್ಥಿತಿ ಬಂದಾಗ ನೀವು ಯಾರನ್ನು ಕೇಳುವ ಅಗತ್ಯವಿಲ್ಲ. ಸುಲಭವಾಗಿ ನೀವು ಇರುವ ಜಾಗದಿಂದಲೇ ಪರ್ಸನಲ್ ಲೋನ್ (Personal Loan) ಪಡೆಯಬಹುದು. ಇದಕ್ಕಾಗಿ ನಿಮ್ಮ ಬಳಿ ಸ್ಮಾರ್ಟ್ ಫೋನ್ ಇದ್ದರೆ ಸಾಕು, ಹಾಗಿದ್ದಲ್ಲಿ ಈ ಲೋನ್ ಪಡೆಯುವುದು ಹೇಗೆ ಎಂದು ನೋಡೋಣ..

ನಿಮಗೆ ಪರ್ಸನಲ್ ಲೋನ್ (Personal Loan) ಸಿಗುವುದು ಫೋನ್ ಪೇ ಆಪ್ (PhonePe App) ಮೂಲಕ. ಹೌದು, ಈ ಆಪ್ ಅನ್ನು ನಾವು ಆನ್ಲೈನ್ ಹಣಕಾಸಿನ ವಹಿವಾಟು ನಡೆಸುವುದಕ್ಕಾಗಿ ಬಳಸುತ್ತೇವೆ. ಇದೊಂದು ಕಾರಣಕ್ಕೆ ಮಾತ್ರವಲ್ಲದೇ, ಫೋನ್ ಪೇ ಆಪ್ ಬಳಸಿ ನೀವು ಪರ್ಸನಲ್ ಲೋನ್ ಕೂಡ ಪಡೆಯಬಹುದು.

Get Loan up to 5 lakh rupees in five minutes, No more documents required

ಫೋನ್ ಪೇ ಹಲವು ಬ್ಯಾಂಕ್ ಗಳಿಗೆ ಹಲವು ಫೈನಾನ್ಸ್ ಕಂಪನಿಗಳಿಗೆ ಮಧ್ಯವರ್ತಿಯಾಗಿ ಕಾರ್ಯ ನಿರ್ವಹಿಸುತ್ತದೆ. ಹಾಗಾಗಿ ನಿಮಗೆ ಈ ಹಣಕಾಸು ವಹಿವಾಟು ಆಪ್ ಇಂದ Loan ಸಿಗುತ್ತದೆ.

ಬರೀ 2 ಲಕ್ಷದಲ್ಲಿ ಬ್ಯುಸಿನೆಸ್ ಆರಂಭಿಸಿದರೆ ಸಾಕು 15 ಲಕ್ಷ ಲಾಭ! ಇನ್ಯಾಕೆ ತಡ ಈಗಲೇ ಈ ಆರಂಭಿಸಿ

ಫೋನ್ ಪೇ ಇಂದ ಸಾಲ ಪಡೆಯುವ ವಿಧಾನ:

ಫೋನ್ ಪೇ ಆಪ್ ನಲ್ಲಿ ನೀವು ಹಲವು ಸ್ಪಾಂಸರ್ಡ್ ಲಿಂಕ್ ಗಳು, ಕಂಪನಿಗಳ ಹೆಸರುಗಳನ್ನು ನೋಡಬಹುದು. ಅವುಗಳ ಮೂಲಕ ಪರ್ಸನಲ್ ಲೋನ್ ಪಡೆಯಬಹುದು. ಈ ಥರದ ಕಂಪನಿಗಳ ಪೈಕಿ, ಪೂನಾವಾಲಾ ಪರ್ಸನಲ್ ಲೋನ್ ಎನ್ನುವ ಆಪ್ಶನ್ ಸೆಲೆಕ್ಟ್ ಮಾಡಿ, ಒಳ್ಳೆಯ ವೇತನ ಬರುವ ವ್ಯಕ್ತಿಗಳಿಗೆ ಈ ಕಂಪನಿಯ ಮೂಲಕ 5 ಲಕ್ಷದವರೆಗೂ ಪರ್ಸನಲ್ ಲೋನ್ ಸೌಲಭ್ಯ ಸಿಗುತ್ತದೆ. ಈ ರೀತಿಯಾಗಿ ಲೋನ್ ಪಡೆಯುವುದಕ್ಕೆ ನಿಮ್ಮ ವಾರ್ಷಿಕ ಆದಾಯ 3 ಲಕ್ಷಕ್ಕಿಂತ ಜಾಸ್ತಿ ಇರಬೇಕು.

PhonePe Loanಈ ಸಾಲ ಪಡೆಯುವುದಕ್ಕೆ ನೀವು ಹೆಚ್ಚುವರಿಯಾಗಿ ಯಾವುದೇ ಮೊತ್ತವನ್ನು ಪಾವತಿ ಮಾಡುವ ಅವಶ್ಯಕತೆ ಇರುವದುಲ್ಲಾ. ಇಲ್ಲಿ 1 ಲಕ್ಷ ಸಾಲಕ್ಕೆ 15% ಬಡ್ಡಿ ವಿಧಿಸಲಾಗುತ್ತದೆ. ಸಾಲ ಮರುಪಾವತಿಗೆ 3 ವರ್ಷಗಳ ಸಮಯ ಇದ್ದು, ತಿಂಗಳಿಗೆ ₹3,467 ರೂಪಾಯಿಗಳ ಇಎಂಐ ಪಾವತಿ ಮಾಡಬೇಕು.

ಅರ್ಜಿ ಸಲ್ಲಿಕೆ ಕೂಡ ಬಹಳ ಸುಲಭ ಆಗಿದ್ದು, ನಿಮ್ಮ ಆಧಾರ್ ಕಾರ್ಡ್ ನಂಬರ್ ಹಾಕಿ, ಓಟಿಪಿ ಪಡೆದು ಲೋನ್ ಗೆ ಅಪ್ಲೈ ಮಾಡಬಹುದು. ಹಾಗೆಯೇ ಈ ಲೋನ್ ಪಡೆಯಲು ಪ್ಯಾನ್ ಕಾರ್ಡ್ ಡೀಟೇಲ್ಸ್ ಮತ್ತು ನಿಮ್ಮ ಉದ್ಯೋಗಕ್ಕೆ ಸಂಬಂಧಿಸಿದ ಡೀಟೇಲ್ಸ್ ಕೊಡಬೇಕು.

ಇನ್ಮೇಲೆ ಕ್ಯಾಶ್ ಪಡೆಯೋಕೆ ಎಟಿಎಂಗೆ ಹೋಗೋದೇ ಬೇಡ! ಮನೆಗೆ ಬರಲಿದೆ ಎಟಿಎಂ, ಹೊಸ ಸೇವೆ

ಹಾಗೆಯೇ ಪ್ರತಿ ತಿಂಗಳು ನಿಮ್ಮ ಅಕೌಂಟ್ ಇಂದ ಇಎಂಐ ಹಣ ಡೆಬಿಟ್ ಆಗುವುದಕ್ಕೆ ಪರ್ಮಿಶನ್ ಕೊಡಬೇಕು. ಈ ಲೋನ್ ಪಡೆಯುವುದಕ್ಕೆ ನಿಮ್ಮ ಸಿಬಿಲ್ ಸ್ಕೋರ್ ಪ್ರಮುಖ ಪಾತ್ರ ವಹಿಸುತ್ತದೆ. ಸಿಬಿಲ್ ಸ್ಕೋರ್ ಎಷ್ಟಿದೆ ಎನ್ನುವುದರ ಮೇಲೆ ನಿಮಗೆ ಎಷ್ಟು ಲೋನ್ ಸಿಗುತ್ತದೆ, ಅದರ ಮೇಲೆ ಎಷ್ಟು ಬಡ್ಡಿ ವಿಧಿಸಲಾಗುತ್ತದೆ ಎನ್ನುವುದು ನಿರ್ಧಾರ ಆಗುತ್ತದೆ. ಈ ಎಲ್ಲಾ ಅಂಶಗಳನ್ನು ಗಮನದಲ್ಲಿ ಇಟ್ಟುಕೊಂಡು, ಫೋನ್ ಪೇ ಆಪ್ ಇಂದ ಸಾಲ ಪಡೆಯಲು ಅಪ್ಲೈ ಮಾಡಿ..

Get Loan up to 5 lakh rupees in five minutes, No more documents required