ಈಗ ನಮ್ಮ ಭಾರತ ದೇಶ ಡಿಜಿಟಲ್ ಇಂಡಿಯಾ ಆಗಿರುವ ಕಾರಣ, ಬಹುತೇಕ ಎಲ್ಲರ ಬಳಿ ಬ್ಯಾಂಕ್ ಅಕೌಂಟ್ (Bank Account) ಇದ್ದೇ ಇರುತ್ತದೆ. ಕೆಲವರು ಹಣಕಾಸಿನ ವ್ಯವಹಾರಕ್ಕಾಗಿ ಮಾತ್ರ ಬ್ಯಾಂಕ್ ಅಕೌಂಟ್ ಹೊಂದಿರುತ್ತಾರೆ. ಆದರೆ ಬ್ಯಾಂಕ್ ನಲ್ಲಿ ಹಲವು ಸೇವೆಗಳು, ಸೌಲಭ್ಯಗಳು ಲಭ್ಯವಿದೆ, ಅವುಗಳ ಪೈಕಿ ಲಾಕರ್ ಸೌಲಭ್ಯ ಕೂಡ ಒಂದು.
ಇದನ್ನು ಹೆಚ್ಚಿನ ಜನರು ಬಳಕೆ ಮಾಡುತ್ತಾರೆ. ಹೆಚ್ಚಿನ ಕ್ಯಾಶ್, ಚಿನ್ನ, ಆಸ್ತಿಪತ್ರ ಇವುಗಳನ್ನು ಸಾಮಾನ್ಯವಾಗಿ ಬ್ಯಾಂಕ್ ಲಾಕರ್ ನಲ್ಲಿ ಇಡಲಾಗುತ್ತದೆ.
ಹೌದು, ಮನೆಯಲ್ಲಿ ಇಂಥ ಬೆಲೆ ಬಾಳುವ ವಸ್ತುಗಳನ್ನು ಇಟ್ಟುಕೊಳ್ಳುವುದು ಸೇಫ್ ಅಲ್ಲ, ಹಾಗಾಗಿ ಬ್ಯಾಂಕ್ ಲಾಕರ್ ನಲ್ಲಿ ಇಡುವುದು ಒಳ್ಳೆಯದು. ಪ್ರೈವೇಟ್ ಬ್ಯಾಂಕ್ ಗಳಲ್ಲಿ ಮತ್ತು ಸರ್ಕಾರೀ ಬ್ಯಾಂಕ್ ಗಳಲ್ಲಿ ಎರಡು ಕಡೆ ಲಾಕರ್ ಸೌಲಭ್ಯ ಇರುತ್ತದೆ.
ಆದರೆ ಲಾಕರ್ ಪಡೆಯಲು ನೀವು ಬ್ಯಾಂಕ್ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಅದಕ್ಕಾಗಿ ಶುಲ್ಕ ಪಾವತಿ ಮಾಡುವುದು, ಸೇರಿದಂತೆ ಇನ್ನಿತರ ನಿಯಮಗಳು ಕೂಡ ಇರುತ್ತದೆ. ಅದನ್ನೆಲ್ಲ ತಿಳಿದುಕೊಂಡು, ನಂತರ ಲಾಕರ್ ಪಡೆಯುವುದು ಒಳ್ಳೆಯದು. ಲಾಕರ್ ವಿಚಾರಕ್ಕೆ ಸಂಬಂಧಿಸಿದಂತೆ ಇದೀಗ RBI ಕೆಲವು ಹೊಸ ರೂಲ್ಸ್ ಗಳನ್ನು ಜಾರಿಗೆ ತಂದಿದ್ದು, ಅದರ ಬಗ್ಗೆ ಇಂದು ತಿಳಿಸಿಕೊಡುತ್ತೇವೆ ನೋಡಿ.
ದುಡ್ಡು ಸುಮ್ಮನೆ ಬರಲ್ಲ, ಚಿನ್ನ ಖರೀದಿ ಮಾಡೋಕು ಮುನ್ನ ವಿಚಾರಗಳು ಗೊತ್ತಿರಲಿ! ಇಲ್ಲಿದೆ ಡೀಟೇಲ್ಸ್
ಲಾಕರ್ ಬಗ್ಗೆ RBI ಹೊಸ ರೂಲ್ಸ್!
*ಸೇಫ್ಟಿ ಡೆಪಾಸಿಟ್ ಲಾಕರ್ : ಈ ಸುರಕ್ಷಿತ ಠೇವಣಿ ಲಾಕರ್ ಗೆ ಸಂಬಂಧಿಸಿದ ಹಾಗೆ RBI ಹೊಸ ರೂಲ್ಸ್ ತಂದಿದೆ, ಇದರ ಅನುಸಾರ, ಬ್ಯಾಂಕ್ ನಲ್ಲಿ ಲಾಕರ್ ಸೌಲಭ್ಯ ಪಡೆದುಕೊಂಡಿರುವವರು, 2023ರ ಜನವರಿ 1ರ ಒಳಗೆ ಅಗ್ರಿಮೆಂಟ್ ಅನ್ನು ಅಪ್ಡೇಟ್ ಮಾಡಿಸಬೇಕಿತ್ತು.
*ಇದೀಗ ಜಾರಿಗೆ ಬಂದಿರುವ ಹೊಸ ನಿಯಮದ ಅನುಸಾರ ಬ್ಯಾಂಕ್ ಗಳಲ್ಲಿ ಎಷ್ಟು ಲಾಕರ್ ಗಳು ಖಾಲಿ ಇದೆ, ಹಾಗೂ ಕಾಯುತ್ತಿರುವ ಲಾಕರ್ ಗಳು ಎಷ್ಟಿದೆ ಎನ್ನುವುದರ ಲಿಸ್ಟ್ ಅನ್ನು ಕೊಡಬೇಕು. ಹಾಗೆಯೇ ಲಾಕರ್ ಪಡೆದರೆ, 3 ವರ್ಷಗಳಿಗೆ ನೀಡುವಷ್ಟು ಬಾಡಿಗೆ ಮೊತ್ತವನ್ನು ಒಂದೇ ಸಾರಿ ಪಡೆಯುವ ಹಕ್ಕು ಬ್ಯಾಂಕ್ ಗೆ ಇದೆ.
*RBI ಹೊಸ ನಿಯಮದ ಅನುಸಾರ, ಲಾಕರ್ ಅಗ್ರಿಮೆಂಟ್ ನಲ್ಲಿ ಯಾವುದೇ ಸಮಸ್ಯೆ ಅಥವಾ ಮೋಸ ಆಗುವುದಿಲ್ಲ ಎಂದು ಬ್ಯಾಂಕ್ ಗ್ರಾಹಕರಿಗೆ ಖಚಿತಪಡಿಸಬೇಕು. ಈ ರೀತಿ ಮಾಡುವುದರಿಂದ ಗ್ರಾಹಕರಿಗೆ ನಷ್ಟ ಉಂಟಾದರೆ, ಅದರಿಂದ ಬ್ಯಾಂಕ್ ನವರು ಸುಲಭವಾಗಿ ಹೊರಬರಬಹುದು.
ಐದೇ ನಿಮಿಷದಲ್ಲಿ ಥಟ್ ಅಂತ ಸಿಗುತ್ತೆ 5 ಲಕ್ಷ ರೂಪಾಯಿ ತನಕ ಲೋನ್; ಜಾಸ್ತಿ ಡಾಕ್ಯುಮೆಂಟ್ಸ್ ಬೇಕಿಲ್ಲ
*ನೀವು ಬ್ಯಾಂಕ್ ಲಾಕರ್ ಪಡೆದರೆ, ಅದರಲ್ಲಿ ಚಿನ್ನದ ಆಭರಣಗಳು, ಆಸ್ತಿ ದಾಖಲೆ ಈ ಥರದ ಸರ್ಕಾರದ ಮಾನ್ಯತೆ ಇರುವ ವಸ್ತುಗಳನ್ನು ಮಾತ್ರ ಲಾಕರ್ ನಲ್ಲಿ ಇಡಬೇಕು. ಲಾಕರ್ ಪಡೆಯುವ ವ್ಯಕ್ತಿ ಮಾತ್ರ ಅದನ್ನು ಓಪನ್ ಮಾಡಬಹುದು, ವಸ್ತುಗಳನ್ನು ಇಡಬಹುದು. ಅವರ ಕುಟುಂಬದ ಬೇರೆ ಸದಸ್ಯರು ಕೂಡ ಈ ಕೆಲಸವನ್ನು ಮಾಡಲು ಸಾಧ್ಯವಿಲ್ಲ.
*ಲಾಕರ್ ಗಳಲ್ಲಿ ಕೆಲವು ವಸ್ತುಗಳನ್ನು ಇಡುವ ಹಾಗಿಲ್ಲ, ಕ್ಯಾಶ್, ವೆಪೆನ್ ಗಳು, ಹೊರದೇಶದ ಕರೆನ್ಸಿ, ಔಷಧಿ, ಇನ್ಯಾವುದೇ ಥರದ ಅಪಾಯಕಾರಿ ವಸ್ತುಗಳನ್ನು ಬ್ಯಾಂಕ್ ಲಾಕರ್ ನಲ್ಲಿ ಇಡುವ ಹಾಗಿಲ್ಲ. ಲಾಕರ್ ನಲ್ಲಿ ಹಣ ಇಡಬಾರದು ಎನ್ನುವುದು ಬ್ಯಾಂಕ್ ನಿಯಮ ಆಗಿರುತ್ತದೆ. ಒಂದು ವೇಳೆ ಗ್ರಾಹಕರು ನಿಯಮಗಳನ್ನು ಮೀರಿದರೆ, ನಷ್ಟ ಅನುಭವಿಸುವ ಪರಿಸ್ಥಿತಿ ಎದುರಾಗುತ್ತದೆ.
*ಲಾಕರ್ ಪಡೆಯುವ ವ್ಯಕ್ತಿ, ಯಾರಾದರು ಒಬ್ಬರನ್ನು ನಾಮಿನಿ ಆಗಿ ಮಾಡಬಹುದು. ಲಾಕರ್ ಪಡೆದ ವ್ಯಕ್ತಿ ವಿಧಿವಶವಾದ ಬಳಿಕ ನಾಮಿನಿ ಆಗಿರುವವರು ಲಾಕರ್ ತೆರೆದು, ಒಳಗಿರುವ ವಸ್ತುಗಳನ್ನು ಪಡೆಯಬಹುದು. ಬ್ಯಾಂಕ್ ಕೂಡ ಪರಿಶೀಲಿಸಿ, ನಂತರ ನಾಮಿನಿಗೆ ಅಧಿಕಾರ ಕೊಡುತ್ತದೆ.
New rules for keeping money and gold in bank lockers, new rules from RBI
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.