Business Idea : ಈಗ ಜನರು ಅಣಬೆ ಅಂದರೆ ಮಶ್ರೂಮ್ (mushrooms ) ಇಂದ ತಯಾರಿಸಿದ ಆಹಾರ ಪದಾರ್ಥಗಳನ್ನು ಇಷ್ಟಪಟ್ಟು ತಿನ್ನುತ್ತಾರೆ. ಹಾಗಾಗಿ ಮಶ್ರೂಮ್ ಗಳಿಗೆ ಒಳ್ಳೆಯ ಬೇಡಿಕೆ ಇದೆ. ಒಂದು ವೇಳೆ ನೀವು ಮಶ್ರೂಮ್ ಕೃಷಿ ಶುರು (Grow Mushrooms) ಮಾಡಿದರೆ ಅದರಿಂದ ಒಳ್ಳೆಯ ಲಾಭ (Best Income) ಪಡೆಯಬಹುದು.
ಮಶ್ರೂಮ್ ಕೃಷಿಗೆ ಸರ್ಕಾರದಿಂದ ಕೂಡ ಸಹಾಯ ಧನ ಸಿಗುತ್ತದೆ. ಹಾಗೆಯೇ ಮಶ್ರೂಮ್ ಕೃಷಿಯಿಂದ ರೈತರು ಹೆಚ್ಚು ಆದಾಯ ಪಡೆಯಲು ಶುರು ಮಾಡಬಹುದು.
ಮಶ್ರೂಮ್ ಕೃಷಿ ಶುರು ಮಾಡುವುದಕ್ಕೆ ನಿಮ್ಮ ಹತ್ತಿರ ಸ್ವಲ್ಪ ಜಾಗ ಇದ್ದರೆ ಸಾಕು, ಹೆಚ್ಚು ಆದಾಯ ಪಡೆಯಲು ನಿಮಗೆ ಇದು ಒಳ್ಳೆಯ ಆಯ್ಕೆ. ಹರಿಯಾಣ, ರಾಜಸ್ತಾನ್, ಹಿಮಾಚಲ ಪ್ರದೇಶ, ಜಮ್ಮು ಕಾಶ್ಮೀರ್ ಈ ಎಲ್ಲಾ ಕಡೆಗಳಲ್ಲಿ ಮಶ್ರೂಮ್ ಕಲ್ಟಿವೇಶನ್ ಗೆ ಭಾರಿ ಬೇಡಿಕೆ ಇದೆ.
ನಿಮ್ಮ ಹಣ ಡಬಲ್ ಆಗುವ ಪೋಸ್ಟ್ ಆಫೀಸ್ ಯೋಜನೆ! ಹೆಚ್ಚು ದುಡ್ಡು ಸಿಗುವ ಈ ಸ್ಕೀಮ್ ಗೆ ಈಗಲೇ ಅಪ್ಲೈ ಮಾಡಿ
ನಮ್ಮ ರಾಜ್ಯದಲ್ಲಿ ಕೂಡ ಮಶ್ರೂಮ್ ಕೃಷಿ ಶುರು ಮಾಡಬಹುದು. ಮಶ್ರೂಮ್ ಅನ್ನು ಕೆಲವರು ವೆಜ್ ಎಂದರೆ ಇನ್ನು ಕೆಲವರು ನಾನ್ ವೆಜ್ ಎಂದು ಕರೆಯುತ್ತಾರೆ. ಆದರೆ ಇದನ್ನು ಪೂರ್ತಿಯಾಗಿ ವೆಜ್ ಎಂದು ಒಪ್ಪಿಕೊಳ್ಳಲು ಆಗುವುದಿಲ್ಲ. ಇದರಲ್ಲಿ ಹೆಚ್ಚು ಪೋಷಕಾಂಶ ಹೊಂದಿದೆ. ಪ್ರೊಟೀನ್ ಮತ್ತು ವಿಟಮಿನ್ ಡಿ ಇದೆ.
ಅಣಬೆ ಕೃಷಿ ಮಾಡುವುದು ಬೀಜಗಳ ಮೂಲಕ, ಒಂದು ಕೆಜಿ ಮಶ್ರೂಮ್ ಬೀಜಗಳಿಗೆ 75 ರೂಪಾಯಿ ತಗಲುತ್ತದೆ. ಈ ಕೃಷಿಯ ಖರ್ಚಿನ ಮೊತ್ತ ನೀವು ಯಾವ ರೀತಿಯ ಮಶ್ರೂಮ್ ಬೆಳೆಯುತ್ತೀರಿ ಎನ್ನುವುದರ ಮೇಲೆ ಅವಲಂಬಿಸಿದೆ.
ನೀವು ಮಶ್ರೂಮ್ ಬೆಳೆದ ನಂತರ ಅವುಗಳನ್ನು ಮಾರಾಟ ಮಾಡಲು ಸಾಕಷ್ಟು ಜಾಗಗಳಿವೆ. ಹೋಟೆಲ್ ಗಳಲ್ಲಿ, ಸೂಪರ್ ಮಾರ್ಕೆಟ್ ಗಳಲ್ಲಿ ಮಾರಾಟ ಮಾಡಬಹುದು. ಮೆಡಿಸಿನ್ ವಿಭಾಗದಲ್ಲಿ ಕೂಡ ಮಶ್ರೂಮ್ ಗಳನ್ನು ಬಳಸುತ್ತಾರೆ. ಮಶ್ರೂಮ್ ಬೆಳೆಯಲು ಸರ್ಕಾರ ಕೂಡ 1 ಲಕ್ಷದವರೆಗು ಸಹಾಯ ಮಾಡುತ್ತದೆ.
ಮಶ್ರೂಮ್ ಬೆಳೆಸಲು ನೀವು ಕೆಲವು ಟೆಕ್ನಿಕ್ ಗಳನ್ನು ಬಳಸಬೇಕಾಗುತ್ತದೆ. ಇದನ್ನು ನೀವು ನಿಮ್ಮದೇ ಆದ ಜಾಗದಲ್ಲಿ ಬೆಳೆಸಬೇಕು. ಮಶ್ರೂಮ್ ಬೆಳೆಯನ್ನು ನೀವು ಎರಡು ಥರದಲ್ಲಿ ಬೆಳೆಸಬಹುದು, ಒಂದು ರೀತಿಯಲ್ಲಿ ನೀವೇ ಕಂಪನಿ ಶುರು ಮಾಡಿ ಬೆಳಸಬಹುದು. ಎರಡನೆಯ ರೀತಿ, ನೀವು ರೈತರಾಗಿದ್ದು ಜಮೀನು ಹೊಂದಿದ್ದರೆ, ಅದರಲ್ಲಿಯೇ ಬೆಳೆಸಬಹುದು.. ಹೀಗೆ ನೀವು ಬೆಳೆಸಿದರೆ, ಅಣಬೆ ಕೃಷಿ ನಿಮಗೆ ಒಳ್ಳೆಯ ಬಿಸಿನೆಸ್ (Mushroom Business) ಆಗುತ್ತದೆ.
ಅಣಬೆ ಕೃಷಿ ಶುರು ಮಾಡುವುದಕ್ಕೆ ಬೇಕಾಗುವ ಹೂಡಿಕೆ, ನೀವು ಯಾವ ಮಟ್ಟದಲ್ಲಿ ಕೆಲಸ ಮಾಡುತ್ತೀರಾ ಎನ್ನುವುದರ ಮೇಲೆ ಡಿಪೆಂಡ್ ಆಗುತ್ತದೆ. ಅಣಬೆ ಕೃಷಿಗೆ ಜಾಗ ಬೇಕು, ಆ ಜಾಗಕ್ಕಾಗಿ ಜೊತೆಗೆ ಕೀಟನಾಶಕ ಸೇರಿದಂತೆ ಸೀಡ್ಸ್ ಗೆ ಹೂಡಿಕೆ ಮಾಡಬೇಕಾಗುತ್ತದೆ. ಇಲ್ಲಿ 10,000 ಅಥವಾ 50,000 ಅಥವಾ 1.10 ಲಕ್ಷದವರೆಗು ಹೂಡಿಕೆ ಹಣ ಬೇಕಾಗುತ್ತದೆ.
ಅಣಬೆ ಕೃಷಿಗೆ ಕೆಲವು ಮಾನದಂಡಗಳು ಸಹ ಇದೆ. ಮಶ್ರೂಮ್ ಅನ್ನು ಸಾಮಾನ್ಯವಾಗಿ ಚಳಿಗಾಲದಲ್ಲಿ ಬೆಳೆಯುತ್ತಾರೆ. ಇದರ ಕೃಷಿಗೆ ತಾಪಮಾನ ಬಹಳ ಕಡಿಮೆ ಇರಬೇಕು. ಅಣಬೆ ಕೃಷಿಗೆ ಗೋಧಿ ಮತ್ತು ಭತ್ತದ ಹುಲ್ಲಿನ ಅವಶ್ಯಕತೆ ಇರುತ್ತದೆ.
ಹಾಗೆಯೇ ತೊಂದರೆ ಆಗದೆ ಇರುವುದಕ್ಕೆ ಕೀಟನಾಶಕ ಬೇಕಾಗುತ್ತದೆ. ಅಣಬೆಗಳನ್ನು ಸಣ್ಣದಾಗಿ ಒಂದು ಕೋಣೆಯಲ್ಲಿ ಬೆಳೆಸಲು ಶುರು ಮಾಡಬಹುದು. ಅಣಬೆಯ ಬೆಳವಣಿಗೆಯನ್ನು ಉತ್ತೇಜಿಸಲು ಪೋಷಕಾಂಶ ಮತ್ತು ಇನ್ನಿತರ ವಸ್ತುಗಳನ್ನು ಖರೀದಿ ಮಾಡಬಹುದು.
ಸಿಹಿ ಸುದ್ದಿ! ಸರ್ಕಾರವೇ ಕೊಡುವ 2 ಲಕ್ಷದಿಂದ ಈ ಉದ್ಯಮ ಆರಂಭಿಸಿ, ತಿಂಗಳಿಗೆ 50 ಸಾವಿರ ಗಳಿಸಿ
ಅಣಬೆ ಕೃಷಿಯಲ್ಲಿ ಲಾಭ ಪಡೆಯುತ್ತರುವವರು ಸಾಕಷ್ಟು ಜನರಿದ್ದಾರೆ. 100 ಚದರ ಮೀಟರ್ ಜಾಗದಲ್ಲಿ ಅಣಬೆ ಕೃಷಿ ಶುರು ಮಾಡಿದರೆ, 1 ಲಕ್ಷದಿಂದ 5 ಲಕ್ಷದವರೆಗು ಹಣ ಗಳಿಸಬಹುದು. ನಿಮ್ಮ ಸಾಮರ್ಥ್ಯ ಮತ್ತು ಟೆಕ್ನಿಕ್ ಎರಡನ್ನು ಬಳಸಿ ಒಳ್ಳೆಯ ಲಾಭ ಪಡೆಯಬಹುದು.
Business Idea to Grow mushrooms and earn lakhs of income
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.