ಪ್ಯಾನ್ ಕಾರ್ಡ್ ಇಲ್ಲದೆ ಸಿಬಿಲ್ ಸ್ಕೋರ್ ಚೆಕ್ ಮಾಡಬಹುದಾ! ಇಲ್ಲಿದೆ ಮಾಹಿತಿ
- ಯಾವುದೇ ಸಮಯದಲ್ಲಿ ಸಿಬಿಲ್ ಸ್ಕೋರ್ ಚೆಕ್ ಮಾಡಬಹುದು
- ಪ್ಯಾನ್ ಕಾರ್ಡ್ ಇಲ್ಲದೆ ಸಿವಿಲ್ ಸ್ಕೋರ್ ಚೆಕ್ ಮಾಡುವುದು ಹೇಗೆ
- ಸಿಬಿಲ್ ವೆಬ್ಸೈಟ್ನಲ್ಲಿ ಉಚಿತವಾಗಿ ಕ್ರೆಡಿಟ್ ಸ್ಕೋರ್ ಚೆಕ್ ಮಾಡಿ
CIBIL Score : ಶೀಘ್ರ ಸಾಲ ಮಂಜೂರು ಆಗಬೇಕು ಅಂದ್ರೆ ನಿಮ್ಮ ಸಿಬಿಲ್ ಸ್ಕೋರ್ ಉತ್ತಮವಾಗಿರುವುದು ಬಹಳ ಮುಖ್ಯ. ಬ್ಯಾಂಕಿನ ಹಣಕಾಸು ವ್ಯವಹಾರಗಳಿಗೆ ಸಿಬಿಲ್ ಸ್ಕೋರ್ ಹೆಚ್ಚು ಅವಶ್ಯಕವಾಗಿದ್ದು, ಇದೀಗ ನೀವು ಸುಲಭವಾಗಿ ನಿಮ್ಮ ಸಿಬಿಲ್ ಸ್ಕೋರನ್ನು ಚೆಕ್ ಮಾಡಿಕೊಳ್ಳಬಹುದು.
ಸಿಬಿಲ್ ಸ್ಕೋರ್ ಚೆಕ್ ಮಾಡುವುದು ಹೇಗೆ?
ಬ್ಯಾಂಕ್ ನಲ್ಲಿ ಸಾಲ (Bank Loan) ಪಡೆದುಕೊಳ್ಳುವುದಕ್ಕೆ ಸಿಬಿಲ್ ಸ್ಕೋರ್ ಅಥವಾ ಕ್ರೆಡಿಟ್ ಸ್ಕೋರ್ (Credit Score) ಬಹಳ ಮುಖ್ಯವಾಗಿರುತ್ತದೆ. ಕ್ರೆಡಿಟ್ ಬ್ಯೂರೋ ಕ್ರೆಡಿಟ್ ಸ್ಕೋರ್ ಅನ್ನು ನಿರ್ಧರಿಸುತ್ತಿದ್ದು, 300 ರಿಂದ 900 ಪಾಯಿಂಟ್ ನಡುವೆ ಕ್ರೆಡಿಟ್ ಸ್ಕೋರ್ ನೀಡಲಾಗುತ್ತದೆ. ಇನ್ನು ಕ್ರೆಡಿಟ್ ಸ್ಕೋರ್ ಚೆಕ್ ಮಾಡಲು ನಿಮ್ಮ ಬ್ಯಾಂಕ್ ಖಾತೆಗೆ ಸಂಪರ್ಕ ಹೊಂದಿರುವ ಪ್ಯಾನ್ ಕಾರ್ಡ್ ಅಗತ್ಯವಿರುತ್ತದೆ.
ಚಿನ್ನದ ಬಣ್ಣ ನಿಮಗೆ ಗೊತ್ತಿದೆ, ಆದ್ರೆ ಬಿಳಿ ಬಂಗಾರದ ಬಗ್ಗೆ ನಿಮಗೆ ಗೊತ್ತಾ?
PAN card ಇಲ್ಲದೆ ಸಿಬಿಲ್ ಸ್ಕೋರ್ ಚೆಕ್ ಮಾಡುವುದು ಹೇಗೆ?
ನೀವು ಆನ್ಲೈನ್ ನಲ್ಲಿ ಸಿಬಿಲ್ ಸ್ಕೋರ್ ಚೆಕ್ ಮಾಡಲು ಪ್ಯಾನ್ ಕಾರ್ಡ್ ಅಗತ್ಯವಿರುತ್ತದೆ. ಪರ್ಯಾಯ ದಾಖಲೆಯನ್ನು ನೀಡಿ ಕ್ರೆಡಿಟ್ ಸ್ಕೋರ್ ಚೆಕ್ ಮಾಡಲು ಅವಕಾಶ ಕಲ್ಪಿಸಿಕೊಡಲಾಗಿದೆ. ಮೊದಲಿಗೆ ಅಧಿಕೃತ ಸಿಬಿಲ್ ವೆಬ್ಸೈಟ್ಗೆ ಹೋಗಿ ಪರ್ಸನಲ್ ಸಿಬಿಲ್ ಸ್ಕೋರ್ ಎನ್ನುವ ಆಯ್ಕೆಯನ್ನು ಕ್ಲಿಕ್ ಮಾಡಿ. ಬಳಿಕ ಗೇಟ್ ಯುವರ್ ಫ್ರೀ ಸಿಬಿಲ್ ಸ್ಕೋರ್ ಮೇಲೆ ಕ್ಲಿಕ್ ಮಾಡಿ.
ಸಿಬಿಲ್ ವೆಬ್ಸೈಟ್ನಲ್ಲಿ ನಿಮ್ಮ ಅಕೌಂಟ್ ಇಲ್ಲದೇ ಇದ್ದರೆ, ಪ್ಯಾನ್ ಕಾರ್ಡ್ ಬದಲು ಡ್ರೈವಿಂಗ್ ಲೈಸನ್ಸ್ ಪಾಸ್ಪೋರ್ಟ್ ನಂತರ ಗುರುತಿನ ದಾಖಲೆಗಳನ್ನು ಬಳಸಿ ಅಕೌಂಟ್ ಆರಂಭಿಸಬಹುದು.
ಈ ಸ್ಟೇಟ್ ಬ್ಯಾಂಕ್ FDಯಲ್ಲಿ 10 ಲಕ್ಷ ಆದಾಯ, ಮಾರ್ಚ್ 31ರವರೆಗೆ ಮಾತ್ರ ಅವಕಾಶ
ಎಲ್ಲಾ ದಾಖಲೆಗಳನ್ನು ನಮೂದಿಸಿ ಫಾರ್ಮ್ ಭರ್ತಿ ಮಾಡಿದ್ರೆ ನಿಮ್ಮ ಮೊಬೈಲ್ ಗೆ ಒಂದು ಒಟಿಪಿ ಬರುತ್ತದೆ ಅದನ್ನು ಸರಿಯಾಗಿ ನಮೂದಿಸಿ ಆಗ ನಿಮ್ಮ ಅಕೌಂಟ್ ಕ್ರಿಯೇಟ್ ಆಗುತ್ತದೆ. ಬಳಿಕ ಯಾವುದೇ ಸಮಯದಲ್ಲಿ ಸಿಬಿಲ್ ವೆಬ್ಸೈಟ್ ಗೆ ಹೋಗಿ ನಿಮ್ಮ ಸಿಬಿಲ್ ಸ್ಕೋರನ್ನು ಉಚಿತವಾಗಿ ಚೆಕ್ ಮಾಡಿಕೊಳ್ಳಬಹುದು.
Can You Check Your CIBIL Score Without a PAN Card, Here’s the Info