ಮೃತ ವ್ಯಕ್ತಿಯ ಎಟಿಎಂ ಕಾರ್ಡ್ ಬಳಸಿದರೆ ಭಾರೀ ದಂಡ, ಜೈಲು! ಹೊಸ ರೂಲ್ಸ್
ಮೃತ ವ್ಯಕ್ತಿಯ ಬ್ಯಾಂಕ್ ಖಾತೆಯಿಂದ ನೇರವಾಗಿ ಹಣ ತೆಗೆಯುವುದು ಕಾನೂನುಬಾಹಿರ. ನಾಮನಿರ್ದೇಶಿತರಿಗೂ ನಿರ್ದಿಷ್ಟ ದಾಖಲೆಗಳ ಅಗತ್ಯವಿದೆ. ಬೇರೆಯವರ ಎಟಿಎಂ ಬಳಕೆ ಅಪರಾಧವಾಗುವ ಸಾಧ್ಯತೆ ಇದೆ.

- ಎಟಿಎಂ ಪಿನ್ ಇದ್ದರೂ ಮೃತ ವ್ಯಕ್ತಿಯ ಖಾತೆಯಿಂದ ಹಣ ಹಿಂಪಡೆಯಬಾರದು
- ನಾಮಿನಿ ದಾಖಲೆಗಳೊಂದಿಗೆ ಬ್ಯಾಂಕ್‌ಗೆ ಮಾಹಿತಿ ನೀಡುವುದು ಅಗತ್ಯ
- ಕಾನೂನು ಪ್ರಕ್ರಿಯೆ ಉಲ್ಲಂಘಿಸಿದರೆ ಭಾರಿ ದಂಡ ಅಥವಾ ಜೈಲು
ಒಬ್ಬ ವ್ಯಕ್ತಿಯ (Bank account holder) ಅಕಾಲಿಕ ಮರಣವಾದ ಬಳಿಕ, ಅವರ ಎಟಿಎಂ (ATM Card) ಕಾರ್ಡ್ ಬಳಸಿ ಹಣ ತೆಗೆಯಬಹುದಾ ಎಂಬುದು ಹಲವರಲ್ಲೂ ಕಾಡುವ ದೊಡ್ಡ ಪ್ರಶ್ನೆಯಾಗಿದೆ.
ವಿಶೇಷವಾಗಿ ಕುಟುಂಬದ ಸದಸ್ಯರು ಈ ಕುರಿತು ಆಲೋಚನೆ ಮಾಡುವ ಸಂಭವ ಹೆಚ್ಚು. ಆದರೆ ಇಂತಹ ಸಮಯದಲ್ಲಿ ಈ ಬಗ್ಗೆ ಇರುವ ಕಾನೂನು ಮುಖ್ಯ.
ಮೃತ ವ್ಯಕ್ತಿಯ ಖಾತೆಯಿಂದ ನೇರವಾಗಿ ಎಟಿಎಂ ಮೂಲಕ ಹಣ ತೆಗೆಯುವುದು ಭಾರತೀಯ ಕಾನೂನಿನಂತೆ ಅಪರಾಧವಾಗುತ್ತದೆ. ನೀವು ಆತನ ಪತ್ನಿ, ಪುತ್ರ ಅಥವಾ ಸಂಬಂಧಿಯಾಗಿದ್ದರೂ ಕೂಡ, ಬಯೋಮೆಟ್ರಿಕ್ ಅಥವಾ ಪಿನ್ (PIN) ಬಳಸಿ ಹಣ ತೆಗೆದರೆ ಅದು ಕಾನೂನುಬಾಹಿರವೆನಿಸುತ್ತದೆ.
ಇದನ್ನೂ ಓದಿ: ಕಮ್ಮಿ ಬೆಲೆಗೆ, ಸ್ಪೋರ್ಟ್ ಲುಕ್ ಫೀಚರ್‌ಗಳೊಂದಿಗೆ ಹೊಸ ಸ್ಕೂಟರ್ ಬಿಡುಗಡೆ!
ಸಾವಿನ ಬಗ್ಗೆ ಸಂಬಂಧಿತ ಬ್ಯಾಂಕ್ ಶಾಖೆಗೆ ತಕ್ಷಣವೇ ಮಾಹಿತಿ ನೀಡಬೇಕು. ಬ್ಯಾಂಕ್ ಅಧಿಕೃತವಾಗಿ ಅಂತಹ ಖಾತೆಗಳನ್ನು ‘ಹೋಲ್ಡ್’ ಮಾಡುತ್ತದೆ. ನಂತರ ಮಾತ್ರ ನಾಮನಿರ್ದೇಶಿತರು (nominee) ಅಥವಾ ಕಾನೂನು ಉತ್ತರಾಧಿಕಾರಿಗಳು ಅರ್ಹರಾಗುತ್ತಾರೆ. ಇದಕ್ಕಾಗಿ ಅವರು ಸರಿಯಾದ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ.
ಅಂತಹ ದಾಖಲೆಗಳಲ್ಲಿ ಮೃತ ವ್ಯಕ್ತಿಯ ಮರಣ ಪ್ರಮಾಣಪತ್ರ (death certificate), ಪಾಸ್ ಬುಕ್, ಎಟಿಎಂ ಕಾರ್ಡ್, ಚೆಕ್ ಬುಕ್, nominee ಆಗಿದ್ದರೆ ಆಧಾರ್, ಪ್ಯಾನ್ ಕಾರ್ಡ್ ಅಗತ್ಯ.
ಇದನ್ನೂ ಓದಿ: ಎಸ್‌ಬಿಐ ಬ್ಯಾಂಕಿನಲ್ಲಿ ಸಾಲ ಮಾಡಿದ್ದೀರಾ? ಹಾಗಾದ್ರೆ ನಿಮಗೆ ಇಲ್ಲಿದೆ ಬಂಪರ್ ಸುದ್ದಿ
ಕೆಲವೊಮ್ಮೆ ಅಫಿಡೆವಿಟ್ (affidavit) ಕೂಡ ಬೇಕಾಗಬಹುದು. ಈ ಎಲ್ಲ ದಾಖಲೆಗಳನ್ನು ಬ್ಯಾಂಕ್ ಪರಿಶೀಲಿಸಿದ ನಂತರ ಮಾತ್ರ ಹಣ ಬಿಡುಗಡೆ ಮಾಡಲಾಗುತ್ತದೆ.
ನಾಮಿನಿ ಇದ್ದರೂ, ಕೆಲವೊಮ್ಮೆ ಆಸ್ತಿಯ ಉತ್ತರಾಧಿಕಾರ ಕಾನೂನು ನೋಟಿಸ್‌ಗಳು (legal notice) ಅಥವಾ ವಾರಸತ್ವ ದಾಖಲೆಗಳು ಬೇಕಾಗಬಹುದು. ಈ ಕಾರಣಕ್ಕಾಗಿ ನ್ಯಾಯಾಲಯದ ಅನುಮತಿಯನ್ನು ಪಡೆಯುವುದು ಉತ್ತಮ.
ಇದನ್ನೂ ಓದಿ: ರೈತರಿಗೆ 5 ಲಕ್ಷ ಕೃಷಿ ಸಾಲ, ಯಾವುದೇ ಅಡಮಾನ ಬೇಕಿಲ್ಲ! ಮೋದಿಜಿ ಸಿಹಿಸುದ್ದಿ
ಬಹುಮಂದಿ ತಮ್ಮ ಮನೆಯ ಹಿರಿಯರ ಎಟಿಎಂ ಪಿನ್ ತಿಳಿದುಕೊಂಡು ಸಾವಿನ ನಂತರ ಬಳಸುತ್ತಾರೆ. ಆದರೆ ಇದು ಬ್ಯಾಂಕಿಂಗ್ ಕಾನೂನುಗಳ ಪ್ರಕಾರ ಅಪರಾಧವಾಗಿದೆ. ಇಂತಹ ಸಂದರ್ಭಗಳಲ್ಲಿ ಬ್ಯಾಂಕ್ ಮಾಹಿತಿ ಪಡೆದುಕೊಂಡರೆ ಕಾನೂನು ಕ್ರಮ (legal action) ಕೈಗೊಳ್ಳುವ ಸಾಧ್ಯತೆ ಇದೆ.
ಭಾರೀ ದಂಡ (penalty) ಅಥವಾ ಕೆಲವೊಮ್ಮೆ ಮೂರು ವರ್ಷಗಳ ಜೈಲು ಶಿಕ್ಷೆ ಸಹ ವಿಧಿಸಬಹುದು. ಹೀಗಾಗಿ, ಅರ್ಥಿಕ ಸಮಸ್ಯೆಗಳ ಮಧ್ಯೆ ನೈತಿಕ ಮತ್ತು ಕಾನೂನು ಜವಾಬ್ದಾರಿಯನ್ನೂ ನೆನಪಿಡಿ.
Can You Withdraw Money from a Dead Person’s ATM, Know the Legal Rules




