Business News

ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಇಳಿಕೆ; ಸ್ಪಷ್ಟನೆ ನೀಡಿದ ಕೇಂದ್ರ ಸರ್ಕಾರ

Petrol Diesel Price : ತೈಲ ಮಾರಾಟ ಕಂಪನಿಗಳು ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯನ್ನು ಇದ್ದಕ್ಕಿದ್ದಂತೆ ಇಳಿಕೆ ಮಾಡಿವೆ ಎನ್ನುವ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು ಈ ಬಗ್ಗೆ ಈಗ ಕೇಂದ್ರ ಸರ್ಕಾರದಿಂದಲೇ ಸ್ಪಷ್ಟನೆ ಸಿಕ್ಕಿದೆ.

ಸದ್ಯ ನಮ್ಮ ದೇಶದಲ್ಲಿ ಹಣದುಬ್ಬರ (Inflation) ದ ಸಮಸ್ಯೆ ಮುಗಿಲು ಮುಟ್ಟಿದೆ, ಒಂದಲ್ಲ ಒಂದು ವಸ್ತುಗಳ ಬೆಲೆ (rate increased) ದಿನದಿಂದ ದಿನಕ್ಕೆ ಜಾಸ್ತಿ ಆಗುತ್ತಿದೆ. ಇದರಿಂದಾಗಿ ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಿದೆ.

Central Govt clarified on Reduction in petrol and diesel prices

ಹೆಂಡತಿಗೆ ಗಂಡನ ಪಿತ್ರಾರ್ಜಿತ ಆಸ್ತಿಯಲ್ಲಿ ಯಾವುದೇ ಪಾಲು ಇರೋದಿಲ್ಲ! ಇಲ್ಲಿದೆ ನಿಯಮ

ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ (petrol and diesel price) ಗಳೂ ದಿನದಿಂದ ದಿನಕ್ಕೆ ಹೆಚ್ಚುತ್ತಲೆ ಇದೆ ಈ ಹಿನ್ನೆಲೆಯಲ್ಲಿ, ಸಾಕಷ್ಟು ಜನ ಪೆಟ್ರೋಲ್ ಹಾಗೂ ಡೀಸೆಲ್ ಇಂಧನ ಚಾಲಿತ ವಾಹನದ ಬದಲು ಎಲೆಕ್ಟ್ರಿಕ್ ವಾಹನ (electric vehicle) ಖರೀದಿಗೆ ಮುಂದಾಗಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಕಡಿಮೆ ಆಗಬಹುದು ಎಂದು ಕಾದು ಕುಳಿತ ಜನರಿಗೆ ಈ ಸುದ್ದಿ ಕಿವಿಗೆ ಬಿದ್ದು, ಸಮಾಧಾನವಾಗಿದಂತೂ ಸುಳ್ಳಲ್ಲ. ಹೌದು, ಹಾಗೂ ಡೀಸೆಲ್ ಬೆಲೆಯನ್ನು ಸುಮಾರು ರೂ.10 ಗಳ ವರೆಗೆ ಇಳಿಕೆ ಮಾಡಲಾಗುವುದು ಎನ್ನುವ ಸುದ್ದಿ ಸಿಕ್ಕಾಪಟ್ಟೆ ವೈರಲ್ (viral news) ಆಗಿದೆ. ಈಗ ಈ ವೈರಲ್ ಸುದ್ದಿಗೆ ಕೇಂದ್ರ ಸರ್ಕಾರದಿಂದಲೇ ಸ್ಪಷ್ಟ ಉತ್ತರ ಸಿಕ್ಕಿದೆ.

ಉಚಿತ ಗ್ಯಾಸ್ ಸಿಲಿಂಡರ್ ಪಡೆಯಲು ಅರ್ಜಿ ಆಹ್ವಾನ; ಬೇಕಾಗುವ ದಾಖಲೆಗಳು ಇಂತಿವೆ

petrol diesel price
Image Source: The Hans India

ತೈಲ ಬೆಲೆ ಇಳಿಕೆ ಆಗುವುದು ನಿಜವೇ?

ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್‌ ಸಿಂಗ್‌ ಪುರಿ (central minister Hardeep Singh Puri), ಮಾಧ್ಯಮ ಮಿತ್ರರೊಂದಿಗೆ ಮಾತನಾಡಿದ್ದು ಸದ್ಯ ತೈಲ ಬೆಲೆ ಇಳಿಕೆಯಲ್ಲಿ ಯಾವುದೇ ನಿರ್ಣಯ ಕೈಗೊಂಡಿಲ್ಲ. ಜನರು ಇಂತಹ ವದಂತಿಗಳಿಗೆ ಕಿವಿ ಕೊಡಬಾರದು. ಪೆಟ್ರೋಲ್ ಅಥವಾ ಡೀಸೆಲ್ ಬೆಲೆಯಲ್ಲಿ ಯಾವುದೇ ರೀತಿಯ ವ್ಯತ್ಯಾಸ ಮಾಡಲಾಗಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಸೆಕೆಂಡ್ ಹ್ಯಾಂಡ್ ಕಾರು ಖರೀದಿಗೂ ಮುನ್ನ ಈ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಿ

ತೈಲ ಕಂಪನಿಗಳ ಜೊತೆಗೆ ಮಾತುಕತೆ!

ಲೋಕಸಭೆ ಚುನಾವಣೆ (Loksabha election) ಹತ್ತಿರ ಬರುತ್ತಿದೆ ಈ ಹಿನ್ನೆಲೆಯಲ್ಲಿ ರಾಜಕೀಯ (political) ವಿಚಾರಕ್ಕೆ ಸಂಬಂಧಪಟ್ಟ ಹಾಗೆ ಸಾಕಷ್ಟು ವದಂತಿಗಳು ಹಬ್ಬುತ್ತವೆ. ಇದೆ ರೀತಿ ಕಚ್ಚಾ ತೈಲಗಳ ಬೆಲೆ ಇಳಿಕೆ ಆಗುತ್ತಿದೆ ಎನ್ನುವ ಸುದ್ದಿ ಕೂಡ ಸಿಕ್ಕಾಪಟ್ಟೆ ವೈರಲ್ ಆಗಿತ್ತು.

ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್‌ ಸಿಂಗ್‌ ಪುರಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದು ಯಾವುದೇ ತೈಲ ಕಂಪನಿಗಳ (petroleum companies) ಜೊತೆಗೆ ಕೇಂದ್ರ ಸರ್ಕಾರ ಮಾತುಕತೆ ನಡೆಸಿಲ್ಲ ಸದ್ಯ ಕೇಂದ್ರ ಸರ್ಕಾರದ ಮುಂದೆ ತೈಲ ಬೆಲೆ ಇಳಿಕೆ ಪ್ರಸ್ತಾವನೆ ಆಗಿಲ್ಲ. ಹಾಗಾಗಿ ಸದ್ಯಕ್ಕೆ ಪೆಟ್ರೋಲ್ ಅಥವಾ ಡೀಸೆಲ್ ಬೆಲೆಯಲ್ಲಿ ಯಾವುದೇ ವ್ಯತ್ಯಾಸ ಇಲ್ಲ, ಇದ್ದರೆ ಅಧಿಕೃತವಾಗಿ ಕೇಂದ್ರ ಸರ್ಕಾರವೇ ಸುತ್ತೋಲೆ ಹೊರಡಿಸಲಿದೆ ಎಂದು ತಿಳಿಸಿದ್ದಾರೆ. ಇದೀಗ ತೈಲ ಬೆಲೆ ಇಳಿಕೆ ಎನ್ನುವ ಖುಷಿಯ ವದಂತಿಗೆ ಸಚಿವರು ಬ್ರೇಕ್ ಹಾಕಿದ್ದಾರೆ.

ಈ ಬ್ಯಾಂಕಿನಲ್ಲಿ ಪ್ರತ್ಯೇಕ ಎಫ್‌ಡಿ ಸ್ಕೀಮ್ ಲಾಂಚ್, ಠೇವಣಿಗೆ ಸಿಗಲಿದೆ ಆಕರ್ಷಕ ಬಡ್ಡಿ

Central Govt clarified on Reduction in petrol and diesel prices

Our Whatsapp Channel is Live Now 👇

Whatsapp Channel

Related Stories