ಆಸ್ತಿ ಖರೀದಿ ಮತ್ತು ಮಾರಾಟಕ್ಕೆ ಹೊಸ ನಿಯಮ ತಂದ ಸರ್ಕಾರ! ಹೊಸ ರೂಲ್ಸ್ ಜಾರಿ, ಮಹತ್ವದ ಬದಲಾವಣೆ
ಆಸ್ತಿ ಮಾರಾಟ ಮಾಡುವುದು ಮತ್ತು ಖರೀದಿ ಮಾಡುವುದು ಈ ಎರಡು ವಿಚಾರದಲ್ಲಿ ಕೂಡ ಸಾಕಷ್ಟು ಬದಲಾವಣೆಯನ್ನು ತರಲಾಗುತ್ತಿದೆ.
Property Price Hike : ನಮ್ಮ ದೇಶದ ಕುಟುಂಗಗಳಲ್ಲಿ ಆಸ್ತಿ ವಿಚಾರಕ್ಕೆ (property purchase) ಸಂಬಂಧಿಸಿದ ಹಾಗೆ ಸಾಕಷ್ಟು ಕಾನೂನುಗಳನ್ನು ಜಾರಿಗೆ ತರಲಾಗಿದೆ. ತಂದೆ ತಾಯಿಯ ಆಸ್ತಿ ವಿಚಾರದಲ್ಲಿ ಮಕ್ಕಳ ಹಕ್ಕು ಎಷ್ಟು, ತಂದೆ ತಾಯಿ ಆಸ್ತಿ ವಿಚಾರದಲ್ಲಿ ಮಕ್ಕಳು ಹೇಗೆ ಅರ್ಹತೆ ಪಡೆಯುತ್ತಾರೆ ಎನ್ನುವ ಬಗ್ಗೆ ನಮ್ಮ ಕಾನೂನಿನಲ್ಲಿ ಆಗಾಗ ತಿದ್ದುಪಡಿಗಳನ್ನು ತರಲಾಗುತ್ತದೆ.
ಹಾಗೆಯೇ ಆಸ್ತಿ ಮಾರಾಟ ಮಾಡುವುದು ಮತ್ತು ಖರೀದಿ ಮಾಡುವುದು ಈ ಎರಡು ವಿಚಾರದಲ್ಲಿ ಕೂಡ ಸಾಕಷ್ಟು ಬದಲಾವಣೆಯನ್ನು ತರಲಾಗುತ್ತಿದೆ.
ಅಧಿಕಾರವೇ ಇಲ್ಲದ ವ್ಯಕ್ತಿಗಳು ಕೂಡ ಆಸ್ತಿ ಮಾರಾಟ ಮಾಡುವಂಥ ಘಟನೆಗಳು ನಡೆಯುತ್ತಿದೆ, ಹಾಗಾಗಿ ಅಂಥ ತಪ್ಪುಗಳು ಆಗಬಾರದು ಎನ್ನುವ ಕಾರಣಕ್ಕೆ ನಿಯಮ ಬದಲಾವಣೆ ಮಾಡಲಾಗುತ್ತಿದೆ, ಹಾಗೆಯೇ ಆಸ್ತಿ ವಿಚಾರದಲ್ಲಿ ಅನೇಕ ತಿದ್ದುಪಡಿಗಳನ್ನು ತರಲಾಗುತ್ತಿದೆ.
ಸಣ್ಣ ಬಿಸಿನೆಸ್ ಮಾಡೋಕೆ ಸರ್ಕಾರವೇ ಕೊಡುತ್ತಿದೆ ₹50 ಸಾವಿರಕ್ಕೂ ಹೆಚ್ಚು ಸಾಲ! ಇಂದೇ ಅರ್ಜಿ ಹಾಕಿ
ಜನರು ಹಣ ಉಳಿಸಿದಾಗ ಹೂಡಿಕೆ ಮಾಡಲು (Savings), ಆಭರಣ ಖರೀದಿ (Buy Jewellery) ಮಾಡಲು ಅಥವಾ ಆಸ್ತಿ ಖರೀದಿ (Buy property) ಮಾಡಲು ಪ್ಲಾನ್ ಮಾಡುತ್ತಾರೆ. ಅದರಲ್ಲೂ ಆಸ್ತಿ ಖರೀದಿಗೆ ಹೆಚ್ಚು ಪ್ರಾಮುಖ್ಯತೆ ಕೊಡುವುದುಂಟು.
ಅದಕ್ಕೆ ಕಾರಣ, ಇಂದು ಹಣ ಇದ್ದಾಗ ಆಸ್ತಿ ಖರೀದಿ ಮಾಡಿದರೆ ಮುಂದೆ ಆಸ್ತಿಗೆ ಹೆಚ್ಚು ಬೇಡಿಕೆ ಉಂಟಾಗಿ ಹೆಚ್ಚಿನ ಬೆಲೆಗೆ ಮಾರಾಟ ಆಗುತ್ತದೆ, ಇದರಿಂದ ಹೆಚ್ಚು ಲಾಭ ಸಿಗುತ್ತದೆ ಎನ್ನುವ ಕಾರಣಕ್ಕೆ ಆಸ್ತಿ ಖರೀದಿ ಮಾಡಲು ಜನರು ಹೆಚ್ಚು ಆಸಕ್ತಿ ತೋರಿಸುತ್ತಾರೆ.
ಹೀಗೆ ನೀವು ಆಸ್ತಿ ಖರೀದಿ ಮಾಡಲು ಬಯಸಿದರೆ, ಆಸ್ತಿ ಖರೀದಿ ಕುರಿತು ಕಾನೂನಿನಲ್ಲಿ ಏನೆಲ್ಲಾ ನಿಯಮಗಳಿವೆ ಎನ್ನುವುದನ್ನು ತಿಳಿದುಕೊಂಡಿರಬೇಕು. ಹಾಗೆಯೇ ಕಾನೂನಿನಲ್ಲಿ ಆಸ್ತಿ ಮಾರಾಟ ಮಾಡುವವರ ಬಗ್ಗೆ ಇರುವ ನಿಯಮಗಳನ್ನು ಕೂಡ ತಿಳಿದುಕೊಂಡಿರಬೇಕು.
ಎಲ್‌ಐಸಿ ಬಂಪರ್ ಆದಾಯ ಯೋಜನೆ, ಪ್ರತಿ ತಿಂಗಳು 16 ಸಾವಿರ ಸಿಗುವ ಎಲ್‌ಐಸಿ ಸ್ಕೀಮ್ ಇದು
ಇಂಥ ಪ್ರಕರಣಗಳು ಆಗಾಗ ಬೆಳಕಿಗೆ ಬರುತ್ತಲೇ ಇರುತ್ತದೆ. ಈ ಥರ ಯಾರಿಗೂ ಮೋಸ ಆಗಬಾರದು ಎಂದು ಆಸ್ತಿ ಖರೀದಿ ವಿಷಯದಲ್ಲಿ ಸರ್ಕಾರ ಸಾಕಷ್ಟು ನಿಯಮಗಳನ್ನು ಜಾರಿಗೆ ತಂದಿದೆ.
ಸರ್ಕಾರವು ಆಸ್ತಿ ಖರೀದಿ ವಿಚಾರದಲ್ಲಿ ನಿಯಮಗಳನ್ನ (New Rules) ಜಾರಿಗೆ ತಂದಿದೆ. ಆಗಾಗ ತಿದ್ದುಪಡಿ ತರುತ್ತಲೇ ಇರುತ್ತದೆ. ಇದೀಗ ಆಸ್ತಿ ಖರೀದಿ ವಿಚಾರಕ್ಕೆ ಸಂಬಂಧಿಸಿದ ಹಾಗೆ ಮತ್ತೊಂದು ಹೊಸ ನಿಯಮವನ್ನು ಜಾರಿಗೆ ತಂದಿದೆ.
ಅದೇನು ಎಂದರೆ, ಇನ್ನುಮುಂದೆ ಆಸ್ತಿ ಖರೀದಿ ವಿಚಾರಕ್ಕೆ ಸಂಬಂಧಿಸಿದ ಹಾಗೆ ಮುದ್ರಣ ಶುಲ್ಕವನ್ನು ಜಾಸ್ತಿ ಮಾಡಲಾಗಿದೆ..ಈ ಬಗ್ಗೆ ಸರ್ಕಾರ ಚಿಂತನೆ ನಡೆಸಿದ್ದು, ಆಸ್ತಿ ಖರೀದಿ ಮಾಡುವ ಖರ್ಚು ಇನ್ಮೇಲೆ ಹೆಚ್ಚಾಗಲಿದೆ.
ವರಮಹಾಲಕ್ಷ್ಮಿ ಹಬ್ಬದ ಎಫೆಕ್ಟ್! ಚಿನ್ನದ ಬೆಲೆ ₹220 ಏರಿಕೆ, ಬೆಳ್ಳಿ ಬೆಲೆ ಬರೋಬ್ಬರಿ ₹1600ರಷ್ಟು ಏರಿಕೆ
ಈ ಬೆಲೆ ಹೆಚ್ಚಿನ ಶುಲ್ಕ ಈ ವರ್ಷ ಆಕ್ಟೊಬರ್ ಇಂದ ಜಾರಿಗೆ ಬರಲಿದ್ದು, ಸ್ಥಿರಾಸ್ತಿಗಳಿಗೆ ಮುದ್ರಣ ಶುಲ್ಕ ಜಾಸ್ತಿ ಆಗಲಿದೆ. ಈ ಶುಲ್ಕ ಹೆಚ್ಚಿಸುವುದು ಜನರ ಮೇಲಿನ ಹೊರೆಯನ್ನು ಕೂಡ ಜಾಸ್ತಿ ಮಾಡುತ್ತದೆ.
ಇನ್ನು 2023ರ ಕೊನೆಯ ಹಂತದಲ್ಲಿ ಆಸ್ತಿ ಖರೀದಿಯ ಬೆಲೆ 30 ಇಂದ 40% ಜಾಸ್ತಿ ಆಗುತ್ತದೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ ನೀವು ಆಸ್ತಿ ಖರೀದಿ ಮಾಡಬೇಕು ಎಂದುಕೊಂಡಿದ್ದರೆ ಈಗಲೇ ಆಸ್ತಿ ಖರೀದಿ ಮಾಡುವುದು ಒಳ್ಳೆಯದು, ಇಲ್ಲದೆ ಹೋದರೆ ಆಸ್ತಿ ಖರೀದಿ ಮೇಲೆ ಬೆಲೆ ಇನ್ನು ಜಾಸ್ತಿ ಆಗಬಹುದು.
change has been made in the property purchase rules
Follow us On
Google News |