ಸಣ್ಣ ಬಿಸಿನೆಸ್ ಮಾಡೋಕೆ ಸರ್ಕಾರವೇ ಕೊಡುತ್ತಿದೆ ₹50 ಸಾವಿರಕ್ಕೂ ಹೆಚ್ಚು ಸಾಲ! ಇಂದೇ ಅರ್ಜಿ ಹಾಕಿ

ಈ ಯೋಜನೆಯ ಹೆಸರು, ಶ್ರಮಶಕ್ತಿ ಸಾಲ ಯೋಜನೆಯ ಸಹಾಯಧನ. ಈ ಯೋಜನೆಯ ಅಡಿಯಲ್ಲಿ ಸುಮಾರು 50,000 ರೂಪಾಯಿಯವರೆಗು 4% ಬಡ್ಡಿದರದಲ್ಲಿ ಸಾಲ ನೀಡಲಾಗುತ್ತದೆ.

ನಮ್ಮಲ್ಲಿ ಸಾಕಷ್ಟು ಜನರಿಗೆ ಬ್ಯುಸಿನೆಸ್ ಮಾಡಬೇಕು ಎಂದು ಆಸೆ ಇದ್ದರು ಕೂಡ ಹೂಡಿಕೆಗೆ ಹಣ ಇಲ್ಲದೆ ಕಷ್ಟಪಡುತ್ತಾರೆ. ಅಂಥವರಿಗೆ ಸಣ್ಣ ಬಿಸಿನೆಸ್ (Start Small Business) ಶುರು ಮಾಡುವುದಕ್ಕಾಗಿ, KMDC ಶ್ರಮ ಶಕ್ತಿ ಲೋನ್ (Shrama Shakti Loan) ಸಿಗಲಿದ್ದು, ಇದಕ್ಕಾಗಿ ನೀವು ಆನ್ಲೈನ್ ಮೂಲಕ ಅಪ್ಲಿಕೇಶನ್ ಹಾಕಬಹುದು.

ಈ ಲೋನ್ ಬಗ್ಗೆ ಪೂರ್ತಿ ಮಾಹಿತಿ ತಿಳಿಸಿಕೊಡುತ್ತೇವೆ ನೋಡಿ.. ಈ ಲೋನ್ (Loan) ಅಲ್ಪಸಂಖ್ಯಾತರಾದ ಕುಶಲಕರ್ಮಿಗಳಿಗೆ ಸಹಾಯ ಆಗಲಿ ಎಂದು ತಂದಿರುವ ಸೌಲಭ್ಯ ಆಗಿದೆ. ಶ್ರಮಶಕ್ತಿ ಸಾಲ ಯೋಜನೆಯ ಮೂಲಕ ಈ ಹಣವನ್ನು ನೀಡಲಾಗುತ್ತಿದೆ.

ಈ ಯೋಜನೆಯ ಹೆಸರು, ಶ್ರಮಶಕ್ತಿ ಸಾಲ ಯೋಜನೆಯ ಸಹಾಯಧನ. ಈ ಯೋಜನೆಯ ಅಡಿಯಲ್ಲಿ ಸುಮಾರು 50,000 ರೂಪಾಯಿಯವರೆಗು 4% ಬಡ್ಡಿದರದಲ್ಲಿ ಸಾಲ (Business Loan) ನೀಡಲಾಗುತ್ತದೆ. 18ರಿಂದ 55 ವರ್ಷದ ಒಳಗೆ ಇರುವ ವ್ಯಕ್ತಿಗಳು ಈ ಸಾಲ ಪಡೆಯಲು ಅರ್ಹತೆ ಹೊಂದುತ್ತಾರೆ.

ಸಣ್ಣ ಬಿಸಿನೆಸ್ ಮಾಡೋಕೆ ಸರ್ಕಾರವೇ ಕೊಡುತ್ತಿದೆ ₹50 ಸಾವಿರಕ್ಕೂ ಹೆಚ್ಚು ಸಾಲ! ಇಂದೇ ಅರ್ಜಿ ಹಾಕಿ - Kannada News

ಎಲ್‌ಐಸಿ ಬಂಪರ್ ಆದಾಯ ಯೋಜನೆ, ಪ್ರತಿ ತಿಂಗಳು 16 ಸಾವಿರ ಸಿಗುವ ಎಲ್‌ಐಸಿ ಸ್ಕೀಮ್ ಇದು

ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ನಿಯಮಿತ ಕೆಂದ್ರದಿಂದ ಈ ಲೋನ್ (Business Loan) ಸಿಗುತ್ತದೆ. ಈ ಯೋಜನೆಯಲ್ಲಿ ಕುಶಲಕರ್ಮಿಗಳಿಗೆ ತಮ್ಮ ಪೂರ್ವಿಕರು ಮಾಡಿಕೊಂಡು ಬಂದಿರುವ ಕೆಲಸಗಳ ಬಗ್ಗೆ ಶಿಕ್ಷಣ ನೀಡಿ, ಕರಗತಗೊಳಿಸಿ ಅವುಗಳನ್ನು ಸಣ್ಣ ವ್ಯಾಪಾರದ ರೀತಿಯಲ್ಲಿ ಶುರು ಮಾಡಲು 4% ಬಡ್ಡಿದರದಲ್ಲಿ ಸಾಲ ನೀಡಲಾಗುತ್ತದೆ.

50 ಸಾವಿರ ರೂಪಾಯಿಯವರೆಗು ಸಾಲ ಸಿಗಲಿದ್ದು, ಒಂದು ವೇಳೆ ಸಾಲ ಪಡೆದವರು 36 ತಿಂಗಳುಗಳ ಒಳಗೆ ಅರ್ಧದಷ್ಟು ಸಾಲವನ್ನು ತೀರಿಸಿಬಿಟ್ಟರೆ, ಇನ್ನರ್ಧ ಹಣವನ್ನು ಬ್ಯಾಕ್ ಎಂಡ್ ಸಹಾಯಧನ ಎಂದು ಬ್ಯಾಂಕ್ ಕನ್ಸಿಡರ್ ಮಾಡುತ್ತದೆ. ಹಾಗೆಯೇ 36 ತಿಂಗಳ ಒಳಗೆ ಸಾಲದ ಹಣ ಕಟ್ಟಲು ಸಾಧ್ಯ ಆಗದೆ ಹೋದರು ಕೂಡ, 50% ಹಣವನ್ನು ಬ್ಯಾಕ್ ಎಂಡ್ ಸಹಾಯಧನ ಎಂದು ಪರಿಗಣಿಸುತ್ತಾರೆ. ಈ ಸಾಲಕ್ಕೆ ಅರ್ಜಿ ಸಲ್ಲಿಸಲು ಬೇಕಾಗುವ ಅರ್ಹತೆಗಳು ಹೀಗಿದೆ..

ಚಿನ್ನ ಖರೀದಿ ಮತ್ತು ಮಾರಾಟದ ನಿಯಮ ಬದಲಾವಣೆ ಮಾಡಿದ ಸರ್ಕಾರ! ರಾತ್ರೋ ರಾತ್ರಿ ಹೊಸ ರೂಲ್ಸ್ ಜಾರಿ

1. ಅರ್ಜಿ ಸಲ್ಲಿಸುವ ವ್ಯಕ್ತಿ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿರುವ ಧಾರ್ಮಿಕ ವ್ಯಕ್ತಿ ಆಗಿರಬೇಕು.
2. ಅರ್ಜಿ ಹಾಕುವವರು ನಮ್ಮ ರಾಜ್ಯದ ವಾಸಿಯೇ ಆಗಿರಬೇಕು.
3. ಅರ್ಜಿ ಹಾಕುವವರ ವಯಸ್ಸು 18 ರಿಂದ 55 ವರ್ಷಗಳ ಒಳಗೆ ಇರಬೇಕು.
4. ಈ ಇಡೀ ಕುಟುಂಬದ ವಾರ್ಷಿಕ ಆದಾಯ ₹3,50,00 ಕ್ಕಿಂತ ಕಡಿಮೆ ಇರಬೇಕು.
5. ಅರ್ಜಿ ಹಾಕುವವರ ಕುಟುಂಬದಲ್ಲಿ ಯಾರು ಕೂಡ ಸರ್ಕಾರಿ ಕೆಲಸ ಹೊಂದಿರಬಾರದು.
6. ಕಳೆದ 5 ವರ್ಷಗಳಲ್ಲಿ ಅರ್ಜಿ ಹಾಕುವವರು ಮತ್ತು ಅವರ ಕುಟುಂಬ ಸರ್ಕಾರದಿಂದ ಬೇರೆ ಯಾವುದೇ ಸಾಲ ತೆಗೆದುಕೊಂಡಿರಬಾರದು.

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು

Business Idea*ಆಧಾರ್ ಕಾರ್ಡ್
*ಯೋಜನೆಯ ವರದಿ
*ಸಕ್ಷಮ ಪ್ರಾಧಿಕಾರದಿಂದ ಪಡೆದಿರುವ ಕ್ಯಾಸ್ಟ್ ಸರ್ಟಿಫಿಕೇಟ್
*ಸಕ್ಷಮ ಪ್ರಾಧಿಕಾರದಿಂದ ಪಡೆದಿರುವ ಇನ್ಕಮ್ ಸರ್ಟಿಫಿಕೇಟ್
*ಬ್ಯಾಂಕ್ ಪಾಸ್ ಬುಕ್
*ಸ್ವಯಂ ಘೋಷಣೆ ಪತ್ರ
*2 ಪಾಸ್ ಪೋರ್ಟ್ ಸೈಜ್ ಫೋಟೋ

ವರಮಹಾಲಕ್ಷ್ಮಿ ಹಬ್ಬದ ಎಫೆಕ್ಟ್! ಚಿನ್ನದ ಬೆಲೆ ₹220 ಏರಿಕೆ, ಬೆಳ್ಳಿ ಬೆಲೆ ಬರೋಬ್ಬರಿ ₹1600ರಷ್ಟು ಏರಿಕೆ

ಈ ಲೋನ್ ಕೊಡುವವರ ಆಯ್ಕೆ ಸಮಿತಿ ಹೀಗಿದೆ.. ಆಯಾ ವಿಧಾನ ಸಭಾ ಕ್ಷೇತ್ರದ ಮಾನ್ಯ ಶಾಸಕರು ಅಧ್ಯಕ್ಷರು, ತಾಲ್ಲೂಕಿನಲ್ಲಿಯೇ ವಾಸಿಸುತ್ತಿರುವ ಮಾನ್ಯ ವಿಧಾನ ಪರಿಷತ್ತಿನ ಸದಸ್ಯರು ಸಹ ಅಧ್ಯಕ್ಷರು, ಆಯಾ ತಾಲ್ಲೂಕಿನ ತಹಶೀಲ್ದಾರರು ಹಾಗೂ 4ಸದಸ್ಯರು ತಾಲ್ಲೂಕಿನ ಕಾರ್ಯನಿರ್ವಾಹಣಾಧಿಕಾರಿಗಳು, 5 ಪಂಚಾಯತ್ ಸದಸ್ಯರು, ಜಿಲ್ಲೆಯ ಲೀಡ್ ಬ್ಯಾಂಕ್ ಮ್ಯಾನೇಜರ್, ಜಿಲ್ಲೆಯ ಜಂಟಿ ನಿರ್ದೇಶಕರು, ವಾಣಿಜ್ಯ ಮತ್ತು ಕೈಗಾರಿಕೆಯವರು ಸದಸ್ಯರಾಗುತ್ತಾರೆ.

ಜಿಲ್ಲಾ ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ-ಸದಸ್ಯರು, ಜಿಲ್ಲಾ ವ್ಯವಸ್ಥಾಪಕರು, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ- ಸದಸ್ಯ ಹಾಗೂ ಕಾರ್ಯದರ್ಶಿ ಆಗುತ್ತಾರೆ.

https://kmdconline.karnataka.gov.in/Portal/login ಈ ಲಿಂಕ್ ಮೂಲಕ ನೀವು ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು. ಲೋನ್ ಪಡೆಯಲು (Business Loan) ಅಧಿಕೃತ ವೆಬ್ಸೈಟ್ kmdc.karnataka.govt.in ಆಗಿದೆ. 2023ರ ಸೆಪ್ಟೆಂಬರ್ 25ರ ಒಳಗೆ ಅರ್ಜಿ ಸಲ್ಲಿಸಿ.

The government is giving loans of more than 50 thousand for small businesses

Follow us On

FaceBook Google News

The government is giving loans of more than 50 thousand for small businesses