ನಿಮ್ಮ ಆಧಾರ್‌ಗೆ ಲಿಂಕ್ ಆಗಿರೋ ಮೊಬೈಲ್ ನಂಬರ್ ಚೆಕ್ ಮಾಡೋ ವಿಧಾನ
ಆಧಾರ್(Aadhaar Card) ಈಗ ಕೇವಲ ಗುರುತಿನ ಚೀಟಿಯಲ್ಲ, ಅಗತ್ಯವಿರುವ ಎಲ್ಲಾ ಸರ್ಕಾರಿ ಸೇವೆಗಳಿಗೆ ಪ್ರಮುಖ ದಾಖಲೆ. ಆದರೆ ಲಿಂಕ್ ಆಗಿರುವ ಮೊಬೈಲ್ ನಂಬರ್ (Mobile Number) ಕಾರ್ಯನಿರ್ವಹಿಸದೇ ಇದ್ದರೆ, OTP ಸೇರಿದಂತೆ ಹಲವು ಸಮಸ್ಯೆಗಳು ಎದುರಾಗಬಹುದು!
- ಆಧಾರ್ ಕಾರ್ಡ್‌ಗೆ ಲಿಂಕ್ ಆಗಿರುವ ಮೊಬೈಲ್ ನಂಬರ್ ಚೆಕ್ ಮಾಡುವ ಸುಲಭ ವಿಧಾನ
- UIDAI ವೆಬ್‌ಸೈಟ್ ಮೂಲಕ ನಂಬರ್‌ನ ಅಂತಿಮ ಮೂರು ಅಂಕಿಗಳನ್ನು ತಿಳಿಯಬಹುದು
- ಆಧಾರ್‌ನ ಹಳೆಯ ನಂಬರ್ ಲಿಂಕ್ ಆಗಿದ್ದರೆ ನೀವು ಹೊಸ ನಂಬರ್ ಲಿಂಕ್ ಮಾಡಬಹುದು
ನಿಮ್ಮ ಆಧಾರ್ ಕಾರ್ಡ್‌ಗೆ ಯಾವ ನಂಬರ್ ಲಿಂಕ್ ಆಗಿದೆ?
Aadhaar Card : ನಿಮ್ಮ ಆಧಾರ್ ಗುರುತಿನ ದಾಖಲೆ (Identity Proof) ಆಗಿ ಮಾತ್ರವಲ್ಲದೆ, ವಿಳಾಸದ ದಾಖಲೆ (Address Proof) ಆಗಿಯೂ ಬಳಸಲಾಗುತ್ತದೆ. ಆದರೆ ಆಧಾರ್‌ಗೆ ಸಂಬಂಧಿಸಿದ OTP, ವೆರಿಫಿಕೇಶನ್, ಬ್ಯಾಂಕ್ ಸೇವೆಗಳು (Banking) ಬಳಸಲು ನೋಂದಾಯಿತ (Registered Mobile Number) ಮೊಬೈಲ್ ನಂಬರ್ ಅಗತ್ಯ ಆಗುತ್ತದೆ.
ಆದರೆ ನಿಮ್ಮ ಫೋನ್‌ಗೆ OTP ಬರ್ತಿಲ್ಲ ಎಂದರೆ, ನಿಮ್ಮ ಆಧಾರ್ ಕಾರ್ಡ್‌ಗೆ ಹಳೆಯ ಅಥವಾ ಬೇರೆ ನಂಬರ್ ಲಿಂಕ್ ಆಗಿರಬಹುದು! ಅಂತಹ ಸಂದರ್ಭದಲ್ಲಿ ತಕ್ಷಣವೇ ನಿಮ್ಮ ಲಿಂಕ್ ಮಾಡಿರುವ ನಂಬರ್ ಅನ್ನು ಪರಿಶೀಲಿಸಿ, ಅಗತ್ಯವಿದ್ದರೆ ಅಪ್‌ಡೇಟ್ ಮಾಡಿಕೊಳ್ಳಿ.
ಇದನ್ನೂ ಓದಿ: ಸ್ಟೇಟ್ ಬ್ಯಾಂಕ್ ವತಿಯಿಂದ ಬಡ ವಿದ್ಯಾರ್ಥಿಗಳಿಗೆ 20 ಲಕ್ಷ ಆರ್ಥಿಕ ನೆರವು
ನಿಮ್ಮ ಆಧಾರ್‌ಗೆ ಲಿಂಕ್ ಆಗಿರುವ ಮೊಬೈಲ್ ನಂಬರ್ ಚೆಕ್ ಮಾಡುವ ವಿಧಾನ!
UIDAI (Unique Identification Authority of India) ಅಧಿಕೃತ ವೆಬ್‌ಸೈಟ್‌ನಲ್ಲಿ ನಿಮ್ಮ ಆಧಾರ್ ಕಾರ್ಡ್‌ಗೆ ಲಿಂಕ್ ಆದ ನಂಬರ್‌ನ ಅಂಶವನ್ನು ಪರೀಶೀಲಿಸಬಹುದು.
UIDAI ವೆಬ್‌ಸೈಟ್‌ಗೆ ಹೋಗಿ
ನಿಮ್ಮ ಮೊಬೈಲ್ ಅಥವಾ ಲ್ಯಾಪ್‌ಟಾಪ್‌ನಲ್ಲಿ UIDAI ಅಧಿಕೃತ ವೆಬ್‌ಸೈಟ್ (https://uidai.gov.in) ಓಪನ್ ಮಾಡಿ.
ಭಾಷೆ ಆಯ್ಕೆ ಮಾಡಿ
ವೆಬ್‌ಸೈಟ್ ಆರಂಭವಾದ ನಂತರ, ನಿಮ್ಮ ಆಸಕ್ತಿಯ ಭಾಷೆಯನ್ನು ಆಯ್ಕೆಮಾಡಿ.
ಇದನ್ನೂ ಓದಿ: ಬರೀ 100 ರೂಪಾಯಿ ಕಟ್ಟಿ 2.14 ಲಕ್ಷ ತಗೊಂಡು ಹೋಗಿ! ಬಂಪರ್ ಸ್ಕೀಮ್
‘Aadhaar Services’ ಸೆಕ್ಷನ್ ಅನ್ನು ಆಯ್ಕೆಮಾಡಿ
ಹೋಮ್ ಪೇಜ್ ಅನ್ನು ಸ್ಕ್ರೋಲ್ ಮಾಡಿ ಮತ್ತು Aadhaar Services ವಿಭಾಗವನ್ನು ಕ್ಲಿಕ್ ಮಾಡಿ.
‘Verify Aadhaar’ ಆಯ್ಕೆ ಮಾಡಿ
‘Verify Aadhaar’ ಆಯ್ಕೆ ಮಾಡಿ. ಇದರಿಂದ ನಿಮ್ಮ ಆಧಾರ್ ಸಂಖ್ಯೆ ಮಾನ್ಯವಿದೆಯೇ ಎಂದು ಪರಿಶೀಲಿಸಬಹುದು.
12-ಅಂಖಿಯ ಆಧಾರ್ ನಂಬರ್ ಹಾಗೂ ಕ್ಯಾಪ್ಚಾ ನಮೂದಿಸಿ
ನಿಮ್ಮ ಆಧಾರ್ ಸಂಖ್ಯೆ ಮತ್ತು ಕ್ಯಾಪ್ಚಾ ಕೋಡ್ ನಮೂದಿಸಿ.
ನಂತರ ‘Proceed’ ಬಟನ್ ಕ್ಲಿಕ್ ಮಾಡಿ.
ಇದನ್ನೂ ಓದಿ: ಮಕ್ಕಳ ಆಸ್ತಿ ಮೇಲೆ ತಂದೆ ತಾಯಿಗೆ ಹಕ್ಕಿದೆಯೇ? ಕಾನೂನು ಏನು ಹೇಳುತ್ತೆ
ನಿಮ್ಮ ಆಧಾರ್ ಮಾಹಿತಿ ಪರೀಶೀಲಿಸಿ
ನಿಮ್ಮ ಆಧಾರ್ ಸಂಖ್ಯೆ ಮಾನ್ಯವಿದ್ದರೆ, ನಿಮ್ಮ ಆಧಾರ್‌ಗೆ ಸಂಬಂಧಿಸಿದ ಕೆಲವು ವಿವರಗಳು ತೋರಿಸುತ್ತವೆ.
ನೋಂದಾಯಿತ ಮೊಬೈಲ್ ನಂಬರ್‌ನ ಅಂತಿಮ ಮೂರು ಅಂಕಿಗಳು ಮಾತ್ರ ತೋರಿಸಲಾಗುತ್ತದೆ. ಇದರಿಂದ ನೀವು ಯಾವ ನಂಬರ್ ಲಿಂಕ್ ಆಗಿದೆಯೆಂದು ತಿಳಿದುಕೊಳ್ಳಬಹುದು.
ಇದನ್ನೂ ಓದಿ: ಪ್ರತಿ ತಿಂಗಳು ₹5000 ಪಿಂಚಣಿ ಸಿಗುತ್ತೆ! ಹಿರಿಯ ನಾಗರಿಕರಿಗೆ ಬಂಪರ್ ಸೌಲಭ್ಯ
ನಿಮ್ಮ ಹಳೆಯ ನಂಬರ್ ಲಿಂಕ್ ಆಗಿದೆಯಾ? ಇಲ್ಲಿದೆ ಪರಿಹಾರ!
ನಿಮ್ಮ ಆಧಾರ್‌ಗೆ ಹಳೆಯ ಮೊಬೈಲ್ ನಂಬರ್ ಲಿಂಕ್ ಆಗಿದ್ದರೆ, ನೀವು UIDAI ಆಧಾರ್ ಸೇವಾ ಕೇಂದ್ರ (Aadhaar Enrollment/Update Center) ಗೆ ಭೇಟಿ ನೀಡಿ ಹೊಸ ನಂಬರ್ ಅಪ್‌ಡೇಟ್ ಮಾಡಿಸಬಹುದು.
ಹೊಸ ನಂಬರ್ ಲಿಂಕ್ ಮಾಡಿದ ನಂತರ:
- ✅ OTP ಹಾಗೂ ಎಲ್ಲಾ ಆಧಾರ್ ಸೇವೆಗಳ ಅನುಕೂಲ ಲಭ್ಯ
- ✅ ಬ್ಯಾಂಕಿಂಗ್, ಮೊಬೈಲ್ ವಾಲೆಟ್, ಇ-ಕೆವೈಸಿ (e-KYC) ಸೇವೆಗಳು ಸುಲಭ
- ✅ ನಿಮ್ಮ ಅಪ್‌ಡೇಟ್ ಮಾಡಲಾದ ಡೇಟಾ ಸುರಕ್ಷಿತವಾಗಿರುತ್ತದೆ
ಹೀಗಾಗಿ, ತಡ ಮಾಡದೇ ನಿಮ್ಮ ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಆದ ನಂಬರ್ ಪರಿಶೀಲಿಸಿ, ಪ್ರಸ್ತುತ ನಂಬರ್ ಕೆಲಸ ಮಾಡುತ್ತಿಲ್ಲವಾದರೆ ಹೊಸ ನಂಬರ್ ಲಿಂಕ್ ಮಾಡಿ!
Check Your Aadhaar-Linked Mobile Number Now
Our Whatsapp Channel is Live Now 👇