Business News

ಕಸ ಅಂತ ಬಿಸಾಡಬೇಡಿ, ತೆಂಗಿನಕಾಯಿ ಚಿಪ್ಪಿನಿಂದ ಮಾಡಬಹುದು ಕೈ ತುಂಬಾ ಸಂಪಾದನೆ

  • ತೆಂಗಿನಕಾಯಿ ಚಿಪ್ಪಿನಿಂದ ಕೈ ತುಂಬಾ ಸಂಪಾದನೆ.
  • ಇ ಕಾಮರ್ಸ್ ವೆಬ್ಸೈಟ್ನಲ್ಲಿ ಮನೆಯಲ್ಲಿ ಕುಳಿತುಕೊಂಡೇ ಹೊಸ ವ್ಯಾಪಾರ ಮಾಡಿ.
  • ತೆಂಗಿನಕಾಯಿ ಜೊತೆ ಚಿಪ್ಪಿಗೂ ಮಾರುಕಟ್ಟೆಯಲ್ಲಿ ಇದೆ ದೊಡ್ಡ ವ್ಯಾಲ್ಯೂ.

Coconut Shell Business : ಯಾವುದೇ ವ್ಯಾಪಾರವಾದರು ಸ್ಪಲ್ಪ ಬುದ್ಧಿವಂತಿಕೆಯಿಂದ, ಚಾಣಾಕ್ಷತೆಯಿಂದ ಆರಂಭಿಸಿದರೆ ಲಾಭವನ್ನು ಗಳಿಸುವುದು ಅಷ್ಟು ಕಷ್ಟವೇನಲ್ಲ. ಅದರಲ್ಲೂ ವಿಶೇಷವಾಗಿ ಮನೆಯಿಂದಲೇ ಮಾಡುವ ಕೆಲವು ವ್ಯಾಪಾರಗಳು ಹೆಚ್ಚು ಲಾಭವನ್ನು ತಂದುಕೊಡಬಹುದು.

ಉದಾಹರಣೆಗೆ ನಾವು ನಿತ್ಯವೂ ಬಳಸುವ ತೆಂಗಿನಕಾಯಿ ಹಾಗೂ ಅದರ ಚಿಪ್ಪಿನಿಂದಲೂ ಕೂಡ ವ್ಯಾಪಾರವನ್ನು (Own Business) ಪ್ರಾರಂಭ ಮಾಡಿ ಲಾಭವನ್ನು ಗಳಿಸಬಹುದು.

ಕಸ ಅಂತ ಬಿಸಾಡಬೇಡಿ, ತೆಂಗಿನಕಾಯಿ ಚಿಪ್ಪಿನಿಂದ ಮಾಡಬಹುದು ಕೈ ತುಂಬಾ ಸಂಪಾದನೆ

ತೆಂಗಿನಕಾಯಿ ಚಿಪ್ಪಿನ ವ್ಯಾಪಾರ

ಅಮೆಜಾನ್ನಲ್ಲಿ (Amazon) ನೀವು 25 ತೆಂಗಿನ ಚಿಪ್ಪಿನ ಪ್ಯಾಕ್ ಗಳನ್ನು 200 ರೂಪಾಯಿಗೆ ಖರೀದಿಸುವಂತಹ ಅವಕಾಶ ಇದೆ. ಅಂದ್ರೆ ಇದರ ಬೇಡಿಕೆ ಎಷ್ಟು ಹೆಚ್ಚಿದೆ ಅನ್ನೋದನ್ನು ನೀವೇ ಅರ್ಥ ಮಾಡಿಕೊಳ್ಳಿ. ತೆಂಗಿನ ಚಿಪ್ಪಿನಿಂದ ಸಾಕಷ್ಟು ಉಪಯೋಗಗಳು ಇವೆ. ಹಾಗಾಗಿ ಇದರ ವ್ಯಾಪಾರ ಉತ್ತಮ ಹಣ ಸಂಪಾದನೆಗೆ ಮಾರ್ಗವಾಗಿದೆ.

ಏನು ಬೇಡ, ಈ ರೀತಿ ಮಾಡಿ ಸಾಕು! ಅತಿ ಕಡಿಮೆ ಬಡ್ಡಿಯಲ್ಲಿ ಸಿಗುತ್ತೆ ಪರ್ಸನಲ್ ಲೋನ್

ತೆಂಗಿನ ಚಿಪ್ಪಿನ ಪ್ರಯೋಜನಗಳು

ತೆಂಗಿನ ಚಿಪ್ಪಿನಿಂದ ತಯಾರಿಸುವಂತಹ ಇದ್ದಲಿನಿಂದ ಸಾಕಷ್ಟು ಕಂಪನಿಗಳಿಗೆ ಅದರ ಉಪಯೋಗ ಇದೆ. ಫೇಸ್ ಪ್ಯಾಕ್, ಕಾಸ್ಮೆಟಿಕ್ ಹಾಗೂ ಸೋಪುಗಳಂತಹ ಸೌಂದರ್ಯವರ್ಧಕ ವಸ್ತುಗಳಲ್ಲಿ ಇವುಗಳನ್ನು ಪ್ರಮುಖವಾಗಿ ಬಳಸಿಕೊಳ್ಳಲಾಗುತ್ತದೆ.

ಇದು ನೀರಿನ ಕ್ಲೋರಿನ್ ಹಾಗೂ ಬ್ಯಾಕ್ಟೀರಿಯಾಗಳನ್ನು ಕೂಡ ನಾಶಪಡಿಸುವಲ್ಲಿ ಪ್ರಮುಖವಾಗಿ ಬೇಕಾಗುತ್ತದೆ. ಯುದ್ಧೋಪಕರಣಗಳಲ್ಲಿ ಕೂಡ ಅತ್ಯಂತ ಪ್ರಮುಖವಾಗಿ ಬಳಸಲ್ಪಡುವಂತಹ ವಸ್ತು ಇದಾಗಿದೆ.

ಕೇವಲ 5,000 ಬಂಡವಾಳ ಹಾಕಿ ಈ ಬಿಸನೆಸ್ ಮಾಡಿದ್ರೆ ತಿಂಗಳಿಗೆ 50 ಸಾವಿರ ಆದಾಯ ಪಕ್ಕಾ!

Coconut Shell Businessವ್ಯಾಪಾರ ಆರಂಭ ಮಾಡುವುದಕ್ಕಿಂತ ಮುಂಚೆ ಇವುಗಳನ್ನು ತಿಳಿದುಕೊಳ್ಳಿ

* ತೆಂಗಿನಕಾಯಿಯ ಚಿಪ್ಪಿನಿಂದ ತಯಾರು ಮಾಡುವಂತಹ ಇದ್ದಿಲಿಗೆ ಬೇಡಿಕೆ ಇರುವ ಕಾರಣಕ್ಕಾಗಿ ದೊಡ್ಡ ಪ್ರಮಾಣದಲ್ಲಿ ತೆಂಗಿನಕಾಯಿ ಚಿಪ್ಪುಗಳನ್ನು ನೀವು ಖರೀದಿಸಬೇಕು ಇಲ್ಲವೇ ಸಂಗ್ರಹ ಮಾಡಬೇಕು. ನಂತರ ಇದನ್ನ ಬಿಸಿ ಮಾಡೋದಕ್ಕೆ ದೊಡ್ಡ ಯಂತ್ರ ಕೂಡ ಬೇಕಾಗುತ್ತೆ.

* ರಿಟೇಲ್ ನಲ್ಲಿ ಮಾರಾಟ ಮಾಡಬಹುದು ಹಾಗೂ ಇದನ್ನು ಆನ್ಲೈನ್ನಲ್ಲಿ ಕೂಡ ಮಾರಾಟ ಮಾಡಬಹುದು. ಹೀಗಾಗಿ ಆನ್ಲೈನ್ ಮಾರ್ಕೆಟಿಂಗ್ ಮಾಡುವ ಮೂಲಕ ತೆಂಗಿನ ಚಿಪ್ಪನ್ನು ಮಾರಾಟ ಮಾಡಲು ಆರಂಭಿಸಿ.

* ತೆಂಗಿನಕಾಯಿಯ ಚಿಪ್ಪಿನಿಂದ ತಯಾರಿಸಿರುವ ಅಂತಹ ಇದ್ದಿಲಿಗೆ ಕೆಜಿಗೆ 50ರಿಂದ 70 ರೂಪಾಯಿಗಳ ಬೇಡಿಕೆ ಇದೆ. ಹೀಗಾಗಿ ಇದರ ಬೇಡಿಕೆ ಹೆಚ್ಚಿರುವಾಗಲೇ ಇದರ ಮಾರಾಟವನ್ನು ಪ್ರಾರಂಭ ಮಾಡಿ ಲಾಭವನ್ನು ಪಡೆದುಕೊಳ್ಳಿ.

Coconut Shell Business, Earn Big Profits from Home with Minimal Investment

Our Whatsapp Channel is Live Now 👇

Whatsapp Channel

Related Stories