ಕೇವಲ 5,000 ಬಂಡವಾಳ ಹಾಕಿ ಈ ಬಿಸನೆಸ್ ಮಾಡಿದ್ರೆ ತಿಂಗಳಿಗೆ 50 ಸಾವಿರ ಆದಾಯ ಪಕ್ಕಾ!
Business Idea : ಈ ಒಂದು ವ್ಯಾಪಾರವನ್ನು ನೀವು ಅತಿ ಕಡಿಮೆ ಬಂಡವಾಳದೊಂದಿಗೆ ಆರಂಭಿಸಿ ಅತಿ ಹೆಚ್ಚು ಆದಾಯವನ್ನು ಗಳಿಸಬಹುದಾಗಿದೆ.
- 5,000 ಬಂಡವಾಳ ಹಾಕಿ ತಿಂಗಳಿಗೆ 50,000 ಗಳಿಸಬಹುದು.
- ಮನೆಯಲ್ಲಿಯೇ ಇದ್ದುಕೊಂಡು ಈ ಬಿಸಿನೆಸ್ ಆರಂಭಿಸಿ ಆದಾಯ ಗಳಿಸಿ.
- ಇದೊಂದು ಸ್ಕಿಲ್ ಇದ್ರೆ ಸಾಕು ಕೈ ತುಂಬಾ ಸಂಪಾದನೆ ಗ್ಯಾರಂಟಿ.
Business Idea : ಸಾಕಷ್ಟು ಜನರಿಗೆ ಯಾವುದೇ ಕಂಪನಿಗಳಲ್ಲಿ ಕೆಲಸ ಮಾಡುವುದಕ್ಕೆ ಆಸಕ್ತಿ ಇರುವುದಿಲ್ಲ. ಅದರ ಬದಲು ತಮ್ಮದೇ ಆಗಿರುವ ಸ್ವಂತ ಉದ್ಯಮ ಆರಂಭಿಸಬೇಕು ಅಂದುಕೊಳ್ಳುತ್ತಾರೆ. ಎಷ್ಟೋ ಬಾರಿ ಉದ್ಯಮ ಆರಂಭಿಸುವುದಕ್ಕೆ ಪ್ಲಾನಿಂಗ್ ರೆಡಿ ಇದ್ದರು, ಲಕ್ಷಾಂತರ ರೂಪಾಯಿಗಳ ಬಂಡವಾಳ ಇಲ್ಲದೆ ತಮ್ಮ ಉದ್ಯಮವನ್ನು ಆರಂಭಿಸಲು ಹಿಂಜರಿಯುತ್ತಾರೆ.
ಆದರೆ ನಾವು ಹೇಳುವ ಈ ಒಂದು ವ್ಯಾಪಾರವನ್ನು ನೀವು ಅತಿ ಕಡಿಮೆ ಬಂಡವಾಳದೊಂದಿಗೆ ಆರಂಭಿಸಿ ಅತಿ ಹೆಚ್ಚು ಆದಾಯವನ್ನು ಗಳಿಸಬಹುದಾಗಿದೆ.
ಆಧಾರ್ ಕಾರ್ಡ್ ಇದ್ರೆ ಸಾಕು, ಸಿಗುತ್ತೆ ಯಾವುದೇ ಶೂರಿಟಿ ಇಲ್ಲದೆ 50,000 ತನಕ ಸಾಲ
ಕಡಿಮೆ ಬಂಡವಾಳ ಕೈ ತುಂಬಾ ಆದಾಯ
ಹೌದು, ಅತಿ ಕಡಿಮೆ ಬಂಡವಾಳದೊಂದಿಗೆ ಈ ಉದ್ಯಮವನ್ನು ಆರಂಭಿಸಿ ನೀವು ಪ್ರತಿ ತಿಂಗಳು 40 ರಿಂದ 50 ಸಾವಿರ ರೂಪಾಯಿಗಳನ್ನು ಗಳಿಸಬಹುದು. ಈ ಉದ್ಯಮವನ್ನು ನೀವು ನಿಮ್ಮ ಮನೆಯಲ್ಲಿಯೇ ಆರಂಭಿಸಬಹುದು.
ನೀವು ಮೊಬೈಲ್ ರಿಪೇರಿ ಕೋರ್ಸ್ (Mobile Repair Business) ಆರಂಭಿಸಿ ಮೊಬೈಲ್ ರಿಪೇರಿ ಹಾಗೂ ಮೊಬೈಲ್ ಬಿಡಿ ಭಾಗಗಳ ಮಾರಾಟ ಉದ್ಯಮವನ್ನು ಮನೆಯಿಂದಲೇ ಆರಂಭಿಸಬಹುದು.
ಇದಂತೂ ಸ್ಮಾರ್ಟ್ ಫೋನ್ ಜಮಾನ. ಪ್ರತಿ ಒಬ್ಬರು ಸ್ಮಾರ್ಟ್ ಫೋನ್ (Smartphone) ಬಳಸಿಯೇ ಬಳಸುತ್ತಾರೆ. ಸ್ಮಾರ್ಟ್ ಫೋನನ್ನು ಬಳಕೆ ಮಾಡಿದ ನಂತರ ಕೆಲವೊಮ್ಮೆ ಅದರ ರಿಪೇರಿ ಮಾಡಿಸಲೇಬೇಕಾಗುತ್ತದೆ. ಹೀಗಾಗಿ ವರ್ಷದ 365 ದಿನಗಳು ಕೂಡ ಮೊಬೈಲ್ ರಿಪೇರಿ ಕೆಲಸ ಇದ್ದೇ ಇರುತ್ತದೆ ಜೊತೆಗೆ ಮೊಬೈಲ್ ಬಿಡಿ ಭಾಗಗಳನ್ನು ನೀವು ಮಾರಾಟ ಮಾಡಬಹುದು.
5,000 ಬಂಡವಾಳ ಹಾಕಿ ಸಾಕು! ಮೊಬೈಲ್ ಚಾರ್ಜರ್ ಗಳು, ಇಯರ್ ಫೋನ್ ಗಳು, ಬ್ಲೂಟೂತ್ ಆಕ್ಸಸರೀಸ್, ಮೊಬೈಲ್ ಸ್ಟ್ಯಾಂಡ್ ಮೊದಲಾದ ವಸ್ತುಗಳನ್ನು ಮಾರಾಟ ಮಾಡಬಹುದು. ನೀವು ಮೊಬೈಲ್ ರಿಪೇರಿ ಜೊತೆಗೆ ಬಿಡಿ ಭಾಗಗಳನ್ನು ಮಾರಾಟ (Mobile Repair and Accessories Business) ಮಾಡಿದರೆ ಹೆಚ್ಚಿನ ಆದಾಯ ಗಳಿಸಬಹುದು.
ಸ್ವಂತ ವ್ಯಾಪಾರ ಮಾಡುವ ಮಹಿಳೆಯರಿಗೆ ಸಿಗಲಿದೆ 3 ಲಕ್ಷ ರೂಪಾಯಿಗಳ ಬಡ್ಡಿ ರಹಿತ ಸಾಲ
ಇನ್ನು ಮೊಬೈಲ್ ರಿಪೇರಿ ಬಿಸಿನೆಸ್ ಆರಂಭಿಸಲು ಮೊಬೈಲ್ ರಿಪೇರಿ ಕೆಲಸವನ್ನು ನೀವು ಕಲಿತಿರಬೇಕು. ಕೇವಲ ಐದರಿಂದ ಹತ್ತು ಸಾವಿರ ರೂಪಾಯಿಗಳ ಬಂಡವಾಳ ಹಾಕಿ ಈ ಬಿಸಿನೆಸ್ ಆರಂಭಿಸಬಹುದು.
ಪ್ರತಿ ಮೊಬೈಲ್ ರಿಪೇರಿಗೆ 300 ರಿಂದ 400 ರೂಪಾಯಿಗಳಷ್ಟು ಕನಿಷ್ಠ ಚಾರ್ಜ್ ಮಾಡಿದರೂ ತಿಂಗಳಿಗೆ 40 ರಿಂದ 50 ಸಾವಿರ ರೂಪಾಯಿಗಳನ್ನು ಸುಲಭವಾಗಿ ಗಳಿಸಬಹುದು.
Start This Business with Just 5,000 Investment and Earn 50,000 Per Month Guaranteed!