ಸ್ವಂತ ವ್ಯಾಪಾರ ಮಾಡುವ ಮಹಿಳೆಯರಿಗೆ ಸಿಗಲಿದೆ 3 ಲಕ್ಷ ರೂಪಾಯಿಗಳ ಬಡ್ಡಿ ರಹಿತ ಸಾಲ

ಸ್ವಂತ ವ್ಯಾಪಾರವನ್ನು ಪ್ರಾರಂಭ ಮಾಡಬೇಕು ಎನ್ನುವ ಮಹಿಳೆಯರು ಈ ಯೋಜನೆಯ ಮೂಲಕ 3 ಲಕ್ಷ ರೂಪಾಯಿಗಳವರೆಗೆ ಬಡ್ಡಿ ರಹಿತ ಸಾಲ ಪಡೆದುಕೊಳ್ಳಬಹುದು, ಸಂಪೂರ್ಣ ಮಾಹಿತಿ ಇಲ್ಲಿದೆ

- - - - - - - - - - - - - Story - - - - - - - - - - - - -
  • ಉದ್ಯೋಗಿನಿ ಯೋಜನೆಯಿಂದ ಮಹಿಳೆಯರ ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ.
  • ಈ ಯೋಜನೆಯಲ್ಲಿ ಸಿಗಲಿದೆ 3 ಲಕ್ಷ ರೂಪಾಯಿಗಳ ಬಡ್ಡಿ ರಹಿತ ಸಾಲ.
  • ಮಹಿಳೆಯರಿಗೆ ಸ್ವಂತ ಉದ್ಯಮವನ್ನು ಪ್ರಾರಂಭ ಮಾಡುವ ಕನಸಿಗೆ ಸರ್ಕಾರದ ನೆರವು.

Loan Scheme : ಮಹಿಳೆಯರನ್ನು ಸಮಾಜದಲ್ಲಿ ಸ್ವಾವಲಂಬಿಗಳನ್ನಾಗಿ ಮಾಡಬೇಕು ಎನ್ನುವಂತಹ ಸರ್ಕಾರದ ಪ್ರಯತ್ನದಲ್ಲಿ ಮತ್ತೊಂದು ಯೋಜನೆ ಕೂಡ ಈಗ ಸೇರ್ಪಡೆಯಾಗಿದ್ದು ಮಹಿಳೆಯರು ಈ ಮೂಲಕ ತಮ್ಮ ಸ್ವಂತ ಉದ್ಯಮವನ್ನು ಪ್ರಾರಂಭ ಮಾಡಬೇಕು ಎನ್ನುವಂತಹ ಕನಸನ್ನು ನನಸು ಮಾಡಿಕೊಳ್ಳಬಹುದಾಗಿದೆ.

ಹೌದು ನಾವು ಇವತ್ತಿನ ಈ ಲೇಖನದಲ್ಲಿ ಹೇಳಲು ಹೊರಟಿರೋದು ಬಡ್ಡಿ ರಹಿತ ಸಾಲದ (Loan) ಯೋಜನೆ ಆಗಿರುವಂತಹ ಉದ್ಯೋಗಿನಿ ಯೋಜನೆಯ (Udyogini Scheme) ಬಗ್ಗೆ.

ಕ್ಯುಆರ್ ಕೋಡ್ ಹೊಂದಿರೋ ಪ್ಯಾನ್ ಕಾರ್ಡ್ ಪಡೆಯುವುದು ಹೇಗೆ? ಇಲ್ಲಿದೆ ಬಿಗ್ ಅಪ್ಡೇಟ್

ಸ್ವಂತ ವ್ಯಾಪಾರ ಮಾಡುವ ಮಹಿಳೆಯರಿಗೆ ಸಿಗಲಿದೆ 3 ಲಕ್ಷ ರೂಪಾಯಿಗಳ ಬಡ್ಡಿ ರಹಿತ ಸಾಲ

ಉದ್ಯೋಗಿನಿ ಯೋಜನೆ

ಕರ್ನಾಟಕ ರಾಜ್ಯ ಸರ್ಕಾರ ಉದ್ಯೋಗಿನಿ ಯೋಜನೆಯನ್ನು ಆರ್ಥಿಕವಾಗಿ ಹಿಂದುಳಿದಿರುವಂತಹ ವರ್ಗದ ಮಹಿಳೆಯರು ತಮ್ಮ ಸ್ವಂತ ಉದ್ಯಮವನ್ನು (Own Business) ಪ್ರಾರಂಭ ಮಾಡಿ ಸ್ವಾವಲಂಬಿ ಜೀವನವನ್ನು ನಡೆಸುವಂತಹ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ಜಾರಿಗೆ ತಂದಿದೆ.

ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದಿಂದ ಈ ಯೋಜನೆ ಅಡಿಯಲ್ಲಿ 3 ಲಕ್ಷ ರೂಪಾಯಿಗಳವರೆಗೆ ಬಡ್ಡಿ ರಹಿತ ಸಾಲವನ್ನು ನೀಡಲಾಗುತ್ತದೆ. ಈ ಸಾಲದಲ್ಲಿ ಸಾಮಾನ್ಯ ವರ್ಗದ ಮಹಿಳೆಯರಿಗೆ 30% ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ 50% ಸಬ್ಸಿಡಿಯನ್ನು ನೀಡಲಾಗುತ್ತಿದೆ.

1 ಲಕ್ಷದಿಂದ 3 ಲಕ್ಷ ರೂಪಾಯಿಗಳವರೆಗೆ ಆರ್ಥಿಕವಾಗಿ ಹಿಂದುಳಿದಿರುವಂತಹ ವರ್ಗದ ಮಹಿಳೆಯರು ಉದ್ಯೋಗಿನಿ ಯೋಜನೆ ಅಡಿಯಲ್ಲಿ ಸಾಲವನ್ನು ಪಡೆದುಕೊಂಡು ತಾವಂದುಕೊಂಡಿರುವಂತಹ ಉದ್ಯಮವನ್ನು ಪ್ರಾರಂಭ ಮಾಡಿ ಅದರಿಂದ ಆರ್ಥಿಕವಾಗಿ ಸದೃಢರಾಗುವಂತಹ ಉದ್ದೇಶವನ್ನ ರಾಜ್ಯ ಸರ್ಕಾರ ಈ ಯೋಜನೆಯ ಮೂಲಕ ಹೊಂದಿದೆ.

ಎಟಿಎಂ ನಲ್ಲಿ ಲಿಮಿಟ್ ಮೀರಿ ಕ್ಯಾಶ್ ವಿಥ್ ಡ್ರಾ ಮಾಡುವಂತಿಲ್ಲ, ಹೊಸ ನಿಯಮ

ಬೇಕಾಗಿರುವ ಅರ್ಹತೆಗಳು ಹಾಗೂ ಡಾಕ್ಯುಮೆಂಟ್ಸ್ ಗಳು

Loan Scheme for Women* 18 ರಿಂದ 55 ವರ್ಷದ ಒಳಗಿನ ಕರ್ನಾಟಕದ ಕಾಯಂ ನಿವಾಸಿ ಆಗಿರುವಂತಹ ಮಹಿಳೆಯರು ಮಾತ್ರ ಈ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.

* ಸಾಮಾನ್ಯ ವರ್ಗದ ಮಹಿಳೆಯರ ವಾರ್ಷಿಕ ಆದಾಯ 1.5 ಲಕ್ಷ ರೂಪಾಯಿಗಳ ಒಳಗೆ ಇರಬೇಕು ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡದ ಮಹಿಳೆಯರ ಕುಟುಂಬದವಾರ್ಷಿಕ ಆದಾಯ ವರ್ಷಕ್ಕೆ 2,00,000 ರೂಪಾಯಿಗಳ ಒಳಗೆ ಇರಬೇಕು.

ಒಂದು ದಿನ ಕ್ರೆಡಿಟ್ ಕಾರ್ಡ್ ಬಿಲ್ ಕಟ್ಟುವುದು ಲೇಟ್ ಆದ್ರೆ, ಕ್ರೆಡಿಟ್ ಸ್ಕೋರ್ ಎಷ್ಟು ಕಡಿಮೆ ಆಗುತ್ತೆ?

* ಬೇಕಾಗಿರುವ ಡಾಕ್ಯುಮೆಂಟ್ಸ್ ಗಳ ಬಗ್ಗೆ ಮಾಹಿತಿಯನ್ನು ತಿಳಿಯುವುದಾದರೆ, ಕಡ್ಡಾಯವಾಗಿ ಆಧಾರ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಬ್ಯಾಂಕಿಗೆ ಕಡ್ಡಾಯವಾಗಿ ಲಿಂಕ್ ಆಗಿರ್ಬೇಕು.

* ಯೋಜನಾ ವರದಿ ಇರಬೇಕು

* ರೇಷನ್ ಕಾರ್ಡ್ ಹಾಗೂ ವೋಟರ್ ಐಡಿ ಕೂಡ ಕಡ್ಡಾಯವಾಗಿ ಇರಬೇಕು.

Interest-Free Loans for Women to Starting Own Business

English Summary
Related Stories