ಕ್ಯುಆರ್ ಕೋಡ್ ಹೊಂದಿರೋ ಪ್ಯಾನ್ ಕಾರ್ಡ್ ಪಡೆಯುವುದು ಹೇಗೆ? ಇಲ್ಲಿದೆ ಬಿಗ್ ಅಪ್ಡೇಟ್
ಹೊಸ ಪ್ಯಾನ್ ಕಾರ್ಡ್ ನಲ್ಲಿ ಕ್ಯುಆರ್ ಕೋಡ್ ಅನ್ನು ಅಳವಡಿಸಲಾಗಿದ್ದು ಹಳೆಯ ಪ್ಯಾನ್ ಕಾರ್ಡ್ ಹೊಂದಿರುವಂತಹ ಜನರು ಕೂಡ ತಮ್ಮ ಪ್ಯಾನ್ ಕಾರ್ಡ್ ನಂಬರ್ ಬದಲಾಯಿಸದೆ ಅಪ್ಡೇಟ್ ಮಾಡಿಕೊಳ್ಳಬಹುದು
- ಕ್ಯುಆರ್ ಕೋಡ್ ಹೊಸ ಪ್ಯಾನ್ ಕಾರ್ಡ್ ಮಾರುಕಟ್ಟೆಗೆ.
- ನಿಮ್ಮ ಮಾಹಿತಿಯನ್ನು ಕದಿಯದೆ ಇರಲು ಸರ್ಕಾರದಿಂದ ಹೊಸ ಹೆಜ್ಜೆ.
- ಕ್ಯುಆರ್ ಕೋಡ್ ಪ್ಯಾನ್ ಕಾರ್ಡ್ ಕೇವಲ 50 ರೂಪಾಯಿಯಲ್ಲಿ ಸಿಗಲಿದೆ.
ಪ್ಯಾನ್ ಕಾರ್ಡ್ ವಿಚಾರದಲ್ಲಿ ಭಾರತ ಸರ್ಕಾರ ಈಗ ಹೊಸ ಅಪ್ಡೇಟ್ ತಂದಿದ್ದು, ಹೊಸ ಪ್ಯಾನ್ ಕಾರ್ಡ್ ನಲ್ಲಿ ಕ್ಯುಆರ್ ಕೋಡ್ ಅನ್ನು ಅಳವಡಿಸಲಾಗಿದ್ದು ಹಳೆಯ ಪ್ಯಾನ್ ಕಾರ್ಡ್ ಹೊಂದಿರುವಂತಹ ಜನರು ಕೂಡ ತಮ್ಮ ಪ್ಯಾನ್ ಕಾರ್ಡ್ ನಂಬರ್ ಬದಲಾಯಿಸದೆ ಅಪ್ಡೇಟ್ ಮಾಡಿಕೊಳ್ಳುವಂತಹ ಅವಕಾಶವನ್ನು ಕೂಡ ನೀಡಲಾಗಿದೆ.
ಕ್ಯುಆರ್ ಕೋಡ್ ಯಾಕೆ?
ಇತ್ತೀಚಿನ ವರ್ಷಗಳಲ್ಲಿ ಇಂಟರ್ನೆಟ್ ನಲ್ಲಿ ಬೇರೆಯವರ ಪ್ಯಾನ್ ಕಾರ್ಡ್ ಗಳನ್ನ ದುರುಪಯೋಗ ಮಾಡುವಂತ ಜನರ ಸಂಖ್ಯೆ ಹೆಚ್ಚಾಗಿದ್ದು ಇದನ್ನು ತಡೆಯುವ ನಿಟ್ಟಿನಲ್ಲಿ ಅಪ್ಡೇಟ್ ಮಾಡಿರುವಂತಹ ಹೊಸ ಪ್ಯಾನ್ ಕಾರ್ಡ್ ಗಳಲ್ಲಿ ಕ್ಯುಆರ್ ಕೋಡ್ ಗಳನ್ನು ಜಾರಿಗೆ ತರಲಾಗಿದೆ.
ಈ ವಂಚನೆಯನ್ನು ಹೊಸದಾಗಿ ಬಂದಿರುವಂತಹ ಪ್ಯಾನ್ ಕಾರ್ಡ್ ಗಳಿಂದ ತಡೆಯಬಹುದಾಗಿದೆ. ಅಧಿಕೃತವಾಗಿರುವ ಅಂತಹ ವ್ಯಕ್ತಿಗಳು ಮಾತ್ರ ಕ್ಯುಆರ್ ಕೋಡ್ ಮೂಲಕ ನಿರ್ದಿಷ್ಟವಾಗಿರುವಂತಹ ಸಾಫ್ಟ್ವೇರ್ ಬಳಸಿ ಅದರ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ. ಇದನ್ನ ಸ್ಕ್ಯಾನ್ ಮಾಡುವ ಮೂಲಕ ಅಧಿಕಾರಿಗಳು ಕೂಡ ಬಹಳ ವೇಗವಾಗಿ ಇದರ ಕುರಿತಂತೆ ಮಾಹಿತಿಯನ್ನು ಪಡೆದುಕೊಳ್ಳುವ ಉಪಯೋಗ ಕೂಡ ಇದೆ. ವೆರಿಫಿಕೇಶನ್ ನಂತಹ ಕೆಲಸಗಳು ಈ ಮೂಲಕ ವೇಗವಾಗಿ ನಡೆಯಲಿವೆ.
ಎಟಿಎಂ ನಲ್ಲಿ ಲಿಮಿಟ್ ಮೀರಿ ಕ್ಯಾಶ್ ವಿಥ್ ಡ್ರಾ ಮಾಡುವಂತಿಲ್ಲ, ಹೊಸ ನಿಯಮ
ಕ್ಯುಆರ್ ಕೋಡ್ ಇರೋ ಹೊಸ ಪ್ಯಾನ್ ಕಾರ್ಡ್ಗಳನ್ನು ಪಡೆದುಕೊಳ್ಳುವ ವಿಧಾನ
ಆನ್ಲೈನ್ ನಲ್ಲಿ ಸದ್ಯಕ್ಕೆ ಎನ್‌ಎಸ್‌ಡಿಎಲ್ ಹಾಗೂ ಐ ಟಿ ಎಸ್ ಎಲ್ ಎಂಬ ಎರಡು ಏಜೆನ್ಸಿಗಳು ಈ ಪ್ಯಾನ್ ಕಾರ್ಡ್ಗಳನ್ನು ನೀಡುತ್ತಿವೆ. ನಿಮ್ಮ ಪ್ಯಾನ್ ಕಾರ್ಡ್ ಹಿಂಬದಿಯಲ್ಲಿ ನಿಮಗೆ ಪ್ಯಾನ್ ಕಾರ್ಡ್ ಅನ್ನು ನೀಡಿರುವಂತಹ ಏಜೆನ್ಸಿಯ ಮಾಹಿತಿ ಇರುತ್ತದೆ ಅಲ್ಲಿಯೇ ನೀವು ಇದನ್ನು ಪಡೆದುಕೊಳ್ಳಬೇಕಾಗಿರುತ್ತದೆ.
* ಎನ್ ಎಸ್ ಡಿ ಎಲ್ ಏಜೆನ್ಸಿಯಿಂದ ಪ್ಯಾನ್ ಕಾರ್ಡ್ ಪಡೆದುಕೊಳ್ಳುವುದಕ್ಕೆ https://www.onlineservices.nsdl.com/paam/ReprintEPan.html ಲಿಂಕ್ ಮೇಲೆ ಕ್ಲಿಕ್ ಮಾಡಬೇಕಾಗಿರುತ್ತದೆ.
* ಐ ಟಿ ಎಸ್ ಎಲ್ ಏಜೆನ್ಸಿಯ ಮೂಲಕ ಪ್ಯಾನ್ ಕಾರ್ಡ್ ಪಡೆದುಕೊಳ್ಳುವುದಕ್ಕೆ https://www.pan.utiitsl.com/reprint.html ಲಿಂಕ್ ಮೇಲೆ ಕ್ಲಿಕ್ ಮಾಡಬೇಕಾಗಿರುತ್ತದೆ.
ಒಂದು ದಿನ ಕ್ರೆಡಿಟ್ ಕಾರ್ಡ್ ಬಿಲ್ ಕಟ್ಟುವುದು ಲೇಟ್ ಆದ್ರೆ, ಕ್ರೆಡಿಟ್ ಸ್ಕೋರ್ ಎಷ್ಟು ಕಡಿಮೆ ಆಗುತ್ತೆ?
ಇಲ್ಲಿ ಕೇಳಲಾಗುವಂತಹ ಪ್ರತಿಯೊಂದು ವಿವರಗಳನ್ನು ನೀವು ಸರಿಯಾದ ರೀತಿಯಲ್ಲಿ ಭರ್ತಿ ಮಾಡಬೇಕಾಗಿರುತ್ತದೆ ಹಾಗೂ ಶುಲ್ಕದ ರೂಪದಲ್ಲಿ ಐವತ್ತು ರೂಪಾಯಿಗಳನ್ನು ನೀಡಬೇಕಾಗಿದೆ.
ಎಲ್ಲಾ ಪ್ರಕ್ರಿಯೆಗಳು ಮುಗಿದ ಕೆಲವೇ ನಿಮಿಷಗಳಲ್ಲಿ ನಿಮ್ಮ ರಿಜಿಸ್ಟರ್ ಆಗಿರುವಂತಹ ಇಮೇಲ್ ಐಡಿಗೆ ಹೊಸದಾಗಿ ಸಿದ್ಧವಾಗಿರುವ ಪ್ಯಾನ್ ಕಾರ್ಡ್ ನ ಸಾಫ್ಟ್ ಕಾಪಿ ಬರಲಿದೆ. 15 ರಿಂದ 20 ದಿನಗಳ ಒಳಗಾಗಿ ನಿಮ್ಮ ನಿಜವಾದ ಹೊಸ ಅಪ್ಡೇಟ್ ಆಗಿರುವಂತಹ ಕ್ಯುಆರ್ ಕೋಡ್ ಪ್ಯಾನ್ ಕಾರ್ಡ್ ಅನ್ನು ಕೂಡ ಕಳುಹಿಸಲಾಗುತ್ತದೆ.
New PAN Card with QR Code, A Step Towards Security and Easy Access