ಏನು ಬೇಡ, ಈ ರೀತಿ ಮಾಡಿ ಸಾಕು! ಅತಿ ಕಡಿಮೆ ಬಡ್ಡಿಯಲ್ಲಿ ಸಿಗುತ್ತೆ ಪರ್ಸನಲ್ ಲೋನ್

Personal Loan : ಪರ್ಸನಲ್ ಲೋನ್ ಪಡೆದುಕೊಳ್ಳುವಾಗ ನೀವು ಸರಿಯಾದ ಸಮಯಕ್ಕೆ ಸಂಪೂರ್ಣ ಸಾಲವನ್ನು ಮರುಪಾವತಿ (Loan Re-Payment) ಮಾಡುತ್ತೀರಿ ಎನ್ನುವ ಭರವಸೆ ಸಾಲದಾತರಿಗೆ ನೀಡಬೇಕು

- - - - - - - - - - - - - Story - - - - - - - - - - - - -
  • ಈ ಟ್ರಿಕ್ಸ್ ಮೂಲಕ ಕಡಿಮೆ ಬಡ್ಡಿಯಲ್ಲಿ ಸಿಗುತ್ತೆ ಪರ್ಸನಲ್ ಲೋನ್.
  • ಬಹು ಸಾಲದ ಕೊಡುಗೆಗಳ ಬಗ್ಗೆ ಬ್ಯಾಂಕ್ ನಲ್ಲಿ ಮಾಹಿತಿ ಪಡೆದುಕೊಳ್ಳಿ.
  • ಅಗತ್ಯವಿದ್ದಾಗ ಅಗತ್ಯವಿದ್ದಷ್ಟು ಸಾಲವನ್ನು ಮಾತ್ರ ತೆಗೆದುಕೊಳ್ಳುವುದು ಜಾಣ್ಮೆ.

Personal Loan : ಸಾಮಾನ್ಯವಾಗಿ ತಿಂಗಳ ಸಂಬಳವನ್ನು ಅವಲಂಬಿಸಿರುವ ಸಾಕಷ್ಟು ಜನ ತಮ್ಮ ಹಲವು ಖರ್ಚುಗಳನ್ನು ನಿಭಾಯಿಸಲು ವಯಕ್ತಿಕ ಸಾಲವನ್ನು ತೆಗೆದುಕೊಳ್ಳುತ್ತಾರೆ. ನಿಮಗೆ ಸಿಗುವ ಸಂಬಳ ಹಾಗೂ ಬ್ಯಾಂಕ್ ನಲ್ಲಿ ಕ್ರೆಡಿಟ್ ಸ್ಕೋರ್ (Credit Score) ಆಧಾರದ ಮೇಲೆ ವೈಯಕ್ತಿಕ ಸಾಲವನ್ನು ಪಡೆಯಬಹುದು.

ವೈಯಕ್ತಿಕ ಸಾಲಕ್ಕೆ ಬೇರೆ ಬೇರೆ ಬ್ಯಾಂಕುಗಳಲ್ಲಿ (Banks) ಬೇರೆ ಬೇರೆ ರೀತಿಯ ಬಡ್ಡಿಯನ್ನು ವಿಧಿಸಲಾಗುತ್ತದೆ. ಅದರಲ್ಲೂ ನಿಮ್ಮ ಕ್ರೆಡಿಟ್ ಸ್ಕೋರ್ ಉತ್ತಮವಾಗಿದ್ದರೆ ಕಡಿಮೆ ಬಡ್ಡಿ ದರದಲ್ಲಿ ವೈಯಕ್ತಿಕ ಸಾಲ ಪಡೆಯಬಹುದು. ಕ್ರೆಡಿಟ್ ಸ್ಕೋರ್ ಕಳಪೆಯಾಗಿದ್ದರೆ ಬಡ್ಡಿ ದರವು ಅಧಿಕವಾಗುತ್ತದೆ.

ಹೀಗಾಗಿ ಕೆಲವು ಟ್ರಿಕ್ಕುಗಳನ್ನು ನೀವು ಬಳಸುತ್ತಾ ಬಂದರೆ ಸುಲಭವಾಗಿ ಕಡಿಮೆ ಬಡ್ಡಿ ದರದಲ್ಲಿ ವೈಯಕ್ತಿಕ ಸಾಲವನ್ನು (Personal Loan) ಪಡೆದುಕೊಳ್ಳಬಹುದು.

ಏನು ಬೇಡ, ಈ ರೀತಿ ಮಾಡಿ ಸಾಕು! ಅತಿ ಕಡಿಮೆ ಬಡ್ಡಿಯಲ್ಲಿ ಸಿಗುತ್ತೆ ಪರ್ಸನಲ್ ಲೋನ್

ಆಧಾರ್ ಕಾರ್ಡ್ ಇದ್ರೆ ಸಾಕು, ಸಿಗುತ್ತೆ ಯಾವುದೇ ಶೂರಿಟಿ ಇಲ್ಲದೆ 50,000 ತನಕ ಸಾಲ

ಈ ಟ್ರಿಕ್ಸ್ ಬಳಸಿ ವೈಯಕ್ತಿಕ ಸಾಲ ಸುಲಭವಾಗಿ ಸಿಗುತ್ತೆ!

* ಮೊದಲನೇದಾಗಿ ವೈಯಕ್ತಿಕ ಸಾಲವನ್ನು ಪಡೆದುಕೊಳ್ಳುವಾಗ ನೀವು ಸರಿಯಾದ ಸಮಯಕ್ಕೆ ಸಂಪೂರ್ಣ ಸಾಲವನ್ನು ಮರುಪಾವತಿ (Loan Re-Payment) ಮಾಡುತ್ತೀರಿ ಎನ್ನುವ ಭರವಸೆ ಸಾಲದಾತರಿಗೆ ನೀಡಬೇಕು. ಅಂದರೆ ನಿಮ್ಮ ದಾಖಲೆಗಳು ಸರಿಯಾಗಿದ್ದರೆ, ನಿಮ್ಮ ಅಪ್ರೋಚ್ ಸರಿಯಾಗಿದ್ದರೆ ಬ್ಯಾಂಕುಗಳು ಸುಲಭವಾಗಿ ಸಾಲ ಮಂಜೂರು ಮಾಡುತ್ತವೆ.

* ಇನ್ನು ಎರಡನೆಯದಾಗಿ ನಿಮ್ಮ ಕ್ರೆಡಿಟ್ ಸ್ಕೋರ್ ಪಾವತಿ ಹಿಸ್ಟರಿಯನ್ನೂ ಅವಲಂಬಿಸಿರುತ್ತದೆ. ಹಾಗಾಗಿ ನಿಮ್ಮ ಕ್ರೆಡಿಟ್ ಕಾರ್ಡ್ ಪಾವತಿ ಅಥವಾ ಬಿಲ್ ಗಳನ್ನು ಸರಿಯಾದ ಸಮಯಕ್ಕೆ ಪಾವತಿ ಮಾಡಿದರೆ ಕ್ರೆಡಿಟ್ ಸ್ಕೋರ್ ಉತ್ತಮವಾಗಿರುತ್ತದೆ.

* ಮೂರನೆಯದಾಗಿ ಸಾಲ ತೆಗೆದುಕೊಳ್ಳುವುದಕ್ಕೂ ಮೊದಲು ಬ್ಯಾಂಕುಗಳು ನೀಡುವ ಬಹು ಸಾಲದ ಕೊಡುಗೆಗಳ ಬಗ್ಗೆ ತಿಳಿದುಕೊಳ್ಳಬೇಕು. ಆನ್ಲೈನ್ ನಲ್ಲಿ ಅಥವಾ ಕ್ರೆಡಿಟ್ ಯೂನಿಯನ್ ಗಳಂತಹ ಬೇರೆ ಬೇರೆ ಬ್ಯಾಂಕ್ಗಳಲ್ಲಿ ಸಾಲದ ಬಗ್ಗೆ ಮೊದಲು ಮಾಹಿತಿ ಪಡೆದುಕೊಳ್ಳಬೇಕು. ಯಾವ ಬ್ಯಾಂಕುಗಳಲ್ಲಿ ಕಡಿಮೆ ಬಡ್ಡಿ ದರಕ್ಕೆ ಸಾಲ ಸಿಗುತ್ತದೆ ಎನ್ನುವ ಮಾಹಿತಿ ತಿಳಿದುಕೊಳ್ಳಬೇಕು.

ಕೇವಲ 5,000 ಬಂಡವಾಳ ಹಾಕಿ ಈ ಬಿಸನೆಸ್ ಮಾಡಿದ್ರೆ ತಿಂಗಳಿಗೆ 50 ಸಾವಿರ ಆದಾಯ ಪಕ್ಕಾ!

Personal Loan Tips* ಸರಿಯಾದ ಸಮಯಕ್ಕೆ ಕಡಿಮೆ ಅವಧಿಯಲ್ಲಿ ಸಾಲವನ್ನು ಹಿಂತಿರುಗಿಸುವುದು ಬಹಳ ಮುಖ್ಯ. ಈ ರೀತಿ ಮಾಡುವುದರಿಂದ ಕ್ರೆಡಿಟ್ ಸ್ಕೋರ್ ಹೆಚ್ಚಾಗುತ್ತದೆ ಹಾಗೂ ಭವಿಷ್ಯದಲ್ಲಿ ಸಾಲವನ್ನು ಪಡೆದುಕೊಳ್ಳಲು ನೀವು ಬಹಳ ಬೇಗ ಅರ್ಹತೆಯನ್ನು ಪಡೆದುಕೊಳ್ಳುತ್ತೀರಿ.

* ನಿಮಗೆ ಎಷ್ಟು ಅಗತ್ಯವಿದೆಯೋ ಅಷ್ಟನ್ನು ಮಾತ್ರ ಸಾಲವಾಗಿ ತೆಗೆದುಕೊಳ್ಳಿ ಅಗತ್ಯಕ್ಕಿಂತ ಹೆಚ್ಚಿನ ಹಣವನ್ನು ಸಾಲವಾಗಿ ತೆಗೆದುಕೊಂಡಾಗ ಪಾವತಿಸುವ ಹೊರೆ ಹೆಚ್ಚಾಗುತ್ತದೆ. ಪ್ರತಿ ತಿಂಗಳು ಬಡ್ಡಿ ವೆಚ್ಚ ಭರಿಸುವುದಕ್ಕೆ ಕಷ್ಟವಾಗಬಹುದು ಹಾಗಾಗಿ ಅಗತ್ಯವಿದ್ದಾಗ ಹಾಗೂ ಅಗತ್ಯಕ್ಕೆ ತಕ್ಕಷ್ಟು ಮಾತ್ರ ಸಾಲ ತೆಗೆದುಕೊಳ್ಳುವುದು ಒಳ್ಳೆಯದು.

ಈ ರೀತಿ ಜಾಣ್ಮೆಯಿಂದ ನೀವು ವೈಯಕ್ತಿಕ ಸಾಲವನ್ನು ಪಡೆದುಕೊಂಡರೆ ಅದರ ಮರುಪಾವತಿ ಹೆಚ್ಚು ಕಷ್ಟವಾಗುವುದಿಲ್ಲ.

Personal Loan Tips, Get Loans at Lower Interest Rates with These Smart Tricks

English Summary
Related Stories