ಹಸು ಸಗಣಿಗೂ ಬಂತು ಡಿಮ್ಯಾಂಡ್; ಒಂದು ಕೆಜಿ 50 ರೂಪಾಯಿಗಳಿಗೆ ಮಾರಾಟ

Cow Dung : ಹಸುವಿನ ಸಗಣಿಗೆ ಬೇಡಿಕೆ ಹೆಚ್ಚಾಗಿದ್ದು, ನಮ್ಮ ದೇಶದಿಂದ ವಿದೇಶಗಳಿಗೆ ಸಗಣಿಯನ್ನು ರಫ್ತು ಮಾಡಲಾಗುತ್ತಿದೆ. ಕುವೈತ್ ಮತ್ತು ಅರಬ್ ದೇಶಗಳಲ್ಲಿ ಗೋಮಾತೆಯ ಸಗಣಿಗೆ ಹೆಚ್ಚು ಡಿಮ್ಯಾಂಡ್ ಕ್ರಿಯೆಟ್ ಆಗಿದೆ.

  • ಹಸು ಸಗಣಿಗೂ ಹೆಚ್ಚಿದೆ ಬೇಡಿಕೆ, ಕುವೈತ್ ರಾಷ್ಟ್ರಗಳು ಮಾಡಿಕೊಳ್ಳುತ್ತಿವೆ ಆಮದು.
  • ಹಸುವಿನ ಸಗಣಿ 30 ರಿಂದ 50 ರೂಪಾಯಿ ಕೆಜಿಗೆ
  • ಖರ್ಜೂರ ಫಸಲನ್ನು ಹೆಚ್ಚಿಸಲು ಸಗಣಿ ಗೊಬ್ಬರವೇ ಬೆಸ್ಟ್ ಮೆಡಿಸಿನ್

Cow Dung : ನಮ್ಮ ದೇಶದಲ್ಲಿ ಹಸುವಿಗೆ ವಿಶೇಷವಾದ ಸ್ಥಾನವಿದೆ. ಅದರಲ್ಲೂ ಹಿಂದುಗಳಿಗೆ ಹಸು ಪೂಜ್ಯನೀಯವಾಗಿರುವ ಹಿನ್ನಲೆಯಲ್ಲಿ, ಹಸುವಿನಿಂದ ನೀಡಲ್ಪಡುವ ಹಾಲಿನಿಂದ ಹಿಡಿದು ಗೋಮಯ, ಗೋಮೂತ್ರಗಳು ಕೂಡ ಅಷ್ಟೇ ಮಹತ್ವವನ್ನು ಪಡೆದುಕೊಂಡಿದೆ.

ನಾವು ಗೋವನ್ನು ದೇವರು ಎಂದು ಪರಿಗಣಿಸಿರುವುದು ಮಾತ್ರವಲ್ಲದೆ, ಅದರ ಮಲ ಮೂತ್ರಗಳಲ್ಲಿ ಇರುವ ಔಷಧಿಯ ಗುಣಗಳನ್ನು ಅರ್ಥ ಮಾಡಿಕೊಂಡಿದ್ದೇವೆ. ಈ ಹಿನ್ನೆಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಹಸುವಿನಿಂದ ಸಿಗುವ ಸಗಣಿ ಹಾಗೂ ಗೋಮೂತ್ರಕ್ಕೆ ವಿಶೇಷವಾದ ಬೇಡಿಕೆಯು ಬಂದಿದೆ.

ಈ ಒಂದು ನೋಟ್ ನಿಮ್ಮತ್ರ ಇದ್ರೆ ನೀವು ಲಕ್ಷಾಧಿಪತಿಯಾಗುವುದು ಪಕ್ಕ! ಲಕ್ಷಗಟ್ಟಲೆ ದುಡ್ಡು

ಹಸು ಸಗಣಿಗೂ ಬಂತು ಡಿಮ್ಯಾಂಡ್; ಒಂದು ಕೆಜಿ 50 ರೂಪಾಯಿಗಳಿಗೆ ಮಾರಾಟ

ಹಸು ಸಗಣಿಗೆ ಹೆಚ್ಚಿದ ಡಿಮ್ಯಾಂಡ್!

ನಮ್ಮ ದೇಶದಲ್ಲಿ ಪುರಾತನ ಕಾಲದಿಂದಲೂ ಹಸುವಿನಿಂದ ಸಿಗುವ ಸಗಣಿ ಹಾಗೂ ಗೋಮೂತ್ರವನ್ನು ಪವಿತ್ರ ಎಂದು ಪರಿಗಣಿಸಿ ಬೇರೆ ಬೇರೆ ರೀತಿಯಲ್ಲಿ ಅವುಗಳ ಉಪಯೋಗ ಮಾಡುತ್ತಾ ಬಂದಿದ್ದೇವೆ. ಅದೇ ರೀತಿ ಇತ್ತೀಚಿನ ದಿನಗಳಲ್ಲಿ ಭಾರತದ ಹಸುವಿನ ಸಗಣಿಗೆ ಬೇಡಿಕೆ ಹೆಚ್ಚಾಗಿದ್ದು, ನಮ್ಮ ದೇಶದಿಂದ ವಿದೇಶಗಳಿಗೆ ಸಗಣಿಯನ್ನು ರಫ್ತು ಮಾಡಲಾಗುತ್ತಿದೆ. ಕುವೈತ್ ಮತ್ತು ಅರಬ್ ದೇಶಗಳಲ್ಲಿ ಗೋಮಾತೆಯ ಸಗಣಿಗೆ ಹೆಚ್ಚು ಡಿಮ್ಯಾಂಡ್ ಕ್ರಿಯೆಟ್ ಆಗಿದೆ.

ಸಗಣಿಯ ಬೆಲೆ ಎಷ್ಟು ಗೊತ್ತಾ?

ಕೃಷಿ ವಿಜ್ಞಾನಿಗಳ ಸಂಶೋಧನೆಯ ಪ್ರಕಾರ ಗೋವಿನಿಂದ ಸಿಗುವ ಸಗಣಿಯ ಪುಡಿಯನ್ನು ತಯಾರಿಸಿ ಅದನ್ನು ಖರ್ಜೂರದ ಮರಕ್ಕೆ ಹಾಕಿದರೆ ಫಸಲು ಉತ್ತಮವಾಗಿರುತ್ತದೆ ಎಂದು ತಿಳಿಸಲಾಗಿದೆ. ಕುವೈತ್ ಹಾಗೂ ಇತರ ಅರಬ್ ದೇಶಗಳಲ್ಲಿ ಖರ್ಜೂರದ ಉತ್ಪಾದನೆಯನ್ನು ಹೆಚ್ಚಿಸುವ ಸಲುವಾಗಿ ಹಸುವಿನ ಸಗಣಿಯಿಂದ ಗೊಬ್ಬರ ತಯಾರಿಸಿ ಅದನ್ನು ಖರ್ಜೂರದ ಮರಕ್ಕೆ ಹಾಕಲಾಗುತ್ತದೆ. ಇದರಿಂದಾಗಿ ಖರ್ಜೂರದ ಹಣ್ಣು ಉತ್ತಮ ಗುಣಮಟ್ಟದಲ್ಲಿ ಬೆಳೆಯುತ್ತದೆ ಎಂದು ಸಂಶೋಧನೆ ತಿಳಿಸಿದೆ.

ಮಾಹಿತಿಯ ಪ್ರಕಾರ ಇತ್ತೀಚಿಗೆ ಕುವೈತ್ ದೇಶ 192 ಮೆಟ್ರಿಕ್ ಟನ್ ಹಸುವಿನ ಸಗಣಿಯನ್ನು ನಮ್ಮ ದೇಶದಿಂದ ಆಮದು ಮಾಡಿಕೊಂಡಿದೆ. ಹೀಗಾಗಿ ಸಗಣಿ ಪ್ರತೀ ಕೆಜಿಗೆ 30 ರಿಂದ 50 ರೂಪಾಯಿಗಳ ಬೆಲೆಯಲ್ಲಿ ಮಾರಾಟವಾಗುತ್ತಿದೆ.

ಕಸ ಅಂತ ಬಿಸಾಡಬೇಡಿ, ತೆಂಗಿನಕಾಯಿ ಚಿಪ್ಪಿನಿಂದ ಮಾಡಬಹುದು ಕೈ ತುಂಬಾ ಸಂಪಾದನೆ

Cow Dungಪ್ರತಿದಿನ 30 ಲಕ್ಷ ಟನ್ ಹಸುವಿನ ಸಗಣಿ ಲಭ್ಯ!

ಭಾರತ ಕೃಷಿ ಪ್ರಧಾನ ರಾಷ್ಟ್ರ ಹೀಗಾಗಿ ಇಲ್ಲಿ ನೈಸರ್ಗಿಕ ಗೊಬ್ಬರವನ್ನು ಕೃಷಿಯಲ್ಲಿ ಬಳಸುವ ರೈತರ ಸಂಖ್ಯೆ ಹೆಚ್ಚು. ಹಾಗಾಗಿ ಜಾನುವಾರಗಳನ್ನು ಹೆಚ್ಚಾಗಿ ಅವಲಂಬಿಸಲಾಗಿದೆ. ಭಾರತದಲ್ಲಿ 30 ಕೋಟಿಗೂ ಅಧಿಕ ಜಾನುವಾರುಗಳು ಇವೆ ಎಂದು ಅಂದಾಜಿಸಲಾಗಿದ್ದು, ಇದರಿಂದ ಪ್ರತಿ ದಿನ 30 ಲಕ್ಷ ಗಿಂತಲೂ ಹೆಚ್ಚು ಸಗಣಿ ಲಭ್ಯವಾಗುತ್ತದೆ.

ಏನು ಬೇಡ, ಈ ರೀತಿ ಮಾಡಿ ಸಾಕು! ಅತಿ ಕಡಿಮೆ ಬಡ್ಡಿಯಲ್ಲಿ ಸಿಗುತ್ತೆ ಪರ್ಸನಲ್ ಲೋನ್

ಸಗಣಿಯನ್ನು ಗೊಬ್ಬರವಾಗಿ ಮರಗಿಡಗಳಿಗೆ ಬಳಸುವುದರಿಂದ ಫಸಲು ಉತ್ತಮವಾಗಿರುತ್ತದೆ. ನಮ್ಮ ದೇಶದ ಈ ಕೃಷಿಯ (Agriculture) ಟ್ರಿಕ್ ಅನ್ನು ಅರಿತುಕೊಂಡ ಪರ ರಾಷ್ಟ್ರಗಳು ಕೂಡ ಸಗಣಿಯನ್ನು ಆಮದು ಮಾಡಿಕೊಂಡು ತಮ್ಮ ಕೃಷಿ ಉತ್ಪಾದನೆಯನ್ನು ಹೆಚ್ಚಿಸುವತ್ತ ದೃಷ್ಟಿ ನೆಟ್ಟಿವೆ.

ಇದು ನಿಜಕ್ಕೂ ಉತ್ತಮ ಬೆಳವಣಿಗೆಯಾಗಿದ್ದು ಮುಂದಿನ ದಿನಗಳಲ್ಲಿ ಭಾರತದ ಆರ್ಥಿಕತೆಗೆ ಜಾನುವಾರುಗಳ ಕೊಡುಗೆಯು ಮಹತ್ವದ ಸ್ಥಾನ ಪಡೆದುಕೊಳ್ಳಲಿದೆ.

Cow Dung in High Demand; Sold for 50 Rupees per KG

English Summary
Related Stories