Business News

ನಿಮ್ಮತ್ರ ಆಧಾರ್ ಕಾರ್ಡ್ ಇದ್ರೆ ಇನ್ಮುಂದೆ ಇನ್ನೂ 3 ತಿಂಗಳ ಕಾಲ ಈ ಸೇವೆ ಉಚಿತ

Aadhaar Card Update : ಆಧಾರ್ ಕಾರ್ಡ್ (Aadhaar Card) ಹತ್ತು ವರ್ಷಕ್ಕಿಂತ ಹಳೆಯದಾಗಿದ್ದರೆ, ಅದನ್ನು ತಕ್ಷಣ ಅಪ್ಡೇಟ್ (Aadhaar update) ಮಾಡಿಸಿಕೊಳ್ಳಬೇಕು. ಇಲ್ಲವಾದರೆ ಸರ್ಕಾರದ ಯಾವ ಯೋಜನೆಯ ಪ್ರಯೋಜನವು ಸಿಗುವುದಿಲ್ಲ ಎಂದು ಈಗಾಗಲೇ ತಿಳಿಸಲಾಗಿತ್ತು.

ಆದರೆ ಸಾಕಷ್ಟು ಜನ ಈ ಕೆಲಸವನ್ನು ಮಾಡಿಕೊಂಡಿಲ್ಲ. ಹೀಗಾಗಿ ಮತ್ತೆ ಉಚಿತವಾಗಿ ಆಧಾರ್ ಅಪ್ಡೇಟ್ ಮಾಡಿಕೊಳ್ಳುವ ಅವಧಿಯನ್ನು ವಿಸ್ತರಿಸಲಾಗಿದೆ. ಇನ್ನು ಮೂರು ತಿಂಗಳ ಅವಕಾಶ ಕೊಡಲಾಗಿದೆ.

September 14 Last Date for All Aadhaar Card Holders

ಕೈತುಂಬಾ ಹಣ ಸಂಪಾದನೆ ಮಾಡೋದಕ್ಕೆ ಇದಕ್ಕಿಂತ ಬೆಸ್ಟ್ ಬಿಸಿನೆಸ್ ಪ್ಲಾನ್ ಇನ್ನೊಂದಿಲ್ಲ

ಆಧಾರ್ ಕಾರ್ಡ್ ಭಾರತೀಯ ನಾಗರಿಕರಿಗೆ ಕೊಡಲ್ಪಟ್ಟ ಬಹಳ ಮುಖ್ಯವಾಗಿರುವ ಗುರುತಿನ ದಾಖಲೆ ಆಗಿದೆ. ನಮ್ಮ ಪ್ರತಿಯೊಂದು ಕೆಲಸಕ್ಕೂ ಕೂಡ ನಾವು ಆಧಾರ್ ಕಾರ್ಡ್ಅನ್ನೇ ಆಧಾರವಾಗಿಟ್ಟುಕೊಳ್ಳುತ್ತೇವೆ.

ಇಂತಹ ಸಂದರ್ಭದಲ್ಲಿ ನೀವು ಹತ್ತು ವರ್ಷಕ್ಕಿಂತ ಹಳೆಯ ಆಧಾರ್ ಕಾರ್ಡ್ ಬಳಸುತ್ತಿದ್ದರೆ ಅದನ್ನು ಅಪ್ಡೇಟ್ ಮಾಡಿಸಿಕೊಳ್ಳಬೇಕು. ಇಲ್ಲದೆ ಇದ್ದಲ್ಲಿ ನಿಮ್ಮ ಅಪ್ಡೇಟೆಡ್ ಮಾಹಿತಿ ಸರ್ಕಾರದ ಡೇಟಾಬೇಸ್ ನಲ್ಲಿ ಸೇವ್ ಆಗುವುದಿಲ್ಲ. ಹಾಗಿದ್ದಾಗ ಸರ್ಕಾರದ ಯೋಜನೆಯ ಪ್ರಯೋಜನ ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ.

ಗೃಹಲಕ್ಷ್ಮಿ ಯೋಜನೆಯ ಹಣಕ್ಕೆ ಬೇಕು ಆಧಾರ್ ಕಾರ್ಡ್ ಅಪ್ಡೇಟ್

ಗೃಹಲಕ್ಷ್ಮಿ ಯೋಜನೆಯಲ್ಲಿ ನಿಮ್ಮ ವಯಕ್ತಿಕ ಮಾಹಿತಿ ಎನ್ನುವುದು ಬಹಳ ಮುಖ್ಯ. ಯಾವುದೇ ರೀತಿಯ ವಂಚನೆ ಆಗಬಾರದು ಎನ್ನುವ ಕಾರಣಕ್ಕೆ ಆಧಾರ್ ಕಾರ್ಡ್ ಲಿಂಕ್ ಅನ್ನು ಸರ್ಕಾರ ಕಡ್ಡಾಯಗೊಳಿಸಿದೆ.

ನಿಮ್ಮ ಬ್ಯಾಂಕ್ ಖಾತೆಯೊಂದಿಗೆ (Bank Account) ಆಧಾರ್ ಲಿಂಕ್ ಆಗಿರಬೇಕು. ರೇಷನ್ ಕಾರ್ಡ್ ಜೊತೆಗೆ ಆಧಾರ್ ಲಿಂಕ್ ಆಗಿರಬೇಕು. ಒಂದು ವೇಳೆ ಆಧಾರ್ ಕಾರ್ಡ್ ಹಳೇದಾಗಿದ್ರೆ ಈ ರೀತಿ ಲಿಂಕ್ ಮಾಡಲು ಸಾಧ್ಯವಿಲ್ಲ ಹೀಗಾಗಿ ಆಧಾರ್ ಕಾರ್ಡ್ ಅಪ್ಡೇಟ್ ಎನ್ನುವುದು ಬಹಳ ಮುಖ್ಯವಾಗಿರುತ್ತದೆ.

ವಸತಿ ಯೋಜನೆಯಲ್ಲಿ ಉಚಿತ ಮನೆ ಸ್ಕೀಮ್! ಸಿಗಲಿದೆ 1 ಲಕ್ಷ ರೂಪಾಯಿ ಸಹಾಯಧನ

ಆಧಾರ್ ಕಾರ್ಡ್ ಅಪ್ಡೇಟ್ ಗೆ ಶುಲ್ಕ?

Aadhaar Cardಆಧಾರ್ ಕಾರ್ಡ್ ನವೀಕರಣಕ್ಕೆ ಡಿಸೆಂಬರ್ 14 ಕೊನೆಯ ದಿನಾಂಕ ಎಂದು ಘೋಷಿಸಲಾಗಿತ್ತು. ಅದಾದ ನಂತರ ಮಾರ್ಚ್ 14, 2024ರ ವರೆಗೆ ಅವಕಾಶ ನೀಡಲಾಯಿತು. ಈ ದಿನಾಂಕದ ನಂತರ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಿಕೊಳ್ಳುವದಿದ್ದರೆ ನೀವು ಶುಲ್ಕವನ್ನು ಪಾವತಿ ಮಾಡಬೇಕು ಎಂದು ಕೂಡ ತಿಳಿಸಲಾಗಿತ್ತು.

ಆದರೆ ಈಗ ಈ ಎಲ್ಲಾ ನಿಯಮಗಳಲ್ಲಿ ಬದಲಾವಣೆ ಮಾಡಲಾಗಿದ್ದು ನೀವು ಉಚಿತವಾಗಿ ಆನ್ಲೈನ್ ಮೂಲಕ ಮುಂದಿನ ಜೂನ್ 14 2024 ವರೆಗೆ ಆಧಾರ್ ಅಪ್ಡೇಟ್ ಅನ್ನು ಉಚಿತವಾಗಿ ಮಾಡಿಸಿಕೊಳ್ಳಬಹುದು. ಆದ್ರೂ ನೀವು ಆಧಾರ್ ಕಾರ್ಡ್ ಕೇಂದ್ರಕ್ಕೆ ಹೋಗಿ ಅಪ್ಡೇಟ್ ಮಾಡಿಸಿಕೊಂಡರೆ 100 ರೂಪಾಯಿಗಳ ಶುಲ್ಕ ಪಾವತಿಸಬೇಕಾಗಬಹುದು.

ಈ ಯೋಜನೆಯಲ್ಲಿ ಪ್ರತಿ ತಿಂಗಳು ಸಿಗಲಿದೆ 21,000 ಪಿಂಚಣಿ! ಈಗಲೇ ಅರ್ಜಿ ಸಲ್ಲಿಸಿ

ಆಧಾರ್ ಅಪ್ಡೇಟ್ ಮಾಡಿಸಿಕೊಳ್ಳುವುದು ಹೇಗೆ?

https://myaadhaar.uidai.gov.in ಈ ವೆಬ್ ಸೈಟ್ ಗೆ ನಿಮ್ಮ ಆಧಾರ್ ಸಂಖ್ಯೆಯನ್ನು ಕೊಟ್ಟು ಲಾಗಿನ್ ಆಗಿ. ನಂತರ ನಿಮ್ಮ ಆಧಾರ್ ನಲ್ಲಿ ಹೆಸರು, ವಿಳಾಸ, ಲಿಂಗ, ಜನ್ಮ ದಿನಾಂಕ ಇವುಗಳಲ್ಲಿ ಯಾವುದನ್ನು ಅಪ್ಡೇಟ್ ಮಾಡಿಕೊಳ್ಳಬೇಕು ಎನ್ನುವುದನ್ನು ನೋಡಿ ಅದಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ನೀಡಿ ಅಪ್ಡೇಟ್ ಮಾಡಿಕೊಳ್ಳಬಹುದು.

ನಿಮ್ಮ ಅಪ್ಡೇಟ್ ಪ್ರೊಸೆಸ್ ಕಂಪ್ಲೀಟ್ ಆದ ನಂತರ ನಿಮಗೆ ಒಂದು ಸಂಖ್ಯೆಯನ್ನು ಕೊಡಲಾಗುತ್ತದೆ. ಹಾಗೂ ಆ ಸಂಖ್ಯೆಯ ಮೂಲಕ ಆಧಾರ್ ಕಾರ್ಡ್ ಅಪ್ಡೇಟ್ ಆಗಿದೆಯೋ ಇಲ್ಲವೋ ಅಂತ ತಿಳಿದುಕೊಳ್ಳಬಹುದು.

ಇನ್ನು ಆಫ್ ಲೈನ್ ಮೂಲಕ ನೀವು ಆಧಾರ್ ಕೇಂದ್ರಕ್ಕೆ ಹೋಗಿ ಆಧಾರ್ ಅಪ್ಡೇಟ್ ಅನ್ನು ಸುಲಭವಾಗಿ ಮಾಡಿಸಿಕೊಳ್ಳಿ.

ನಿಮ್ಮತ್ರ ಈ 10 ರೂಪಾಯಿ ನೋಟು ಇದ್ರೆ ಸಿಗುತ್ತೆ 18 ಲಕ್ಷ ರೂಪಾಯಿ! ಬಂಪರ್ ಆಫರ್

Date Extended for free Aadhaar card Update

Kannada News Today

Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019

Related Stories