ಕೈತುಂಬಾ ಹಣ ಸಂಪಾದನೆ ಮಾಡೋದಕ್ಕೆ ಇದಕ್ಕಿಂತ ಬೆಸ್ಟ್ ಬಿಸಿನೆಸ್ ಪ್ಲಾನ್ ಇನ್ನೊಂದಿಲ್ಲ

Ice Cream Business : ಸ್ವಂತ ಉದ್ಯಮ (Own Business) ಆರಂಭಿಸಬೇಕು ಅನ್ನೋರು ತಪ್ಪದೆ ಈ ಲೇಖನ ಓದಿ. ಯಾಕಂದ್ರೆ ತಿಂಗಳಿಗೆ ಲಕ್ಷ ಲಕ್ಷ ಹಣ ಗಳಿಸುವುದಕ್ಕೆ ಸಾಧ್ಯವಾಗುತ್ತದೆ.

Bengaluru, Karnataka, India
Edited By: Satish Raj Goravigere

Ice Cream Business : ಬೇಸಿಗೆ ಕಾಲ (summer season) ದಲ್ಲಿ ಕೆಲವು ಪ್ರಮುಖ ಬಿಸಿನೆಸ್ ಐಡಿಯಾ (business ideas) ಗಳು ಹುಟ್ಟಿಕೊಳ್ಳುತ್ತವೆ. ಈ ಸಮಯದಲ್ಲಿ ಏನಾದರೂ ನೀವು ಈ ಬಿಸಿನೆಸ್ ಗಳಿಗೆ ಕೈ ಹಾಕಿದ್ರೆ ಗ್ಯಾರಂಟಿ ಅತ್ಯುತ್ತಮ ಲಾಭ ಪಡೆದುಕೊಳ್ಳುತ್ತೀರಿ.

ಹಾಗಾಗಿ ಸ್ವಂತ ಉದ್ಯಮ (Own Business) ಆರಂಭಿಸಬೇಕು ಅನ್ನೋರು ತಪ್ಪದೆ ಈ ಲೇಖನ ಓದಿ. ಯಾಕಂದ್ರೆ ಇದೊಂದು ಬಿಸಿನೆಸ್ ನೀವು ಆರಂಭ ಮಾಡಿದ್ರೆ ತಿಂಗಳಿಗೆ ಲಕ್ಷ ಲಕ್ಷ ಹಣ ಗಳಿಸುವುದಕ್ಕೆ ಸಾಧ್ಯವಾಗುತ್ತದೆ.

If you have 10 thousand then start this business, 50 thousand profit per month

ವಸತಿ ಯೋಜನೆಯಲ್ಲಿ ಉಚಿತ ಮನೆ ಸ್ಕೀಮ್! ಸಿಗಲಿದೆ 1 ಲಕ್ಷ ರೂಪಾಯಿ ಸಹಾಯಧನ

ಐಸ್ ಕ್ರೀಮ್ ಬಿಸಿನೆಸ್! (Ice cream business)

ಯಾವುದೇ ಬಿಸಿನೆಸ್ ಆರಂಭಿಸುವುದಕ್ಕೂ ಮೊದಲು ಆ ಬಿಸಿನೆಸ್ ಬಗ್ಗೆ ಮಾರುಕಟ್ಟೆ ಅಭಿಪ್ರಾಯ ಹೇಗಿದೆ ಅಂತ ತಿಳಿದುಕೊಳ್ಳುವುದು ಮುಖ್ಯ. ಇನ್ನೂ ನೀವು ಸ್ವಲ್ಪ ಉದ್ಯಮದ ಬಗ್ಗೆ ತಿಳಿದುಕೊಂಡಿದ್ದರೆ ಖಂಡಿತವಾಗಿಯೂ ನೀವು ಮಾಡುವ ಉದ್ಯಮದಲ್ಲಿ ನಷ್ಟ ಅನುಭವಿಸುವ ಸಾಧ್ಯತೆಗಳು ಕಡಿಮೆ.

ಅದರಲ್ಲೂ ಕೆಲವು ಕಾಲಕ್ಕೆ ತಕ್ಕಂತೆ ಮಾಡುವ ಬಿಸಿನೆಸ್ ಗಳು ಹೆಚ್ಚು ಲಾಭವನ್ನು ತಂದುಕೊಡುತ್ತವೆ. ಅಂತಹ ಬಿಸಿನೆಸ್ ನಲ್ಲಿ ಒಂದು ಐಸ್ ಕ್ರೀಮ್ ತಯಾರಿಸುವುದು.

ಬೇಸಿಗೆಯಲ್ಲಿ ಐಸ್ ಕ್ರೀಮ್ ಸೇವನೆ ಮಾಡುವವರ ಸಂಖ್ಯೆ ಜಾಸ್ತಿ. ಹಾಗಾಗಿ ನೀವು ಐಸ್ ಕ್ರೀಮ್ ತಯಾರಿಸುವ ಕಲೆ ತಿಳಿದುಕೊಂಡಿದ್ದರೆ ಹಾಗೂ ಕೆಲವು ಯಂತ್ರಗಳನ್ನ ಬಳಕೆ ಮಾಡುವುದು ಗೊತ್ತಿದ್ದರೆ ಸುಲಭವಾಗಿ ಐಸ್ ಕ್ರೀಮ್ ತಯಾರಿಸಬಹುದು. ಅಷ್ಟೇ ಅಲ್ಲ ಹೋಟೆಲ್ ಗಳಿಗೆ (Hotel) ಮಾಲ್ಗಳಿಗೆ ನೀವು ತಯಾರಿಸಿದ ಐಸ್ ಕ್ರೀಮ್ ಮಾರಾಟ ಮಾಡಿ ಉತ್ತಮ ಲಾಭ ಗಳಿಸಬಹುದು.

ಈ ಯೋಜನೆಯಲ್ಲಿ ಪ್ರತಿ ತಿಂಗಳು ಸಿಗಲಿದೆ 21,000 ಪಿಂಚಣಿ! ಈಗಲೇ ಅರ್ಜಿ ಸಲ್ಲಿಸಿ

Ice Cream Businessಐಸ್ ಕ್ರೀಮ್ ತಯಾರಿಸಲು ಬಂಡವಾಳ!

ಬೇಸಿಗೆ ಕಾಲದಲ್ಲಿ ಐಸ್ ಕ್ರೀಂ ಬೇಡಿಕೆ ಸಿಕ್ಕಾಪಟ್ಟೆ ಜಾಸ್ತಿ ಇರುತ್ತೆ. ಹಾಗಾಗಿ ನೀವು ಸ್ವಲ್ಪ ಬಂಡವಾಳ ಹಾಕಿ ಆದ್ರೂ ಸರಿ, ಐಸ್ ಕ್ರೀಮ್ ಬಿಸಿನೆಸ್ ಆರಂಭಿಸಬಹುದು. ಇದಕ್ಕೆ ಹಾಲು, ಹಾಲಿನ ಪುಡಿ ,ಫ್ಲೇವರ್ ಗಳು, ಕಲರ್ ಗಳು, ಮೊಟ್ಟೆ ಮೊದಲಾದ ಬೇಸಿಕ್ ವಸ್ತುಗಳು ಬೇಕು.

ಇವೆಲ್ಲವೂ ನಿಮಗೆ ಮಾರುಕಟ್ಟೆಯಲ್ಲಿ ಸುಲಭವಾಗಿ ಸಿಗುತ್ತವೆ. ಇನ್ನು ಐಸ್ ಕ್ರೀಮ್ ತಯಾರಿಸುವುದಕ್ಕೆ ಮುಖ್ಯವಾಗಿ ಕೆಲವು ಮಷೀನ್ ಗಳು ಬೇಕು. ಕೂಲಿಂಗ್ ಕಂಡೆನ್ಸರ್, ಉಪ್ಪು ನೀರಿನ ಟ್ಯಾಂಕ್, ಫ್ರಿಡ್ಜ್, ಐಸ್ ಕೂಲರ್, ಮಿಕ್ಸರ್ ಇನ್ನು ಮೊದಲಾದ ಯಂತ್ರಗಳ ಅವಶ್ಯಕತೆ ಇರುತ್ತದೆ.

ಸುಮಾರು 2 ಲಕ್ಷ ರೂಪಾಯಿಗಳ ಬಂಡವಾಳದಲ್ಲಿ ಈ ಯಂತ್ರಗಳನ್ನ ಖರೀದಿ ಮಾಡಬಹುದು. ಇನ್ನು ಆಟೋಮ್ಯಾಟಿಕ್ ಐಸ್ ಕ್ರೀಮ್ ತಯಾರಿಸುವ ಯಂತ್ರಗಳು ಕೂಡ ಬಂದಿದ್ದು ನೀವು ಅದನ್ನು ಖರೀದಿ ಮಾಡಬಹುದು.

ನಿಮ್ಮತ್ರ ಈ 10 ರೂಪಾಯಿ ನೋಟು ಇದ್ರೆ ಸಿಗುತ್ತೆ 18 ಲಕ್ಷ ರೂಪಾಯಿ! ಬಂಪರ್ ಆಫರ್

ಐಸ್ ಕ್ರೀಮ್ ಉದ್ಯಮ ಆಹಾರ ತಯಾರಿಕೆಗೆ ಸಂಬಂಧಪಟ್ಟ ಆಗಿರುವುದರಿಂದ FSSAI ಪರವಾನಿಗೆಯನ್ನು ನೀವು ಮೊದಲು ಪಡೆದುಕೊಳ್ಳಬೇಕು.

ಇನ್ನು ನೀವು ಐಸ್ ಕ್ರೀಮ್ ಪಾರ್ಲರ್ ಅನ್ನೇ ಇಡುವುದಾದರೆ ಜನರು ಜಾಸ್ತಿ ಇರುವ ಸ್ಥಳವನ್ನು ನೋಡಿ ಆಯ್ಕೆ ಮಾಡಿಕೊಳ್ಳಬೇಕು. ರುಚಿಕರವಾದ ಐಸ್ ಕ್ರೀಮ್ ತಯಾರಿಸಿ ಕೊಟ್ಟರೆ ಜನ ತಪ್ಪದೇ ನಿಮ್ಮ ಅಂಗಡಿ ಮುಂದೆ ಸಾಲುಗಟ್ಟಿ ನಿಲ್ಲುತ್ತಾರೆ.

ನೀವು ಸರಿಯಾದ ಸ್ಥಳ, ಆಕರ್ಷಕವಾದ ಹೆಸರು ಆಯ್ಕೆ ಮಾಡಿ ಐಸ್ ಕ್ರೀಮ್ ಪಾರ್ಲರ್ ಆರಂಭಿಸಬಹುದು. ಇಂದು ಸೋಶಿಯಲ್ ಮೀಡಿಯಾ ಸಿಕ್ಕಾಪಟ್ಟೆ ಮುಂದುವರಿದಿರುವ ಹಿನ್ನೆಲೆಯಲ್ಲಿ ನೀವು ಅಲ್ಲಿಯೂ ಕೂಡ ಮಾರ್ಕೆಟಿಂಗ್ ಮಾಡಬಹುದು

ಒಟ್ಟಿನಲ್ಲಿ ನಿಮ್ಮ ಉದ್ಯಮ ಚಾಕಚಕ್ಯತೆ ಆಧಾರದ ಮೇಲೆ ನೀವು ಐಸ್ ಕ್ರೀಮ್ ಬಿಸಿನೆಸ್ ನಲ್ಲಿ ಹೆಚ್ಚು ಲಾಭ ಪಡೆದುಕೊಳ್ಳಲು ಸಾಧ್ಯವಿದೆ.

ಆಧಾರ್ ಕಾರ್ಡ್ ಕುರಿತು ಕೇಂದ್ರದ ಇನ್ನೊಂದು ಘೋಷಣೆ! ಇಲ್ಲಿದೆ ಬಿಗ್ ಅಪ್ಡೇಟ್

There is no better business plan than this to make a lot of money