ಆಧಾರ್ ಕಾರ್ಡ್ ಕುರಿತು ಕೇಂದ್ರದ ಇನ್ನೊಂದು ಘೋಷಣೆ! ಇಲ್ಲಿದೆ ಬಿಗ್ ಅಪ್ಡೇಟ್
ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ಯುಐಡಿಎಐ, ಆಧಾರ್ ಕಾರ್ಡ್ ಅಪ್ಡೇಟ್ (Aadhaar Card update) ಮಾಡುವ ಪ್ರಕ್ರಿಯೆ ಕಡ್ಡಾಯ ಎಂದು ತಿಳಿಸಿದೆ. ಭಾರತದಲ್ಲಿ ವಾಸಿಸುವ ಪ್ರತಿಯೊಬ್ಬ ನಾಗರಿಕನು ಆಧಾರ್ ಕಾರ್ಡ್ ಹೊಂದಿರಬೇಕು ಹಾಗೂ ಆಧಾರ್ ಕಾರ್ಡ್ ಇರುವವರು ಅದನ್ನು ಅಪ್ಡೇಟ್ ಮಾಡಿಸಿಕೊಳ್ಳಬೇಕು ಎಂದು ತಿಳಿಸಲಾಗಿದೆ.
ಒಂದು ವೇಳೆ ಆಧಾರ್ ಅಪ್ಡೇಟ್ ಮಾಡಿಸದೆ ಇದ್ದರೆ ಆಧಾರ್ ಗೆ ಕನೆಕ್ಟ್ ಆಗಿರುವ ಯಾವ ಸರ್ಕಾರಿ ಯೋಜನೆಯ ಪ್ರಯೋಜನವನ್ನು ಕೂಡ ಪಡೆದುಕೊಳ್ಳಲು ಸಾಧ್ಯವಿಲ್ಲ.

ಈ ಪೋಸ್ಟ್ ಆಫೀಸ್ ಸ್ಕೀಮ್ ನಲ್ಲಿ ಸಿಗುತ್ತೆ 10 ಲಕ್ಷ ರೂಪಾಯಿ ಪ್ರಯೋಜನ! ಡೋಂಟ್ ಮಿಸ್
ಆಧಾರ್ ಅಪ್ಡೇಟ್ ದಿನಾಂಕ ವಿಸ್ತರಣೆ!
ಯು ಐ ಡಿ ಎ ಐ (UIDAI) ಆಧಾರ್ ಕಾರ್ಡ್ ನವೀಕರಣ (Aadhaar Card update) ಪ್ರಕ್ರಿಯೆಗೆ ಡಿಸೆಂಬರ್ 14 ಕೊನೆಯ ದಿನಾಂಕ ಎಂದು ತಿಳಿಸಿತ್ತು. ಆ ದಿನಾಂಕದ ನಂತರವೂ ಕೂಡ ನೀವು ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಬಹುದಿತ್ತು. ಆದರೆ ಇದಕ್ಕೆ ಶುಲ್ಕ ಪಾವತಿಸಬೇಕು ಎಂದು ಹೇಳಲಾಗಿತ್ತು.
ಆದರೆ ಈಗ ಉಚಿತ ಅಪ್ಡೇಟ್ ಮಾಡಿಸಿಕೊಳ್ಳುವ ದಿನಾಂಕವನ್ನು ವಿಸ್ತರಣೆ ಮಾಡಲಾಗಿದ್ದು, ಮುಂದಿನ ಜೂನ್ ವರೆಗೆ ಅಂದ್ರೆ ಜೂನ್ 14, 2024 ವರೆಗೆ ಉಚಿತ ಆಧಾರ್ ಅಪ್ಡೇಟ್ ಗೆ ಅವಕಾಶ ಮಾಡಿಕೊಡಲಾಗಿದೆ. ದೇಶದಲ್ಲಿ ಇನ್ನೂ ಸಾಕಷ್ಟು ಜನರ ಆಧಾರ ಅಪ್ಡೇಟ್ ಆಗುವುದು ಬಾಕಿ ಇರುವುದರಿಂದ ಉಚಿತ ಆಧಾರ ಅಪ್ಡೇಟ್ ಮಾಡಿಸಿಕೊಳ್ಳಲು ಸರಕಾರ ಮತ್ತೊಮ್ಮೆ ಅವಕಾಶ ನೀಡಿದೆ.
ಬೇಸಿಗೆಯಲ್ಲಿ ಈ ಬಿಸಿನೆಸ್ ಆರಂಭ ಮಾಡಿದ್ರೆ ಕೈ ತುಂಬಾ ಆದಾಯ! ಇಲ್ಲಿದೆ ಐಡಿಯಾ
ಆಧಾರ್ ಅಪ್ಡೇಟ್ ಯಾರು ಮಾಡಿಸಬೇಕು?
ನಮ್ಮ ಎಲ್ಲಾ ಕೆಲಸಗಳಿಗೂ ಮುಖ್ಯ ಆಧಾರ ಆಗಿರುವ ಆಧಾರ್ ಕಾರ್ಡ್ ನಲ್ಲಿ ಎಲ್ಲಾ ದಾಖಲೆಗಳು ಕೂಡ up-to-date ಇರಬೇಕು. ಹಾಗಾಗಿ ನಿಮ್ಮ ಬಳಿ ಇರುವ ಆಧಾರ್ ಕಾರ್ಡ್ ಹತ್ತು ವರ್ಷ ಹಳೆಯದಾಗಿದ್ದರೆ ತಕ್ಷಣ ಅದರಲ್ಲಿ ಅಗತ್ಯ ಇರುವ ಬದಲಾವಣೆಗಳನ್ನು ಮಾಡಿಕೊಳ್ಳುವುದರ ಮೂಲಕ ಆಧಾರ್ ನವೀಕರಣ ಆಗಬೇಕು ಎಂದು ಯುಐಡಿಎಐ ತಿಳಿಸಿದೆ.
ಆಧಾರ್ ನವೀಕರಣ ಪ್ರಕ್ರಿಯೆ ಮಾರ್ಚ್ 14, 2024ರ ಒಳಗೆ ಮಾಡಿಸಿಕೊಳ್ಳಬೇಕು ಎಂದು ಈ ಹಿಂದೆ ತಿಳಿಸಲಾಗಿತ್ತು. ಆದರೆ ಈ ದಿನಾಂಕವನ್ನು ಈಗ ವಿಸ್ತರಣೆ ಮಾಡಿ ಮತ್ತೆ ಹೆಚ್ಚುವರಿ ಮೂರು ತಿಂಗಳ ಅವಕಾಶ ಕೊಡಲಾಗಿದೆ. ಅಂದರೆ ಜೂನ್ 14, 2024ರ ಒಳಗೆ ನೀವು ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಿಕೊಳ್ಳಬೇಕು.
ಕಡಿಮೆ ಬಡ್ಡಿಯಲ್ಲಿ ಪಡೆದುಕೊಳ್ಳಿ 2 ಲಕ್ಷ ರೂಪಾಯಿವರೆಗೆ ಸಾಲ; ತಕ್ಷಣ ಅರ್ಜಿ ಸಲ್ಲಿಸಿ
ಆನ್ಲೈನ್ನಲ್ಲಿ ಆಧಾರ್ ಅಪ್ಡೇಟ್ ಮಾಡಿಕೊಳ್ಳುವುದು ಹೇಗೆ?
* UIDAI ಅಧಿಕೃತ ವೆಬ್ಸೈಟ್ https://myaadhaar.uidai.gov.in/ ಗೆ ಭೇಟಿ ನೀಡಿ.
* ನಿಮ್ಮ ಆಧಾರ್ ಸಂಖ್ಯೆ ಹಾಗೂ ಕ್ಯಾಪ್ಚ ಕೋಡ್ ನಮೂದಿಸುವುದರ ಮೂಲಕ ಲಾಗಿನ್ ಆಗಿ.
* ಈಗ ನೊಂದಾಯಿಸಿದ ಮೊಬೈಲ್ ಸಂಖ್ಯೆಗೆ ಒಂದು ಓಟಿಪಿ ಬರುತ್ತದೆ ಅದನ್ನು ನಮೂದಿಸಿ.
* ಈಗ ನಿಮ್ಮ ಆಧಾರ್ ಕಾರ್ಡ್ ನಲ್ಲಿ ಯಾವ ಬದಲಾವಣೆ ಮಾಡಬೇಕು ಎನ್ನುವುದನ್ನು ಆಯ್ಕೆ ಮಾಡಿಕೊಳ್ಳಿ.
* ಅಗತ್ಯ ಇರುವ ಡಾಕ್ಯುಮೆಂಟ್ಸ್ ನೀಡಿ, ಬದಲಾವಣೆಗಳನ್ನು ಮಾಡಿಕೊಳ್ಳಿ.
* ಎಲ್ಲ ದಾಖಲೆಗಳನ್ನು ಮಾಡಿದ ನಂತರ ನಿಮ್ಮ ನವೀಕರಣ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ.
* ನಿಮಗೆ URN ಸಂಖ್ಯೆಯನ್ನು ಕೊಡಲಾಗುತ್ತದೆ.
* ಈ ಸಂಖ್ಯೆಯ ಮೂಲಕ ನೀವು ಆಧಾರ್ ಅಪ್ಡೇಟ್ ಆಗಿದ್ಯೋ ಇಲ್ವೋ ಎನ್ನುವುದನ್ನು ತಿಳಿದುಕೊಳ್ಳಬಹುದು.
* ಅಪ್ಡೇಟ್ ಆಗೋ ಕೆಲವೇ ದಿನಗಳಲ್ಲಿ ಹೊಸ ಆಧಾರ್ ಕಾರ್ಡ್ ನಿಮಗೆ ಸಿಗುತ್ತದೆ.
ಸ್ವಂತ ಮನೆ ನಿರ್ಮಾಣಕ್ಕೆ ಈ ಯೋಜನೆ ಅಡಿ ಸರ್ಕಾರದಿಂದಲೇ ಸಿಗುತ್ತೆ 1.5 ಲಕ್ಷ!
Another announcement from Center about Aadhaar Card Update