Business News

ಈ ಪೋಸ್ಟ್ ಆಫೀಸ್ ಸ್ಕೀಮ್ ನಲ್ಲಿ ಸಿಗುತ್ತೆ 10 ಲಕ್ಷ ರೂಪಾಯಿ ಪ್ರಯೋಜನ! ಡೋಂಟ್ ಮಿಸ್

ಲೈಫ್ (Life) ಅಂದಮೇಲೆ ರಿಸ್ಕ್ ಇದ್ದೇ ಇರುತ್ತೆ. ಹಾಗಾಗಿ ನಾವು ನಮ್ಮ ಲೈಫ್ ಅನ್ನು ಸ್ವಲ್ಪವಾದರೂ ಸೆಕ್ಯೂರ್ಡ್ ಮಾಡಿಕೊಳ್ಳುವುದು ಬಹಳ ಮುಖ್ಯ. ಅದಕ್ಕಾಗಿಯೇ ಭವಿಷ್ಯಕ್ಕಾಗಿ ಹಣಕಾಸಿನ ಹೂಡಿಕೆ (investment ) ಮಾಡಿ ಆರ್ಥಿಕ ಪರಿಸ್ಥಿತಿಯನ್ನು ಚೆನ್ನಾಗಿ ಇಟ್ಟುಕೊಳ್ಳುತ್ತೇವೆ, ಅದೇ ರೀತಿ ಜೀವನಕ್ಕೆ, ಜೀವಕ್ಕೆ ಗ್ಯಾರಂಟಿ ನೀಡುವಂತಹ ವಿಮಾ ಪಾಲಿಸಿ ಮಾಡಿಸಿಕೊಳ್ಳುವುದು ಕೂಡ ಮುಖ್ಯವಾಗಿರುತ್ತದೆ.

ಸಾಕಷ್ಟು ಜನ ಬೇರೆ ಬೇರೆ ರೀತಿಯ ವಿಮಾ ಪಾಲಿಸಿ ಮಾಡಿಸುತ್ತಾರೆ. ಆದರೆ ಇನ್ನೂ ಹಲವು ಮಂದಿ ಲೈಫ್ ಇನ್ಶೂರೆನ್ಸ್ (Life Insurance) ಅಥವಾ ಅಪಘಾತ ವಿಮೆ ಹಾಗೂ ಆರೋಗ್ಯ ವಿಮೆ (health insurance) ಮೊತ್ತ ಅಧಿಕ ಎನ್ನುವ ಕಾರಣಕ್ಕೆ ವಿಮೆ ಮಾಡಿಸುವುದೇ ಇಲ್ಲ, ಆದರೆ ಯಾವಾಗ ನಡೆಯಬಾರದು ನಡೆದು ಹೋಗುತ್ತದೆಯೋ ಅಂತಹ ಸಂದರ್ಭದಲ್ಲಿ ಖಂಡಿತವಾಗಿಯೂ ವ್ಯಥೆ ಪಟ್ಟುಕೊಳ್ಳಬೇಕಾಗುತ್ತದೆ.

how much interest will get for 10,000 rupees fixed Deposit for 5 years at the post office

ಬೇಸಿಗೆಯಲ್ಲಿ ಈ ಬಿಸಿನೆಸ್ ಆರಂಭ ಮಾಡಿದ್ರೆ ಕೈ ತುಂಬಾ ಆದಾಯ! ಇಲ್ಲಿದೆ ಐಡಿಯಾ

ಅಂಚೆ ಕಚೇರಿಯ ಅಪಘಾತ ವಿಮೆ! (Post office insurance)

ಇನ್ನು ಎಲ್ಲಿ ಕಡಿಮೆ ದರದಲ್ಲಿ ವಿಮೆ ಮಾಡಿಸಬಹುದು ಎನ್ನುವ ಗೊಂದಲ ನಿಮ್ಮಲ್ಲಿ ಇದ್ದರೆ ತಕ್ಷಣ ನೀವು ಅಂಚೆ ಕಚೇರಿಯ ಪೋಸ್ಟ್ ಪೇಮೆಂಟ್ ಬ್ಯಾಂಕ್ (post payment Bank) ಅನ್ನು ಸಂಪರ್ಕಿಸಬಹುದು. ಹೌದು ಅಂಚೆ ಕಚೇರಿ ಸಾರ್ವಜನಿಕರಿಗೆ ಸಾಕಷ್ಟು ಉತ್ತಮ ಪ್ರಯೋಜನ ನೀಡುವಂತಹ ವಿಮಾ ಪಾಲಿಸಿ ಹಾಗೂ ಉಳಿತಾಯ ಯೋಜನೆಗಳನ್ನು ಹೊಂದಿದೆ.

ಉಳಿತಾಯ ಯೋಜನೆಗಳಿಗೆ ಇತ್ತೀಚಿಗೆ ಹೆಚ್ಚಿನ ಬಡ್ಡಿ ದರವು ಕೂಡ ಲಭ್ಯವಾಗುತ್ತಿದೆ. ಅದೇ ರೀತಿ ನೀವು ಅಂಚೆ ಕಚೇರಿಯಲ್ಲಿ ಅತಿ ಕಡಿಮೆ ಪ್ರೀಮಿಯಂ ಪಾವತಿಸುವ ಮೂಲಕ ಅಪಘಾತ ವಿಮಾ ಸೌಲಭ್ಯವನ್ನು ಪಡೆಯಬಹುದು.

ಕಡಿಮೆ ಬಡ್ಡಿಯಲ್ಲಿ ಪಡೆದುಕೊಳ್ಳಿ 2 ಲಕ್ಷ ರೂಪಾಯಿವರೆಗೆ ಸಾಲ; ತಕ್ಷಣ ಅರ್ಜಿ ಸಲ್ಲಿಸಿ

Post Office Schemesಅಂಚೆ ಕಚೇರಿಯ ವಿಮಾ ಸೌಲಭ್ಯ ಪಡೆಯುವುದು ಹೇಗೆ!

ನೀವು ಕೇವಲ 396 ರೂಪಾಯಿಗಳ ಪ್ರೀಮಿಯಂ ಪಾವತಿಸುವುದಕ್ಕೆ ಆರಂಭಿಸಿದರೆ ಯಾವುದೇ ಅಪಘಾತದ ಸಂದರ್ಭದಲ್ಲಿ ಪಾಲಿಸಿದಾರನ ಕುಟುಂಬಕ್ಕೆ 10 ಲಕ್ಷ ರೂಪಾಯಿಗಳ ವರೆಗೆ ವಿಮೆ ಸೌಲಭ್ಯ ನೀಡಲಾಗುತ್ತದೆ. ಇನ್ನು ಅಪಘಾತ ವಿಮಾ ಪಾಲಿಸಿ ಮಾಡಿಸಿದರೆ ಯಾವ ಯಾವ ಸಂದರ್ಭದಲ್ಲಿ ಪ್ರಯೋಜನ ಪಡೆದುಕೊಳ್ಳಬಹುದು ನೋಡೋಣ.

ಸ್ವಂತ ಮನೆ ನಿರ್ಮಾಣಕ್ಕೆ ಈ ಯೋಜನೆ ಅಡಿ ಸರ್ಕಾರದಿಂದಲೇ ಸಿಗುತ್ತೆ 1.5 ಲಕ್ಷ!

* 18 ರಿಂದ 65 ವರ್ಷ ವಯಸ್ಸಿನ ನಡುವೆ ಇರುವವರು ಅಂಚೆ ಕಚೇರಿಯ ಅಪಘಾತ ವಿಮೆ ಪಾಲಿಸಿ ಮಾಡಿಸಿಕೊಳ್ಳಬಹುದು.

* ವ್ಯಕ್ತಿ ಆಕಸ್ಮಿಕ ಮರಣ ಹೊಂದಿದರೆ, ಶಾಶ್ವತ ಅಂಗವೈಕಲ್ಯ ಉಂಟಾದರೆ, ಪಾರ್ಶ್ವ ವಾಯು ಹಾಗೂ ಭಾಗಶ: ಅಂಗವೈಕಲ್ಯ ಉಂಟಾದರೆ 10 ಲಕ್ಷ ರೂಪಾಯಿಗಳವರೆಗೆ ವಿಮಾ ಪ್ರಯೋಜನ ಪಡೆಯಬಹುದು.

* ಅಪಘಾತದ ಸಮಯದಲ್ಲಿ ಆಸ್ಪತ್ರೆಗೆ ದಾಖಲಾದರೆ ವಿಮೆ ಕ್ಲೈಮ್ ಮಾಡಬಹುದು.

* IPD ಚಿಕಿತ್ಸೆಗೆ 60,000, OPD ಡ್ರೆಸ್ಸಿಂಗ್ ಅಥವಾ ಇತರ ಚಿಕಿತ್ಸೆಗೆ 30,000 ಪಡೆದುಕೊಳ್ಳಬಹುದು.

* ಇನ್ನು ಪಾಲಿಸಿದಾರ ಅಪಘಾತದಿಂದ ಆಸ್ಪತ್ರೆಗೆ ದಾಖಲಾದರೆ ಪ್ರತಿದಿನ ಸಾವಿರ ರೂಪಾಯಿಗಳನ್ನು 10 ದಿನಗಳ ವರೆಗೆ ನೀಡಲಾಗುವುದು.

* ಅಪಘಾತಗೊಂಡ ಪಾಲಿಸಿದಾರನ ಕುಟುಂಬ ದೂರದ ಊರಿನಲ್ಲಿ ನೆಲೆಸಿದ್ದರೆ ಅವರ ಪ್ರಯಾಣಕ್ಕೆ 25,000ಗಳವರೆಗೆ ಕ್ಲೈಮ್ ಮಾಡಬಹುದು.

* ಪಾಲಿಸಿದಾರ ಮರಣ ಹೊಂದಿದರೆ ಐದು ಸಾವಿರ ರೂಪಾಯಿಗಳ ವರೆಗೆ ಅಂತ್ಯಕ್ರಿಯೆ ವೆಚ್ಚ ಈ ಪಾಲಿಸಿ ಒಳಗೆ ಸಿಗುತ್ತದೆ.

* 10 ಲಕ್ಷ ರೂಪಾಯಿಗಳ ವಿಮೆ ಹೊರತಾಗಿ ಮಕ್ಕಳ ವಿದ್ಯಾಭ್ಯಾಸಕ್ಕೆ ಒಂದು ಲಕ್ಷ ರೂಪಾಯಿಗಳನ್ನು ಪಡೆದುಕೊಳ್ಳಬಹುದು.

ಕೇಂದ್ರ ಸರ್ಕಾರದ ಉಚಿತ ವಿದ್ಯುತ್ ಸ್ಕೀಮ್! ಈಗಲೇ ಅರ್ಜಿ ಸಲ್ಲಿಸಿ; ಇಲ್ಲಿದೆ ಡೀಟೇಲ್ಸ್

ಅಂಚೆ ಕಚೇರಿಯ ಅಪಘಾತ ವಿಮೆ ಮಾಡಿಸುವುದು ಹೇಗೆ?

ಹತ್ತಿರದ ಅಂಚೆ ಕಚೇರಿಗೆ ಹೋಗಿ ನೀವು ಈ ಪಾಲಿಸಿ ಆರಂಭಿಸಬಹುದು, ವಿಶೇಷ ಅಂದ್ರೆ ನೀವು ಅಂಚೆ ಕಚೇರಿಯಲ್ಲಿ ಖಾತೆ ಹೊಂದಿರಬೇಕಾದ ಅಗತ್ಯ ಇಲ್ಲ. ಹಾಗೆಯೇ ಈ ಪಾಲಿಸಿಯ ಪ್ರಯೋಜನ ಪಡೆದುಕೊಳ್ಳಬಹುದು.

10 lakh rupees benefit in this post office scheme

Our Whatsapp Channel is Live Now 👇

Whatsapp Channel

Related Stories