ಕೇಂದ್ರ ಸರ್ಕಾರದ ಉಚಿತ ವಿದ್ಯುತ್ ಸ್ಕೀಮ್! ಈಗಲೇ ಅರ್ಜಿ ಸಲ್ಲಿಸಿ; ಇಲ್ಲಿದೆ ಡೀಟೇಲ್ಸ್

Story Highlights

ಸೂರ್ಯೋದಯ ಯೋಜನೆಯಲ್ಲಿ ಪಡೆದುಕೊಳ್ಳಿ ಸಬ್ಸಿಡಿ; ಮುಂದಿನ 25 ವರ್ಷ ಉಚಿತ 300 ಯೂನಿಟ್ ವಿದ್ಯುತ್ ಸಿಗುತ್ತೆ!

ರಾಜ್ಯದಲ್ಲಿ ಬಹುತೇಕ ಎಲ್ಲರೂ 200 ಯೂನಿಟ್ ಗಳವರೆಗೆ ಉಚಿತ ವಿದ್ಯುತ್ (free electricity) ಪಡೆದುಕೊಳ್ಳಲು ಸಾಧ್ಯವಾಗುತ್ತಿದೆ. ಆದರೆ ಇದು ಪ್ರತಿಯೊಬ್ಬರಿಗೂ ಲಭ್ಯವಾಗುವ ಯೋಜನೆ ಅಲ್ಲ.

ಸಾಕಷ್ಟು ಮನೆಗಳು ಹೆಚ್ಚಿಗೆ ವಿದ್ಯುತ್ ಬಳಕೆ ಮಾಡುತ್ತಾರೆ. ಇಂತಹ ಸಂದರ್ಭದಲ್ಲಿ ಅವರಿಗೆ ಉಚಿತ ವಿದ್ಯುತ್ (Free Electricity) ನೀಡುವ ಗೃಹಜ್ಯೋತಿ ಯೋಜನೆ (Gruha Jyothi Scheme) ಅಪ್ಲೈ ಆಗುವುದಿಲ್ಲ. ಹಾಗಾಗಿ ಪ್ರತಿ ತಿಂಗಳು 2000 ರಿಂದ 3000ಗಳನ್ನು ಪಾವತಿ ಮಾಡಲೇಬೇಕು.

ಆದರೆ ಇನ್ನು ಮುಂದೆ ಟೆನ್ಶನ್ ಬೇಡ ನೀವು ಕೂಡ ಉಚಿತ ವಿದ್ಯುತ್ ಪಡೆದುಕೊಳ್ಳಬಹುದು, ಅದು ನೀವೇ ವಿದ್ಯುತ್ ಉತ್ಪಾದನೆ ಮಾಡುವುದರ ಮೂಲಕ!

ನಿಮ್ಮ ಹಣ ಡಬಲ್ ಮಾಡುವ ಸರ್ಕಾರಿ ಸ್ಕೀಮ್ ಇದು! 5 ಲಕ್ಷಕ್ಕೆ 10 ಲಕ್ಷ ಆದಾಯ ಸಿಗುತ್ತೆ

ಪ್ರಧಾನ ಮಂತ್ರಿ ಸೂರ್ಯೋದಯ ಯೋಜನೆ

ಆತ್ಮ ನಿರ್ಭರ್ ಭಾರತ್ ನಿರ್ಮಾಣದ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಜಿ (PM Narendra Modi ji) ಅವರು ಜನರ ಹಿತಾಸಕ್ತಿ ಕಾಯ್ದುಕೊಳ್ಳುವಂತಹ ಸಾಕಷ್ಟು ಯೋಜನೆಗಳನ್ನು ಪರಿಚಯಿಸಿದ್ದಾರೆ. ಅವುಗಳಲ್ಲಿ ಸೂರ್ಯನ ಶಕ್ತಿಯನ್ನು ಬಳಸಿಕೊಂಡು ನೀವೇ ಸ್ವತಹ ವಿದ್ಯುತ್ ತಯಾರಿಸಬಹುದಾದ ಸೂರ್ಯೋದಯ ಯೋಜನೆ ಕೂಡ ಒಂದು. ಇದರಿಂದ ನೀವು ಜೀವನಪರ್ಯಂತ ಉಚಿತ ವಿದ್ಯುತ್ ಪಡೆದುಕೊಳ್ಳಲು ಸಾಧ್ಯವಿದೆ ಹೇಗೆ ಎನ್ನುವ ವಿವರವನ್ನು ನೋಡೋಣ.

ಈ ಸ್ಕೀಮ್ ನಲ್ಲಿ ಸಣ್ಣ ಬಿಸಿನೆಸ್ ಮಾಡೋಕೆ 15 ಸಾವಿರ ಸರ್ಕಾರವೇ ಕೊಡುತ್ತೆ; ಅರ್ಜಿ ಸಲ್ಲಿಸಿ!

ಮನೆಯಲ್ಲಿ ಸ್ಥಾಪಿಸಿ ಸೋಲಾರ್ ಪ್ಯಾನೆಲ್ – Solar Panel

ನೀವು ನಿಮ್ಮ ಮನೆಯ ಮೇಲ್ಚಾವಣಿಯ ಮೇಲೆ ಸೋಲಾರ್ ಪ್ಯಾನೆಲ್ ಅಳವಡಿಸುವುದರ (solar panel installation) ಮೂಲಕ 300 ಯೂನಿಟ್ ಬರಕೆ ಉಚಿತ ವಿದ್ಯುತ್ ಪಡೆದುಕೊಳ್ಳಬಹುದು. ಅಷ್ಟೇ ಅಲ್ಲ ಹೆಚ್ಚಿನ ವಿದ್ಯುತ್ ತಯಾರಿಕೆ ಮಾಡಿ ವಿದ್ಯುತ್ ಸರಬರಾಜು ಕಂಪನಿ ಗಳಿಗೆ ಮಾರಾಟ ಮಾಡಲು ಕೂಡ ಅವಕಾಶ ಇದೆ. ಇದರಿಂದ ನೀವು ಕನಿಷ್ಠ 15000 ಪ್ರತಿ ತಿಂಗಳು ಗಳಿಸುವುದಕ್ಕೆ ಸಾಧ್ಯ.

ಜಸ್ಟ್ 100 ರೂಪಾಯಿ ಇನ್ವೆಸ್ಟ್ ಮಾಡಿ ಸಾಕು, ಡೈಲಿ ಸಾವಿರ ರೂಪಾಯಿ ಆದಾಯ!

Solar Panel schemeಸೋಲಾರ್ ಪ್ಯಾನೆಲ್ ಅನ್ನು ಅಳವಡಿಸಲು ಸರ್ಕಾರದಿಂದ ಸಬ್ಸಿಡಿಯನ್ನು ಪಡೆದುಕೊಳ್ಳಬಹುದು. 40% ವರೆಗೆ ಸರ್ಕಾರದ ಸಬ್ಸಿಡಿ ಪಡೆದುಕೊಂಡು ಉಳಿದ ಹಣವನ್ನು ನೀವು ಬ್ಯಾಂಕ್ ನಲ್ಲಿ ಸಾಲವಾಗಿ (Bank Loan) ಪಡೆಯಬಹುದು.

ಒಮ್ಮೆ ಸೋಲಾರ್ ಪ್ಯಾನೆಲ್ ಅನ್ನು ನಿಮ್ಮ ಮನೆಯ ಮೇಲ್ಚಾವಣಿಯ ಮೇಲೆ ಅಳವಡಿಸಿದರೆ ಮುಂದಿನ 25 ವರ್ಷಗಳವರೆಗೆ ಅದರ ಬಳಕೆ ಮಾಡಿಕೊಳ್ಳಬಹುದು. ಬ್ಯಾಂಕ್ ನಲ್ಲಿ ಸಾಲ ಮಾಡಿದ್ರೆ ಐದರಿಂದ ಆರು ವರ್ಷಗಳಲ್ಲಿ ಆ ಹಣ ತೀರಿಸಬಹುದು. ಬಳಿಕ 20 ವರ್ಷಗಳ ವರೆಗೆ ಸಂಪೂರ್ಣ ಉಚಿತ ವಿದ್ಯುತ್ ಅನ್ನು ನೀವು ಬಳಕೆ ಮಾಡಲು ಸಾಧ್ಯ.

ಒಂದು ರೇಷನ್ ಕಾರ್ಡ್ ಮೂಲಕ ವರ್ಷಕ್ಕೆ ಎಷ್ಟು ಸಿಲಿಂಡರ್ ಪಡೆಯಬಹುದು ಗೊತ್ತಾ?

ಸೌರ ವಿದ್ಯುತ್ ಸ್ಥಾಪಿಸಲು ಬೇಕಾಗಿರುವ ದಾಖಲೆಗಳು!

ನಿಮ್ಮ ಮನೆಯ ಮೇಲ್ಚಾವಣಿಯ ಮೇಲೆ 10 ಚದರ್ ಮೀಟರ್ ನಷ್ಟು ಖಾಲಿ ಜಾಗ ಬೇಕು ಸೋಲಾರ್ ಪ್ಯಾನೆಲ್ ಅಳವಡಿಸಲು. ಒಂದು ಕಿಲೋ ವ್ಯಾಟ್ ಸೋಲಾರ್ ಪ್ಯಾನೆಲ್ ಅಳವಡಿಸುವುದಕ್ಕೆ ಯಾವುದೇ ವೆಚ್ಚ ಇಲ್ಲ. 1 – 3 ಕಿಲೋ ವ್ಯಾಟ್ ಸೌರ ಫಲಕ ಅಳವಡಿಸಲು ಸರ್ಕಾರ 40% ವರೆಗೆ ಸಹಾಯಧನ ನೀಡುತ್ತಿದೆ. ಗರಿಷ್ಠ 78,000ಗಳ ಸಹಾಯಧನ ಪಡೆಯಬಹುದು.

ಸೌರ ಫಲಕ ಅಳವಡಿಸಲು ಬೇಕಾಗಿರುವ ದಾಖಲೆಗಳು ಅಂದರೆ, ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್, ಬ್ಯಾಂಕಿನ ಕೆವೈಸಿ ಡೀಟೇಲ್ಸ್, ರೇಷನ್ ಕಾರ್ಡ್, ಮೊಬೈಲ್ ಸಂಖ್ಯೆ, ಪಾಸ್ಪೋರ್ಟ್ ಅಳತೆಯ ಫೋಟೋ, ಮೇಲ್ಚಾವಣಿಯ ಬಗ್ಗೆ ವಿವರ, ವಿಳಾಸದ ಪುರಾವೆ.

ಸ್ವಂತ ಮನೆ ಕಟ್ಟಲು ಸರ್ಕಾರದಿಂದ ದೊರೆಯಲಿದೆ ಬಡ್ಡಿ ರಹಿತ ಸಾಲ! ಅರ್ಜಿ ಸಲ್ಲಿಸಿ

ಸೋಲಾರ್ ಪ್ಯಾನೆಲ್ ಸಬ್ಸಿಡಿಗೆ ಅರ್ಜಿ ಸಲ್ಲಿಸುವುದು ಹೇಗೆ?

https://pmsuryaghar.gov.in/ ಈ ಅಧಿಕೃತ ವೆಬ್ ಸೈಟ್ಗೆ ಭೇಟಿ ನೀಡಿ. ಮುಖಪುಟದಲ್ಲಿ ಕಾಣುವ ಸೋಲಾರ್ ಪ್ಯಾನೆಲ್ ಸಬ್ಸಿಡಿಗಾಗಿ ಅರ್ಜಿ ಎನ್ನುವ ಆಯ್ಕೆ ಮೇಲೆ ಕ್ಲಿಕ್ ಮಾಡಿ. ಅಲ್ಲಿ ಕಾಣಿಸುವ ಕ್ಯೂಆರ್ ಕೋಡ್ ಸ್ಕಾನ್ ಮಾಡಿ SANDES ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಳ್ಳಿ.

ಈಗ ನೀವು ಎಷ್ಟು ವ್ಯಾಟ್ ನ ಸೋಲಾರ್ ಅಳವಡಿಸಲು ಬಯಸುತ್ತೀರಿ ಎನ್ನುವುದರ ಆಯ್ಕೆ ಮಾಡಿಕೊಳ್ಳಿ. ವಿವರಗಳನ್ನು ಭರ್ತಿ ಮಾಡಿದ ನಂತರ ನಿಮ್ಮ ಮೊಬೈಲ್ ಸಂಖ್ಯೆಗೆ OTP ಕಳುಹಿಸಲಾಗುತ್ತದೆ. ಅದನ್ನ ನಮೂದಿಸಿ ಬಳಿಕ ಸರಿಯಾದ ವಿವರ ಮತ್ತು ದಾಖಲೆಗಳನ್ನು ನೀಡಿ ಅರ್ಜಿ ಪ್ರಕ್ರಿಯೆ ಪೂರ್ಣಗೊಳಿಸಿಕೊಳ್ಳಿ.

Central government’s free Solar electricity scheme

Related Stories