ಸಾಮಾನ್ಯವಾಗಿ ನಾವು ದುಡಿದ ನಂತರ ಅದನ್ನು ಒಂದಷ್ಟು ಉಳಿತಾಯ ಮಾಡಿದರೆ ಮಾತ್ರ ಭವಿಷ್ಯಕ್ಕೆ ಆರ್ಥಿಕವಾಗಿ ಭದ್ರತೆಯನ್ನು ನಮಗೆ ನಾವೇ ಒದಗಿಸಿಕೊಳ್ಳಲು ಸಾಧ್ಯ. ಹಾಗಾಗಿ ಯಾವುದಾದರೂ ಒಂದು ಯೋಜನೆಯಲ್ಲಿ ಸ್ವಲ್ಪ ಸ್ವಲ್ಪ ಹೂಡಿಕೆ ಮಾಡುತ್ತಾ ಬಂದರೆ ಉತ್ತಮ ಲಾಭವನ್ನು ಗಳಿಸಿಕೊಳ್ಳಬಹುದು.
ಇತ್ತೀಚಿನ ದಿನಗಳಲ್ಲಿ ಹೂಡಿಕೆ (investment) ಮಾಡುವುದಕ್ಕೆ ನೂರಾರು ದಾರಿಗಳು ಇವೆ. ಸ್ಟಾಕ್ ಮಾರ್ಕೆಟ್, ಮ್ಯೂಚುವಲ್ ಫಂಡ್ (Mutual Fund), ಎಫ್ ಡಿ (Fixed Deposit), ಆರ್ ಡಿ.. ಹೀಗೆ ಸಾಕಷ್ಟು ಬೇರೆಬೇರೆ ರೀತಿಯ ಹೂಡಿಕೆಗಳು ಇವೆ.
ಈ ಸ್ಕೀಮ್ ನಲ್ಲಿ ಸಣ್ಣ ಬಿಸಿನೆಸ್ ಮಾಡೋಕೆ 15 ಸಾವಿರ ಸರ್ಕಾರವೇ ಕೊಡುತ್ತೆ; ಅರ್ಜಿ ಸಲ್ಲಿಸಿ!
ಆದರೆ ಯಾವುದು ಮಾರುಕಟ್ಟೆಯಿಂದ ಅಪಾಯ ಮುಕ್ತವಾಗಿದೆ ಅಥವಾ ಹೆಚ್ಚು ಲಾಭವನ್ನು ತಂದು ಕೊಡುತ್ತದೆ ಎನ್ನುವುದನ್ನು ನೋಡಬೇಕು. ಹಾಗಂದ ಮಾತ್ರಕ್ಕೆ ಲಾಭದ ಆಸೆಗೆ ಬಿದ್ದು ಹಣವನ್ನೆಲ್ಲ ಕಳೆದುಕೊಳ್ಳುವಂತಹ ರಿಸ್ಕ್ ತೆಗೆದುಕೊಳ್ಳುವುದು ಸೂಕ್ತವಲ್ಲ. ಅದರ ಬದಲು ಸೆಕ್ಯೂರಿಟಿ ಇರುವಂತಹ ಯೋಜನೆಗಳಲ್ಲಿ ಹೂಡಿಕೆ ಮಾಡುವುದು ಸೂಕ್ತ.
ಅಂಚೆ ಕಚೇರಿ (post office) ಯಲ್ಲಿ ಕಿಸಾನ್ ವಿಕಾಸ ಪತ್ರ ಯೋಜನೆ ಪರಿಚಯಿಸಲಾಗಿದೆ. ಇದು ನೀವು ಬೇರೆ ಯಾವುದೇ ಹೂಡಿಕೆ ಮಾಡಿದರು ಸಿಗದೇ ಇರುವಷ್ಟು ಉತ್ತಮ ಆದಾಯವನ್ನು ತಂದುಕೊಡಬಲ್ಲ ಯೋಜನೆ ಆಗಿದೆ.
ಆರಂಭದಲ್ಲಿ ರೈತರಿಗಾಗಿ ಮಾತ್ರ ಕಿಸಾನ್ ವಿಕಾಸ ಪತ್ರ ಯೋಜನೆ ಆರಂಭಿಸಲಾಗಿತ್ತು. ಆದರೆ ನಂತರದ ದಿನಗಳಲ್ಲಿ ಈ ಯೋಜನೆಯಲ್ಲಿ ಎಲ್ಲರೂ ಹೂಡಿಕೆ ಮಾಡಲು ಅವಕಾಶ ಮಾಡಿಕೊಡಲಾಗಿದೆ.
ಜಸ್ಟ್ 100 ರೂಪಾಯಿ ಇನ್ವೆಸ್ಟ್ ಮಾಡಿ ಸಾಕು, ಡೈಲಿ ಸಾವಿರ ರೂಪಾಯಿ ಆದಾಯ!
ಭಾರತೀಯ ನಾಗರಿಕರಾಗಿರಬೇಕು. 18 ವರ್ಷ ಮೇಲ್ಪಟ್ಟ ಯಾರೇ ಬೇಕಾದರೂ ಕಿಸಾನ್ ವಿಕಾಸ ಪತ್ರ ಯೋಜನೆ ಅಡಿಯಲ್ಲಿ ಹೂಡಿಕೆ ಮಾಡಬಹುದು. ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ಅಥವಾ ಅಸ್ವಸ್ಥ ಮಕ್ಕಳಿಗೆ ಕಿಸಾನ್ ವಿಕಾಸ ಪತ್ರ ಮಾಡಿಸುವುದಾದರೆ ಅವರ ಗಾರ್ಡಿಯನ್ ಆಗಿ ಪೋಷಕರು ಹೂಡಿಕೆ ಮಾಡಬಹುದು.
ಸ್ವಂತ ಮನೆ ಕಟ್ಟಲು ಸರ್ಕಾರದಿಂದ ದೊರೆಯಲಿದೆ ಬಡ್ಡಿ ರಹಿತ ಸಾಲ! ಅರ್ಜಿ ಸಲ್ಲಿಸಿ
ಆಧಾರ್ ಸಂಖ್ಯೆ
ಪ್ಯಾನ್ ಕಾರ್ಡ್
ಈಕೆ ವೈಸಿ ವಿವರ
ಮೊಬೈಲ್ ಸಂಖ್ಯೆ
ಪಾಸ್ ಪೋರ್ಟ್ ಅಳತೆಯ ಫೋಟೋ
ಇನ್ನು ಹೆಸರು ಕಿಸಾನ್ ವಿಕಾಸ ಪತ್ರ ಯೋಜನೆಯಲ್ಲಿ ಎಷ್ಟು ಹೂಡಿಕೆ ಮಾಡಬಹುದು ಎನ್ನುವುದನ್ನು ನೋಡುವುದಾದರೆ, ಕನಿಷ್ಠ 1000 ರೂಪಾಯಿಗಳಿಂದ ಗರಿಷ್ಠ ಎಷ್ಟು ಬೇಕಾದರೂ ಹೂಡಿಕೆ ಮಾಡಲು ಸಾಧ್ಯ. ಅಷ್ಟೇ ಅಲ್ಲ ಒಬ್ಬ ವ್ಯಕ್ತಿ ಕಿಸಾನ್ ವಿಕಾಸ ಪತ್ರ ಖಾತೆಯನ್ನು ಒಂದಕ್ಕಿಂತ ಹೆಚ್ಚು ತೆರೆಯಬಹುದು. KVP ಯೋಜನೆಯ ಮೆಚುರಿಟಿ ಅವಧಿ 115 ತಿಂಗಳು ಅಂದರೆ 9.5 ವರ್ಷಗಳು.
ಸರ್ಕಾರದಿಂದಲೇ ಸಿಗಲಿದೆ 2 ಲಕ್ಷ ರೂಪಾಯಿ ಸಾಲ ಸೌಲಭ್ಯ! ಸುಲಭವಾಗಿ ಪಡೆದುಕೊಳ್ಳಿ
ಸದ್ಯ ಈ ಯೋಜನೆಯಲ್ಲಿ 7.5% ನಷ್ಟು ಬಡ್ಡಿ ದರ ನೀಡಲಾಗುವುದು. ಈ ಉತ್ತಮ ಬಡ್ಡಿ ದರದೊಂದಿಗೆ ನೀವು ಐದು ಲಕ್ಷ ಹೂಡಿಕೆ ಮಾಡಿದ್ದೀರಿ ಎಂದಾದರೆ 9.5 ವರ್ಷಗಳಲ್ಲಿ 10 ಲಕ್ಷ ರೂಪಾಯಿಗಳನ್ನು ಪಡೆಯಬಹುದು.
ಇಲ್ಲಿ ಮತ್ತೊಂದು ಪ್ರಮುಖವಾದ ವಿಚಾರ ಅಂದರೆ ನೀವು ಒಂದು ಅಂಚೆ ಕಚೇರಿಯಲ್ಲಿ ಖಾತೆಯನ್ನು ಆರಂಭಿಸಿ ಅದನ್ನು ಮತ್ತೊಂದು ಅಂಚೆ ಕಚೇರಿಗೆ ವರ್ಗಾಯಿಸಿಕೊಳ್ಳಲು ಸಾಧ್ಯವಿದೆ. ಇನ್ನು ನಾಮಿನಿ ಫೆಸಿಲಿಟಿ ಕೂಡ ಲಭ್ಯ.
KVP ಖಾತೆಯನ್ನು ನೀವು ಆನ್ಲೈನ್ ನಲ್ಲಿ ಅಂಚೆ ಕಚೇರಿಯ ಅಧಿಕೃತ ವೆಬ್ಸೈಟ್ ಗೆ ಹೋಗಿ ತೆರೆಯಬಹುದು. ಅಥವಾ ಹತ್ತಿರದ ಅಂಚೆ ಕಚೇರಿಗೆ ಭೇಟಿ ನೀಡಿ ಅಗತ್ಯ ಇರುವ ದಾಖಲೆಗಳನ್ನು ನೀಡಿ ಕಿಸಾನ್ ವಿಕಾಸ ಪತ್ರ ಖಾತೆಯನ್ನು ಆರಂಭಿಸಿ ಹಣ ಹೂಡಿಕೆ ಮಾಡಿ. ಇದರಿಂದ ನಿಮ್ಮ ಭವಿಷ್ಯ ಸುಭದ್ರ ಪಡಿಸಿಕೊಳ್ಳಿ.
ಹಸು, ಕುರಿ, ಕೋಳಿ ಸಾಕಾಣಿಕೆಗೆ ಸಿಗಲಿದೆ 50% ಸಹಾಯಧನ! ಕೂಡಲೇ ಅರ್ಜಿ ಸಲ್ಲಿಸಿ
This is a government scheme that doubles your money