Business News

ಹಸು, ಕುರಿ, ಕೋಳಿ ಸಾಕಾಣಿಕೆಗೆ ಸಿಗಲಿದೆ 50% ಸಹಾಯಧನ! ಕೂಡಲೇ ಅರ್ಜಿ ಸಲ್ಲಿಸಿ

ಕೋವಿಡ್ ನಂತರದಲ್ಲಿ ಅನೇಕ ಯುವಕರು ಕೆಲಸ ಕಳೆದುಕೊಂಡರು. ಹೀಗೆ ಕೆಲಸ ಕಳೆದುಕೊಂಡವರು ತಮ್ಮ ಊರಿಗೆ ವಾಪಸ್ ಆಗಿ ಸ್ವಂತ ಉದ್ಯೋಗ (Own Business) ಆರಂಭಿಸಿದ್ದಾರೆ. ಇನ್ನು ಕೆಲವರು ಪಿತ್ರಾರ್ಜಿತ ಆಸ್ತಿಯಲ್ಲಿ ಕೃಷಿ ಮಾಡುತ್ತಿದ್ದಾರೆ.

ಇನ್ನು ಕೆಲವರು ಯಾವ ಉದ್ಯೋಗ ಮಾಡಬಹುದು ಎನ್ನುವ ಚಿಂತನೆಯಲ್ಲಿದ್ದಾರೆ. ಹಾಗಾದರೆ ನೀವು ಚಿಂತೆ ಬಿಡಿ. ನಿಮ್ಮಂತಹ ಸ್ವಂತ ಉದ್ಯಮ ಸ್ಥಾಪಿಸುವ ಯುವಕರನ್ನು ಪ್ರೋತ್ಸಾಹಿಸುವ ಸಲುವಾಗಿಯೇ ಸರ್ಕಾರವು ಒಂದು ಯೋಜನೆಯನ್ನು ಜಾರಿಗೆ ತಂದಿದೆ.

Cow Farming - Loan Scheme

ಸರ್ಕಾರದ ಈ ಯೋಜನೆಯಲ್ಲಿ ಗಂಡ-ಹೆಂಡತಿಗೆ ಸಿಗುತ್ತೆ 10,000 ರೂಪಾಯಿ!

ಆ ಯೋಜನೆಯಲ್ಲಿ ನೀವು ಫಲಾನುಭವಿಯಾದರೆ ನಿಮಗೆ ಶೇ.5೦ ರಷ್ಟು ಸಹಾಯಧನ ಸಿಗುತ್ತದೆ. ಇದರಿಂದ ನಿಮ್ಮ ಆರ್ಥಿಕ ವೆಚ್ಚ ತಗ್ಗಲಿದೆ.
ನೀವೇನಾದರೂ ಕೋಳಿ, ಕುರಿ, ಮೇಕೆ, ಹಂದಿಗಳಿಗಾಗಿ ರಸಮೇವು ಘಟಕ ಸ್ಥಾಪನೆ ಮಾಡಬೇಕು ಎನ್ನುವ ಹಂಬಲ ಹೊಂದಿದ್ದರೆ ನೀವು ಕೇಂದ್ರ ಸರ್ಕಾರದ ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆ ಅಡಿಯಲ್ಲಿ ಶೇ.5೦ ರಷ್ಟು ಸಹಾಯಧನ ಪಡೆಯಬಹುದು.

ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆ ಅಡಿಯಲ್ಲಿ ಗ್ರಾಮೀಣ ಜನರ ಅಭಿವೃದ್ಧಿಗಾಗಿ ಅವರು ಮಾಡಬಹುದಾದ ಕೋಳಿ ಸಾಕಾಣಿಕೆ, ಕುರಿ, ಮೇಕೆ, ಹಂದಿ ಸಾಕಾಣಿಕೆ ಹಾಗೂ ರಸಮೇವು ಘಟಕ ಸ್ಥಾಪನೆಗೆ ಶೇ.5೦ ರಷ್ಟು ಸಹಾಯಧನ ನೀಡಲಾಗುತ್ತದೆ. ಹಾಗಾಗಿ ರೈತರು ಮಾತ್ರ ಈ ಯೋಜನೆ ಅಡಿಯಲ್ಲಿ ಲಾಭ ಪಡೆದುಕೊಳ್ಳಬಹುದಾಗಿದೆ.

ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಬಳಸೋ ಮಹಿಳೆಯರಿಗೆ 300 ರೂಪಾಯಿ ಉಚಿತ!

ಗ್ರಾಮೀಣ ಕೋಳಿ ಉದ್ದಿಮೆ

ಇದಕ್ಕಾಗಿ 50 ಲಕ್ಷ ರೂ. ವರೆಗೆ ನಿಮಗೆ ಸಾಲ ಸೌಲಭ್ಯ (Loan) ನೀಡಲಾಗುತ್ತದೆ. ಇದರಲ್ಲಿ 25 ಲಕ್ಷ ರೂ. ಸಹಾಯ ಧನ ಆಗಿರುತ್ತದೆ.
ಕುರಿ-ಕೋಳಿ ಸಂವರ್ಧನಾ ಘಟಕ: ಈ ಯೋಜನೆ ಅಡಿಯಲ್ಲಿ 1 ಕೋಟಿ ರೂ.ಗಳವರೆಗೆ ಸಾಲ ಸೌಲಭ್ಯ ನೀಡಲಾಗುತ್ತದೆ. ನೀವು ಎಷ್ಟು ಪ್ರಾಣಿಗಳನ್ನು ಸಾಕುತ್ತೀರಿ ಎನ್ನುವ ಆಧಾರದ ಮೇಲೆ ಸಾಲ ಸೌಲಭ್ಯ (Loan) ನೀಡಲಾಗುತ್ತದೆ. ನೀಡಲಾದ ಸಾಲದಲ್ಲಿ ಶೇ.5೦ ಸಹಾಯಧನವಾಗಿರುತ್ತದೆ.

poultry, sheep and pig farmingಹಂದಿ ಸಂವರ್ಧನಾ ಘಟಕ

1೦೦+1೦ ಹಂದಿಗಳ ಸಾಕಾಣಿಕೆಗೆ 6೦ ಲಕ್ಷ ರೂ. ಸಾಲ ಸೌಲಭ್ಯ ನೀಡಲಾಗುತ್ತದೆ. 5೦+5 ಹಂದಿ ಸಾಕಾಣಿಕೆ 3೦ ಲಕ್ಷ ರೂ. ಸಾಲ ಸೌಲಭ್ಯ (Loan) ಒದಗಿಸಿಕೊಡಲಾಗುತ್ತದೆ. ರಸಮೇವು ಉತ್ಪಾದನಾ ಘಟಕ (ವಾರ್ಷಿಕ 2೦೦೦-25೦೦ ಮೆಟ್ರಿಕ್ ಟನ್ ಉತ್ಪಾದನೆ) 1 ಕೋಟಿ ರೂ. ಸಾಲ ಸೌಲಭ್ಯ ಒದಗಿಸಿಕೊಡಲಾಗುತ್ತದೆ. ಇದರಲ್ಲಿ ನೀವು 5೦ ಲಕ್ಷ ರೂ. ಸಾಲದ ರೂಪದಲ್ಲಿ ಇರುತ್ತದೆ.

ನಿಮಗೆ ಪ್ರತಿ ತಿಂಗಳು 5550 ರೂಪಾಯಿ ಬೇಕಾದ್ರೆ ಈ ಪೋಸ್ಟ್ ಆಫೀಸ್ ಸ್ಕೀಮ್ ಬೆಸ್ಟ್ ಆಪ್ಶನ್

ಯಾವ ಯಾವ ದಾಖಲಾತಿ ಬೇಕು:

ವಿಸ್ತೃತಾ ಯೋಜನಾ ವರದಿ
ಭೂಮಿ ಪಹಣಿ ಪತ್ರಿಕೆ
ಭೂಮಿ ಇಲ್ಲದವರು ಬಾಡಿಗೆ ಭೂಮಿ ಪಡೆದಿರುವುದರ ಕರಾರು ಪತ್ರ
ಆಧಾರ್ ಕಾರ್ಡ್, ಪಾನ್ ಕಾರ್ಡ್, ವಿಳಾಸ ದೃಢಿಕರಣ ಪತ್ರ
6 ತಿಂಗಳ ಬ್ಯಾಂಕ್ ವಹಿವಾಟು ದಾಖಲೆ
ತರಬೇತಿ ಪ್ರಮಾಣ ಪತ್ರವನ್ನು ಸಲ್ಲಿಸಬೇಕಾಗುತ್ತದೆ.

get get 50 Percent subsidy Loan for Cow, sheep, chicken farming

Our Whatsapp Channel is Live Now 👇

Whatsapp Channel

Related Stories