ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಬಳಸೋ ಮಹಿಳೆಯರಿಗೆ 300 ರೂಪಾಯಿ ಉಚಿತ!
Gas Cylinder Subsidy : ಎಲ್ ಪಿ ಜಿ ಗ್ಯಾಸ್ ಮೇಲೆ ಮತ್ತೆ 100 ರೂಪಾಯಿ ಹೆಚ್ಚುವರಿ ಸಬ್ಸಿಡಿ; ಮಹಿಳೆಯರಿಗೆ ಸಂತಸದ ಸುದ್ದಿ ನೀಡಿದ ಕೇಂದ್ರ ಸರ್ಕಾರ!
Gas Cylinder Subsidy : ಮಹಿಳೆಯರಿಗಾಗಿಯೇ ಕೇಂದ್ರ ಸರ್ಕಾರ ವಿಶ್ವ ಮಹಿಳಾ ದಿನದಂದು ಎಲ್ ಪಿ ಜಿ ಗ್ಯಾಸ್ ಸಿಲೆಂಡರ್ (LPG gas cylinder) ಮೇಲೆ ಸಬ್ಸಿಡಿ ನೀಡುವ ಮೂಲಕ ಮಹಿಳೆಯರಿಗೆ ನಿಜವಾದ ಅರ್ಥದಲ್ಲಿ ಮಹಿಳಾ ದಿನಾಚರಣೆಯ (international women’s day) ಕೊಡುಗೆಯನ್ನು ನೀಡಿದೆ.
ಈಗಾಗಲೇ 200 ರೂಪಾಯಿಗಳ ಸಬ್ಸಿಡಿ (subsidy) ಪಡೆದುಕೊಳ್ಳುತ್ತಿದ್ದ ಮಹಿಳೆಯರು ಎಲ್‌ಪಿಜಿ ಗೃಹ ಬಳಕೆಯ ಸಿಲಿಂಡರ್ ಮೇಲೆ ಇನ್ನು ಹೆಚ್ಚುವರಿ ನೂರು ರೂಪಾಯಿಗಳನ್ನು ಸಬ್ಸಿಡಿಯಾಗಿ ಪಡೆದುಕೊಳ್ಳುತ್ತಿದ್ದಾರೆ.
ನಿಮಗೆ ಪ್ರತಿ ತಿಂಗಳು 5550 ರೂಪಾಯಿ ಬೇಕಾದ್ರೆ ಈ ಪೋಸ್ಟ್ ಆಫೀಸ್ ಸ್ಕೀಮ್ ಬೆಸ್ಟ್ ಆಪ್ಶನ್
ಪ್ರಧಾನ ಮಂತ್ರಿ ಉಜ್ವಲ ಯೋಜನೆ! (Pradhanmantri Ujjwala scheme)
ಪ್ರಧಾನ ಮಂತ್ರಿ ನರೇಂದ್ರ ಮೋದಿಜಿ (PM Narendra Modi ji) ಅವರು ಕಳೆದ ವರ್ಷ ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಘೋಷಣೆ ಮಾಡಿದ್ದು ಸಾಕಷ್ಟು ಮಹಿಳೆಯರು ಇದರ ಪ್ರಯೋಜನ ಪಡೆದುಕೊಂಡಿದ್ದಾರೆ. ಕೋಟ್ಯಾಂತರ ಮಹಿಳೆಯರು ಇಂದು ಡಿಮೆ ಬೆಲೆಗೆ ಎಲ್‌ಪಿಜಿ ಸಿಲಿಂಡರ್ ಖರೀದಿಸುವಂತೆ ಆಗಿದೆ.
ಹಣದುಬ್ಬರದ ಪರಿಸ್ಥಿತಿಯನ್ನು ಎದುರಿಸುತ್ತಿರುವ ಭಾರತ ಪ್ರತಿಯೊಂದು ವಸ್ತುವಿನ ಬೆಲೆಯಲ್ಲಿಯೂ ಏರಿಕೆ ಆಗಿರುವುದರಿಂದ ಸಾಕಷ್ಟು ಸಮಸ್ಯೆಯನ್ನು ಎದುರಿಸುವಂತೆ ಆಗಿದೆ. ಇತ್ತೀಚಿಗೆ ಕಮರ್ಷಿಯಲ್ ಸಿಲೆಂಡರ್ (commercial cylinder price increased) ದರವನ್ನು ಕೂಡ ಏರಿಕೆ ಮಾಡಲಾಗಿದೆ.
ಇದರ ಜೊತೆಗೆ ಇತರ ವಸ್ತುಗಳ ಬೆಲೆಯೂ ಹೆಚ್ಚಾಗಿದೆ ಆದರೆ ಈಗ ಕೇಂದ್ರ ಸರ್ಕಾರ ಸಬ್ಸಿಡಿ ಬೆಲೆಯಲ್ಲಿ ಎಲ್ ಪಿ ಜಿ ಸಿಲಿಂಡರ್ ನೀಡುತ್ತಿರುವುದು ನಿಜಕ್ಕೂ ಸಂತಸದ ವಿಚಾರ ಎನ್ನಬಹುದು.
ಮನೆಯಲ್ಲೇ ಇದ್ದುಕೊಂಡು 2 ಗಂಟೆ ಕೆಲಸ ಮಾಡಿದ್ರೆ 30,000 ಗಳಿಕೆ! ಇಲ್ಲಿದೆ ಮಾಹಿತಿ
ಮಹಿಳೆಯರಿಗೆ 300 ರೂಪಾಯಿ ಸಬ್ಸಿಡಿ!
ಎಲ್‌ಪಿಜಿ ಗ್ಯಾಸ್ ಸಿಲಿಂಡರ್ (LPG gas cylinder) ಬೆಲೆ 903 ರೂಪಾಯಿಗಳು. ಈ ಹಿಂದೆ 200 ರೂಪಾಯಿಗಳ ಸಬ್ಸಿಡಿ ನೀಡಲಾಗುತ್ತಿತ್ತು. ಈಗ ಮತ್ತೆ ನೂರು ರೂಪಾಯಿಗಳ ಸಬ್ಸಿಡಿ ನೀಡಲಾಗುತ್ತಿದ್ದು, ಒಟ್ಟು 300 ರೂಪಾಯಿಗಳ ಸಬ್ಸಿಡಿ ಸಿಗುತ್ತಿದೆ. ಅಂದರೆ ಕೇವಲ 603 ರೂಪಾಯಿಗಳಿಗೆ ಒಂದು ಎಲ್ ಪಿ ಜಿ ಸಿಲೆಂಡರ್ ಅನ್ನು ಮಹಿಳೆಯರು ಖರೀದಿಸಬಹುದು.
ಈ ಸಬ್ಸಿಡಿ ಹಣವನ್ನು ನೇರವಾಗಿ ಫಲಾನುಭವಿಗಳ ಖಾತೆಗೆ (Bank Account) ಜಮಾ ಮಾಡಲಾಗುವುದು ಸಿಲಿಂಡರ್ ಖರೀದಿ ಮಾಡುವಾಗ ಸಂಪೂರ್ಣ ಮೊತ್ತವನ್ನು ಪಾವತಿಸಬೇಕು. ಹಾಗೂ ಸಬ್ಸಿಡಿ ಹಣ ಬ್ಯಾಂಕ್ ಖಾತೆಗೆ ಜಮಾ ಆಗುತ್ತದೆ.
ಈ ಯೋಜನೆಯಲ್ಲಿ ಗಂಡ-ಹೆಂಡತಿಗೆ ಪ್ರತಿ ತಿಂಗಳು ಸಿಗಲಿದೆ 10 ಸಾವಿರ ರೂಪಾಯಿ
ವರ್ಷದಲ್ಲಿ 12 ಸಿಲಿಂಡರ್ ಖರೀದಿಯ ಮೇಲೆ ಮಾತ್ರ ಈ ಸಬ್ಸಿಡಿ ಸಿಗುತ್ತದೆ. ಅದಕ್ಕಿಂತ ಹೆಚ್ಚಿಗೆ ಸಿಲಿಂಡರ್ ಖರೀದಿ ಮಾಡಿದ್ರೆ ಸಬ್ಸಿಡಿ ಲಭ್ಯವಾಗುವುದಿಲ್ಲ. ಮುಂದಿನ ವರ್ಷ ಅಂದರೆ 2025 ಮಾರ್ಚ್ 31ರವರೆಗೆ ಈ ಹೆಚ್ಚುವರಿ ಸಬ್ಸಿಡಿ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಒಟ್ಟಿನಲ್ಲಿ ಉಜ್ವಲ ಯೋಜನೆಯ ಅಡಿಯಲ್ಲಿ ಮಹಿಳೆಯರು ಹೆಚ್ಚುವರಿ ಆಗಿ ನೂರು ರೂಪಾಯಿ ಸಬ್ಸಿಡಿಯ ಜೊತೆಗೆ ಕೇವಲ 603 ರೂಪಾಯಿಗಳಿಗೆ ಸಿಲಿಂಡರ್ ಖರೀದಿಸಬಹುದು.
ಮಹಿಳೆಯರು ಈ ಯೋಜನೆಗಳಲ್ಲಿ ಹೂಡಿಕೆ ಮಾಡಿದ್ರೆ ಸಾಕು, ಲಕ್ಷ ಲಕ್ಷ ಆದಾಯ!
300 rupees free for women who use LPG gas cylinder at home