Business News

ಮಹಿಳೆಯರು ಈ ಯೋಜನೆಗಳಲ್ಲಿ ಹೂಡಿಕೆ ಮಾಡಿದ್ರೆ ಸಾಕು, ಲಕ್ಷ ಲಕ್ಷ ಆದಾಯ!

ಇಂದಿನ ದಿನದಲ್ಲಿ ಪುರುಷರಿಗೆ ಸರಿಸಮವಾಗಿ ಮಹಿಳೆಯರು (women) ಸಹ ದುಡಿಯುತ್ತಿದ್ದಾರೆ. ಹಾಗಾಗಿ ಅವರು ಸಹ ಸ್ವಾಭಿಮಾನ ಹಾಗೂ ಸ್ವಾವಲಂಬಿ (independence ) ಬದುಕು ಕಟ್ಟಿಕೊಳ್ಳಲು ಸಹಾಯಕವಾಗಿದೆ.

ಮಹಿಳೆಯರು ಕುಟುಂಬ ನಿರ್ವಹಣೆಯಲ್ಲಿ ಕರಗತರಾಗಿರುತ್ತಾರೆ. ಹೊರಗಡೆ ದುಡಿಯುವುದರ ಜೊತೆ ಕುಟುಂಬ ನಿರ್ವಹಣೆಯನ್ನೂ ಮಾಡಬೇಕಾಗುತ್ತದೆ. ಹಾಗಾಗಿ ಪುರುಷರಿಗಿಂತ ಹೆಚ್ಚು ಭವಿಷ್ಯದ ಚಿಂತೆ ಮಹಿಳೆಯರಿಗೆ ಇರುತ್ತದೆ.

5 lakh interest free loan for women, Loan scheme of Modi government

ಹಾಗಾದರೆ ಮಹಿಳೆಯರು ಎಲ್ಲೆಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಗಳಿಸಬಹುದು? ಉತ್ತಮ ಯೋಜನೆಗಳ ಮಾಹಿತಿ ಇಲ್ಲಿದೆ ನೋಡಿ.

ಯಾವುದೇ ಗ್ಯಾರಂಟಿ ಬೇಕಿಲ್ಲ! ಕೇಂದ್ರ ಸರ್ಕಾರದಿಂದಲೇ ಸಿಗುತ್ತೆ 2 ಲಕ್ಷ ಲೋನ್

ಮಹಿಳೆಯರು ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್) ಮ್ಯೂಚುವಲ್ ಫಂಡ್ (Mutual Fund), ಮಹಿಳಾ ಸಮ್ಮಾನ ಪತ್ರ, ರಾಷ್ಟ್ರೀಯ ಉಳಿತಾಯ ಪ್ರಮಾಣ ಪತ್ರ ಯೋಜನೆಗಳಲ್ಲಿ ಹೂಡಿಕೆ ಮಾಡುವುದರಿಂದ ಹೆಚ್ಚಿನ ಲಾಭ ಗಳಿಸಬಹುದಾಗಿದೆ. ಈ ಮೂಲಕ ಮಹಿಳೆಯರು ಸಹ ತಮ್ಮ ಕುಟುಂಬದ ಅಭಿವೃದ್ಧಿಯಲ್ಲಿ ಭಾಗಿದಾರರಾಗಬಹುದಾಗಿದೆ.

ಮ್ಯೂಚುವಲ್ ಫಂಡ್: (mutual fund)

ಮ್ಯೂಚುವಲ್ ಫಂಡ್ ಇದು ಶೇರು ಮಾರುಕಟ್ಟೆ ಆಧರಿತ ಒಂದು ಯೋಜನೆಯಾಗಿದೆ. ಹಲವಾರು ದೊಡ್ಡ ದೊಡ್ಡ ಕಂಪನಿಗಳು ಮ್ಯೂಚುವಲ್ ಕಂಪನಿಗಳನ್ನೂ ತೆರೆದಿವೆ. ಇವುಗಳಲ್ಲಿ ಹೂಡಿಕೆ ಮಾಡುವುದರಿಂದ ಭವಿಷ್ಯದಲ್ಲಿ ದೊಡ್ಡ ಮೊತ್ತದ ಹಣವನ್ನು ವಾಪಸ್ ಪಡೆಯಬಹುದಾಗಿದೆ.

ಮಹಿಳಾ ಸಮ್ಮಾನ ಉಳಿತಾಯ ಪ್ರಮಾಣ ಪತ್ರ ಯೋಜನೆ: (mahila Samman savings scheme)

ಕೇಂದ್ರ ಸರ್ಕಾರವು ಮಹಿಳೆಯರ ಅಭಿವೃದ್ಧಿಗಾಗಿ ಹಾಗೂ ಮಹಿಳೆಯರಿಗಾಗಿಯೇ ತಂದ ಯೋಜನೆಯೇ ಮಹಿಳಾ ಸಮ್ಮಾನ ಉಳಿತಾಯ ಪ್ರಮಾಣ ಪತ್ರ ಯೋಜನೆ. ಇದರಲ್ಲಿ ಯಾವುದೇ ಬಯಸ್ಸಿನ ಹಂಗಿಲ್ಲದೆ ಮಹಿಳೆಯರು ಅಥವಾ ಹುಡುಗಿಯರು ಹೂಡಿಕೆ ಮಾಡಬಹುದಾಗಿದೆ. ಈ ಯೋಜನೆ ಅಡಿಯಲ್ಲಿ ಕನಿಷ್ಟ 1000 ರೂ. ನಿಂದ 2 ಲಕ್ಷ ರೂ.ಗಳ ವರೆಗೆ ಹೂಡಿಕೆ ಮಾಡಬಹುದಾಗಿದೆ.

ಹಸು, ಕುರಿ, ಕೋಳಿ ಸಾಕಾಣಿಕೆಗೆ ಸಿಗುತ್ತೆ 50% ಸಹಾಯಧನ; ಇಂದೇ ಅರ್ಜಿ ಸಲ್ಲಿಸಿ!

Women Schemeಸಾರ್ವಜನಿಕ ಭವಿಷ್ಯ ನಿಧಿ ಯೋಜನೆ: PPF

ಇದು ತೆರಿಗೆ ವಿನಾಯಿತಿ ನೀಡುವ ಯೋಜನೆಯಾಗಿದೆ. ಈ ಯೋಜನೆಯಲ್ಲಿ ಹೂಡಿಕೆ ಮಾಡಿದ ಹಣ ಹಾಗೂ ಗಳಿಸಿದ ಆದಾಯ ಎರಡು ಕೂಡ ತೆರಿಗೆ ಮುಕ್ತವಾಗಿರುತ್ತದೆ. ಕನಿಷ್ಟ 500 ರೂ. ನಿಂದ 1.5 ಲಕ್ಷ ರೂ.ಗಳ ವರೆಗೆ ಈ ಯೋಜನೆ ಅಡಿಯಲ್ಲಿ ಹೂಡಿಕೆ ಮಾಡಬಹುದಾಗಿದೆ. ಪಿಪಿಎಫ್ ಯೋಜನೆ ಠೇವಣಿದಾರರು ೩ನೇ ಹಣಕಾಸು ವರ್ಷದಿಂದ 6ನೇ ಹಣಕಾಸು ವರ್ಷದ ವರೆಗೆ ಸಾಲ ಸೌಲಭ್ಯ ಪಡೆದುಕೊಳ್ಳಬಹುದು. 7ನೇ ವರ್ಷದಿಂದ ತಮ್ಮ ಹೂಡಿಕೆಯ ಭಾಗಶಃ ಹಣವನ್ನು ವಾಪಸ್ ಪಡೆದುಕೊಳ್ಳಬಹುದಾಗಿದೆ.

ಸ್ಟೇಟ್ ಬ್ಯಾಂಕ್ ಗ್ರಾಹಕರಿಗೆ ಬಂಪರ್ ಗಿಫ್ಟ್! ಮಾರ್ಚ್ 31ರ ತನಕ ಮಾತ್ರ ಅವಕಾಶ

ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ: NPS

ತಮ್ಮ ನಿವೃತ್ತಿಯ ನಂತರವೂ ಸಹ ಸ್ವಾವಲಂಬಿಯಾಗಿ ಬದುಕು ನಡೆಸಬೇಕು ಎಂದು ಅಂದುಕೊಂಡಿರುವ ಮಹಿಳೆಯರು ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯು ದೀರ್ಘಾವಧಿ ಉಳಿತಾಯ ಮಾರ್ಗ ಒದಗಿಸುವ ಪಿಂಚಣಿ ಹಾಗೂ ಹೂಡಿಕೆ ಯೋಜನೆಯಾಗಿದೆ.

ಸ್ಥಿರ ಠೇವಣಿ: (Fixed deposit)

ಶೇರು ಮಾರುಕಟ್ಟೆಯಲ್ಲಿ ಹಣಕ್ಕೆ ಭದ್ರತೆ ಇಲ್ಲದಿರುವುದರಿಂದ ಅನೇಕ ಮಹಿಳೆಯರು ಹಣ ಹೂಡಿಕೆ ಮಾಡಲು ಹಿಂಜರಿಯುತ್ತಾರೆ. ಸ್ಥಿರ ಹಾಗೂ ಯಾವುದೇ ಅಪಾಯವಿಲ್ಲದ ಹೂಡಿಕೆಗಾಗಿ ಸ್ಥಿರ ಠೇವಣಿಯನ್ನು ಆಯ್ಕೆ ಮಾಡಿಕೊಳ್ಳಬಹುದು. ಇದರಲ್ಲಿ ದೀರ್ಘಾವಧಿ ಹೂಡಿಕೆ ಮಾಡಿದಾಗ ದೊಡ್ಡ ಪ್ರಮಾಣದ ಲಾಭ ಸಿಗಲಿದೆ.

ಪ್ರತಿ ತಿಂಗಳು 3,000 ಪಡೆಯೋಕೆ ತಕ್ಷಣ ಸರ್ಕಾರದ ಈ ಯೋಜನೆಗೆ ಅಪ್ಲೈ ಮಾಡಿ!

lakhs of income If women invest in these Schemes

Our Whatsapp Channel is Live Now 👇

Whatsapp Channel

Related Stories