ಸ್ಟೇಟ್ ಬ್ಯಾಂಕ್ ಗ್ರಾಹಕರಿಗೆ ಬಂಪರ್ ಗಿಫ್ಟ್! ಮಾರ್ಚ್ 31ರ ತನಕ ಮಾತ್ರ ಅವಕಾಶ

ನೀವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank of India) ದ ಗ್ರಾಹಕರಾಗಿದ್ರೆ ನಿಮಗೆ ಇನ್ನೊಂದು ಗುಡ್ ನ್ಯೂಸ್ ಇದೆ. ಇದೇ ಬರುವ ಮಾರ್ಚ್ 31 2024ಕ್ಕೆ ಕೊನೆಗೊಳ್ಳಬಹುದಾದ ಎಸ್ ಬಿ ಐ ನ ಕೆಲವು ಪ್ರಮುಖ ಯೋಜನೆಗಳಲ್ಲಿ ನೀವು ಹಣ ಹೂಡಿಕೆ (Investment) ಮಾಡಿದರೆ ಹೆಚ್ಚುವರಿ ಲಾಭವನ್ನು ಗಳಿಸಿಕೊಳ್ಳಬಹುದು.

ಇದುವರೆಗೆ ಖಾತೆಯನ್ನು ತೆರೆಯದೆ ಇದ್ದರೆ ತಕ್ಷಣ ಎಸ್ ಬಿ ಐ ಬ್ಯಾಂಕ್ ನಲ್ಲಿ ಖಾತೆ (State Bank Account) ತೆರೆಯಿರಿ ಹಾಗೂ ಈ ಎಲ್ಲಾ ಪ್ರಯೋಜನಗಳನ್ನು ಪಡೆದುಕೊಳ್ಳಿ.

ಸರ್ಕಾರಿ ವಲಯದ ಪ್ರತಿಷ್ಠಿತ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರಿಗೆ ಅನುಕೂಲವಾಗುವಂತಹ ಸಾಕಷ್ಟು ಯೋಜನೆಗಳನ್ನು ಪರಿಚಯಿಸಿದೆ. ಬ್ಯಾಂಕಿಂಗ್ ವಲಯದಲ್ಲಿ ನೀವು ಹೂಡಿಕೆ ಮಾಡಲು ಬಯಸಿದರೆ ಎಸ್ ಬಿ ಐ ಉತ್ತಮ ಬಡ್ಡಿ ದರವನ್ನು ನೀಡುತ್ತದೆ.

ಪ್ರತಿ ತಿಂಗಳು 3,000 ಪಡೆಯೋಕೆ ತಕ್ಷಣ ಸರ್ಕಾರದ ಈ ಯೋಜನೆಗೆ ಅಪ್ಲೈ ಮಾಡಿ!

ಇನ್ನು ಎಸ್ ಬಿ ಐ ಸುರಕ್ಷಿತ ಹೂಡಿಕೆ ಮಾಡಲು ಹೇಳಿ ಮಾಡಿಸಿದಂತಹ ಜಾಗ. ಅಷ್ಟೇ ಅಲ್ಲ ಎಸ್ಬಿಐ ನಲ್ಲಿ ನೀವು ಸಾಲ ಸೌಲಭ್ಯ (SBI Loan) ಪಡೆದುಕೊಂಡರೆ ಕಡಿಮೆ ಬಡ್ಡಿ ದರದಲ್ಲಿ ಸಾಲ (Loan) ನೀಡಲಾಗುತ್ತದೆ.

ಸದ್ಯ ಕೆಲವು ಪ್ರಮುಖ ಯೋಜನೆಗಳನ್ನು ಹೊಸ ಹಣಕಾಸು ವರ್ಷ ಆರಂಭವಾಗುತ್ತಿದ್ದ ಹಾಗೆ ಅಂದ್ರೆ ಏಪ್ರಿಲ್ ತಿಂಗಳ ಒಳಗೆ ಎಸ್ ಬಿ ಐ ಮುಕ್ತಾಯಗೊಳಿಸಲಿದ್ದು, ಆ ಆಫರ್ ಬಗ್ಗೆ ಇಲ್ಲಿದೆ ಮಾಹಿತಿ.

ಎಸ್ ಬಿ ಐ ಅಮೃತ್ ಕಲಷ್ ಯೋಜನೆ! (SBI Amrit Kalash scheme)

SBI ನ ಅತ್ಯಂತ ಬೇಡಿಕೆಉಳ್ಳ ಯೋಜನೆಗಳಲ್ಲಿ ಇದು ಒಂದು. ಫೆಬ್ರುವರಿ ತಿಂಗಳಿಗಿಂತ ಮೊದಲೇ ಈ ಯೋಜನೆ ಕೊನೆಗೊಳ್ಳಬೇಕಿತ್ತು ಆದರೆ ಗ್ರಾಹಕರ ಬೇಡಿಕೆಯ ಮೇರೆಗೆ ಯೋಜನೆಯನ್ನು ಮುಂದುವರಿಸಲಾಗಿದ್ದು, ಮಾರ್ಚ್ 31, 2024ರವರೆಗೆ ಈ ಸ್ಕೀಮ್ ನಲ್ಲಿ ಹೂಡಿಕೆ ಮಾಡಲು ಅವಕಾಶವಿದೆ.

ಅಮೃತ್ ಕಲಾಷ್ ಯೋಜನೆಯ ಅಡಿಯಲ್ಲಿ 400 ದಿನಗಳ ಎಫ್‌ಡಿ (Fixed Deposit) ಹೂಡಿಕೆಯ ಮೇಲೆ 7.1% ಬಡ್ಡಿ ದರವನ್ನು ಪಡೆದುಕೊಳ್ಳಬಹುದು. ಈ ಅವಧಿಗಿಂತ ಮೊದಲೇ ನೀವು ಹಣವನ್ನು ಹಿಂಪಡೆಯಲು ಬಯಸಿದರೆ 0.50% ನಿಂದ 1%ವರೆಗೆ ಹಣ ಕಡಿತಗೊಳಿಸಲಾಗುತ್ತದೆ.

ಜಸ್ಟ್ 1 ಸಾವಿರ ಹೂಡಿಕೆ ಮಾಡಿದ್ರು ಸಾಕು, ಪ್ರತಿ ತಿಂಗಳು ಸಿಗುತ್ತೆ 20 ಸಾವಿರ ಆದಾಯ

Fixed Depositವಿ ಕೇರ್ ಎಫ್ ಡಿ ಹೂಡಿಕೆ! (We care FD scheme)

ಕಳೆದ ವರ್ಷ ಎಸ್ ಬಿ ಐ ವಿ ಕೇರ್ ಸ್ಕೀಮ್ ಆರಂಭಿಸಿತು. ಇದು ಹಿರಿಯ ನಾಗರಿಕರಿಗೆ ಮೀಸಲಾಗಿರುವ ಯೋಜನೆ ಆಗಿದ್ದು, ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ 7.50% ವರೆಗೆ ಬಡ್ಡಿ ಪಡೆಯಬಹುದು. ಈ ಯೋಜನೆ ಕೂಡ ಮಾರ್ಚ್ 31.2024ಕ್ಕೆ ಕೊನೆಗೊಳ್ಳಲಿದೆ.

ವರ್ಷಕ್ಕೆ 6 ಲಕ್ಷ ಲಾಭ ಕೊಡುತ್ತೆ ಈ ಬಿಸಿನೆಸ್! ಕಡಿಮೆ ಬಂಡವಾಳ, ಕೈತುಂಬಾ ಆದಾಯ

ಗೃಹ ಸಾಲ (Home loan)

Home Loanಇನ್ನು ಎಸ್‌ಬಿಐ ನಲ್ಲಿ ಗೃಹ ಸಾಲ ಅಥವಾ ಹೌಸಿಂಗ್ ಲೋನ್ ಪಡೆದುಕೊಳ್ಳುದಿದ್ದರೆ ಆಫರ್ ಲಭ್ಯವಿದೆ. ಎಸ್ ಬಿ ಐ ಗೃಹ ಸಾಲದ (SBI Home Loan) ಅಭಿಯಾನವನ್ನು ಹಮ್ಮಿಕೊಂಡಿದೆ. ಇದು ಕೂಡ ಮಾರ್ಚ್ 31 2024ಕ್ಕೆ ಕೊನೆಗೊಳ್ಳಲಿದೆ.

ಬಿಸಿಲೆರಿ ವಾಟರ್ ಡೀಲರ್ಶಿಪ್ ಬಿಸಿನೆಸ್ ಮಾಡಿ! ಪ್ರತಿ ತಿಂಗಳು 80,000 ಆದಾಯ

ನಿಮ್ಮ ಸಿಬಿಲ್ ಸ್ಕೋರ್ 750 ರಿಂದ 800 ವರೆಗೆ ಇದ್ದರೆ 8.6% ಬಡ್ಡಿ ದರದಲ್ಲಿ ಗ್ರಹ ಸಾಲ ಪಡೆಯಬಹುದು. ಇದಕ್ಕಿಂತ ಕಡಿಮೆ ಸಿಬಿಲ್ ಸ್ಕೋರ್ (CIBIL score) ಇದ್ರೆ ಬಡ್ಡಿದರ 9.15% ಆಗುತ್ತದೆ. ಈ ಮೂರು ಹೆಸರಿನ ಪ್ರಮುಖ ಆಫರ್ ಗಳು ಆಗಿದ್ದು, ಮಾರ್ಚ್ ತಿಂಗಳು ಮುಗಿಯುವುದರ ಒಳಗೆ ಈ ಸ್ಕೀಮ್ ಗಳ ಪ್ರಯೋಜನ ಪಡೆದುಕೊಳ್ಳಿ.

Bumper gift for State Bank customers, Valid till 31st March only

Kannada News Today

Kannada News Today Providing News, information & entertainment in Kannada Language, Since 2019. This Website reacts as a… More »

Related Stories