ಪ್ರತಿ ತಿಂಗಳು 3,000 ಪಡೆಯೋಕೆ ತಕ್ಷಣ ಸರ್ಕಾರದ ಈ ಯೋಜನೆಗೆ ಅಪ್ಲೈ ಮಾಡಿ!
ಸಮಾಜದಲ್ಲಿ ವಾಸಿಸುವ ಪ್ರತಿಯೊಂದು ವರ್ಗದ ಜನರ ಕಲ್ಯಾಣ ಹಾಗೂ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಬದ್ಧವಾಗಿದೆ. ಸಮಾಜದಲ್ಲಿ ಹಿಂದುಳಿದ ಹಾಗೂ ಬಡ ವರ್ಗದ ಜನರಿಗೆ ಅನುಕೂಲವಾಗುವಂತಹ ಯೋಜನೆಗಳನ್ನು ಕೇಂದ್ರ ಸರ್ಕಾರ (Central government) ಪರಿಚಯಿಸಿದ್ದು ಪ್ರತಿಯೊಬ್ಬರ ಉದ್ದಾರ ಎನ್ನುವ ಸಂಕಲ್ಪವನ್ನು ಹೊಂದಿದೆ.
ಈ ನಿಟ್ಟಿನಲ್ಲಿ ಅಸಂಘಟಿತ ವಲಯ (non organised sector) ದಲ್ಲಿ ದುಡಿಯುವ ಕಾರ್ಮಿಕ (labours) ರಿಗಾಗಿಯೂ ಕೂಡ ಪ್ರಮುಖ ಯೋಜನೆಯ ಜಾರಿಗೆ ತರಲಾಗಿದ್ದು, ಈ ಯೋಜನೆಯ ಅಡಿಯಲ್ಲಿ 3,000 ಪ್ರತಿ ತಿಂಗಳು ಪಡೆದುಕೊಳ್ಳಲು ಸಾಧ್ಯವಿದೆ.
ಜಸ್ಟ್ 1 ಸಾವಿರ ಹೂಡಿಕೆ ಮಾಡಿದ್ರು ಸಾಕು, ಪ್ರತಿ ತಿಂಗಳು ಸಿಗುತ್ತೆ 20 ಸಾವಿರ ಆದಾಯ
ಇ -ಶ್ರಮ ಯೋಜನೆ! (E-shram scheme)
ಅಸಂಘಟಿತ ವಲಯದಲ್ಲಿ ದುಡಿಯುವ, ಕಾರ್ಮಿಕರಿಗಾಗಿ ಈ ಶ್ರಮ ಕಾರ್ಡ್ ಅನ್ನು ಕೇಂದ್ರ ಸರ್ಕಾರ ವಿತರಣೆ ಮಾಡುತ್ತಿದೆ. ಈ ಕಾರ್ಡ್ ಇದ್ದವರು ಸರ್ಕಾರದ ಹೆಚ್ಚಿನ ಪ್ರಯೋಜನ ಪಡೆದುಕೊಳ್ಳಬಹುದು. ಇ – ಶ್ರಮ ಕಾರ್ಡ್ ಪ್ರಯೋಜನ ಏನು? ಹಾಗೂ ಯಾರು ಪಡೆದುಕೊಳ್ಳಬಹುದು ಎನ್ನುವುದರ ಬಗ್ಗೆ ಇಲ್ಲಿದೆ ಮಾಹಿತಿ.
ಯಾರಿಗೆ ಸಿಗಲಿದೆ ಈ ಶ್ರಮ ಕಾರ್ಡ್?
ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಯದಲ್ಲಿ ತೊಡಗಿಕೊಂಡಿರುವವರು, ಆಶಾ ಕಾರ್ಯಕರ್ತೆಯರು, ಬೀದಿಬದಿ ವ್ಯಾಪಾರಿಗಳು, ಮೀನುಗಾರರು, ಟೈಲರಿಂಗ್ ವೃತ್ತಿ ಮಾಡುವವರು ಹೀಗೆ 379 ವರ್ಗದ ಜನರನ್ನು ಕೇಂದ್ರ ಸರ್ಕಾರ ಗುರುತಿಸಿದ್ದು ಅಂತವರಿಗೆ ಇ – ಶ್ರಮ ಕಾರ್ಡ್ ವಿತರಣೆ ಮಾಡಲಾಗುವುದು.
ವರ್ಷಕ್ಕೆ 6 ಲಕ್ಷ ಲಾಭ ಕೊಡುತ್ತೆ ಈ ಬಿಸಿನೆಸ್! ಕಡಿಮೆ ಬಂಡವಾಳ, ಕೈತುಂಬಾ ಆದಾಯ
ಇ – ಶ್ರಮ ಕಾರ್ಡ್ ಪಡೆದುಕೊಳ್ಳಲು ಬೇಕಾಗಿರುವ ಅರ್ಹತೆಗಳು!
*ಭಾರತೀಯ ನಿವಾಸಿ ಆಗಿರಬೇಕು
*16 ರಿಂದ 59 ವರ್ಷ ವಯಸ್ಸಿನವರು ಅರ್ಜಿ ಸಲ್ಲಿಸಬಹುದು
*ಈ ಮೇಲೆ ತಿಳಿಸಲಾದ ವರ್ಗಗಳಲ್ಲಿ ಕಾರ್ಯನಿರ್ವಹಿಸುವವರಾಗಿರಬೇಕು
*ಆದಾಯ ತೆರಿಗೆ ಪಾವತಿದಾರರಾಗಿರಬಾರದು
*ಭವಿಷ್ಯನಿಧಿ ಮತ್ತು ESI ಪ್ರಯೋಜನ ಪಡೆದುಕೊಳ್ಳುತ್ತಿರುವವರಾಗಿರಬಾರದು.
ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು!
ಆಧಾರ್ ಕಾರ್ಡ್
ಆಧಾರ್ ಕಾರ್ಡಿಗೆ ಜೋಡಣೆ ಆಗಿರುವ ಮೊಬೈಲ್ ಸಂಖ್ಯೆ
ಬ್ಯಾಂಕ್ ಖಾತೆಯ ವಿವರ (Bank Account Details)
ಕನಿಷ್ಠ ಒಂದು ವರ್ಷ ಅಸಂಘಟಿತ ವಲಯದ ಕಾರ್ಮಿಕರಾಗಿ ದುಡಿಯುತ್ತಿರುವ ಬಗ್ಗೆ ಪ್ರಮಾಣ ಪತ್ರ
ಬಿಸಿಲೆರಿ ವಾಟರ್ ಡೀಲರ್ಶಿಪ್ ಬಿಸಿನೆಸ್ ಮಾಡಿ! ಪ್ರತಿ ತಿಂಗಳು 80,000 ಆದಾಯ
ಅರ್ಜಿ ಸಲ್ಲಿಸುವುದು ಹೇಗೆ?
* ಕೇಂದ್ರ ಸರ್ಕಾರ https://www.eshram.gov.in/ ವೆಬ್ಸೈಟ್ ಮೇಲೆ ಕ್ಲಿಕ್ ಮಾಡಿ.
* Register on E-SHRAM ಆಯ್ಕೆ ಮೇಲೆ ಕ್ಲಿಕ್ ಮಾಡಿ
* ಈಗ ನಿಮ್ಮ ಮೊಬೈಲ್ ಸಂಖ್ಯೆ ಮತ್ತು ಕ್ಯಾಪ್ಚಾ ಕೋಡ್ ನಮೂದಿಸಬೇಕು
* EPFO & ESIC ಸದಸ್ಯರೇ ಎನ್ನುವ ಪ್ರಶ್ನೆ ಕೇಳುತ್ತದೆ ನೋ ಎಂದು ಕ್ಲಿಕ್ ಮಾಡಿ.
* ಸೆಂಡ್ ಒಟಿಪಿ ಎಂದು ಕ್ಲಿಕ್ ಮಾಡಿ ನಿಮ್ಮ ಮೊಬೈಲ್ ಸಂಖ್ಯೆಗೆ ಓಟಿಪಿ ಬರುತ್ತದೆ ಅದನ್ನು ನಮೂದಿಸಿ.
* ಇದು ನಿಮ್ಮ ಆಧಾರ್ ಕಾರ್ಡ್ ಸಂಖ್ಯೆ, ವಯಕ್ತಿಕ ವಿವರಗಳು, ವಿದ್ಯಾಭ್ಯಾಸ ಪ್ರತಿಯೊಂದು ಮಾಹಿತಿಯನ್ನು ಭರ್ತಿ ಮಾಡಿ.
* ಈ ರೀತಿ ಮಾಹಿತಿ ಭರ್ತಿ ಮಾಡಿದ ನಂತರ ಮತ್ತೊಮ್ಮೆ ಕ್ರಾಸ್ ಚೆಕ್ ಮಾಡಿಕೊಂಡು ಸಬ್ಮಿಟ್ ಎಂದು ಕ್ಲಿಕ್ ಮಾಡಿ.
ಅಲ್ಲಿಗೆ ನಿಮ್ಮ ಅರ್ಜಿ ಸಲ್ಲಿಕೆ ಆಗಿರುತ್ತದೆ ಹಾಗೂ ನೀವು ಈ ಶ್ರಮ ಕಾರ್ಡ್ ಪಡೆದುಕೊಳ್ಳಬಹುದು. ಈ ಕಾರ್ಡ್ ಹೊಂದಿದ್ರೆ ಅಸಂಘಟಿತ ವಲಯದಲ್ಲಿ ಕೆಲಸ ಮಾಡುವವರಿಗೆ ಸಾಕಷ್ಟು ಬೆನಿಫಿಟ್ಸ್ ಇದೆ ಪ್ರತಿ ತಿಂಗಳು 3,000ಗಳನ್ನು ಪಿಂಚಣಿ (Pension) ಪಡೆಯಬಹುದು. ಮೇಲೆ ನೀಡಲಾದ ಅಧಿಕೃತ ವೆಬ್ಸೈಟ್ ಲಿಂಕ್ ನಲ್ಲಿ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದು.
apply for this government scheme immediately to get 3,000 per month